ಸಂಗೀತ
ಬ್ರೋಚೇವಾರೆವರುರಾ ನಿನುವಿನಾ?
May 28, 2008 - 1:03am — hamsanandiಇದೇನಿದು, ಕನ್ನಡ ಬರಹಕ್ಕೆ ತೆಲುಗು ತಲೆಬರಹವೇ ಎಂದಿರಾ? ಕಾರಣವಿದೆ. ಇಂದು ಮೇ ೨೮ -ಮೈಸೂರು ವಾಸುದೇವಾಚಾರ್ಯರು ೧೮೬೫ರಲ್ಲಿ ಇದೇ ದಿನ ಹುಟ್ಟಿದ್ದು. ಮೈಸೂರು ವಾಸುದೇವಾಚಾರ್ಯ ಎಂದ ಕೂಡಲೆ, ನನಗೆ ನೆನಪಿಗೆ ಬರುವ ಕೃತಿ ಖಮಾಚ್ ರಾಗದ ಬ್ರೋಚೇವಾರೆವರುರಾ ಎನ್ನುವ ರಚನೆ. ಕೆ.ವಿಶ್ವನಾಥರ, ಮತ್ತು ಕೆ.ವಿ.ಮಹಾದೇವನ್ ಅಂತಹವರ ದಯದಿಂದ ಸಂಗೀತದ ಪರಿಚಯ ಇಲ್ಲದವರಿಗೂ, ಶಂಕರಾಭರಣಂ ಮೊದಲಾದ ತೆಲುಗು ಸಿನೆಮಾಗಳ ಮೂಲಕ ಶಾಸ್ತ್ರೀಯ ಸಂಗೀತದ ಅಲ್ಪ ಸ್ವಲ್ಪ ಪರಿಚಯವಾದದ್ದು, ಬ್ರೋಚೇವಾರೆವರುರಾ, ಸಾಮಜವರಗಮನ ಮೊದಲಾದ ಕೃತಿಗಳು ಎಲ್ಲರ ಬಾಯಲ್ಲೂ ನಲಿದಾಡಿದ್ದು ೮೦ರ ದಶಕದ ಸಂಗತಿ.
ಮೈಸೂರು ವಾಸುದೇವಾಚಾರ್ಯರು ಕರ್ನಾಟಕ ಸಂಗೀತದ ವಾಗ್ಗೇಯಕಾರರಲ್ಲಿ ಮೊದಲಸಾಲಿನಲ್ಲಿ ನಿಲ್ಲಬಲ್ಲಂತಹವರು. ತ್ಯಾಗರಾಜಾದಿ ಸಂಗೀತ ತ್ರಿಮೂರ್ತಿಗಳ ನಂತರ ಬರಬಲ್ಲ ಹೆಸರುಗಳಲ್ಲಿ ಮೊದಲದ್ದೇ ವಾಸುದೇವಾಚಾರ್ಯರದ್ದು ಎಂದರೂ ತಪ್ಪಿಲ್ಲ. ತ್ಯಾಗರಾಜರ ಶಿಷ್ಯ ಪರಂಪರೆಯಲ್ಲಿ ಬಂದ ವಾಸುದೇವಾಚಾರ್ಯರು, ಪಟ್ಟಣಂ ಸುಬ್ರಮಣ್ಯ ಅಯ್ಯರ್ ಅವರ ಪಟ್ಟ ಶಿಷ್ಯ.
ತ್ಯಾಗರಾಜರ ರೀತಿಯಲ್ಲಿ ರಚನೆ ಮಾಡಿದ ವಾಸುದೇವಾಚಾರ್ಯರು, ತಮ್ಮ ರಚನೆಗಳಿಗೆ ತ್ಯಾಗರಾಜರಂತೆಯೇ ಆಯ್ದದ್ದು ಸಂಸ್ಕೃತ ಹಾಗೂ ತೆಲುಗು ಭಾಷೆಗಳನ್ನು. ಅಲ್ಲದೆ, ಅವರಂತೆಯೇ ವಾಸುದೇವಾಚಾರ್ಯರೂ ಸ್ವನಾಮಮುದ್ರೆಯನ್ನೇ ಉಪಯೋಗಿಸಿದರು. ತ್ಯಾಗರಾಜರ ರಚನೆಗಳಲ್ಲಿ, ತ್ಯಾಗರಾಜ ಎಂಬ ಮುದ್ರೆ ಕಂಡುಬಂದರೆ, ವಾಸುದೇವಾಚಾರ್ಯರು ವಾಸುದೇವ ಅನ್ನುವ ಅಂಕಿತವನ್ನು ಉಪಯೋಗಿಸಿದ್ದಾರೆ. ಮುಂದೆ ಓದಿ »

ಕಟಪಯಾದಿ ಸೂತ್ರ
May 14, 2008 - 8:45am — hamsanandiಕೆಲವು ದಿನಗಳ ಹಿಂದೆ ರಮೇಶಬಳಗಂಚಿಯವರು ಒಂದು ಸಬ್ಸ್ಟಿಟ್ಯೂಷನ್ ಸೈಫರ್ ಅಮ್ಮಜಿಖಷೆಸ್ಸ ಖನಮ ಒಜಿ ಎಂಬ ಬರಹವನ್ನು ಬರೆದಿದ್ದರು. ಆಗ, ಕಟಪಯಾದಿ ಸೂತ್ರದ ಬಗ್ಗೆ ಬರೆಯಬಹುದಲ್ಲ ಅನ್ನೋ ಯೋಚನೆ ಬಂತು. ಮುಂದೆ ಓದಿ »

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)
May 1, 2008 - 11:15pm — hamsanandiಕೆಲವು ದಿನಗಳ ಹಿಂದೆ ಸಿಂಧು ಭೈರವಿ ರಾಗದ ಬಗ್ಗೆ ಒಂದು ಅಸಂಬದ್ಧ ಪೀಠಿಕೆ ಬರೆದಿದ್ದೆ. ನಂತರ, ಕೇಳಿಸಬಹುದಾದ ಕೆಲವು ಒಳ್ಳೆ ಉದಾಹರಣೆಗಳಿಗೆ ಹುಡುಕುತ್ತಿದ್ದೆ. ನಾನು ಹುಡುಕುತ್ತಿದ್ದ ಕೆಲವು ಉತ್ತಮ ಗೀತೆಗಳು ಸಿಕ್ಕಲಿಲ್ಲವಾದ್ದರಿಂದ ಏನು ಮಾಡಲೆಂದು ಯೋಚಿಸುತ್ತಿದ್ದಾಗ, ನೋಡಿಸಿ-ಕೇಳಿಸುವ ಇನ್ನೊಂದಷ್ಟು ಹಾಡುಗಳು ದೊರೆತವು. ಸರಿ ಮತ್ತೆ, ತಡವೇಕೆ?
ಸಿಂಧುಭೈರವಿ ಅನ್ನುವುದು ದಕ್ಷಿಣಾದಿ(ಕರ್ನಾಟಕ) ಹಾಗೂ ಉತ್ತರಾದಿ(ಹಿಂದೂಸ್ತಾನಿ)ಸಂಗೀತ ಎರಡರಲ್ಲೂ ಪ್ರಚಾರದಲ್ಲಿರುವ ರಾಗ. ಹಿಂದೂಸ್ತಾನಿ ಪದ್ಧತಿಯಲ್ಲಿ ಇದಕ್ಕೆ ಭೈರವಿ ಎಂದರೆ, ಕರ್ನಾಟಕ ಸಂಗೀತದಲ್ಲಿ ಸಿಂಧೂಭೈರವಿ ಎನ್ನುತ್ತಾರೆ. ಕರ್ನಾಟಕ ಸಂಗೀತಕ್ಕೆ ಇದು ಹಿಂದೂಸ್ತಾನಿಯಿಂದಲೇ ಬಂದಿದೆ ಎನ್ನುವುದನ್ನು ನೀವು ಈ ಬರಹದಲ್ಲಿ ಕೊಟ್ಟಿರುವ ಕೆಲವು ಉದಾಹರಣೆಗಳನ್ನು ಕೇಳಿದಾಗ ನಿಮಗೆ ಅರಿವಾಗುತ್ತೆ. ಈ ಬರಹದ ಮಟ್ಟಿಗೆ, ನಾನು ಭೈರವಿ ಎಂದಾಗಲೂ, ಸಿಂಧೂಭೈರವಿ ಎಂದಾಗಲೂ ಒಂದೇ ರಾಗದ ಬಗ್ಗೆಯೇ ಹೇಳುತ್ತಿದ್ದೇನೆ ಎಂದುಕೊಳ್ಳಿ. (ಕರ್ನಾಟಕ ಸಂಗೀತದಲ್ಲಿ ಬೇರೊಂದು ಭೈರವಿ ಇದೆ - ಅದೂ ಒಂದು ಮಹಾನ್ ರಾಗವೇ. ಅದರ ವಿಷಯ ಈಗ ಬೇಡ.) ಮುಂದೆ ಓದಿ »

ಸಿಂಧು ಭೈರವಿ
April 23, 2008 - 6:11am — hamsanandi೧೯೮೫ ರಲ್ಲಿ ಒಂದು ತಮಿಳು ಚಿತ್ರ ತೆರೆಕಂಡಿತ್ತು. ಅದರ ಹೆಸರು ಸಿಂಧು ಭೈರವಿ.
ತಮಿಳು ಅರ್ಥವಾಗುವರ ಸಂಖ್ಯೆ ಬಹಳ ಕಡಿಮೆ ಇದ್ದ ನಮ್ಮೂರಿನಲ್ಲೂ ಈ ಚಿತ್ರ ಕೆಲವು ವಾರ ಹೌಸ್‍ಫುಲ್ ಪ್ರದರ್ಶನ ಕಂಡಿತ್ತು ಎಂದರೆ ಚಿತ್ರ ಬಹಳ ಯಶಸ್ವಿಯಾಗಿತ್ತೆಂದು ನೀವು ಊಹಿಸಿರುತ್ತೀರಿ. ಮುಂದೆ ಓದಿ »

- hamsanandi ರವರ ಬ್ಲಾಗ್
- Login or register to post comments
- 265 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಅರ್ಬನ್ ಲ್ಯಾಡ್ಸ್
February 28, 2008 - 5:51pm — madhava_hsಇತ್ತೀಚೆಗೆ ’ಅರ್ಬನ್ ಲ್ಯಾಡ್ಸ್’ ಎಂಬ ರಾಕ್ ಸಂಗೀತದ ಕನ್ನಡ ಹಾಡನ್ನು ಯಾರೋ ಕಳಿಸಿದ್ದರು.
ಇದರ ಸಿ.ಡಿ ಯೂ ಇತ್ತೀಚೆಗೆ ಬಿಡುಗಡೆಯಾಯಿತೆಂದು ವಿ.ಕ.ದಲ್ಲಿ ಓದಿದೆ. ಉತ್ತರ ಕರ್ನಾಟಕ/ದ.ಕರ್ನಾಟಕ ಶೈಲಿಯ ಕನ್ನಡಗಳನ್ನು ಬಹಳ ಪ್ರಾಸಬದ್ಧವಾಗಿ ಈ ಹಾಡಿನಲ್ಲಿ ಬಳಸಿದ್ದಾರೆ. ಮುಂದೆ ಓದಿ »

- madhava_hs ರವರ ಬ್ಲಾಗ್
- Login or register to post comments
- 214 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: