ಆತ್ಮವಿಶ್ಲೇಷಣೆ
"ಹ್ರದಯ ಚೋರನೆ-ಈಪ್ರೀತಿಯ ವೇದನೆಗೆ ಕೊನೆ ಬೇಗನೆ ಸಿಗಲಿ ಎಂದು ಆಶಿಸುತ್ತೇನೆ"
May 28, 2008 - 1:02pm — raju badagiಹೌದು ಕಣೋ, ಮುಂದೆ ಓದಿ »

- raju badagi ರವರ ಬ್ಲಾಗ್
- Login or register to post comments
- 198 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಕರುಣೆಯಲ್ಲೂ ಕಲಬೆರಕೆಯೇ?
June 26, 2007 - 6:04am — kalpanaಮೊನ್ನೆ ಹೀಗೊಂದು ಸಾವಾಯಿತು ನೋಡಿ. ಒಬ್ಬ ಯುವಕನಿಗೆ ಕ್ಯಾನ್ಸರ್ ಬಂದು, ಅಪ್ಪ, ಅಮ್ಮ, ಹೆಂಡತಿ, ಇಬ್ಬರು ಮಕ್ಕಳು, ಹೀಗೆ ತುಂಬಿ ತುಳುಕುತ್ತಿದ್ದ ಸಂಪೂರ್ಣ ಪರಿವಾರವನ್ನು ತ್ಯಜಿಸಿ ಹೊರಟುಹೋದ. ಆ ಮುದ್ದಾದ ಪುಟ್ಟ ಮಕ್ಕಳನ್ನು ನೋಡಿ ಎಲ್ಲರ ಕಣ್ಣಲ್ಲೂ ನೀರು. ವಿಧವೆ ಹೆಂಡತಿಯ ಮೇಲೆ ಅಯ್ಯೋ-ಪಾಪಗಳ ಸುರಿಮಳೆ ನಡೆದೇ ಇತ್ತು. ಅಷ್ಟರಲ್ಲಿ ಯಾರೋ ಪಿಸುಗುಟ್ಟಿದರು, "ಅವನಿಗೆ ಸಿಕ್ಕಾಪಟ್ಟೆ ಗುಟ್ಕಾ ಚಟವಿತ್ತಂತೆ". ಸರಿ, ಎಲ್ಲರ ಮನಸ್ಸಿನಲ್ಲೂ ಪ್ರಶ್ನೆಗಳು ಏಳುವುದಕ್ಕೆ ಶುರುವಾಯಿತು. ಅವನು ಗುಟ್ಕಾ ಜಗಿಯುತಿದ್ದಾಗ ಬೇಡ ಅಂತನ್ನದವರು ಇವರೆಂತಹ ಜನ? ತನ್ನ ಸ್ವಾರ್ಥ ಚಟ ಇಂಗಿಸಲು ಹೋಗಿ, ಹೆಂಡತಿ ಮಕ್ಕಳನ್ನು ನಡುನೀರಿನಲ್ಲಿ ಕೈಬಿಟ್ಟು ಹೋದ ಅವನಾದರೂ ಎಂತಹ ಮನುಷ್ಯ? ಇದು ಸ್ವಯಂಕೃತ ಅಪರಾಧವೆಂದ ಮೇಲೆ ನಮ್ಮ ಅನುಕಂಪಕ್ಕೆ ಇವರೆಷ್ಟು ಅರ್ಹರು? ಹೀಗೆ ಆ ಮನೆಯವರ ದುಃಖ, ನೋವು, ಮೀರಿ ಅವರ ನೈತಿಕ ವಿವೇಚನೆಯ ಬಗ್ಗೆ ಚರ್ಚೆ ನಡೆಯತೊಡಗಿತು.
ಇದೇ ರೀತಿಯ ಅನುಭವ ಬಹಳಷ್ಟು ಸಾರಿ ನನಗಾಗಿದೆ. ಏಡ್ಸ್ ಬಂದು ನರಳುತ್ತಿರುವ ರೋಗಿಯ ಚಿತ್ರಣ ಟೀವಿಯಲ್ಲಿ ನೋಡನೋಡುತ್ತ, ಎದೆಯಲ್ಲಿ ಕರುಣೆಯ ಮಿಡಿತ ಶುರುವಾಗುತ್ತಿದ್ದಂತೆ, ತಲೆಯಲ್ಲಿ "ಇವನಿಗೆ ಈ ರೋಗ ಹೇಗೆ ಬಂತು? ಎಷ್ಟು ಜನರ ಜೊತೆ ಮಲಗಿದ್ದನೋ ಏನೋ? ಡ್ರಗ್ ಆಡಿಕ್ಟ್ ಇರಬಹುದೇನೋ?" ಎಂಬ ಸಂಶಯದ ಸುಳಿ ಏಳುತ್ತದೆ. ಅವನಿಗೆ ಯಾವುದೋ ರಕ್ತದ ಟ್ರಾನ್ಸ್ ಫ್ಯೂಶನ್ ಸಮಯದಲ್ಲಿ ಹೆಚ್.ಐ.ವಿ. ಸೊಂಕು ತಗಲಿದ್ದು ಎಂದು ಸ್ಪಷ್ಟವಾದರೆ ಛೆ! ಪಾಪ! ಎಂಬ ನಿಟ್ಟುಸಿರು. ಇಲ್ಲವಾದರೆ ಛೀ! ಏನು ಅಸಹ್ಯದ ಜನರಿರುತ್ತಾರೆ ಎಂಬ ತಿರಸ್ಕಾರ. ಹೀಗೇಕೆ ಮನಸ್ಸು? ಮುಂದೆ ಓದಿ »


RSS: