ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

kavana

ಪ್ರೇಮ ಪಲ್ಲವಿ

ನಮ್ಮ ಬಾಳಿಗೆ ಪ್ರೀತಿ ದೀವಿಗೆ 
ಕೊಟ್ಟ ದೇವರಿಗೆ ಹೇಳೋಣ ವಂದನೆ 
ಒಲವ ಹಾದಿಗೆ ಪ್ರೇಮ ಬಳ್ಳಿಗೆ 
ತೊಂದರೆ ನೀಡಿದವರಿಗೆ ವಿಧಿಸೋಣ ದಂಡನೆ 

ನಿನ್ನ ಕಣ್ಣನು ಕಂಡು ಕರಗಿದೆ 
ನಿನ್ನ ಕಣ್ಣಲೆ ನಾನು ನೆಲೆಸಿದೆ 
ನೀನು ಎದುರಿದ್ದರೆ ನನಗೇನು ಬೇಡವೆ
ನಿನ್ನ ನೋಡುತ ಹಸಿವನ್ನೆ ಮರೆಯುವೆ 

ನನ್ನ ಪ್ರೀತಿಯು ಎಂದು ಕಡಿಮೆಯಾಗದು, ಭಯವು ಬೇಡವೆ 
ನೀನು ಅತ್ತರೆ ಭಯವ ಪಟ್ಟರೆ ತಾಳೆನು ಓ ಚೆಲುವೆ 
ನಮ್ಮಿಬ್ಬರ ಉಸಿರು ಒಂದೇ ಆಗಿರಲೆಂದು ನಾನು ಬೇಡುವೆ 
ನೀನೆ ಇರದಿರೆ ಬಾಳಿಗೆ ಅರ್ಥ ಇಲ್ಲವೇ, ಎಲ್ಲ ಶೂನ್ಯವೆ

- Vರ ( Venkatesha ರಂಗಯ್ಯ )

ಯಾಕೆಂದರೆ ಅವಳು ಹೆಣ್ಣು

ನನ್ನ ಹಾಡು... - ಸೋಮವಾರ ೧೧:೩೭, ಮಾರ್ಚ್ ೮, ೨೦೧೦  ಮುಂದೆ ಓದಿ »

ಅಮ್ಮ

ನನ್ನ ಮೊದಲ ತೊದಲ ಮಾತು ನಿನ್ನ ಹೆಸರೇ ತಾನೇ
ಪುಟ್ಟ ಅಂಬೆಗಾಲನಿಟ್ಟು ನಿನ್ನೆಡೆಗೆ ಕೈಚಾಚಿ ಬರುವೆನೆ
ಜಾರಿ ಬಿದ್ದಾಗಲೆಲ್ಲ ನನ್ನ ಕೈ ಹಿಡಿದು ನಡೆಸಿದೆ
ಹಿಡಿ ಮಣ್ಣಿನಂತೆ ಇದ್ದ ಎನ್ನ ಶಿಲ್ಪವಾಗಿ ಮಾಡಿದೆ

ಜೀವನ ಪಯಣದಿ ನಾ ಸಾಗಲು ಮುಂದೆ
ನೀ ನೆರಳಾಗಿ ಬಂದೆ ಸದಾ ಬೆನ್ನ ಹಿಂದೆ
ಕಲ್ಲು ಮುಳ್ಳುಗಳ ದೂರ ಸರಿಸುತಾ ಬಂದೆ
ದಾರಿ ದೀವಿಗೆಯಾಗಿ ಬೆಳಕ ಹರಿಸುತ ನಿಂದೆ

ತ್ಯಾಗ,ಪ್ರೀತಿ ಮಮಕಾರಕೆ ನೀನೆ ಮೂರ್ತ ರೂಪ
ನಿನ್ನ ಪ್ರೇಮ ಸಾಗರದ ನಡುವೆ ನಾನೊಂದು ಸ್ವಾರ್ಥಿ ದ್ವೀಪ
ನೋವನುಂಡು ನಲಿವ ಉಣಿಸೋ ನಿನ್ನ ಪ್ರೀತಿ ಕಡಲು
ಇಂದ್ರನೂ ಹುಡುಕಿ ಹೋದ ಸ್ವರ್ಗ - ತಾಯಿ ಮಡಿಲು

ಜಗದಿ ಒಲವ ಬಣ್ಣಿಸಲು ಕವಿಗಳು ನೂರು ಬೇಕೆ
ಎರಡಕ್ಷರದ ಮಹಾಕಾವ್ಯ "ಅಮ್ಮ" ಎಂದರೆ ಸಾಕೆ..

in

ನುಡಿ ನಮನ

ಬೆಳಗಲಿ ಮನೆ-ಮನಗಳಲಿ
ಕನ್ನಡದ ಜ್ಯೋತಿ
ಹರಡಲಿ,ಸಾಗಲಿ
ಡಿಕ್ದಿಗಂತಗಳ ದಾಟಿ  ಮುಂದೆ ಓದಿ »

ಮೂಗುತಿ!

ಬಂಗಾರದೋಲೆಯಲ್ಲ,
ಕೈ ಬಳೆ ನಾದವಲ್ಲ,
ಕಾಲ್ಗೆಜ್ಜೆ ಸದ್ದಲ್ಲ,
ನನ್ನೊಲವಿನಾರತಿ ಈ ಮೂಗುತಿ.

ಚೆಲುವಿನ ನಾಸಿಕ,
ಶೃಂಗಾರದ ಪ್ರತೀಕ,
ಬಂಗಾರದ ತಿಲಕ,
ನನ್ನೊಲವಿನಾರತಿ ಈ ಮೂಗುತಿ.

ಬೆರಗು ಕಣ್ಗಳು,
ಚೆಂದುಟಿ ಮೂಗು,
ಕೆಂದಾವರೆ ಕೆನ್ನೆ,
ಕಲಶವಿಟ್ಟಂತೆ ಗುಡಿಗೆ,
ಬೆರಗಾಗುವಂತೆ ಅಡಿಗಡಿಗೆ,
ನನ್ನೊಲವಿನಾರತಿ ಈ ಮೂಗುತಿ.

ಫಳಫಳನೆ ಹೊಳೆಯುವ,
ನನ್ನನ್ನೇ ತೋರುವ,  ಮುಂದೆ ಓದಿ »

Nalkuhani

ನಮ್ಮನ್ನು ಆಳುವವರು
ಆಡುವರು ಸದನದಲ್ಲಿ
ಕೈಗೆ ಸಿಕ್ಕ ಮೈಕು
ಕುರ್ಚಿಗಳಿಂದ
------------

ಹಿಂದೊಮ್ಮೆ ಕತ್ತಿ
ದೊಣ್ಣೆ ಬಂದೂಕು
ಹಿಡಿದವರೆ!
ನಮ್ಮನಿಗ ಆಳುತ್ತಿಹರು
ಅವುಗಳನೆಲ್ಲ ತಮ್ಮ
ಹಿಂಬಾಲಕರ
ಕೈಗೆ ತೂರಿ!!

ನಿನ್ನೊಂದಿಗೆ ನಾನಿಲ್ಲವೆ

ನನ್ನ ದೇಹ ದೂರವಿದ್ದರೇನು
ಮನಸು ನಿನ್ನ ಬಳಿಯೆ ಇರುವಾಗ
ನನ್ನ ಮಾತು ಕೇಳಿಸದಿದ್ದರೇನು
ಮೌನವೆ ಎಲ್ಲ ಹೇಳುತಿರುವಾಗ

ಚಿಂತೆಗಳು ಚುಚ್ಚಲು ಬಂದರೇನು
ನಿನ್ನ ರಕ್ಷಿಸಲು ನಾನಿರುವಾಗ
ಎದೆಯ ಬಾಗಿಲಲ್ಲಿ ಕುಳಿತು ನಿನ್ನ ಕಾಪಾಡುತಿರುವಾಗ

ಕಣ್ಣಂಚಿನಲ್ಲಿ ನೀರು ಬಂದರೇನು
ಕಣ್ಣೀರು ಒರೆಸಲು ನನ್ನ ಪ್ರೀತಿ ಭಾಷೆ ಇರುವಾಗ
ಒಂಟಿತನವೆಂಬ ಭೂತ ಕಾಡಲು ಬಂದರೇನು  ಮುಂದೆ ಓದಿ »

ಬಳುಕುವ ವಯ್ಯಾರಿ

ಫೋಟೋದಲ್ಲಿ ನಗುತಿರುವ ಚೆಲುವೆ
ಪಟಪಟ ಮಾತಾಡೋ ಕಿನ್ನರಿ ಇವಳೇ
ಇವಳಿಲ್ಲದೆ ನನಗಿಲ್ಲ ಸುಂದರ ನಾಳೆ

ಕೈ ತುಂಬಾ ಕನಸಿನ ಹೂವು
ಕಣ್ಣಿಂದ ಬಂದಿದೆ ಬುಲಾವು
ಸುರ ಸುಂದರ ಜೋಡಿ ನಾವು

ನೀ ನಿಂತರೆ ನಿಲ್ಲುತಿದೆ ಗಡಿಯಾರ
ನೀ ನಡೆದರೆ ಬರುವೆನು ತುಸುದೂರ
ನಿನ್ನ ಉಸಿರಾಟವೆ ಈ ಜೀವಕೆ ಆಧಾರ

ಬಳುಕುವ ಸೊಂಟದಲ್ಲಿ ಬಳ್ಳಿಯ ವಯ್ಯಾರ
ಹೊಳೆಯುವ ಕಂಗಳಲ್ಲಿ ಹೂವಿನ ಸಿಂಗಾರ  ಮುಂದೆ ಓದಿ »

ಎಂದು ಜೀವಕೆ ಮುಕ್ತಿ

ಹುಳಿಯನು ಹಿಂಡಿ ರಸವ ತೆಗೆದಾಗ ಹಣ್ಣಿಗೆ ಮುಕ್ತಿ
ಒಳಿತಿನಿಂದ ಕೆಟ್ಟದೆಲ್ಲ ಕಿತ್ತೆಸೆದಾಗ ಬಾಳಿಗೆ ಮುಕ್ತಿ
ಅರಳಿದ ಹೂ ಹಣ್ಣಾದಾಗ ಹೂವಿಗೆ ಸಂತೃಪ್ತಿ
ಸಾಧನೆ ಮಾಡದೆ ಸಾಯುವ ವೇಳೆ ಜೀವಕೆ ಅತೃಪ್ತಿ

ವ್ರುದ್ದಾಪ್ಯದಲಿ ತಂದೆತಾಯಿಯ ಪೊರೆವುದೆ ಭಕ್ತಿ
ಜೀವನ ಚಕ್ರವ್ಯೂಹವ ಬೇಧಿಸಲು ಬೇಕು ಪ್ರೀತಿಯ ಶಕ್ತಿ
ಆಸೆಗಳು ನಾಗಾಲೋಟದಲಿ ಓಡುತಿವೆ ನೋಡು  ಮುಂದೆ ಓದಿ »

ಹನಿಗವನ

ಸೈಕಲ್ ಹೊಡೆಯಲಾಗದೆ ಬಂಗಾರಪ್ಪ
ಕೈ ಹಿಡಿದು ಮತ್ತೆ ಚುನಾವಣೆಗೆ ನಿಂತರಪ್ಪ
ಮಗನನ್ನೇ ಎದುರಾಳಿ ಮಾಡಿದರು ಯಡಿಯೂರಪ್ಪ
ಇವರೋಲು ಹಿತವರು ಯಾರೆಂದು ನೀ ಹೇಳು ಮತದಾರಪ್ಪ

----------------------------------------------------------------------
ಅಧಿಕಾರದ ಆಸೆ ಮತ್ತು ಹಂಬಲ
ಇದಕ್ಕಾಗಿ ನಡೆಯಿತು ಆಪರೇಷನ್ ಕಮಲ
ಪರಿಣಾಮ ಕಮಲ ಸಬಲ ಉಳಿದವರೆಲ್ಲ ದುರ್ಬಲ

- Vರ ( Venkatesha ರಂಗಯ್ಯ )

Syndicate content