ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.

— ಸಮರ್ಥ ರಾಮದಾಸ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪ್ರೀತಿ

ಮನಸಿನ ಪುಟಗಳು ತುಂಬಿವೆ ಖಾಲಿಯಾಗಿ!?

ಕಾಡಿದ ಕಣ್ಣುಗಳು
ಕಾಣದಂತೆ ಕಾಣೆಯಾಗಿ
ಮನಸಿನ ಪುಟಗಳು
ತುಂಬಿವೆ ಖಾಲಿಯಾಗಿ!?

ನಿಮಿಷದ ನೋಟಗಳಲ್ಲಿ
ಕಂಗಳ ಮಾತುಗಳಲ್ಲಿ
ಹರುಷದ ಗೀತೆಗಳಲ್ಲಿ
ಮನಸಿನ ಪುಟಗಳು
ತುಂಬಿವೆ ಖಾಲಿಯಾಗಿ!?

ಗುಂಡಿಗೆಯ ಗೂಡಿನಲ್ಲಿ
ಗುಂಡನೆಯ ಭೂಮಿಯಲ್ಲಿ
ಗೆಜ್ಜೆನಾದದ ಸದ್ದಿನಲ್ಲಿ
ಮನಸಿನ ಪುಟಗಳು
ತುಂಬಿವೆ ಖಾಲಿಯಾಗಿ!?

ನೀರಿನಲ್ಲಿ ಬರೆದ ಚಿತ್ರಗಳಲ್ಲಿ
ಗಾಳಿಯ ಮೇಲಿನ ಗೋಪುರಗಳಲ್ಲಿ
ಮನಸಿನ ಪುಟಗಳು
ತುಂಬಿವೆ ಖಾಲಿಯಾಗಿ!?

ಮಿಂಚಿ ಮರೆಯಾದ ಆ ಕಾಲದಲ್ಲಿ
ನೀ ನಾಚಿ ನಿಂತು ನಕ್ಕ ನೆನಪಲ್ಲಿ
ಮನಸಿನ ಪುಟಗಳು
ತುಂಬಿವೆ ಖಾಲಿಯಾಗಿ!?

ಮನಸಿನ ಈ ಖಾಲಿ ಪುಟಗಳಲ್ಲಿ
ಹಾಕಬೇಕಿದೆ ನೀ ಒಲವ ರಂಗವಲ್ಲಿ
ರಂಗವಲ್ಲಿಯ ರಂಗಿನ ಗುಂಗಲ್ಲಿ
ತುಂಬಬೇಕಿದೆ ಗೆಳತಿ
ಮನಸಿನ ಪುಟಗಳು ಖಾಲಿಯಾಗಿ!?

ಅದು ಯಾರೋ?!

 

 

 

 

 

 

ಒಂದು ದಿನ,
ಯಾರೋ..
ದೂರ ನಿಂತು
ಹತ್ತಿರಕ್ಕೆ ಒಂದು ಕ್ಷಣ ಬಂದು
ಪಿಸು ಮಾತಿನಲ್ಲಿ
ಹೇಳಿಬಿಡುತ್ತಾರೆ,
ಜೀವನವಿಡೀ ಕೇಳಬೇಕೆಂದು
ಬಯಸಿ ಕಾದಿದ್ದ
ಆ ಮಾತು! :)

ಆ ಯಾರೋ
ಮತ್ತು
ಆ ಮಾತು
ಬದುಕಿನಲ್ಲಿ ಯಾವಾಗಲೂ
ನೆನಪಿಡುವ ಘಟನೆಯಾಗಿ
ಉಳಿದುಬಿಡುತ್ತವೆ. :)

ನೀವು ಕಾದಿದ್ದೀರಾ?
ಅದು ಯಾರೋ? :)

-ಸವಿತ

ಕಿತ್ತಾಡೋರ ಕಂಡು ನಗುತ್ತಿದೆ ಪ್ರೀತಿ...

ಮನಸ್ಸು ಖಾಲಿಯಾಯ್ತು ಅಂತ ಅನ್ನಿಸಿದಾಗೆಲ್ಲ ವಿದ್ಯಾರ್ಥಿ ಜೀವನದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ.

ಕಂಪ್ಯೂಟರುಗಳಿಲ್ಲದ, ಖಾಸಗಿ ಚಾನೆಲ್‌ಗಳಿಲ್ಲದ, ಮೊಬೈಲುಗಳಿಲ್ಲದ ಹಾಗೂ ಜೇಬಿನಲ್ಲಿ ದುಡ್ಡಿಲ್ಲದ ದಿನಗಳವು. ಆದರೂ, ಮನಸ್ಸಿನೊಳಗಿನ ಭಾವನೆಗಳು ಸಮೃದ್ಧವಾಗಿದ್ದವು. ಅವನ್ನು ಹೊರಹಾಕಲು ಪತ್ರಗಳಿದ್ದವು. ಮಿತ್ರರಿದ್ದರು ಹಾಗೂ ದಿನಚರಿ ಎಂಬ ಅದ್ಭುತ ಸಂಗಾತಿಯಿತ್ತು. ಎಲ್ಲಕ್ಕಿಂತ ಮುಖ್ಯ, ಶೈಕ್ಷಣಿಕ ವರ್ಷದ ಕೊನೆಯ ದಿನಗಳಲ್ಲಿ, ಇಂಥ ಭಾವನೆಗಳಿಗೆ ಸೂಕ್ತ ಹರಿವು ಕೊಡುವ ಆಟೊಗ್ರಾಫ್‌ಗಳಿದ್ದವು. ಒಂದಲ್ಲ ಒಂದು ಮನಸ್ಸಿಗೆ ಮುದ ನೀಡುತ್ತಿತ್ತು. ಹೊಸ ಕನಸಿಗೆ ಪ್ರೇರಣೆ ಒದಗಿಸುತ್ತಿತ್ತು.  ಮುಂದೆ ಓದಿ »

ಗೆಳೆಯಾ ನೀ ದೂರವಾದೆ ಏಕೆ?

ಗೆಳೆಯಾ


ಬಾಳಿನರ್ಧಕ್ಕೆ ಬಂದು ಬಾಳುವಾಸೆ


ತುಂಬಿ ಮನ ಕರಗಿ ನಿನ್ನಲ್ಲಿ


ಲೀನವಾಯಿತೆನ್ನುವಾಗಲೆ


ನೀ ದೂರವಾದೆ ಏಕೆ?


 


ಮುಗಿಲೆತ್ತರಕ್ಕೂ ಕೈ  ಚಾಚಿ


ಚಂದಿರನ ಮುಡಿಗೆ ಇರಿಸುವಾ


ಕನಸ   ನೀಡಿ  ನಡೆದೆ ನೀನೆಲ್ಲಿಗೆ?


 


ಸಕ್ಕರೆಯ ಸಿಹಿ ಮಾತುಗಳ


ಪೋಣಿಸಿ, ಬಾಳ ಸಿಹಿಯನೆಲ್ಲ


ಬರಿದು ಮಾಡಿದ್ದೇಕೆ?


 


 ಬದುಕಿಗೆ ಬಣ್ಣಬಣ್ಣದಾಸೆ


ತೋರಿ  ನೀ ಬದುಕಿನಷ್ಟೂ


 ಬಣ್ಣಗಳ  ಕರಗಿಸಿದ್ದೇಕೆ?


 


ಸ್ವಪ್ನದಾಚೆಗಿನ ಲೋಕಕೆ  


ಕರೆದೊಯ್ದು ನಡುದಾರಿಯಲ್ಲಿ


ಒಂಟಿಯಾಗಿ ಬಿಟ್ಟುದೇಕೆ?


 


ಸ್ವಚ್ಚ ಪ್ರೀತಿಯ ಧಾರೆ ಎರೆದ


ಅಚ್ಚ ಮನಸ ಅರ್ಥವಾಗದೆ


ರಾಡಿ ಮಾಡಿ ಓಡಿದ್ದೇಕೆ?


 


ಬೇಡ ಗೆಳೆಯಾ ಮತ್ತಾವ ಸುಳಿಗೂ


ಸಿಗಲಾರೆ ನಾ . ಮತ್ತೆಂದೂ  ಮುಂದೆ ಓದಿ »

ಕರೆದರೆ ಬರುವೆಯಾ ಚಿನ್ನ ?

ಮನವೆಲ್ಲ ತುಂಬಿರಲು ನಿನ್ನ ನೆನಪುಗಳು


ಕಣ್ಣೆಲ್ಲ ತುಂಬಿರಲು ಕಣ್ಣಿರ ಹನಿಗಳು


ಮರೆಯಲಾಗದೆ ನಿನ್ನ ಬೇಯುತಿದೆ ಈ ಮನವು


ಬಿಟ್ಟೀರಲಾರದೆ ನಿನ್ನ ನೋಯುತಿದೆ ಈ ತನವು


ಕರೆದರೆ ಬರುವೆಯಾ ಚಿನ್ನ ಈ ಮನದ ನೋವ ನೀಗಿಸಲು ?

ಕನ್ಯೆಯ ಕನಸು :'ವರ್ಜಿನ್ ವರ'

ಘಟನೆ 1 : ನನ್ನ ಗೆಳತಿಯೊಬ್ಬಳು ಕಾಲೇಜಿನಲ್ಲಿರುವಾಗ ನೆರೆ ಮನೆಯ ಹುಡುಗನೊಬ್ಬನನ್ನು ಪ್ರೀತಿಸಿದಳು. ವಿಷಯ ಮನೆಗೆ ತಿಳಿಸಿದಾಗ ಮನೆಯವರೂ ಒಪ್ಪಿಕೊಂಡು ವಿವಾಹದ ಸಿದ್ಧತೆಯೂ ನಡೆಯಿತು. ಇನ್ನೇನು ನಿಶ್ಚಿತಾರ್ಥ ನಡೆಯಲು ಎರಡು ದಿನಗಳಿರುವಾಗ ಹುಡುಗ ಆಕೆಗೆ ಫೋನ್ ಮಾಡಿ ತನ್ನನ್ನು ಭೇಟಿಯಾಗಬೇಕೆಂದು ಹೇಳಿದ. "ಆಯ್ತು" ಎಂದು ಈಕೆ ಒಪ್ಪಿಕೊಂಡಳು. ಭೇಟಿಯಾದಾಗ ಆತ ಹೇಳಿದ "ಬಾ..ನಾವು ಹಾಸ್ಪಿಟಲ್್ಗೆ ಹೋಗೋಣ". "ಯಾಕೆ?" ಎಂಬ ಆಕೆಯ ಪ್ರಶ್ನೆಗೆ ಅವ ನೀಡಿದ ಉತ್ತರ."ನೀನು ವರ್ಜಿನ್ ಹೌದಾ? ಅಲ್ವಾ ಅಂತಾ ತಿಳಿಬೇಕು". ಹಾಂ! ಇಷ್ಟೊಂದು ಕಾಲ ತನ್ನೊಂದಿಗೆ ಸುತ್ತಾಡಿ ಪ್ರೀತಿಸಿದ ಹುಡುಗ ಇದೀಗ ತನ್ನ ಶೀಲದ ಬಗ್ಗೆ ಶಂಕೆ ಮಾಡುತ್ತಿದ್ದಾನೆ ಎಂದರೆ ಯಾವ ಹುಡುಗಿ ತಾನೇ ಸಹಿಸಿಯಾಳು? ಮತ್ತೆ ಒಂದಿಷ್ಟು ಜಗಳ. ತನ್ನ ಬಗ್ಗೆ ಇಷ್ಟೊಂದು ಶಂಕೆ ಪಡುವ ವ್ಯಕ್ತಿ ತನಗೆ ಬೇಡವೇ ಎಂದು ಈಕೆ ಹೇಳಿಯೇ ಬಿಟ್ಟಳು. ಮದುವೆ ರದ್ದಾಯಿತು.  ಮುಂದೆ ಓದಿ »

ಬೆರಳ್ಹಿಡಿದು ಜಗವ ತೋರಿಸಿದಾತ...ಅಪ್ಪ!

ಸಾವಿರ ಸವಾಲುಗಳ ದಾಟಿಸಿದ ತಂದೆ...

ಆತ ನಮ್ಮ ಬಾಲ್ಯದ ಹೀರೊ. ಅಮ್ಮನ ಮಡಿಲಿನಿಂದ ಕೆಳಗಿಳಿದು ನಡೆಯಲು ಕಲಿತಾಗಿನಿಂದ ಆತ ನಮ್ಮ ಪಾಲಿನ ದೊಡ್ಡ ಭರವಸೆ. ಸಹಪಾಠಿಗಳೊಂದಿಗೆ ಜಗಳವಾದಾಗ, ನಾವು ದೂರು ಹೇಳಿದ್ದು ಆತನಿಗೆ. ಮೊದಲ ಮಿಠಾಯಿ ಕೊಡಿಸಿದ್ದು ಆತನೇ. ಬೆದರಿದಾಗ ಎತ್ತಿಕೊಂಡು ಸಂತೈಸಿದ, ಭರವಸೆ ತುಂಬಿದ ಮೊದಲ ವ್ಯಕ್ತಿ ಆತ. ಬಾಲ್ಯದ ನೂರೆಂಟು ನೆನಪುಗಳನ್ನು ಸಮೃದ್ಧವಾಗಿಸಿದ ಆತ ನಮ್ಮ ಅಪ್ಪ. ಆತ ಎಲ್ಲ ಕಡೆ ಸಿಗುತ್ತಾನೆ. ಪಾರ್ಕ್‌‌ಗಳಲ್ಲಿ, ಬಸ್‌ಸ್ಟಾಪ್‌ಗಳಲ್ಲಿ, ಶಾಲೆಯ ಗೇಟಿನ ಹೊರಗೆ, ಅಂಗಡಿ ಎದುರು- ಎಲ್ಲೆಲ್ಲಿ ಮಕ್ಕಳು ಕಾಣುತ್ತಾರೋ ಅಲ್ಲೆಲ್ಲ ಆತನೂ ಇರುತ್ತಾನೆ. ಕಂಡದ್ದನ್ನೆಲ್ಲ ಕೊಡಿಸು ಎಂದು ಕೈಚಾಚುವ ಮಕ್ಕಳಿಗೆ ಪ್ರೀತಿಯಿಂದ ತಿಳಿ ಹೇಳುತ್ತ, ಚೆನ್ನಾಗಿವೆ ಅನಿಸಿದ್ದನ್ನು ಕೊಡಿಸುತ್ತ, ಮಕ್ಕಳು ಖುಷಿಯಿಂದ ಕೇಕೆ ಹಾಕುವಾಗ ಸದ್ದಿಲ್ಲದೇ ತೃಪ್ತಿಯಿಂದ ನಗುತ್ತಾನೆ.  ಮುಂದೆ ಓದಿ »

"ಭವದ ಎಲ್ಲೆ ಮೀರಿ....?"

"ಭವದ ಎಲ್ಲೆ ಮೀರಿ .......?"

ಇಳಿ ಸಂಜೆ ಹೊತ್ತಲ್ಲಿ ಸೌಗಂಧಿತ ವನ ಪಾರ್ಕಿನ ಮೂಲೆಯಲ್ಲಿ ಕೂತು ’ ಏನ್ ಅನ್ಕೊಂಡಿದ್ದಾರೆ ನನ್ನ.... ಕೈಲಾಗದವನು ಅಂತಾನಾ..... ಥೂ... ದರಿದ್ರದವರು....’ ಹೀಗೆ ತನ್ನಷ್ಟಕ್ಕೆ ತಾನು ಮಣಮಣ ಅಂತ ಗೊಣಗಿಕೊಳ್ಳುತ್ತಿರುವವನು ಎಲ್ಲರಿಂದ ವಿಬು ಎನಿಸಿಕೊಂಡರೂ ನಿಜನಾಮದಲ್ಲಿ ವಿಭವನಾಗಿದ್ದ....  ಮುಂದೆ ಓದಿ »

ಪ್ರೀತಿಯ ನೆನದು

ಕಳೆದು ಹೋದ ಪ್ರೀತಿಯ ನೆನದು ಮನ ಕೊರಗುತಿದೆ.
ಬಾವನೆಯ ಕೊಂಡಿ ಕಳೆದು ಹೋದ ಮೇಲೆ,
ಮನಸ್ಸು ಹಳೆಯ ನೆನಪಿನ ಸುತ್ತಾ ಸುಳಿಯುತಿದೆ.
ಜಗ ಜೀವನ ಹೊಸತಿನಲ್ಲಿದ್ದರೆ,
ಹೃದಯ ಹಳೆಯ ನೆನಪಿನ ಕೊಂಪೆಯಲ್ಲಿ ಕಳೆದು ಹೋಗಿದೆ.
ಜೀವನಕ್ಕೆ ನವ ಉಲ್ಲಾಸ ಬೇಕಿದೆ, ಅದುವೇ ಸಂತೋಷದ ಗಮ್ಯದಲಿ.

ಬೊಗಸೆಯ ಹೂವುಗಳು

ಬೊಗಸೆಯಲಿದ್ದರೆ ಹೂವುಗಳು
ಅಂಗೈಯೆರಡೂ ಘಮಘಮವು;
ಅಂತೆಯೆ ಪ್ರೀತಿಯು ಸುಜನರದು
ಎಡಬಲಕೆರಡಕು ಸರಿಸಮವು!

ಸಂಸ್ಕೃತ ಮೂಲ:

ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಂ|
ಅಹೋ ಸುಮನಸಾಂ ಪ್ರೀತಿರ್ವಾಮದಕ್ಷಿಣಯೋಃ ಸಮಾ||

 -ಹಂಸಾನಂದಿ

 

 

Syndicate content