ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಅನುಭವ ಕಥನ

ಅಭಿಮಾನಿಯ ಹರಕೆ ಫಲಿಸಿದಾಗ!

ಚಿನ್ ತೆಂಡೂಲ್ಕರ್ ಅಬ್ಬರದ ಆಟ ಮತ್ತು ದಾಖಲೆಗಳ ಬಗ್ಗೆ ಪತ್ರಿಕೆಗಳಲ್ಲಿ, ಬ್ಲಾಗ್್ಗಳಲ್ಲಿ ಸಾಕಷ್ಟುಜನ ಈಗಾಗಲೇ ಬರೆದಿದ್ದಾರೆ. ಆದರೆ ಸಚಿನ್ ಬಗ್ಗೆ ಪ್ರತಿಯೊಬ್ಬರಿಗೂ ಹೇಳಲು ಒಂದೊಂದು ವಿಷಯ ಇದ್ದೇ ಇರುತ್ತದೆ. ಇಂದು ಮುಂಜಾನೆ ರಾತ್ರಿ ಪಾಳಿ ಮುಗಿಸಿ ಆಫೀಸಿನಿಂದ ಹೊರಡಬೇಕು ಅನ್ನುವಷ್ಟು ಹೊತ್ತಿಗೆ ಅಂದ್ರೆ 3.30ಕ್ಕೆ ಇಂಡಿಯನ್ ಎಕ್ಸ್್ಪ್ರೆಸ್ ಪತ್ರಿಕೆಯ 15ನೇ ಪುಟದಲ್ಲಿ 20 years ago...ಅಂತಾ ಒಂದು ಸುದ್ದಿ ಓದಿದೆ. ಅದೂ 20 ವರ್ಷಗಳ ಹಿಂದೆ ಸಚಿನ್ ಬರೆದ ಒಂದು ಪತ್ರದ ಸುದ್ದಿ. ಆಗಲೇ ನನಗೆ ಸಚಿನ್ ಬರೆದ ಪತ್ರದ ಬಗ್ಗೆ ಬರೆಯೋಣ ಅಂತಾ ಅನಿಸಿದ್ದು. ಸಚಿನ್ ತೆಂಡೂಲ್ಕರ್್ನ್ನು ಈವರೆಗೆ ಟಿವಿಯಲ್ಲಿಯೇ ನೋಡಿದ್ದು. ಕಾಲೇಜು ಮುಗಿಸಿ ಕೆಲಸಕ್ಕೆ ಸೇರುವ ವರೆಗೂ ಸಚಿನ್ ಆಟಗಳನ್ನು ತಪ್ಪದೆ ನೋಡುತ್ತಿದ್ದೆ. ಕೆಲಸಕ್ಕೆ ಸೇರಿದ ಮೇಲೆ ಮ್ಯಾಚ್ ನೋಡೋಕೆ ಸಮಯ ಸಿಕ್ತಾ ಇಲ್ಲ. ಬರೀ ಸುದ್ದಿ ಮಾಡುವುದೇ ಆಯ್ತು.  ಮುಂದೆ ಓದಿ »

ನೆನಪಿನ ಮಳೆಯಲ್ಲಿ...ಮರೆಯಲಾಗದ ದಿನದ ನೆನಪು

ನಾನು ನಿರೀಕ್ಷಿಸಿದ್ದ ದಿನ ಇಷ್ಟು ಬೇಗ ಬಂದು ಬಿಡುತ್ತೆ ಎಂದು ನೆನೆಸಿರಲಿಲ್ಲ. ಕಳೆದ ವರ್ಷದ ಕ್ರಿಸ್್ಮಸ್್ಗೆ ಮುನ್ನ ಊರಿಗೆ ಹೋಗಿದ್ದಾಗ ನಮ್ಮೂರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 9, 10ನೇ ತಾರೀಖಿಗೆ ನಡೆಸಲು ನಿಗದಿಯಾಗಿದೆ ಎಂದು ತಿಳಿಯಿತು. ಆವಾಗಲೇ ಈ ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಕವನ ಸಂಕಲನ ಬಿಡುಗಡೆ ಮಾಡಿದರೆ ಹೇಗೆ? ಎಂಬ ಯೋಚನೆ ಹೊಳೆದದ್ದು. ಅಪ್ಪ ಅಮ್ಮನಲ್ಲಿ ವಿಷಯ ಮಂಡಿಸಿಯಾಯಿತು. ಆದರೆ ಸಾಹಿತ್ಯ ಸಮ್ಮೇಳನಕ್ಕಿರುವುದು ಇನ್ನು ಕೇವಲ 20 ದಿನ. ಇದರಲ್ಲಿ ಕವನ ಸಂಕಲನ ಬಿಡುಗಡೆಯಾಬೇಕು. ಎಲ್ಲಾ ಹೇಗೆ? ಎಂಬ ಚಿಂತೆ ಹೆತ್ತವರಿಗೆ. ಏನೋ ಎಲ್ಲಾ ಸರಿ ಹೋಗುತ್ತೆ ಎಂದು ಕೂಡಲೇ ಚೆನ್ನೈಯಲ್ಲಿರುವ ನನ್ನ ಸಹೋದ್ಯೋಗಿಯಾಗಿದ್ದ ಮಿತ್ರರೊಬ್ಬರಿಗೆ ಫೋನ್ ಮಾಡಿ ವಿಷಯ ಹೇಳಿದೆ. ಅವರು ಕೂಡಲೇ ಸರಿ ನಾನು ಪ್ರಕಾಶಕರಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದೇ ತಡ ಪುಸ್ತಕದ ಬಗ್ಗೆ ಯೋಚನೆ ನಡೆಸಿದೆ. ಪ್ರಕಾಶಕರು ಕವಿತೆ ನೋಡಿದ ಕೂಡಲೇ ಯಸ್ ಅಂದರು. ಆದರೆ ಸಮಯದ ಅಭಾವ ಬೇರೆ. ನಿನಗೆಲ್ಲಾ ಕೊನೆಯ ಗಳಿಗೆಯಲ್ಲೇ ಆಗ್ಬೇಕು. ನಾನು ಪರೀಕ್ಷೆಗೆ ಓದುತ್ತಿದ್ದುದು ಕೂಡ ಪರೀಕ್ಷೆಯ ಮುಂದಿನ ರಾತ್ರಿ. ಅದಕ್ಕೇ ಅಮ್ಮ ಆ ಎಲ್ಲಾ ಪುರಾಣವನ್ನು ಬಿಚ್ಚುತ್ತಿದ್ದರು. ಆದ್ರೆ ಅಪ್ಪ ಕೂಲ್. "ಏನೂ ಆಗಲ್ಲ... ಏಲ್ಲಾ ನೀನು ಅಂದು ಕೊಂಡಂತೆ ಆಗುತ್ತದೆ ಬಿಡು"ಅಂತಾ ಸಮಾಧಾನ ಮಾಡುತ್ತಿದ್ದರು.

ಪ್ರಕಾಶಕರು ಒಪ್ಪಿಕೊಂಡದ್ದಾಯ್ತು. ನೀನಿನ್ನು ಪುಸ್ತಕ ಬಿಡುಗಡೆಯ ಬಗ್ಗೆ ಚಿಂತಿಸಿದರೆ ಸಾಕು ಎಂದು ನನ್ನ ಮಿತ್ರರು ಫೋನಾಯಿಸಿ ಹೇಳಿದ್ದರು. ಸರಿ, ಕನ್ನಡ ಸಾಹಿತ್ಯ ಸಮ್ಮೇಳನದ ಸಂಯೋಜಕರಾದ ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷರು ಎಸ್ ವಿ ಭಟ್ಟರು ನನ್ನ ಗುರುಗಳು. ರಾತ್ರೋರಾತ್ರಿ ಅವರಿಗೆ ಫೋನಾಯಿಸಿ ಸರ್, ನನ್ನ ಕವನ ಸಂಕಲನವನ್ನು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ ಮಾಡ್ಬೇಕು ಎಂಬ ಆಸೆಯಿದೆ ಎಂದು ಹೇಳಿದೆ. ಸರಿ, ನೀನು ಮೊದಲೇ ಹೇಳ್ತಿದ್ದರೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಸೇರಿಸುತ್ತಿದ್ದೆ. ಪುಸ್ತಕ ರೆಡಿಯಾ? ಎಂದು ಕೇಳಿದಾಗ ಇಲ್ಲ ಸಾರ್, ಇನ್ನೂ ಪ್ರಿಂಟ್ ಆಗ್ಬೇಕು ಅಷ್ಟೇ. ನಿಮ್ಮ ಅನುಮತಿ ಸಿಕ್ಕಿದ ಮೇಲೆಯೇ ಪುಸ್ತಕ ಪ್ರಿಂಟ್ ಮಾಡಿಸೋಣ ಅಂತಾ ಇದ್ದೇನೆ ಎಂದು ಹೇಳಿದೆ. ಸರಿ...ನೀನು ಪುಸ್ತಕ ಪ್ರಿಂಟ್ ಮಾಡು, ಬಿಡುಗಡೆಯ ಜವಾಬ್ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದಾಗ ಸಂತೋಷಕ್ಕೆ ಪಾರವೇ ಇಲ್ಲವಾಗಿತ್ತು.  ಮುಂದೆ ಓದಿ »

ಕನಸುಗಳನ್ನು ಕಾಣುವುದ ಕಲಿತೆ

ವಯಸ್ಸು ೧೬-೧೭ ಇರಬೇಕು.  ಅವನ ಕಣ್ಣಲ್ಲಿ ಅದೇನೋ ಜಗತ್ತನ್ನೇ ಗೆಲ್ಲಬಲ್ಲನೆಂಬ ಅದಮ್ಯವಾದ ಆತ್ಮ ವಿಶ್ವಾಸ, ಹಳೇ ಡ್ರೆಸ್, ಕೆದರಿದ ಕೂದಲು. ಕೆಲಸ ಹುಡುಕಿಕೊಂಡು ಬಂದಿದ್ದ.  ಇವನ ಕೈಯಲ್ಲಿ ಎಂತಹ ಕೆಲಸ ಮಾಡಿಸುವುದು, ಇನ್ನೂ ೧೮ ತುಂಬಿಲ್ಲ.  ಕಾನೂನಿನ ಪ್ರಕಾರ ಅಪರಾಧವಾಗಬಹುದೇನೋ ಎನ್ನುವುದು ನನ್ನ ಚಿಂತೆ.  ಅವನಾದರೋ ‘ಯಾವ ಕೆಲಸ ಕೊಟ್ಟರೂ ಮಾಡುತ್ತೇನೆ ಮೇಡಮ್. ದಯವಿಟ್ಟು ನನಗೊಂದು ಕೆಲಸ ಕೊಡಿ, ಎಸ್ ಎಸ್ ಎಲ್ ಸಿ ೮೦% ನಲ್ಲಿ ಪಾಸಾಗಿದ್ದೀನಿ, ತಂದೆ ತೀರಿ ಹೋದರು, ಮನೆಯಲ್ಲಿ ಬಹಳ ಕಷ್ಟ, ನಾನೇ ಮೊದಲ ಮಗ, ಮುಂದೆ ಓದಲು ಸಾಧ್ಯವಾಗುತ್ತಿಲ್ಲ’ ಎಂದೆಲ್ಲಾ ಹೇಳುತ್ತಿದ್ದ.  ನಾನು ಕೂಡ ಕಷ್ಟ ಪಟ್ಟು, ಪಾರ್ಟ್ ಟೈಮ್ ಕೆಲಸ ಮಾಡಿಕೊಂಡು,  ಸ್ಕಾಲರ್ ಶಿಪ್ ನಲ್ಲಿ ಓದಿದ್ದರಿಂದ ಮನ ಕರಗಿ ಕೆಲಸ ಕೊಡಲು ಒಪ್ಪಿಕೊಂಡರೂ, ಬೇರೆಯವರೆಲ್ಲರ ವಿರೋಧ.  ‘ಮೇಡಮ್, ಇವನಿಗೆ ಇನ್ನೂ ೧೭ ತುಂಬಿಲ್ಲ, ಎಲ್ಲೂ ಕೆಲಸ ಮಾಡಿದ ಅನುಭವವಿಲ್ಲ. ಅಂತಹವನಿಗೆ ಕ್ಯಾಷಿಯರ್ ಕೆಲಸ ಕೊಡುತ್ತೀರಾ?  ಇವನೇನಾದರೂ ಕಲೆಕ್ಷನ್ ಎತ್ತಿಕೊಂಡು ಓಡಿಹೋದರೆ?  ಮುಂದೆ ಓದಿ »

ಉತ್ತರ ಸಿಗದ ಪ್ರಶ್ನೆಗಳು....

ಮೊನ್ನೆ ಶುಕ್ರವಾರ ಅಪ್ಪ ನನಗೆ ಫೋನ್ ಮಾಡಿದ್ದರು.  ನಾನು ಕಳಿಸಿದ ಹಣ ತಲುಪಿ ಅದೇನೋ ಅರಿಯದ ಕಕ್ಕುಲಾತಿಯಿಂದ, ಅಪರೂಪದ ಪ್ರೀತಿಯಿಂದ "ಹೇಗಿದ್ದೀಯಪ್ಪಾ, ನಿನ್ನ ಆರೋಗ್ಯ ಹೇಗಿದೆ, ಕೆಲಸ ಹೇಗಿದೆ, ಕೋಪ ಕಡಿಮೆ ಮಾಡ್ಕೋ, ಕಾರು ಓಡಿಸುವಾಗ ಜಾಗ್ರತೆಯಾಗಿರು" ಅಂತೆಲ್ಲಾ ಹೇಳುತ್ತಿದ್ದವರ ಮಾತು ಕೇಳುತ್ತಾ ಕಣ್ಗಳಲ್ಲಿ ಕಂಬನಿ ತುಂಬಿ ಹರಿದಿತ್ತು. ಸುಮಾರು, ೧೯೮೩ರಲ್ಲಿ, ೨೬ ವರ್ಷಗಳ ಹಿಂದೆ, ನಡೆದ ಪ್ರಸಂಗ ನೆನಪಾಯಿತು. ತರಗತಿಯಲ್ಲಿ ಎಲ್ಲರಿಗಿಂತ ಮುಂದಿದ್ದು, "ಕ್ಲಾಸ್ ಲೀಡರ್" ಬೇರೆ ಆಗಿದ್ದ ನನಗೆ ಸ್ನೇಹಿತರೆಲ್ಲಾ ಪ್ರವಾಸಕ್ಕೆ ಹೋಗುವಾಗ ಕೇವಲ ನೂರೈವತ್ತು ರೂಪಾಯಿ ಕೊಡದೆ ತನ್ನ ೦೯, ೦೫ ಮಟ್ಕಾ ನಂಬರಿಗೆ ದಿನವೂ ನೂರಾರು ರೂಪಾಯಿ ಕಟ್ಟಿ ಸೋಲುತ್ತಿದ್ದ, ಹಣ ಕೇಳಿದಾಗೆಲ್ಲಾ ಹಿಗ್ಗಾ ಮುಗ್ಗಾ ಬಾರಿಸುತ್ತಿದ್ದ ಅಪ್ಪನ ಮೇಲೆ ವಿಪರೀತ ಕೋಪದಿಂದ, ಅಮ್ಮ ದಿನವೂ ಲಕ್ಷ್ಮಿ ಪೂಜೆ ಮಾಡುತ್ತಿದ್ದ ಎಪ್ಪತ್ತೈದು ರೂಪಾಯಿಗಳ ನಾಣ್ಯಗಳ ಭಂಡಾರವನ್ನು ಕದ್ದು, ಇವರ ಸಹವಾಸವೇ ಬೇಡವೆಂದು,  ಉಡುಪಿಗೆ ಓಡಿ ಹೋಗಿದ್ದೆ.  
 ಮುಂದೆ ಓದಿ »

ಒಂದು ಕಾರ್ಡಿನ ಕಥೆ

ಕಾರ್ಡು ಅಂದಾಗಲೇ ಪಕ್ಕನೆ ನೆನಪಿಗೆ ಬರುವುದೇ ಕ್ರೆಡಿಟ್ ಕಾರ್ಡು. ಹಣ ಪಾವತಿಸಲು ಬಾಕಿ ಇದ್ದರೆ ಕ್ರೆಡಿಟ್ ಕಾರ್ಡು ಎಂದು ಕೂಡಲೇ ಮಂಡೆಬಿಸಿಯಾಗುತ್ತೆ, ಸಂಬಳ ಬರುವ ದಿನವಾಗಿದ್ದರೆ ಡೆಬಿಟ್ ಕಾರ್ಡು ಸ್ವೈಪ್ ಮಾಡುವ ಸಂತಸ. ಆದರೆ ನಾನು ಹೇಳ ಹೊರಟಿರುವುದು ಕ್ರೆಡಿಟ್, ಡೆಬಿಟ್, ರೇಷನ್ ಕಾರ್ಡ್, ಐಡಿ ಕಾರ್ಡ್ ಅಥವಾ ನಮ್ಮ ವಿಸಿಟಿಂಗ್ ಕಾರ್ಡ್ ಬಗ್ಗೆ ಅಲ್ಲ. ಎಲ್ಲೋ ಮರೆತು ಹೋಗಿದ್ದ ಆ ಅಂಚೆ ಕಾರ್ಡ್ ಬಗ್ಗೆ. "ಅಲ್ಲಿ ತಲುಪಿದ ಕೂಡಲೇ ಒಂದು ಕಾರ್ಡನ್ನಾದರೂ ಬರೆದು ಹಾಕು" ಎಂದು ಹಳೆ ಕಾಲದಲ್ಲಿ ದೊಡ್ಡೋರು ಹೇಳುತ್ತಿದ್ದರೆ, ಈವಾಗ ನಾವು "ನೀನು ರೀಚ್ ಆದ ಕೂಡಲೇ ಒಂದು ಎಸ್ಸೆಮ್ಮೆಸ್ ಕಳುಹಿಸು" ಎಂದು ಹೇಳುತ್ತೇವೆ. ಕಾಲ ಬದಲಾಗಿದೆ. ಅಂಚೆ ಕಳುಹಿಸುವ ಬದಲು ನಾವು ಇಮೇಲ್ ಕಳುಹಿಸುತ್ತಿದ್ದೇವೆ. ಎಲ್ಲವೂ ಫಾಸ್ಟ್ ಫಾಸ್ಟ್.

ನಾನು ಚಿಕ್ಕವಳಿರುವಾಗ ಅಕ್ಕ ಹಾಸ್ಟೆಲ್್ನಿಂದ ಅಂಚೆ ಕಾರ್ಡಿನ ಮೂಲಕವೇ ಪತ್ರ ಬರೆಯುತ್ತಿದ್ದಳು.  ಮುಂದೆ ಓದಿ »

ಬದುಕು ಮತ್ತು ಒಂಟಿತನದ ನಡುವೆ...

ಬೆಂಗಳೂರು ಎಂಬ ಮಾಯಾನಗರಿಗೆ ಬಂದು ಒಂದೂವರೆ ವರ್ಷಗಳಾಗುತ್ತಾ ಬಂತು. ಓದು ಮುಗಿಸಿ, ಚೆನ್ನೈಯಲ್ಲಿ ಕೆಲಸ ಸಿಕ್ಕಿ ಮನೆಯಿಂದ ಹೊರಟು ನಿಂತಾಗ ಅಮ್ಮ ಹೇಳಿದ್ದು "ಲೈಫ್್ನಲ್ಲಿ ಇನ್ನಾದರೂ ಸೀರಿಯಸ್ಸಾಗಿರು. ಮಕ್ಕಳಾಟ ಸಾಕು". ಅಪ್ಪ ಹೇಳಿದ್ದು" ಲೈಫ್್ನಲ್ಲಿ ಏನೇ ಸಮಸ್ಯೆ ಬಂದರೂ ಕೂಲ್ ಆಗಿ ತೆಗೋ. ಬದುಕು ಯಾವಾಗಲೂ ಒಂದೇ ತರ ಇರಲ್ಲ. ಪ್ರತಿಯೊಂದು ಕ್ಷಣವೂ ನಿನಗೆ ಅಮೂಲ್ಯವಾದ್ದು, ಈ ಬದುಕು ನಿನಗೆ ಎಲ್ಲವನ್ನೂ ಕಲಿಸುತ್ತದೆ". ನಿಜ, ಬದುಕು ಎಂಬುದು ಏನೆಂದು ಸರಿಯಾಗಿ ಅರ್ಥವಾದದ್ದೇ ನಾನು ಒಂಟಿಯೆನಿಸಿಕೊಂಡಾಗ. ಅಲ್ಲಿಯವರೆಗೆ ಅಪ್ಪನನ್ನು ಬಿಟ್ಟು ದೂರ ಹೋಗಿರದ ನಾನು ಒಂದು ವರ್ಷ ಚೆನ್ನೈಯಲ್ಲಿ ಕಳೆದ. ಆದರೆ ಅಲ್ಲಿ ನಾನು ಒಂಟಿಯಾಗಿರಲಿಲ್ಲ. ಅಲ್ಲಿ ನನಗೆ ಸಿಕ್ಕಿದ್ದು ಅಣ್ಣನ ಪ್ರೀತಿ, ಅಕ್ಕನ ಅಕ್ಕರೆ ಮತ್ತು ಗುರುಗಳಂತೆ ಉಪದೇಶ ನೀಡುವ ಸಹೋದ್ಯೋಗಿಗಳು, ಪ್ರೀತಿಯ ಗೆಳತಿಯರು. ಇವೆಲ್ಲಾ ಇದ್ದರೂ ಅಪ್ಪ ಅಮ್ಮ, ಮತ್ತು ನನ್ನ ಕುಟುಂಬದವರ ಪ್ರೀತಿಯಿದೆಯಲ್ಲ್ಲಾ ಅದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ಅಕಸ್ಮಾತ್ ಸೀನಿದರೆ ಸಾಕು, "ಪುಟ್ಟಾ.. ನೆಗಡಿಯಾಗಿದೆಯಾ?  ಮುಂದೆ ಓದಿ »

ಲಾಸ್ಟ್ ಬೆಂಚ್ ಲೀಲೆ...

ಎಲ್ಲಾ ಅಪ್ಪ ಅಮ್ಮಂದಿರಂತೆ ನನ್ನ ಅಪ್ಪ ಅಮ್ಮನಿಗೂ ನಾನು ಫಸ್ಟ್ ಬೆಂಚ್ ಸ್ಟೂಡೆಂಟ್ ಆಗಿರಬೇಕೆಂಬ ಆಸೆ. ಆದಾಗ್ಯೂ, ಕಲಿಕೆಯಲ್ಲಿ ಚುರುಕು (ಆವಾಗ) ಮತ್ತು ನನ್ನ ಎತ್ತರ ಕಡಿಮೆ ಇದ್ದುದರಿಂದ :)ಪ್ಲಸ್ ಟು ವರೆಗೆ ನಾನು ಫಸ್ಟ್ ಬೆಂಚ್್ನಲ್ಲೇ ಕುಳಿತದ್ದು. ಏನಿದ್ದರೂ ಕ್ಲಾಸಿನಲ್ಲಿ ಫಸ್ಟ್ ಬೆಂಚ್ ಸ್ಟೂಡೆಂಟ್ ಅಂತಾ ಹೇಳಿಕೊಳ್ಳುವುದರಲ್ಲಿ ಏನೋ ಒಂದು ರೀತಿ ಹೆಮ್ಮೆ. ಫಸ್ಟ್ ಬೆಂಚ್ ಅಂದರೆ ವಿಐಪಿಗಳ ಸೀಟು, ಅಲ್ಲಿ ಕುಳಿತುಕೊಳ್ಳುವವರೆಲ್ಲಾ ಬುದ್ಧಿವಂತರು, ಲಾಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುವವರೆಲ್ಲರೂ ದಡ್ಡರು ಎಂಬುದು ಅಂಬೋಣ. ಅದಕ್ಕಾಗಿಯೇ ವಿದ್ಯಾರ್ಥಿ ದೆಸೆಯಲ್ಲಿ ಫಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುವುದೆಂದರೆ ಏನೋ ಸಾಧನೆ ಮಾಡಿದಂತೆ. ಜೊತೆಗೆ ಹೆತ್ತವರಿಗೂ ತಮ್ಮ ಮಕ್ಕಳು ಫಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುತ್ತಿದ್ದಾರೆ ಎಂದು ಹೇಳಲು ಹೆಮ್ಮೆಯ ವಿಷಯವೇ. ಫಸ್ಟ್ ಬೆಂಚಿನಲ್ಲಿ ಕುಳಿತುಕೊಳ್ಳುವವರೆಲ್ಲಾ ಜಾಣರು, ಅವರು ನಗುವುದು ಕಡಿಮೆ ಎಂದೆಲ್ಲಾ ಲಾಸ್ಟ್ ಬೆಂಚ್್ನವರು ಕಿರಿಕ್ ಮಾಡುತ್ತಾರೆ. ಅದು ನಿಜವೂ ಹೌದು.  ಮುಂದೆ ಓದಿ »

ಬಡತನದ ಸುಖ ಅಂದ್ರೆ....

ನಾವು ಶಾಲೆಗೆ ಹೋಗ್ಬೇಕಾದ್ರೆ ಇಷ್ಟೊಂದು ಸೌಕರ್ಯ ಇರಲಿಲ್ಲ, ಇದ್ದದ್ದು ಎರಡೇ ಜೋಡಿ ಡ್ರೆಸ್. ಶಾಲಾ ಯುನಿಫಾರಂ ಇದು ಬಿಟ್ಟರೆ ಮದುವೆಗೆ ಹೋಗಲಿಕ್ಕೆ ಅಂತಾ ಇನ್ನೊಂದು ಜೊತೆ ಬಟ್ಟೆ. ನನ್ನ ಸಂಬಂಧಿಕರೊಬ್ಬರ ಮದುವೆಗೆ ಹೋಗ್ಬೇಕಾದರೆ ಯಾವ ಡ್ರೆಸ್ ಹಾಕಿಕೊಳ್ಳಲಿ? ಎಂದು ಕನ್್ಫ್ಯೂಸ್ ಆಗಿ ಕುಳಿತುಕೊಂಡಿರುವಾಗ ಅಪ್ಪ ಹೇಳಿದ ಮಾತುಗಳಿವು. ನಿಜ, ಈವಾಗ ನಾವು ಈ ಎಲ್ಲಾ ಸುಖಗಳನ್ನು ಅನುಭವಿಸಬೇಕಾದರೆ ನಮ್ಮ ಅಪ್ಪ ಅಮ್ಮ ಎಷ್ಟು ಕಷ್ಟ ಪಟ್ಟಿರಬೇಕು ಅಲ್ವಾ? ನನ್ನ ಅಪ್ಪ ನಗರದಲ್ಲಿ ಓದಿ ಬೆಳೆದವರು. ಆದರೆ ಮನೆಯಲ್ಲಿ ಬಡತನ. ಅಪ್ಪ ಹೇಳುವಂತೆ ಆ ಬಡತನದಲ್ಲೂ ಒಂದು ಸುಖವಿತ್ತು. ನಮ್ಮಜ್ಜಿಗೆ 6 ಜನ ಮಕ್ಕಳು. ತುಂಬು ಸಂಸಾರ. ಕೂಲಿ ಕೆಲಸ ಮಾಡಿಯೇ ಸಂಸಾರ ಸಾಗಬೇಕಾಗಿತ್ತು. ಬೆಳಗ್ಗೆ ತಿಂಡಿ ಅಂದರೆ ಅವಲಕ್ಕಿ, ಕೆಲವೊಮ್ಮೆ ಉಪ್ಪಿಟ್ಟು ಹೀಗೆ ಬಜಿಲ್- ಸಜ್ಜಿಗೆ ಕಾಂಬಿನೇಷನ್. ಇದು ವಾರದಲ್ಲಿ ಎರಡು ದಿನ ಅಷ್ಟೇ. ಬಾಕಿ ಉಳಿದ ದಿನಗಳಲ್ಲಿ ಗಂಜಿ. ಏನಾದರೂ ಹಬ್ಬ ಬಂದರೆ ಮಾತ್ರ ಕಡುಬು, ಕೊಟ್ಟಿಗೆ ಮಾಡುತ್ತಿದ್ದರಂತೆ. ಊಟಕ್ಕೆ ಸಾಂಬಾರ್ ಇಲ್ಲದಿದ್ದರೆ ಮೀನು ಸಾರು.  ಮುಂದೆ ಓದಿ »

ಕಾಳರಾತ್ರಿಯಲ್ಲಿ ಬಂದ ಕುಂಟು ಭಾಗ್ಯ!

ಜನರೇಟರ್ ರೂಮ್ ಈಗ ಆ ಕಾರ್ಖಾನೆಯ ಎಲ್ಲಾ ವಿಚಿತ್ರ ಆಗು ಹೋಗುಗಳಿಗೆ ಕೇಂದ್ರ ಬಿಂದುವಾಗತೊಡಗಿತ್ತು.  ಹಾಗೆ ಜಯವಂತನೊಡನೆ ಅಲ್ಲಿಗೆ ಬಂದ ನನಗೆ ಅಲ್ಲಿ ರಾತ್ರಿ ಪಾಳಿಯಲ್ಲಿರಬೇಕಾಗಿದ್ದ ಬಂಡಿ ನಾಗರಾಜ ಕಾಣಿಸಲಿಲ್ಲ.  ಅಲ್ಲಿ ಬಿದ್ದಿದ್ದ ಖಾಲಿ ಕುರ್ಚಿಯನ್ನೊಮ್ಮೆ ನೋಡಿ, ಹಾಗೇ ಸುತ್ತ ಮುತ್ತ ನೋಡುತ್ತಿದ್ದಾಗ, ದೂರದಲ್ಲಿ ಎದೆಯೆತ್ತರ ಬೆಳೆದಿದ್ದ ಹುಲ್ಲಿನ ನಡುವೆ ಏನೋ ಸರಿದಾಡಿದಂತೆ ಕಂಡಿತು, ಮತ್ತೊಮ್ಮೆ ನೋಡಿದೆ, ಹೌದು, ಆ ಜಾಗದಲ್ಲಿ ಮಾತ್ರ ಹುಲ್ಲು ಅಲುಗಾಡುತ್ತಿದೆ!  ಮುಂದೆ ಓದಿ »

ಅಮಾವಾಸ್ಯೆಯ ರಾತ್ರಿಯಲ್ಲಿ ,,,,೨

ಮರುದಿನ ಮಧ್ಯಾಹ್ನದ ಹೊತ್ತಿಗೆ ಭೀಮಯ್ಯನನ್ನು ದೆವ್ವ ಹಿಡಿದದ್ದು, ನಾನು ಅಲ್ಲಿಗೆ ಪ್ರವೇಶಿಸಿದ್ದನ್ನು ನೋಡಿ ಅವು ಮಾಯವಾಗಿದ್ದು ಆ  ಕಾರ್ಖಾನೆಯಲ್ಲಿ, ಪಕ್ಕದ ಕಣಿವೆ ಪುರದಲ್ಲಿ ದೊಡ್ಡ ಸುದ್ಧಿಯೇ ಆಗಿ ಹೋಯ್ತು.  ಆದರೆ ಭೀಮಯ್ಯನಿಗೆ ಸಕತ್ತಾಗಿ ಚಳಿ ಜ್ವರ ಅಮರಿಕೊಂಡು ಅವನನ್ನು ಚಿಕ್ಕಬಳ್ಳಾಪುರದ  ಸರ್ಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದರು.  ಮುಂದೆ ಓದಿ »

Syndicate content