ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಕನ್ನಡ ಸಾಹಿತ್ಯ

ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?

June 20, 2007 - 12:47am — kalpana

ಸುಮಾರು ವರ್ಷಗಳಿಂದ ನಾನಿರುವ ಅಮೇರಿಕದಲ್ಲಿ ಎನ್.ಅರ್.ಐ. ಲೇಖಕರು ಸೃಷ್ಟಿಸುತ್ತಿರುವ ಕನ್ನಡ ಲೇಖನಗಳನ್ನು ಓದುತ್ತಾ ಬಂದಿದ್ದೇನೆ. ಈ ನಡುವೆ ಕಥಾಸಂಕಲನಗಳು, ಮುಂತಾದವು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುವುದು, ಅದಕ್ಕೆ ಭಾರತದಿಂದ ಬಂದ ಕವಿಗಳು/ಕಥೆಗಾರರು ಮುನ್ನುಡಿ ಬರೆದು, ಪುಸ್ತಕ ಬಿಡುಗಡೆ ಮಾಡಿ, ಶುಭಹಾರೈಸಿ ಹೋಗುವುದು ನಡೆಯುತ್ತಲೇ ಇದೆ. ಇವೆಲ್ಲ ಈ ಲೇಖಕರು ತಾವೇ ಸ್ವಂತ ಖರ್ಚು ಹಾಕಿ ಪ್ರಕಟಿಸಿರುವ ಪುಸ್ತಕಗಳು. ಹಾಗಿದ್ದ ಮೇಲೆ, ಇದರ ಗುಣಮಟ್ಟ ಎಂತಹದ್ದಿರಬಹುದು ಎಂಬ ಪ್ರಶ್ನೆ ಏಳುವುದು ಸಹಜವೆ. ನನಗನ್ನಿಸುವ ಹಾಗೆ ಇವೆಲ್ಲ ಸುಮಾರು ಒಳ್ಳೆಯ "ಟೈಮ್ ಪಾಸ್" ತರಹದ ಮುದ ನೀಡುವ ಕೃತಿಗಳು. ಆದರೆ, ಯಾವುದೇ "ಆವರಣ" ದಂತಹ ಗಂಭೀರ ಚರ್ಚೆಗೆ ಗುರಿಪಡಿಸುವಂತಹ ಮೇರುಕೃತಿಯಲ್ಲ. ಹೀಗೆ ಬರೆದ ಮರುಕ್ಷಣ ಅನ್ನಿಸಿದ್ದು, ನಾನೇಕೆ ಆವರಣದ ಜೊತೆ ಎನ್.ಅರ್.ಐ. ಕೃತಿಗಳನ್ನು ತಾಳೆ ಹಾಕುತ್ತಿದ್ದೇನೆ? ಇವಕ್ಕೆ ಇವರದ್ದೇ ಒಂದು ಸ್ವಂತ ಸ್ಥಾನವಿಲ್ಲವೇ?

ಹೌದು, ಇವರಿಗೆ ಒಂದು ಸ್ಥಾನವಿದೆ. ಅದೇನೆಂದರೆ, ಒಂದು ಪುಟ್ಟ ಮಗು ಚೆನ್ನಾದ ಚಿತ್ರ ಬಿಡಿಸಿದಾಗ, ದೊಡ್ಡವರು- ಚೆನ್ನಾಗಿದೆ ಮರಿ, ಇನ್ನೂ ಬರೆ, ನಿನಗೆ ಒಳ್ಳೆಯ ಭವಿಷ್ಯವಿದೆ- ಎಂದು ಬೆನ್ನು ತಟ್ಟಿ ಮುಂದೆ ಹೋಗುವ ಸ್ಥಾನ. ಯಾರೂ ಕನ್ನಡ ಸಾಹಿತ್ಯದಲ್ಲಿ ಇವರದೂ ಒಂದು ಪಾತ್ರವಿದೆಯೆಂದು ಗುರುತಿಸದ ಸ್ಥಾನ. ಭಾರತದಲ್ಲಿ ನಡೆಯುವ ಕನ್ನಡ ಕೃಷಿ "ಮೇಯಿನ್ ಸ್ಟ್ರೀಮ್", ಇಲ್ಲಿ ನಡೆಯುವುದು ಸಂತೃಪ್ತ ಮನಸ್ಸು ತಿಂದು ತೇಗಿ, ಬೀಗಿ ಬರೆಯುವ "ಹಾಬಿ" ಯ ಬರಹ. ಹೀಗಂತ ಬೆನ್ನ ಹಿಂದೆ ಹೇಳಿರುವ ಭಾರತದ ಲೇಖಕರು ಇದ್ದಾರೆ. ಹೌದಪ್ಪ ಹೌದು ಎಂದು ಅವರ ವಾಕ್ಯವೆಲ್ಲ ವೇದವೆನ್ನುವಂತೆ ಅಮೆರಿಕನ್ನಡಿಗರು ಸಹ ಅದಕ್ಕೆ ತಲೆಯಲ್ಲಾಡಿಸಿದ್ದಾರೆ. ಇದು ನಿಜವೇ? ಹಾಗಿದ್ದರೆ ನಾವೇಕೆ ಅವರನ್ನು ಮೆಚ್ಚಿಸಲು ಬರೆಯಬೇಕು? ನಾವೇಕೆ ಇವರ ಕಣ್ಣಲ್ಲಿ ಬೆಳಗಬೇಕೆಂದು ಒದ್ದಾಡಬೇಕು? ಗುಡಿಸಲಲ್ಲಿ ಮಲಗಿ, ಕೊಳಚೆಗೇರಿಯಲ್ಲಿ ಜೀವನ ಸವಿಸುವ ಪಾತ್ರಗಳು ಮಾತ್ರ ಪ್ರಶಸ್ತಿಗೆ ಲಾಯಕ್ಕೋ? ಹವಾನಿಯಂತ್ರಿತ ಕ್ಯೂಬಿಕಲ್ನಲ್ಲಿ ಕುಳಿತಿದ್ದು, ಕಾರಿನಲ್ಲಿ ಮನೆಗೆ ತೆರಳುವ ಪಾತ್ರಗಳ ಬದುಕಿನಲ್ಲಿ ಗೋಳೇ ಇಲ್ಲವೋ? ಹಾಗಿದ್ದಲ್ಲಿ ಇಲ್ಲಿನ ಮಾನಸಿಕ ಆಸ್ಪತ್ರೆಗಳಲ್ಲಿ ಕ್ಯೂ ಯಾಕಿರುತ್ತೆ?  ಮುಂದೆ ಓದಿ »

  • ಕನ್ನಡ ಸಾಹಿತ್ಯ
~.~
  • kalpana ರವರ ಬ್ಲಾಗ್
  • 24 ಪ್ರತಿಕ್ರಿಯೆಗಳು
  • 947 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
Syndicate content

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:16am
  • anil.ramesh
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 12, 2008 - 11:59pm
  • ಗಣೇಶ
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:50pm
  • anil.ramesh
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:27pm
  • anil.ramesh
    ಉ: ಅವರು ಯಾರಿರಬಹುದು?
    October 12, 2008 - 11:26pm
  • ಗಣೇಶ
    ಉ: ಮತಾಂತರ ಏನು ಎತ್ತ
    October 12, 2008 - 11:22pm
  • anil.ramesh
    ಉ: ಬಸವನ ಹುಳು...
    October 12, 2008 - 11:19pm
  • pradeep_adiga
    ಉ: ಸಹಾಯ ಬೇಕಾಗಿದೆ
    October 12, 2008 - 11:14pm
  • Chetan.Jeeral
    ಉ: ಸಹಾಯ ಬೇಕಾಗಿದೆ
    October 12, 2008 - 11:07pm
  • ಗಣೇಶ
    ಉ: ಅವರು ಯಾರಿರಬಹುದು?
    October 12, 2008 - 11:02pm
ಇನ್ನಷ್ಟು


ಕರ್ಮ ಮಾರ್ಗ ಪ್ರಕೃತಿ ಪರಾಯಣ, ಜ್ಞಾನಮಾರ್ಗ ಆತ್ಮ ಪರಾಯಣ ಮತ್ತು ಭಕ್ತಿಮಾರ್ಗ ಪ್ರಭು ಪರಾಯಣವಾಗಿರುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator