ಇನ್ನಷ್ಟು ಆಯ್ದ ಗಾದೆಮಾತುಗಳು(21-30) :
೨೧. ಇಷ್ಟಾದರೂ ಕಂಡ್ರಾ ಕೃಷ್ಣಭಟ್ರೇ ಅಂದ್ರೆ ಮುಪ್ಪಿನ ಕಾಲಕ್ಕೆ ಮೂರೇ ಹೆಂಡ್ರು ಅಂದ್ರಂತೆ!
೨೨. ಅಶ್ವತ್ಥ ಕಟ್ಟೆ ಸುತ್ತಿ ಹೊಟ್ಟೆ ಮುಟ್ಟಿ ನೋಡಿಕೊಂಡಳಂತೆ!
೨೩. ಆಕಾಶ ನೋಡಲು ನೂಕು ನುಗ್ಗಲೇ?
೨೪. ಆಗೋ ಪೂಜೆ ಆಗುತ್ತಿರಲಿ , ಊದೋ ಶಂಖ ಊದಿಬಿಡೋಣ
೨೫. ಆಡಿ ತಪ್ಪಬೇಡ , ಓಡಿ ಸಿಕ್ಕಬೇಡ .
೨೬. ಅಳಿಯನ ಕುರುಡು ಬಯಲಾದಾಗ ( ನಾ. ಕಸ್ತೂರಿಯವರ ಪ್ರಕಾರ -ಅಳಿಯನ ಬರುಡು ಬಯಲಾದಾಗ!)
೨೭. ಮನೆ ತಿನ್ನೋನಿಗೆ ಬಾಗಿಲು ಹಪ್ಪಳ-ಸಂಡಿಗೆ.
೨೮. ಆನೆ ಮೆಟ್ಟಿದ್ದೇ ಹಾದಿ, ಶೆಟ್ಟಿ ಬಿಟ್ಟಲ್ಲೇ ಪಟ್ಟಣ.
೨೯. ಆಪತ್ತಿಗೆ ಹರಕೆ, ಸಂಪತ್ತಿಗೆ ಮರೆವು.
೩೦. ಆಯ್ಕೊಂಡು ತಿನ್ನುವ ಕೋಳಿ ಕಾಲು ಮುರಿದ ಹಾಗೆ!

- Login or register to post comments
- 1458 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
Re: ಇನ್ನಷ್ಟು ಆಯ್ದ ಗಾದೆಮಾತುಗಳು(21-30) :
ಶ್ರೀಕಾಂತರೆ,
ಎಲ್ಲ ಗಾದೆಗಳು ನನಗೆ ಹೊಸತು. ಮೇಲಿನ ಗಾದೆಯು ನನಗೆ ಅರ್ಥವಾಗಲಿಲ್ಲ.
ಧನ್ಯವಾದ.
ಗಾದೆಮಾತು
ಎಷ್ಟು ಕಂಡ್ಯೋ ಕೃಷ್ಣ ಭಟ್ಟಾ ಅಂದ್ರೆ, ಮುಪ್ಪಿನ ಕಾಲಕ್ಕೆ ಮೂರು ಜನ ಹೆಂಡ್ರಂತೆ!
- ಇದು ನಾನು ಕೇಳಿದ ಈ ಗಾದೆಯ version.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಅಪರೂಪ
ಈವೆಲ್ಲಾ ಅಪರೂಪದ ಗಾದೆಗಳು ಶ್ರೀಕಾಂತರೆ. ಬಹಳ ಚೆನ್ನಾಗಿ ಬರುತ್ತಿದೆ. ಕೆಲವು ಗಾದೆಗಳ ಹಿಂದೆ ರಸವತ್ತಾದ ಕಥೆಗಳಿವೆ (ನಿಜವಲ್ಲದಿರಬಹುದು..
). ಆವನ್ನೂ ಹಾಕಿದರೆ ಚೆನ್ನಾಗಿರುತ್ತದೆ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ವಿ: ಅಪರೂಪ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಸ್ವಾಮಿ ಶ್ರೀನರೆ,
ನಿಮಗೆ ತಿಳಿದ ಆ ಗಾದೆಗಳ ಮುಂದೆ ಹಿಂದೆ ಇರುವ ರಸವತ್ತಾದ ಕತೆಗಳನ್ನು ಇಲ್ಲಿ ಬರೆಯಿರಿ, ದಯೆಮಾಡಿ.
ಅವನ್ನು ನಾವೆಲ್ಲರು ಓದೋಣ!!!!
Re: ಗಾದೆಮಾತು
ರೀ HPN,
ಹಾಗಂದರೇನು ? ಗಾದೆಯ ಅರ್ಥವೇನು?
ದಯವಿಟ್ಟು(please) ಹೇಳಿ.
ಮೂರೇ ಜನ ಹೆಂಡ್ರು- ತಿದ್ದುಪಡಿ ಮತ್ತು ಅರ್ಥ
ಎ(ಅ)ಷ್ಟು ಕಂಡ್ರಾ ಕೃಷ್ಣಭಟ್ರೇ ಅಂದ್ರೆ ಮುಪ್ಪಿನ ಕಾಲಕ್ಕೆ ಮೂರೇ ಹೆಂಡ್ರು ಅಂದ್ರಂತೆ! - ಇದು ಸರಿಯಾದ ಗಾದೆ ಮಾತು . (ಅವಸರದಲ್ಲಿ ತಪ್ಪಾಯಿತು, ಕ್ಷಮಿಸಿ).
ಈ ಗಾದೆ ಮನುಷ್ಯನ ಅತೃಪ್ತಿಯ ಬಗ್ಗೆ ಹೇಳುತ್ತದೆ. ಸದರಿ ಕೃಷ್ಣಭಟ್ಟರನ್ನು ಎಷ್ಟೆಲ್ಲ ಸುಖ ಕಂಡಿರ್‍ಅಲ್ಲಾ ಅಂತ ಅಸೂಯೆ/ಮೆಚ್ಚುಗೆಯಿಂದ ಯಾರೋ ಮಾತಾಡಿಸ್ತಾರೆ. ಅವರಿಗೋ ಮೂವರು ಹೆಂಡರಿದ್ದರೂ ( ಅದೂ ಮುಪ್ಪಿನಲ್ಲಿ! ) ತೃಪ್ತಿಯಿಲ್ಲ - ಮೂರೇ ಜನ ಹೆಂಡ್ರು ಅಂತ ದು:ಖ ಪಡುತ್ತಾರೆ!
ಹೀಗಿರಬಹುದಾ?
ಎಷ್ಟು ವಸಂತಗಳನ್ನು ಕಂಡೆ ಅಥವಾ ಎಷ್ಟು ವರ್ಷಗಳನ್ನು ಕಂಡೆ ಎಂದು ಕೇಳ್ತಿರಬಹುದೇ? ಅದಕ್ಕೆ ಕೃಷ್ಣ ಭಟ್ಟ 'ಸದಾಶಿವನಿಗೆ ಅದರದ್ದೇ ಧ್ಯಾನ' ಎನ್ನುವ ಹಾಗೆ ತನಗೆ ಇದುವರೆಗೆ ಆಗಿರುವ ಮದುವೆಗಳ ಲೆಕ್ಕದ ಬಗ್ಗೆ ಎಂದು ತಿಳಿದು ಹೀಗೆ ಹೇಳ್ತಿರಬಹುದೇ?
ಹರಿಯವರು ಇದರ ಬಗ್ಗೆ ವಿಶದೀಕರಿಸಬೇಕು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
Re: ಹೀಗಿರಬಹುದಾ?
ಧನ್ಯವಾದಗಳು TVS ಮತ್ತು ಶ್ರೀಕಾಂತರಿಗೆ.
ರೀ TVS
ಹರಿಯುವವರು ಅಂದರೆ ಯಾರು ರೀ? ಎನ್ನನ್ನು ಹರಿಯುವವರು?
ಇದು ಕೂಡ ನಿಮ್ಮ ತಮಾಷೆ(ಶೆ)ನೆ?
ಅಯ್ಯೋ ರಾಮ!!
ಹರಿ ಹರಿ
ಹರಿಯುವವರಲ್ಲ ಸ್ವಾಮಿ, ಹರಿಯವರು - ಅಂದ್ರೆ ಹರಿಪ್ರಸಾದ ನಾಡಿಗರು.
ಒಂದು ರೀತಿಯಲ್ಲಿ ನೀವು ಹೇಳ್ತಿರೋದು ಸರಿಯೇ? ಕೋಪ ಬಂದ್ರೆ ಅವರು ನಮ್ಮನ್ನು ಹರಿದು ಹುರಿದು ಮುಕ್ಕಿಬಿಡ್ತಾರೆ (ತಮಾಷೆಗೆ ನಾಡಿಗರೇ).
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಉ: ಹರಿಯ ಪರಿ
'ಹರಿ' ಶಬ್ದಕ್ಕೆ ನಮಗೆಲ್ಲ ಗೊತ್ತಿರುವ 'ವಿಷ್ಣು', 'to flow', 'to tear off' ಎಂಬ ಅರ್ಥಗಳಷ್ಟೇ ಅಲ್ಲದೆ ಇನ್ನೂ ಕೆಲವು ಇವೆ! ಇದನ್ನು ಓದಿ:
"ಹರಿಯು ಹರಿಯೊಳಗಿರಲು ಹರಿಗೆ ಹರಿ ಬಂದು ಕಚ್ಚಲು ಹರಿಯು ಹರಿ ಹರಿ ಎಂದಿತು!"
= ಕಪ್ಪೆಯು ಗುಡಾಣದೊಳಗಿರಲು ಕಪ್ಪೆಗೆ ಹಾವು ಬಂದು ಕಚ್ಚಲು ಕಪ್ಪೆಯು ನಾರಾಯಣಾ ನಾರಾಯಣಾ ಎಂದಿತು.
ಆದ್ದರಿಂದ ಹರಿ = ಕಪ್ಪೆ, ಹರಿ = ಗುಡಾಣ, ಹರಿ = ಹಾವು ಎಂದೂ ಅರ್ಥವಿದೆ(ಯಂತೆ)! ಬಳಕೆಯಲ್ಲಿಲ್ಲ, ಅಷ್ಟೇ.
- ಶ್ರೀವತ್ಸ ಜೋಶಿ
ಹರಿಕಥೆ
ಹಾಗಾದರೆ ಇಲ್ಲಿ - ಹರಿಕೊಲ್ಲಲ್ ಹರಿ ಕಾಯ್ವನೆ? ಆಯಿತು !
ಸಮಸ್ಯಾ ಶ್ಲೋಕಕ್ಕೆ ಒಳ್ಳೆಯ ಪ್ರಶ್ನೆ.
- ಸುಚರ
Re: ಹರಿಕಥೆ
ಸಮಸ್ಯಾ ಶ್ಲೋಕಕ್ಕೆ ಒಳ್ಳೆಯ ಪ್ರಶ್ನೆ.
- ಸುಚರ
'ಹರಿ' ಗೆ ಇನ್ನೊಂದು ಆಯಾಮ:
ಹೆಂಡತಿ ಕನ್ನಡ ಮಾತಾಡುವವಳು, ಗಂಡ ತಮಿಳು ಭಾಷೆ ಮಾತನಾಡುವವನು. ಹಣ, ಹಾಲು ಮೊದಲಾದ 'ಹ'ಕಾರದ ಕನ್ನಡ ಪದಗಳನ್ನು ಅವನು ಪಣ, ಪಾಲು ಎಂದೇ ಉಚ್ಚರಿಸುವನು. ಅವನನ್ನು ತಿದ್ದುವಾಗೆಲ್ಲ ಅವಳು ಹರಿ ಹರಿ... ('ಪ' ಅಲ್ಲ, 'ಹ'ರೀ... ಎಂದು) ಎನ್ನುವಳು!
ಇದು 'ಹ'ರಿಕಥೆಯಲ್ಲೊಂದು ಉ'ಪ' ಕಥೆ!
- ಶ್ರೀವತ್ಸ ಜೋಶಿ
ಸಾಕು ಮಾಡೋಣ್ವೇ?
ವಿಷಯ ಎಲ್ಲಿಂದ ಎಲ್ಲಿಗೋ ಹೋಗ್ತಿದೆ. ಸದ್ಯಕ್ಕೆ ಇಲ್ಲಿಗೇ ಸಾಕು ಮಾಡೋಣ್ವೇ?
ಶ್ರೀಹರಿ ಹಿರಣ್ಯಕಶಿಪುವಿನ ಹೊಟ್ಟೆ ಬಗೆದಾಯ್ತು. ಇನ್ನು ಶ್ರೀಕಾಂತರು ಹೆಚ್ಚು ಹೆಚ್ಚು ಗಾದೆಗಳನ್ನು ಸಂಪದದಲ್ಲಿ ತುಂಬಿಸಲಿ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
Re: ಸಾಕು ಮಾಡೋಣ್ವೇ?
ಆಯ್ತು, ಸಾಕು ಮಾಡೋಣ. ಯಾರಿಗಾದರೂ ನನ್ನ ಟಿಪ್ಪಣಿಗಳಿಂದ ನೋವಾಗಿದ್ದರೆ ದಯwitಉ ಕ್ಷಮಿಸಿ. ಮನನೋಯಿಸುವ ಉದ್ದೇಶ ನನ್ನ ಟಿಪ್ಪಣಿಗಳಲ್ಲಿ ಇರಲಿಲ್ಲ, ಒಂದೊಮ್ಮೆ ಕಂಡುಬಂದರೆ, 'ಆ ಉದ್ದೇಶವಿಲ್ಲ...' ಎಂಬುದನ್ನು ವ್ಯಕ್ತಪಡಿಸಲಾಗದ ನನ್ನ ಅಸಾಮರ್ಥ್ಯ. ಅದನ್ನು ಮನ್ನಿಸಿ.
ಸಂಪದವನ್ನು ಸೊಂಪಾಗಿ ಬೆಳೆಸೋಣ.
ಇತಿ,
ಶ್ರೀವತ್ಸ ಜೋಶಿ
ವೈ ಡು ಯು ಹರಿ?
ನಾನು ಮುಂಬಯಿಯ ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿದ್ದಾಗ ಅಲ್ಲಿದ್ದ ನಮ್ಮ ಸಹೋದ್ಯೋಗಿಯೊಬ್ಬರ ಹೆಸರು ಹರಿ ರಾವ್ ಎಂದಾಗಿತ್ತು. ನಾವು ಅವರನ್ನು ಚುಡಾಯಿಸಲು "why do you hurry Rao?" ಎನ್ನುತ್ತಿದ್ದೆವು.
ಸಿಗೋಣ,
ಪವನಜ
-----------
Vishva Kannada
Think globally, Act locally
ಸರಿಯಾಗಿದೆಯಲ್ಲ??
ಶ್ರೀನಿವಾಸ್ ಅವರು ಸರಿಯಾಗಿಯೇ ಬರ್ದಿದ್ದಾರಲ್ರೀ. ನಿಮ್ಮ ಟಿಪ್ಪಣಿಯಲ್ಲಿ "ಎನನ್ನು" ಎನ್ನುವುದು "ಏನನ್ನು" ಎಂದಾಗಬೇಕು.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
Re: ಸರಿಯಾಗಿದೆಯಲ್ಲ??
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಧನ್ಯವಾದ ರೀ ಶ್ರೀನರೆ!
ಅಯ್ಯೋ!! ಎನ್ನನ್ನು ಅಂದರೆ ನನ್ನನ್ನು ಎಂದಾಗುವುದು.
ನಾನು ಬರೆದದ್ದು... ನನ್ನನ್ನು ಹರಿಯುವವರು ಯಾರು? ಎಂದು ಕೇಳಿದಂತಾಗುವುದು!!!
ಅಕಟಕಟ!!! ಎಂತಹ ಅರ್ಥಾಭಾಸ !!!
ಅತಿಯಾಯ್ತು
ಹರಿಯುವವರು ಅಂದರೆ ಯಾರು ರೀ? ಎನ್ನನ್ನು ಹರಿಯುವವರು?
ಇದು ಕೂಡ ನಿಮ್ಮ ತಮಾಷೆ(ಶೆ)ನೆ?
ಗುರುವೇ, ಸ್ವಲ್ಪ ಅತಿಯಾಯ್ತು.
ಒಂದಷ್ಟು decent ಆಗಿ, ethical ಆಗಿ behave ಮಾಡೋದು ಕಲೀರಿ. ಸಮುದಾಯದಲ್ಲಿ ನಿಮ್ಮದೊಂದು ಜವಾಬ್ದಾರಿ ಇರತ್ತೆ ಅನ್ನೋದನ್ನ ಮರೆಯಬಾರದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಹೀಗಿರಬಹುದಾ?
'ಪಟ್ಟಣಕ್ಕೆ ಬಂದ ಪತ್ನಿಯರು' ಚಿತ್ರದ ಗೀತೆಯನ್ನು ಹೀಗೆ ಬದಲಾಯಿಸಬಹುದು:
"ಒಬ್ಬಳ ಕಾಟವೆ ಸಾಕಾಗಿ ಹೋಗಿದೆ... ಒಬ್ಬಳ ಕಾಟಕೆ ತುತ್ತಾಗಿ ಹೋಗಿಹೆ...
ಮೂವರು ಹೆಂಡಿರೆ ಕೃಷ್ಣಭಟ್ಟಾ ನಿನಗೆ...!"
- ಶ್ರೀವತ್ಸ ಜೋಶಿ
ಸಕ್ಕತ್ತಾಗಿವೆ ಗಾದೆಗಳು. ಇವಲ್ಲವೂ ಕೆಳೆ ಇರ್ಲಿಲ್ಲ... ಇನ್ನೊ ಹೀಗೇ ಬರಲಿ ಸ್ವಾಮಿ...
ಮೆಚ್ಚುಗೆ: ಇನ್ನಷ್ಟು ಆಯ್ದ ಗಾದೆಮಾತುಗಳು(21-30) :
ಬಹುಶಃ ಎಷ್ಟು ತಳ್ಳಗಾದೆ ಎಂದು ನೋಡಿಕೊಳ್ಳುವುದಕ್ಕಿರಬಹುದು.
. ಯಪ್ಪಾ ಅದೇನು ಕಾಳಜಿ ದೇಹ ಸ್ವಾಸ್ಥ್ಯದ ಮೇಲೆ.
ನೋಡಿ, ಈ ಗಾದೆ ಕಟ್ಟಿದವರಿಗೂ ಗೊತ್ತು. ಹೆಂಗಸರಿಗೇ ಮೋಹ ಹೆಚ್ಚು (ಅದು ಮೋಹ ಅಲ್ಲ ಆರೋಗ್ಯದ ಮೇಲಿನ ಕಾಳಜಿ ಎಂದೂ ಸಹ ವ್ಯಾಖ್ಯಾನಿಸಬಹುದು) ಎಂದು ತೋರಿಸುತ್ತದೆ.
ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲವಲ್ಲ. ಹಾಗಾಗಿ ಹೆಂಗಸರು ಇದರ ವಿರುದ್ಧ ವಾದ ಮಾಡುವ ಹಾಗಿಲ್ಲ.
ಹಾಗಲ್ಲ
ನನಗೆ ತಿಳಿದ ಮಟ್ಟಿಗೆ ಅದು ಹಾಗಲ್ಲ. ಮಕ್ಕಳಾಗದವರು ಅಶ್ವತ್ಥ ಕಟ್ಟೆಯನ್ನು ಸುತ್ತುತ್ತಾರೆ. ಹಾಗೆ ಮಾಡುವುದರಿಂದ ಮಕ್ಕಳಾಗುತ್ತದೆ ಎಂಬ ಅನಿಸಿಕೆ. ಈ ಗಾದೆ ಮಾತಿನಲ್ಲಿ ಒಂದು ಸುತ್ತು ಸುತ್ತಿದ ತಕ್ಷಣ ಮಗುವಾಗುವ ಸೂಚನೆ ಇದೆಯೇ ಎಂದು ಪರೀಕ್ಷಿಸುತ್ತಿದ್ದಾಳೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಓಹೋ ಹೌದೇನು
ಇಲ್ಲೇ ಅಡಕವಾಗಿರುವುದು. ಗಾದೆಗಳ ಸರ್ವಕಾಲಿಕ ಸತ್ಯ.
ಹೇಗೆಂದಿರೋ....ನೋಡಿ...ಹಿಂದೆ ಹರಕೆಗೆ, ಇಂದು....ನಾನು ಕೊಟ್ಟ ಕಾರಣಕ್ಕೆ
..
ಆದರೆ ನೀವು ಹೇಳುವುದೇ ಸರಿಯಿರಬೇಕು ಅನ್ನಿಸುತ್ತೆ. ನನ್ನ ಕಾರಣವನ್ನು ಕುಚೋದ್ಯಕ್ಕಾಗಿ ಬರೆದದ್ದು ಎಂದು ತಿಳಿಯುವುದು.
ಅಶ್ವತ್ಥ ಕಟ್ಟೆ ಸುತ್ತ-ಇದು ಸರಿ.
ಶ್ರೀನಿವಾಸ ಅವರ ವಿವರಣೆ ಸರಿ.
ಅಶ್ವತ್ಥ ಪ್ರದಕ್ಷಿಣೆಯ ಫಲವಾಗಿ ಮಕ್ಕಳ ಸೂಚನೆ ಪರೀಕ್ಷಿಸುವ ಆತುರ!