ಕಾವೇರಿ
ನವರಾತ್ರಿಯ ಏಳನೇ ದಿನ
October 18, 2007 - 10:48pm — hamsanandiಇವತ್ತು ನವರಾತ್ರಿಯ ಏಳನೇ ದಿನ. ಈ ದಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ತುಲಾ ಸಂಕ್ರಮಣವೂ ಹೌದು. ನೃಪತುಂಗನ ಕಾಲದಿಂದಲೂ, ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಎಂಬ ಹೇಳಿಕೆ ಇದೆ. ಕಾವೇರಿ ಕನ್ನಡಿಗರಿಗೆ, ಅದರಲ್ಲೂ ದಕ್ಷಿಣ ಕರ್ನಾಟಕದ ಭಾಗದವರಿಗೆ ಜೀವನದಿ ಎಂಬುದರಲ್ಲಿ ಎರಡುಮಾತಿಲ್ಲ. ಕಾವೇರಿ ಮತ್ತೆ ಅದಕ್ಕೆ ಸೇರಿಕೊಳ್ಳುವ ನದಿಗಳಾದ ಹೇಮಾವತಿ, ಲಕ್ಷ್ಮಣತೀರ್ಥ, ಶಿಂಷಾ, ಅರ್ಕಾವತಿ, ಕಣ್ವಾ, ಹಾರಂಗಿ ಮೊದಲಾದುವು ಮೈಸೂರು,ಹಾಸನ,ಕೊಡಗು, ಮಂಡ್ಯ, ತುಮಕೂರು, ಚಿಕ್ಕಮಗಳೂರು,ಬೆಂಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳ ಬಹುಪಾಲು ಭೂಮಿಗೆ ನೀರುಣಿಸುತ್ತವೆ. ಇಂತಹ ಮಹಾತಾಯಿ ಕಾವೇರಿಗೆ ಇಂದು ಮೊದಲು ನಮಿಸೋಣ.
ಇವತ್ತು ಈ ಮೊದಲ ಆರು ದಿನಕ್ಕಿಂತ ಸ್ವಲ್ಪ ಬೇರೆ. ಬೇರೆ ಸಂಗೀತಗಾರರು ಹಾಡಿದ, ದೇವಿಯ ಬಗ್ಗೆಯ ರಚನೆಯ ಕೊಂಡಿಗಳನ್ನು ಕೊಡುವ ಬದಲು ಇವತ್ತು ಒಂದು ಬದಲಾವಣೆ ಮಾಡಿದ್ದೇನೆ. ಕನ್ನಡದ ಮೂರು ಕವಿಗಳು ಸರಸ್ವತಿಯ ಬಗ್ಗೆ ಮಾಡಿರುವ ಸ್ತುತಿಯನ್ನು, ಹವ್ಯಾಸಿ ಸಂಗೀತಾಭ್ಯಾಸಿಯೊಬ್ಬರ ಕಂಠದಲ್ಲಿ ಕೇಳಿಸುವೆ. ಇದಕ್ಕೆ ಕಾರಣ, ಕನ್ನಡಕ್ಕೂ-ಕಾವೇರಿಗೂ ಇರುವ ಬಿಡಿಸದ ನಂಟು. ಹಾಗಾಗಿ, ಕಾವೇರಿ ಸಂಕ್ರಮಣದ ದಿನ ಒಂದಲ್ಲ, ಮೂರು ಕನ್ನಡ ರಚನೆಗಳು ಇವತ್ತು ಇಲ್ಲಿ ಕೇಳಿ ಬರುತ್ತಿವೆ. ಇವಕ್ಕೆ ಹಿನ್ನಲೆ ವಾದ್ಯಗಳ ಅಲಂಕಾರವಿಲ್ಲ. ಆದರೂ ಪರವಾಗಿಲ್ಲ, ಎನ್ನುವ ಭಾವನೆ ನನ್ನದು.
ಮೊದಲಿಗೆ ಕನ್ನಡದ ಮೊದಲ ಕಾವ್ಯ ಕವಿರಾಜ ಮಾರ್ಗದಿಂದ ಆಯ್ದ ಸರಸ್ವತೀ ಸ್ತುತಿಯಾದ ಒಂದು ಕಂದಪದ್ಯ:
ಶ್ರೀ ವಿಶದವರ್ಣೆ ಮಧುರಾ
ರಾವೋಚಿತೆ ಚತುರ ರುಚಿರ ಪದರಚನೆ ಚಿರಂ
ದೇವಿ ಸರಸ್ವತಿ ಹಂಸೀ
ಭಾವದಿ ಕೂರ್ತು ನೆಲೆಗೊಳ್ಗೆ ಮನ್ಮಾನಸದೊಳ್ ಮುಂದೆ ಓದಿ »

ತಿರುವೈಯ್ಯಾರು ಮತ್ತು ಮಿಶನ್ ಸ್ಯಾನ್ ಹೊಸೆ
June 16, 2007 - 1:19am — hamsanandiಕನ್ನಡ ನಾಡಿನ ಜೀವನದಿ ಕಾವೇರಿ. ಹಾಗೇ ಮುಂದೆ ಹೋಗಿ, ಅದು ತಮಿಳುನಾಡಿಗೂ ಜೀವನದಿಯಾಗಿ ಹರಿಯುತ್ತಾಳೆ. ನಮಗಾದರೂ, ಕಾವೇರಿ ಅಲ್ಲದೆ, ತುಂಗೆ, ಭದ್ರೆ, ಕೃಷ್ಣೆ, ಕಾಳಿಯರ ಕೃಪೆ ತಕ್ಕಮಟ್ಟಿಗಿದೆ. ಆದರೆ, ತಮಿಳುನಾಡಿನಲ್ಲಿ, ಕಾವೇರಿ(ಮತ್ತು ಅದಕ್ಕೆ ಸೇರುವ ಹೊಳೆಗಳನ್ನು ಬಿಟ್ಟು) ಬೇರೆ ಪ್ರಮುಖವಾದ ನದೀಜಾಲವಿಲ್ಲ. ಹಾಗಾಗಿ, ತಮಿಳರು ನಮ್ಮಂತೆಯೇ ಕಾವೇರಿಯನ್ನು ಬಹಳ ಗೌರವದಿಂದ ಕಾಣುತ್ತಾರೆ.
ಮೊದಲಿಗೆ ಒಂದು ವಿಷಯದ ಬಗ್ಗೆ ಹೇಳಿಬಿಡುತ್ತೇನೆ. ಇದು ಕಾವೇರಿ ಜಲವಿವಾದದ ಪ್ರಶ್ನೆಯ ಬಗ್ಗೆಯ ಬರಹವಲ್ಲ
ನನ್ನ ಉದ್ದೇಶವೇ ಬೇರೆ. ಎಲ್ಲ ನದಿಗಳೂ ಸಾಮಾನ್ಯ ಸಮುದ್ರ ಸೇರುವ ಬಳಿ ಕವಲೊಡೆದು, ಹಲವು ಭಾಗಗಳಾಗುತ್ತವೆ. ಕಾವೇರಿಯೂ ಇದಕ್ಕೆ ಹೊರತಲ್ಲ. ತಮಿಳುನಾಡಿನ ತಿರುಚ್ಚಿರಾಪಳ್ಳಿಯ ಬಳಿ ಕಾವೇರಿ ಐದು ಭಾಗಗಳಾಗಿ ಒಡೆಯುತ್ತಾಳೆ. ಈ ಶಾಖೆಗಳಿಗೆ ಕಾವೇರಿ, ವೆಣ್ಣಾರ್, ವೆಟ್ಟಾರ್, ಕೊಡಮುರುಟಿ ಮತ್ತು ಕೊಲ್ಲಿಡಮ್ ಎಂದು ಹೆಸರಾಗುತ್ತದೆ. ಇಲ್ಲಿ ಒಂದು ವಿಷಯ ಹೇಳಬೇಕು. ವೆಣ್ಣಾರ್, ವೆಟ್ಟಾರ್ ಎಂಬಲ್ಲಿ ಬರುವ ರ ಕಾರ, ಹಳೆಗನ್ನಡದ ಶಕಟರೇಫ; (ನನಗೆ ಅದನ್ನು ಇಲ್ಲಿ ಬರೆಯಬೇಕೆಂದು ತಿಳಿಯದು). ಮತ್ತೆ, ಈ ಪದಗಳು ರ್ ಎನ್ನುವ ವ್ಯಂಜನದಿಂದ ಕೊನೆಯಾಗಿಲ್ಲ. ಬದಲಿಗೆ, ಅರ್ಧ ಉಕಾರದಲ್ಲಿ ಮುಗಿಯುತ್ತವೆ. (ಈ ರೀತಿಯ ಉಕಾರ ಇರುವ ಪದ ನೆನಪಿಗೆ ಬರುತ್ತಿಲ್ಲ). ಕನ್ನಡದ ಆರು, ಮಗು, ನಗು ಮೊದಲಾದ ಪದಗಳಲ್ಲಿ ಬರುವ ಪೂರ್ಣ ಉಕಾರವನ್ನು ಉಪಯೋಗಿಸದೇ ಹೇಳಿದರೆ ಹೇಗಿರುತ್ತೋ ಆ ರೀತಿ ಇರಬೇಕು ತಮಿಳಿನಲ್ಲಿ ಪದದ ಕೊನೆಗೆ ಬರುವ ಉಕಾರಗಳ ಉಚ್ಚಾರ. ಇನ್ನೂ ಹೇಳಬೇಕೆಂದರೆ ವೆಣ್ಣಾರು ಅನ್ನುವ ಪದವನ್ನು ವೆಣ್ಣಾಋ ಎನ್ನುವ ರೀತಿಯಲ್ಲಿ ಉಚ್ಚರಿಸಿದರೆ, ಮೂಲಕ್ಕೆ ಹತ್ತಿರವಾಗುತ್ತದೆ. ಮುಂದೆ ಓದಿ »





RSS: