ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಬೇಂದ್ರೆ

ಯುಗ ಯುಗಾದಿ ಕಳೆದರೂ...

Ugadi

ನಮಸ್ಕಾರ. ಯುಗಾದಿಯ ಶುಭಾಶಯಗಳು. ಈ ಯುಗಾದಿಯು ಸಂಪದಿಗರೆಲ್ಲರಿಗೂ "ಬೇವಿನ ಕಹಿ ಬಾಳಿನಲಿ ಹೂವಿನ ನಸುಗಂಪು ಸೂಸಿ ಜೀವಕಳೆಯನು ತರಲಿ" ಎಂದು ಹಾರೈಸುತ್ತೇನೆ.  ಮುಂದೆ ಓದಿ »

ನೀ ಹೀಂಗ ನೋಡಬ್ಯಾಡ ನನ್ನ... (ಬೇಂದ್ರೆ-೨)

(ಚಿತ್ರ ಕೃಪೆ: ಫ್ಲಿಕರ್‌.ಕಾಮ್‌)

ಮೂಕ ವೇದನೆ ಎಂಬ ಒಂದು ನುಡಿಗಟ್ಟಿದೆ. ಹೇಳಲಾರದ ನೋವದು. ಹೇಳಿಕೊಂಡರೂ ವ್ಯಕ್ತವಾಗದ ಭಾವವದು. ಒಳಗೇ ಇಟ್ಟುಕೊಂಡಿದ್ದರೂ, ಉಕ್ಕಿ ಹೊರಗೂ ಕಾಣಿಸುವಂಥ ನೋವದು.

ಬೇಂದ್ರೆಯಂಥ ವ್ಯಕ್ತಿ ಅದನ್ನು ಕಣ್ಣಾರೆ ಕಂಡು, ಸ್ವತಃ ಅನುಭವಿಸಿದಾಗ ಉದ್ಭವವಾದದ್ದು ’ನಾದಲೀಲೆ’ ಸಂಕಲನದ ’ನೀ ಹೀಂಗ ನೋಡಬ್ಯಾಡ ನನ್ನ’ ಕವಿತೆ.

ಎಂಟೇ ದಿನಗಳಲ್ಲಿ ಅವರ ಇಬ್ಬರು ಎಳೆಯ ಮಕ್ಕಳು ತೀರಿಕೊಳ್ಳುತ್ತಾರೆ. ಬೇಂದ್ರೆಯವರಿಗೆ ಆಘಾತವಾಗುತ್ತದೆ. ಅವರಿಗಿಂತ ಹೆಚ್ಚಿನ ಶೋಕ ಅವರ ಮಡದಿಯದು. ಯಾರು ಯಾರಿಗೆ ಸಮಾಧಾನ ಹೇಳಬೇಕು? ತಾನತ್ತರೆ ಕವಿಹೃದಯದ ಗಂಡ ಇನ್ನಷ್ಟು ಶೋಕಪಡುತ್ತಾರೆ ಎಂದುಕೊಂಡು ಅವರ ಮಡದಿ ಸುಮ್ಮನಿದ್ದಾರೆ. ಆದರೆ, ಮಕ್ಕಳನ್ನು ಕಳೆದುಕೊಂಡ ಶೋಕ ಉಕ್ಕುಕ್ಕಿ ಬರುತ್ತಿದೆ. ಅದನ್ನು ಅದುಮಿಟ್ಟುಕೊಂಡು ಆಕೆ ಸುಮ್ಮನೇ ಕೂತಿದ್ದಾರೆ.  ಮುಂದೆ ಓದಿ »

ಬೊಗಸೆಗಣ್ಣಿನ ಬಯಕೆಯ ಹೆಣ್ಣು... (ಬೇಂದ್ರೆ-೧)

ಬೆಳ್ಳಂಬೆಳಿಗ್ಗೆ ಬೇಂದ್ರೆ ಗಂಟು ಬಿದ್ದಿದ್ದಾರೆ.

ನಸುಕಿನ ಬೆಂಗಳೂರಲ್ಲಿ ಈಗ ಚಳಿ ಕಡಿಮೆ. ನಕ್ಷತ್ರಗಳು ಸ್ವಚ್ಛವಾಗಿ ಮುಗುಳ್ನಗುತ್ತಿವೆ. ನಸುಕಿನಲ್ಲಿ ಚಳಿಯಾದೀತು ಎಂದು ಕಾಲಡಿ ಹಾಕಿಕೊಂಡಿದ್ದ ರಗ್‌ಗಳು ಹಾಗೇ ಇವೆ. ಸಣ್ಣಗೇ ತಿರುಗುವ ಫ್ಯಾನ್‌ ಕೂಡಾ ಚಳಿ ಹುಟ್ಟಿಸುತ್ತಿಲ್ಲ.  ಮುಂದೆ ಓದಿ »

ಇದು ಬರಿ ಬೆಳಗಲ್ಲೋ...

ಎದ್ದ ಕೂಡಲೇ ಏನು ಮಾಡುತ್ತೀರಿ?

ಮುಖ ಮಾರ್ಜನ ಒತ್ತಟ್ಟಿಗಿರಲಿ, ಏನು ಯೋಚಿಸುತ್ತೀರಿ?  ಮುಂದೆ ಓದಿ »

ಪುಸ್ತಕನಿಧಿ-ಬೇಂದ್ರೆಯವರ ನಾದಲೀಲೆ

ವರಕವಿ ಬೇಂದ್ರೆಯವರ 'ನಾದಲೀಲೆ' ಅವರ ಆರಂಭಿಕ ಕವನಗಳನ್ನು ಹೊಂದಿದೆ . ಅರ್ಥ ಮಾಡಿಕೊಳ್ಳಲು ನಂತರದ ಕವನಗಳು ಕಠಿಣವಾಗಿದ್ದರೆ , ಇವು ಸುಲಭವಾಗಿವೆ .ಆಸಕ್ತರು ನೋಡಬಹುದು. ನಿಮಗೆ ಈಗಾಗಲೇ ಗೊತ್ತಿರುವ ಕೆಲವು ಸುಪ್ರಸಿದ್ಧ ಕವನಗಳೂ ಇಲ್ಲಿವೆ . ಪುಸ್ತಕವೂ ಸಣ್ಣದೇ . ಈ ಪುಸ್ತಕ ಇಲ್ಲಿದೆ . ನೋಡಿ

Syndicate content