ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

majavani

ಸಂಪದ › Sampada Blogs › Rohit ರವರ ಬ್ಲಾಗ್

ಮಯೂರ ಸೆಪ್ಟಂಬರ್ 2005ರ ಸಂಚಿಕೆ

September 12, 2005 - 4:09pm — Rohit

ಕರ್ನಾಟಕದಿಂದ ಹೊರಬಂದಮೇಲೆ ನನಗೀಗ ಕನ್ನಡ ಮ್ಯಾಗಜೀನ್ಗಳು, ಪುಸ್ತಕಗಳೇ ಕನ್ನಡದ ಕೊಂಡಿಗಳು. ಬೆಂಗಳೂರಿನಲ್ಲಿ ಅಪರೂಪಕ್ಕೊಮ್ಮೆ ಕಣ್ಣಾಡಿಸುತ್ತಿದ್ದ ಮಯೂರವನ್ನು ಇಲ್ಲಿ ಪ್ರತಿ ತಿಂಗಳು ಕೊಂಡು ಒಂದೂ ಪುಟವನ್ನು ಬಿಡದೆ ಓದುತ್ತೇನೆ...ವಿಶೇಷವಾಗಿ ಈ ತಿಂಗಳಿನ ಸಂಚಿಕೆ ಹಾಗೆ ಓದಿಸಿಕೊಂಡುಹೋಯಿತು.

ಈ ಸಂಚಿಕೆ ಶ್ರಾವಣದ ವಿಶೇಷ. ಹಾಗೇ ಪ್ರಕಟಿತ ಸಾಮಗ್ರಿಯಲ್ಲೂ ನಾವಿನ್ಯತೆ. ಜಿ.ಎಚ್.ನಾಯಕರ ಆತ್ಮಕಥನದ ಒಂದು ಭಾಗ,'ಮೀನು ಮಾಂಸ ಪುರಾಣ' ಅಂಕೋಲೆಯ ಸುತ್ತಮುತ್ತಲಿನ ಜೀವನವನ್ನು ಕಣ್ಣಿಗೆ ಕಟ್ಟಿಕೊಡುತ್ತದೆ. ಹಾಗೆಯೇ ಮಾಧವ ಕುಲಕರ್ಣಿಯವರ 'ಕನಸು' ಕಥೆ ಕೂಡ ಗದಗ ಪರಿಸರದ ಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡು ಸೊಗಸಾಗಿ ಮೂಡಿಬಂದಿದೆ. ಇನ್ನು ಎರಡು ಯುವ ಬರಹಗಾರರ ಕಥೆಗಳೂ ಅಷ್ಟೇ ಇಷ್ಟವಾದವು. ಸೂ ಥಾಂಗ್ ಎಂಬ ಚೀನೀ ಬರಹಗಾರನ ಕಥೆ 'ಚೆರ್ರಿ'ಯ ಜಿ.ಪೈಯವರ ಅನುವಾದವೂ ಗಮನಸೆಳೆಯಿತು.

ಇವೆಲ್ಲಕ್ಕೂ ಮಕುಟವಿಟ್ಟಂತೆ ನನಗೆ ಬಹಳ ಹಿಡಿಸಿದ್ದು, ಬ್ರಜಿಲ್ ನ ನಿರ್ದೇಶಕ ಸಾಲ್ಸ್ ವಲೇಸಾನ 'ದಿ ಮೊಟಾರ್ ಸೈಕಲ್ ಡೈರೀಸ್' ಚಿತ್ರದ ಬಗೆಗಿನ ಬರಹ. ಈ ಸಂಚಿಕೆಯಲ್ಲಿ ಮತ್ತೊಂದು ಹೊಸ ಅಂಕಣ ಪ್ರಾರಂಭವಾಗಿದೆ. ಇದರಲ್ಲಿ ಲೇಖಕಕರು, ಸಮಕಾಲೀನ ಕನ್ನಡ ಭಾಷೆಯಲ್ಲಾಗುತ್ತಿರುವ ಬದಲಾವಣೆಗಳ ಬಗ್ಗೆ ಚರ್ಚಿಸುತ್ತಾರೆ.

ಒಟ್ಟಿನಲ್ಲಿ ಈ ಬಾರಿಯ ಮಯೂರ ಮೃಷ್ಟಾನ್ನ ಭೋಜನವನ್ನೇ ಉಣಬಡಿಸಿತು.

~.~
  • Rohit ರವರ ಬ್ಲಾಗ್
  • Login or register to post comments
  • 881 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 12, 2005 - 6:04pm — koumodiki

ನಿಜ....

koumodiki's picture

ಕರ್ನಾಟಕದಿಂದ ಹೊರ ಬಂದವರಿಗೆ ಇವುಗಳೆ ನಡಿಗೆ ಜೊಡಿಸುವ ಸಧನೆಗಳು. ನಯಕರ ಬದುಕು ತುಂಬ ಚೆನ್ನಗಿದೆ. ನನು ಮುಂದಿನ ಸಂಚಿಕೆಗಗಿ ಕಾಯುತಿದ್ದೆನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಯೂರದಲ್ಲಿ ತೇಜಸ್ವಿ
  • ಜೂನ್ ೨೦೦೭ ರ ಮಯೂರ - ತೇಜಸ್ವಿ ಸಂಚಿಕೆ
  • ಕನ್ನಡಿಗರ ಭವ್ಯ ಇತಿಹಾಸ - ಇಂಗ್ಲೀಷ್ ನಮ್ಮ ಅಭಿವ್ಯಕ್ತಿಯ ಮಾದ್ಯಮ ?-'ನಾನೇಕೆ ನಾಸ್ತಿಕ ?
  • ಮುಂದಿನ ಸಂಚಿಕೆ: ಟಿ ಎನ್ ಸೀತಾರಾಂ ರವರೊಂದಿಗೆ - ಪ್ರಶ್ನೆಗಳನ್ನು ನೀವೂ ಕೇಳಬಹುದು.
  • ಪರಿಸರದ ಬಗೆಗಿನ ಪತ್ರಿಕಾ ಸಂಚಿಕೆ ಮುದ್ರಿಸದೆ ಪರಿಸರ ರಕ್ಷಣೆ! ಇ-ಲೋಕ-17(6/4/2007)
Syndicate content

ಲೇಖಕರು

Rohit's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:56am
  • csomsekraiah
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 10:46am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:13am
  • dhanu.vijai
    ಉ: ಕಚೇರಿ ಎಂಬ ನರಕ-೧
    August 30, 2008 - 9:32am
  • shreedevikalasad
    ಉ: ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
    August 30, 2008 - 9:22am
  • Sunil Jayaprakash
    ಉ: ಕಾದಿರುವೆ ನಿನಗಾಗಿ
    August 30, 2008 - 9:11am
  • Smi
    ಉ: ಕಚೇರಿ ಎಂಬ ನರಕ-೧
    August 30, 2008 - 9:01am
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 8:46am
  • Aravinda
    ಉ: ತಿಳಿ ಹಾಸ್ಯ ಮರೆತಿಲ್ಲ!
    August 30, 2008 - 8:34am
  • pallavi.dharwad
    ಉ: ಕಚೇರಿ ಎಂಬ ನರಕ-೧
    August 30, 2008 - 7:39am
ಇನ್ನಷ್ಟು


ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator