ಅನನ್ಯ ಕ್ಯಾಲೆಂಡರ್ 2006
ಡಾ. ರಾಘವೇಂದ್ರ ರಾವ್ ಅವರು ನಡೆಸಿಕೊಂಡು ಬರುತ್ತಿರುವ ಅನನ್ಯ ಸಂಸ್ಥೆ ಎಷ್ಟು ಜನರಿಗೆ ಗೊತ್ತು? ಅವರದೊಂದು ವಿಶಿಷ್ಟ ರೀತಿಯ ಕಲಾಸೇವೆ. ಅನನ್ಯ ವತಿಯಿಂದ ಹಲವಾರು ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ವರ್ಷವಿಡೀ ಜರುಗುತ್ತವೆ. ಶಾಸ್ತ್ರೀಯ ಸಂಗೀತದ ಧ್ವನಿಮುದ್ರಣ ಪ್ರಾರಂಭವಾದ ಕಾಲದಿಂದ ಇಂದಿನ ತನಕದ ಸಾವಿರಾರು ಕಛೇರಿಗಳ ಧ್ವನಿಮುದ್ರಣವನ್ನು ಮಲ್ಲೇಶ್ವರದಲ್ಲಿರುವ ಅನನ್ಯ ಸಂಗ್ರಹಾಲಯದಲ್ಲಿ ನೀವು ಕೇಳಬಹುದು! ಹನ್ನೊಂದು ವರ್ಷಗಳಿಂದ ಅವರು ಇನ್ನೊಂದು ವಿಶಿಷ್ಟ ರೀತಿಯ ಕಲಾಸೇವೆ ನಡೆಸಿಕೊಂಡು ಬರುತ್ತಿದ್ದಾರೆ. ಅದು ಅನನ್ಯ ಕ್ಯಾಲೆಂಡರ್. ಈ ವರ್ಷದ ಕ್ಯಾಲೆಂಡರ್ ಬಿಡುಗಡೆ ಬಗ್ಗೆ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ. ಬನ್ನಿ. ಆ ದಿನ ಅಲ್ಲಿ ಸಿಗೋಣ.

- pavanaja ರವರ ಬ್ಲಾಗ್
- Login or register to post comments
- 883 hits
- Email this blog





RSS: