22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕಾಳಿದಾಸ

ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....

May 26, 2007 - 4:40am
hamsanandi

ಕೆ.ಎಸ್.ನರಸಿಂಹಸ್ವಾಮಿಯವರಿಗೂ, ಮೈಸೂರು ಅನಂತ ಸ್ವಾಮಿಯವರಿಗೂ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಅದೇ ಕೋಟಿ ರೂಪಾಯಿ ಅನ್ನೋದು ನಮ್ಮೆಲ್ಲರಿಗೂ ಗೊತ್ತು. ಅವರಂತೆ ಎಷ್ಟೋ ಜನಗಳಿಗೂ ಅದೇ ಭಾವನೆಯಿದ್ದರೂ, ಆ ರೀತಿ ಹೊಸ ಪದ್ಯಗಳನ್ನು ಹಾಡಿಲ್ಲ ಅಷ್ಟೇ. ದಾರಿತಪ್ಪುತ್ತಿದ್ದ ಗಂಡಸರನ್ನು ಸರಿದಾರಿಗೆ ತಂದವರು ಹಲವರು, ಮತ್ತೆ ಸರಿಯಾದ Read more about ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹಳತು - ಹೊಸತು

January 5, 2008 - 6:02am
hamsanandi

ಹಳತು ಬೇಕೋ ಹೊಸತು ಬೇಕೋ ಎಂಬ ತಳಮಳ ಯಾರನ್ನೂ ಬಿಟ್ಟಿಲ್ಲ.

ಹಳತಾದ ಮಾತ್ರಕ್ಕೆ ಹಳಸಿದ್ದು ಎಂತಲೂ, ಹೊಸದಾದ ಮಾತ್ರಕ್ಕೆ ಒಳ್ಳೆಯದು ಎಂಬ ಧೋರಣೆ ಒಳ್ಳೇದಲ್ಲ. ಹೊಸಚಿಗುರು-ಹಳೆಬೇರು ಕೂಡಿದರೆ ಮರಸೊಬಗು ಎಂಬ ಡಿ.ವಿ.ಜಿ ಅವರ ಮಾತನ್ನು ಮರೆಯಬಾರದು. ಅಲ್ವಾ?

ಕಾಳಿದಾಸ ಮಾಲವಿಕಾಗ್ನಿಮಿತ್ರ ನಾಟಕದ ಪ್ರಸ್ತಾವನೆಯಲ್ಲಿ ಹೀಗೆ ಹೇಳುತ್ತಾನೆ: Read more about ಹಳತು - ಹೊಸತು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೆಸರಿಲ್ಲದ್ದು ?

February 20, 2008 - 1:58am
hamsanandi
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯಾಕೆ?

December 8, 2008 - 6:21pm
ಸಂಗನಗೌಡ

೧) ಮೂರು ಜೆರಳೆ(ಜೊಂಡಗ) ಹೊಂಟಿದ್ದವು. ಒಂದು ಜಿರಳೆ ಹಾಡೋಕೆ ಶುರು ಮಾಡಿತು, ’ಎ ಜೋಗಿ, ಜೋಗಿ, ಜೋಗಿ, ಜೋಗಿ, ಜೋsssಗಿ...’ ಅಂತ. ಕೂಡಲೆ ಮೂರೂ ಜಿರಳೆಗಳು ಸತ್ತು ಬಿದ್ದವು ಯಾಕೆ?

೨) shruti ತನ್ನ ಹೆಸರನ್ನು shraxis ಅಂತ ಬದಲು ಮಾಡಿಕೊಂಡಳೇಕೆ?

೩) 'Gopi'ಯನ್ನು ’opi' ಮಾಡಿದ್ದು ಯಾರು?

೪) ಸಮಗಾರಿಕೆ(ಚೆಪ್ಪಲಿ ಹೊಲಿಯುವ ಕೆಲಸ) ಮಾಡುವ ಕಾಳಿದಾಸನ ತಮ್ಮ ಯಾರು? Read more about ಯಾಕೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಜನ್ಮಾಂತರದ ನೆನಹು

June 7, 2010 - 12:29pm
hamsanandi

ಕಣ್ಣು ಸೊಗಸನು ಕಂಡಾಗ ಕಿವಿಗೆ ಇನಿದು ಕೇಳ್ದಾಗ
ನೆಮ್ಮದಿಯಲಿಹ ಮನಕೂ ಚಡಪಡಿಕೆ ಉಂಟಾಗೆ
ನಿಚ್ಚಯದಿ ಆ ಮನವು ಅರಿಯದೇ ನೆನೆದಿಹುದು 
ಮುನ್ನವಾವುದೋ ಹುಟ್ಟಿನ ಹಿತದ ಸಂಗತಿಗಳನು!

ಸಂಸ್ಕೃತ ಮೂಲ - ಕಾಳಿದಾಸನ 'ಅಭಿಜ್ಞಾನ ಶಾಕುಂತಲ' ನಾಟಕ (ಐದನೇ ಅಂಕ)
ರಮ್ಯಾಣಿ  ವೀಕ್ಷ್ಯ ಮಧುರಾಂಶ್ಚ ನಿಶಮ್ಯ ಶಬ್ದಾನ್
ಪರ್ಯುತ್ಸುಕೀ ಭವತಿ ಯತ್ ಸುಖಿತೋSಪಿ ಜಂತುಃ |
ತಚ್ಚೇತಸಾ ಸ್ಮರತಿ ನೂನಮ್ ಅಬೋಧ ಪೂರ್ವಂ
ಭಾವ ಸ್ಥಿರಾಣಿ ಜನನಾಂತರ ಸೌಹೃದಾನಿ ।।

-ಹಂಸಾನಂದಿ Read more about ಜನ್ಮಾಂತರದ ನೆನಹು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಠಾ ಠಂ ಠ ಠಂ ಠಂ ಠ ಠ ಠಂ ಠ ಠಂ ಠಃ

March 4, 2011 - 12:53am
hamsanandi

ಭೋಜರಾಜನ ಬಗ್ಗೆಯೂ ಹೊರಟಿರುವ ಗದ್ದಲದ ಬಗ್ಗೆ ಸುನಾಥರ ಸಲ್ಲಾಪದಲ್ಲಿ ಓದಿದಾಗ ಕಾಳಿದಾಸ-ಭೋಜರಾಜರ ಹೆಸರು ನೆನಪಾಗಿದ್ದರಲ್ಲಿ ಅಚ್ಚರಿಯೇನಿಲ್ಲ. ಚಮತ್ಕಾರದ ಪದ್ಯಗಳಿಗೆ, ಸಮಸ್ಯಾ ಪೂರಣಕ್ಕೆ ಬಂದಾಗ ಮೊದಲು ನೆನಕೆಗೆ ಬರುವುದು ಕಾಳಿದಾಸ-ಭೋಜರಾಜ ಈ ಜೋಡಿಯ ಹೆಸರೇ. ಭೋಜರಾಜನಿಗೆ ಆಗಾಗ್ಗೆ ವಿಚಿತ್ರ ಪ್ರಶ್ನೆಗಳನ್ನು ಕೇಳುವುದೇ ಕೆಲಸ. ಮತ್ತೆ ಅವುಗಳನ್ನು ಕಾಳಿದಾಸನಲ್ಲದೇ ಬೇರಾರಿಗೂ ಬಿಡಿಸಲಾಗದಿರುವುದೂ ಶತಸ್ಸಿದ್ಧ. ಅದರಲ್ಲೋ , ಭೋಜರಾಜ ಸುಮ್ಮನೆ ವಿಚಿತ್ರ ಪ್ರಶ್ನೆಗಳನ್ನು ಕೇಳುವುದೇ ಹೆಚ್ಚು.
Read more about ಠಾ ಠಂ ಠ ಠಂ ಠಂ ಠ ಠ ಠಂ ಠ ಠಂ ಠಃ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ನಲಿವಿನ ಇರುಳು

June 30, 2011 - 3:17am
hamsanandi
ಗಲ್ಲಕ್ಕೆ ಗಲ್ಲ ಹಚ್ಚಿ ನಲುಮೆದುಂಬಿದ ಮಾತುಗಳಲಿ
ಮೆಲ್ಲ ಮೆಲ್ಲನೆ ದನಿಯ ಸವಿಯ ತಲ್ಲೀನತೆಯಲಿ
ಅಪ್ಪುಗೆಯ ಬಿಗಿಯಲ್ಲಿ ಸಂತಸಿಪ ತೋಳ್ಗಳಲಿ
ಗೊತ್ತಿರದೇ ಉರುಳಿತಿರುಳು ಅದೆಂಥ ನಲಿವಿನಲಿ!
 
ಸಂಸ್ಕೃತ ಮೂಲ ( ಭವಭೂತಿಯ ಉತ್ತರರಾಮಚರಿತದಿಂದ)
 
ಕಿಮಪಿ ಕಿಮಪಿ ಮಂದಂ ಮಂದಮಾಸಕ್ತಿ ಯೋಗಾತ್
ಅವಿರಲಿತ ಕಪೋಲಮ್ ಜಲ್ಪತೋರಕ್ರಮೇಣ |
ಅಶಿಥಿಲ ಪರಿರಂಭ ವ್ಯಾಪೃತೇಕೈಕದೋಷ್ಣೋಃ
ಅವಿದಿತ ಗತಯಾಮಾ ರಾತ್ರಿರೇವ ವ್ಯರಂಸ್ತೀತ್ ||
 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಸರಣಿ: 

ಕೊರತೆ ಮರೆಯಿಸುವ ಗುಣಗಳು

August 5, 2011 - 7:24am
hamsanandi

ಎಣಿಯಿರದ ರತುನಗಳ ಹೆತ್ತ ಪರ್ವತದ
ಸುತ್ತ ತುಂಬಿರುವ ಭಾರಿ ಹಿಮರಾಶಿಯೂ
ಅದರ ಹಿರಿಮೆಯ ಇನಿತೂ ಕುಂದಿಸದು;

ಒಳಿತಾದ ಗುಣಗಳೇ ತುಂಬಿ ತುಳುಕಿರಲು
ಮರೆಸಿ ಹೋದೀತು ಇರಲೊಂದು ಕುಂದು
ಬೆಳುದಿಂಗಳು ಚಂದಿರನ ಕಲೆ ಮರೆಸುವಂತೆ!


ಸಂಸ್ಕೃತ ಮೂಲ (ಕಾಳಿದಾಸನ ಕುಮಾರ ಸಂಭವದಿಂದ):

ಅನಂತರತ್ನ ಪ್ರಭವಸ್ಯ ಯಸ್ಯ
ಹಿಮಂ ನ ಸೌಭಾಗ್ಯವಿಲೋಪಿ ಜಾತಂ |
ಏಕೋ ಹಿ ದೋಷೋ ಗುಣಸನ್ನಿಪಾತೇ
ನಿಮಜ್ಜತೀಂದೋಃ ಕಿರಣೇಷ್ವಿವಾಂಕಃ ||

-ಹಂಸಾನಂದಿ
  Read more about ಕೊರತೆ ಮರೆಯಿಸುವ ಗುಣಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹಿತ ವಸಂತ

May 23, 2012 - 3:08am
hamsanandi

 ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ ಅನ್ನೋ ಗಾದೆ ನೀವು ಕೇಳೇ ಇರ್ತೀರ. ಹಾಗೇ ಒಬ್ಬರಿಗಿಂತ ಇಬ್ಬರು ಲೇಸು ಅನ್ನೋದನ್ನೂ ಕೂಡ. ಮೊದಲನೆಯದು ನಿಜವಾದರೆ, ಎರಡನೆಯದಂತೂ ನಿಜವಾಗಲೇಬೇಕಲ್ಲ!  ಒಂದು ಸಮಸ್ಯೆಯನ್ನು ಬಿಡಿಸ ಹೊರಟಾಗ, ಒಬ್ಬರೇ ತಲೆ ಕೆಡಿಸ್ಕೊಳ್ಳೋದಕ್ಕಿಂದ ಇಬ್ಬರೋ ಮೂವರೋ ಸೇರಿದರೆ ವಾಸಿ ಅನ್ನೋದನ್ನ ನಾವೆಲ್ಲ ಕಂಡುಕೊಂಡೇ ಇರ್ತೀವಿ.

 

ಮೊನ್ನೆ ಹಾಗೇ ಆಯಿತು. ಯಾವುದೋ ಪುಸ್ತಕವನ್ನೋದುತ್ತಿದ್ದಾಗ ಅದರಲ್ಲಿ ಕಾಳಿದಾಸನ ಒಂದು ಪದ್ಯದ ಪ್ರಸ್ತಾಪ ಇತ್ತು. ಋತು ಸಂಹಾರದ (೬-೨) ಈ ಕೆಳಗಿನ  ಪದ್ಯ ಓದಿದ ಕೂಡಲೆ ಮನಸ್ಸಿಗೆ ಒಮ್ಮೆಗೇ ನೆಟ್ಟುಬಿಟ್ಟಿತು. Read more about ಹಿತ ವಸಂತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಸಮಸ್ಯಾ ಪೂರಣ: ಗುಳು ಗುಗ್ಗುಳು ಗುಗ್ಗುಳೂ

June 3, 2012 - 9:12am
hamsanandi

 ಕವಿತೆಯಲ್ಲಿ ಸಮಸ್ಯಾಪೂರಣದ ಬಗ್ಗೆ ನೀವು ಕೇಳೇ ಇರಬಹುದು. ಹಿಂದೆ ನಾನೂ ಕೂಡ ಒಂದೆರಡು ಬಾರಿ ಇದರ ಬಗ್ಗೆ ಬರೆದಿದ್ದೆ ಕೂಡ. ಪದ್ಯದ ಒಂದು ಸಾಲನ್ನು ಕೊಟ್ಟು ಉಳಿದ ಸಾಲುಗಳನ್ನು ತುಂಬಿಸುವುದು ಇದರ ಉದ್ದೇಶ. Read more about ಸಮಸ್ಯಾ ಪೂರಣ: ಗುಳು ಗುಗ್ಗುಳು ಗುಗ್ಗುಳೂ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಕವಿರತ್ನ ಕಾಳಿದಾಸನಿಗೊಂದು ಭಾಮಿನಿ

July 31, 2012 - 11:06am
hamsanandi

 ವಿಚಿತ್ರವಾದ ತಲೆಬರಹ ಅಂತ ಅಂದ್ಕೂಂಡೇ ಇರ್ತೀರ ಗೊತ್ತು ಬಿಡಿ. ಅದಿರಲಿ. ಮೊದಲು ವಿಷಯಕ್ಕೇ ಬರ್ತೀನಿ.

  Read more about ಕವಿರತ್ನ ಕಾಳಿದಾಸನಿಗೊಂದು ಭಾಮಿನಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (4 votes)
To prevent automated spam submissions leave this field empty.

ವಸಂತ

April 10, 2013 - 4:32am
hamsanandi
ಕೆಂಬಣ್ಣದಾ ಚಿಗುರ ಹೊತ್ತು ತಲೆಬಾಗಿರುವ ಕೊಂಬೆಕೊಂಬೆಗೆ ಹೂತ ಮಾಮರಗಳೀಗ ತಂಬೆಲರಿನಲಿ ತೂಗಿ ಹುಟ್ಟಿಸಿದ್ದಾವು ಮಿಗೆ ಹಂಬಲವ ಹೆಣ್ಣುಗಳ ಮನದಿ ತವಕದಲಿ ಸಂಸ್ಕೃತ ಮೂಲ ( ಕಾಳಿದಾಸನ ಋತುಸಂಹಾರ, ಸರ್ಗ 6, ಪದ್ಯ 15) : ತಾಮ್ರ ಪ್ರವಾಲ ಸ್ತಬಕಾವನಮ್ರಾಃ ಚೂತದ್ರುಮಾಃ ಪುಷ್ಪಿತಚಾರುಶಾಖಾಃ ಕುರ್ವಂತಿ ಕಾಮಂ ಪವನಾವಧೂತಾಃ ಪರ್ಯುತ್ಸುಕಂ ಮಾನಸಮಂಗನಾನಾಮ್ ताम्रप्रवालस्तवकावनम्राश्- चूतद्रुमाः पुष्पितचारुशाखाः। कुर्वन्ति कामम् पवनावधूताः पर्युत्सुकम् मानसम् अङ्गनानाम्॥ ಎಲ್ಲರಿಗೂ ಬರಲಿರುವ 'ವಿಜಯ' ಸಂವತ್ಸರವು ನೆಮ್ಮದಿಯಿಂದ ಕೂಡಿರಲೆಂದ ಹಾರೈಕೆಗಳು. -ಹಂಸಾನಂದಿ ಕೊ: ತಂಬೆಲರು = ತಂಪಾದ ಗಾಳಿ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

'ವೀರ' ವಸಂತ

May 4, 2013 - 12:27am
hamsanandi

 

ಇಂದು ಬೆಳಗ್ಗೆ ಬರುವಾಗ ರೇಡಿಯೋದಲ್ಲಿ ಕೇಳಿದ ಸುದ್ದಿ - ಈ ದಿನ ಹೀಟ್ ಅಡ್ವೈಸರಿ! ಅಂದ್ರೆ, ನಿಜವಾದ ಸೆಖೆಗಾಲ ಶುರುವಾಯ್ತು ಅಂತಲೇ ಅರ್ಥ, ಲೆಕ್ಕಕ್ಕೆ ಯಾವತ್ತು ಶುರುವಾದರೂ. ಹಾಗಾಗಿ ಬೇಸಿಗೆ ಜೋರಾಗಿ ಮೊದಲಾಗೋಕ್ಕಿಂತ ಮುಂಚೆಯೇ ಈ 'ವೀರ' ವಸಂತನ ಬಗ್ಗೆಯ ಪದ್ಯದ ಅನುವಾದವನ್ನು ಹಾಕೋಣವೆನ್ನಿಸಿತು! Read more about 'ವೀರ' ವಸಂತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಕಾಳಿದಾಸ