ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸಂಸ್ಕೃತಿ

ಬಸವನ್ಹಬ್ಬ - ಕೆಲ ಆಯಾಮಗಳು.

ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು.

ನಾಳೆ ಅಂದರೆ ಸೋಮವಾರ ೨೭ ರ ಆಪ್ರಿಲ್ ೨೦೦೯ ರಂದು ಬಸವ ಜಯಂತಿ. ಇಂದು ಭಾನುವಾರ ರಜ. ಇದೇ ನೆಪದಲ್ಲಿ ಅಣ್ಣ ಬಸವಣ್ಣನ ಮೇಲೆ ಎರಡು ಮಾತು ಬರಿಯೋಣ ಅಂತ. ಬಸವ ಜಯಂತಿ ಆಚರಣೆ ಎಂದಿನಿಂದಶುರುವಾಯಿತು ಅಂತ ನಾನು ಯೋಚಿಸಿದ್ದು ಈ ಬರಹಕ್ಕೆ ಪ್ರೇರಣೆ.

   ಮುಂದೆ ಓದಿ »

ದೇವರು- ಅದೊಂದು ಸಂಸ್ಕೃತಿ, ಸಂಸ್ಕೃತಿ ಪಲ್ಲಟ ನಿಲ್ಲಲಿ.

ಹಿನ್ನಲೆ..

 

ಕೊನೆ ವಾರ ಪೂರ್ತಿ ಊರಲ್ಲಿದ್ದೆ. ಹಾಗೇನೆ ಮನೆಗೆ ಕೆಲವೊಂದು ಸಾಮಾನು ತರಬೇಕಿತ್ತು. ಅಜ್ಜಂಪುರಕ್ಕೆ ಹೋದೆ. ಅಜ್ಜಂಪುರ ನಮಗೆ ೨೫-೩೦ ನಿಮಿಶದ ದೂರ.

   ಮುಂದೆ ಓದಿ »

ವಾಯ್! ಶ್ರೀರಾಮಸೇನೆ ಯಾಕೆ "ಕಪಿಚೇಷ್ಟೆ" ಮಾಡ್ತಾ ಉಂಟು ಮಾರಾಯ?

Sri Rama

ಶ್ರೀರಾಮಸೇನೆಯೆಂದರೆ ಕಪಿಸೈನ್ಯ ತಾನೆ. ಕಪಿಗಳು ತಾನೆ ಹೀಗೆ ಇಲ್ಲದ ಅವಾಂತರಗಳನ್ನು ಸೃಷ್ಟಿಸುವುದು! ಇದನ್ನು ಇಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ, ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪಬ್ ದಾಳಿ ಪ್ರಕರಣ ರಾಷ್ಟ್ರಮಟ್ಟದ ಸುದ್ದಿಯಾದದ್ದು.  ಮುಂದೆ ಓದಿ »

ಕಲಿಯುಗದ ತಪಸ್ಸು --- ಖರೇನೇ ಭಾಳ ಕಠಿಣದ

ಪುರಾತನ ಕಾಲದಾಗ ಋಷಿ-ಮುನಿಗಳು, ರಾಕ್ಷಸರು, ಮತ್ತ್ಯಾರ್ಯಾರೋ ತಪಸ್ಸು ಮಾಡ್ತಿದ್ರು ಅಂತ ಹೇಳಿದ್ದು ನಾವೆಲ್ಲಾರೂ ಕೇಳಿವಿ. ತಪಸ್ಸು ಮಾಡಲಿಕ್ಕೇ ಎಷ್ಟು ಕಷ್ಟ ಪಡತಿದ್ರು ಅಂತನೂ ಕೇಳಿವಿ. ಕೆಲೊಬ್ರು ಸದಾಕಾಲ ದೇವರ ಧ್ಯಾನ ಮಾಡೀದ್ರ ಮತ್ತೊಬ್ರು ಈ ಸದ್ದ ದೇವರು ಇಲ್ಲಿ ಬರಬೇಕು ಅಂತ ಹೇಳಿ ವಾಮಾಚಾರಿ ಮಾಡ್ತಿದ್ರು.  ಮುಂದೆ ಓದಿ »

ಕುಟುಂಬ ಮಿಲನ

ಕುಟುಂಬ ಮಿಲನ

೨೪.೧.೨೦೦೯ ಶನಿವಾರ ಮತ್ತು ೨೫.೧.೨೦೦೯ ಭಾನುವಾರಗಳಂದು ಹಾಸನದ ನನ್ನ ಮಿತ್ರ ಅನಂತನಾರಾಯಣ ಇವರ ಮನೆಯಲ್ಲಿ ಒಂದು ವಿಶಿಷ್ಠ ಕಾರ್ಯಕ್ರಮ.ಹೆಸರು" ಕುಟುಂಬ ಮಿಲನ". ಅವರ ಬಂಧು ಬಾಂಧವರನ್ನೆಲ್ಲಾ ಅಂದು ಹಾಸನದ ಸಮೀಪ ಇರುವ ಕೌಶಿಕ ಗ್ರಾಮದಲ್ಲಿ ಸೇರಿಸುತ್ತಾರೆ.ಇದು ಐದನೆಯ ವರ್ಷದ ಕಾರ್ಯಕ್ರಮ.  ಮುಂದೆ ಓದಿ »

ಮೈಲಾರ ಮಲ್ಲಣ್ಣ

ಅಂದಹಾಗೇ ಅದ್ಯಾವಾಗ್ಲೋ ಮೈಲಾರಲಿಂಗನ ಬಗ್ಗೆ ಬರೆದುಕೊಂಡಿದ್ದೆ. ಇತ್ತೀಚೆಗೆ ಬೀದರಿಗೆ ಹೋಗಿದ್ದಾಗ ಗೆಳತಿ ಉಮಾ ಅಲ್ಲೇ ಧನ್ನೂರು ಅನ್ತ ಇದೆ, ನಮ್ಮ ತಾತನ ಊರು, ಹೋಗ್ಬನ್ನಿ ಅಂದಿದ್ರು. ಧನ್ನೂರು, ಹಲಬರ್ಗಾ, ಭಾಲ್ಕಿ ಇತ್ಯಾದಿಗಳನ್ನು ನೋಡಿಬರೋಣವೆಂದು ಹೊರಟವನು ದಾರಿ ಮಧ್ಯೆ ಖಾನಾಪುರ ಎಂಬಲ್ಲಿ "ಮೈಲಾರ ಮಲ್ಲಣ್ಣಾ (ಖಂಡೋಬ) ಗುಡಿ" ಅನ್ತ ಬೋರ್ಡು ಕಂಡು ಫಕ್ಕನೇ ಅಚ್ಚರಿ ಮೂಡಿ ಅಲ್ಲೇ ಗಾಡಿ ತಿರುಗಿಸಿದೆ. ಬೀದರ್‍ ಹುಮನಾಬಾದ್ ರಸ್ತೇಲಿ ಅಯ್ ಟೆನ್ ಓಡಿಸೋ ಮಜಾನೇ ಬೇರೆ, ಈ ಕಿತ್ತು ಕೆರ ಹಿಡಿದಿದ್ದ ಹಳ್ಳಿ ರಸ್ತೇಲಿ ಅದೇ ತರ ಕಿತ್ತು ಕೆರ ಹಿಡಿದಿರೋ ಟಾಟಾ ಇಂಡಿಕಾ ಒಡ್ಸೋ ಮಜಾನೇ ಬೇರೆ. ಅಂದು ಭಾನುವಾರ, ರಸ್ತೆಯ ಎರಡೂ ಬದಿ ಜಾನುವಾರು ಸಂತೆ ನೆರೆದಿತ್ತು. ಮೈಲಾರ ಎಷ್ಟು ದೂರ ಅನ್ತ ಯಾರನ್ನೋ ಕೇಳಿದೆ. ಒಂದಿಬ್ಬರು ಓಡಿಬಂದರು ಬಕ್ರಾ ಬೇಕೇನ್ರೀ ಅನ್ತ. ನಾನು ಅವರಿಗೆ ಬೇಕಾದ ಗಿರಾಕಿ ಅಲ್ಲ ಅನ್ನೋದು ಖಾತ್ರಿಯಾಗಿ ಸುಮ್ಮನೇ ನೋಡುತ್ತಾ ನಿಂತರು. “ಮೈಲಾರಕ್ ನಡದೀನ್ರೀ, ಏಸು ದೂರ ಅದರೀ?” ಅಂದೆ. “ಮೈಲೂರನ್ನೋ ಊರು ಇರಾಂಗಿಲ್ರೀ, ಅಲ್ಲಿ ಬರೀ ಮಲ್ಲಣ್ಣಾಗುಡಿ ಅದರೀ, ನೀವ್ ಹಿಂಗಾ ಹೋಗರೀ, ಕಣ್ಣಿಗ್ ಕಾಣ್ತಾವ್ರೀ" ಅಂದರು. “ಅಲ್ರೀಯಪಾ, ಮೈಲಾರ ಅನ್ನೋ ಊರು ಇಲ್ಲೇನ್ರೀ? ಬೋರ್ಡು ಹಾಕ್ಯಾರಲ್ರೀ" ಅಂದಿದ್ದಕ್ಕೆ "ಅದ ಒಂದು ದೊಡ್ ಕತಿರೀ, ಅವರವ್ವನ ಶಾಪಾರೀ, ಕಾ ಅನ್ನೋ ಕಾಗಿ ಇರಂಗಿಲ್ಲ, ಗೂ ಅನ್ನೋ ಗೂಗಿ ಇರಂಗಿಲ್ಲ, ಅಂದಿದ್ಲಲ್ಲರೀ, ಅಲ್ಲೊಂದು ಕಾಗೀನೂ ಇಲ್ಲ, ಗೂಗೀನೂ ಇಲ್ಲ, ಮನುಷ್ಯಾರ್‍ ಭೀ ಮನಿ ಮಾಡಂಗಿಲ್ಲರೀ" ಅಂತ ಉತ್ತರ ಬಂತು. ಯಾಕೋ ತುಂಬಾ ಕುತೂಹಲ ಮೂಡಿತಾದರೂ ಆ ಕತೆಯನ್ನು ಮುಂದುವರಿಸುವ ಉಮೇದು ಅವರಿಗಿರಲಿಲ್ಲ.  ಮುಂದೆ ಓದಿ »

ಹಾಟ್ಸ್ ಆಪ್ ಇಂಡಿಯಾ

ಇಂದು ಈ ಗೀತೆಯನ್ನು ಕೇಳುತಿದ್ದೆ. ಆಹಾ ಕೇಳಲು ಕರ್ಣಾನಂದ.
'ಹಂಸಲೇಖ' ಅವರ ಲೇಖನಿಯಿಂದ ಮೂಡಿಬಂದಿರುವ ಈ ಗೀತೆಯನ್ನೊಮ್ಮೆ ನೋಡಿ.
ಕವಿ ಮನಸಿನಲ್ಲಿ ಭವ್ಯ ಭಾರತದ ಚಿತ್ರಣ ಬಿಡಿಸಿಟ್ಟಿದ್ದಾರೆ ಹ್ಯಾಟ್ಸ್ ಆಪ್ ಟು ಹಂಸಲೇಖ.

"ಒಂದು ಬಾಣ ಪಕ್ಷಿಗೆ ತಾಕಿದರೆ
ರಾಮಾಯಣ ಕಾವ್ಯ ಹರಿಯುವುದು
ಒಂದು ಹೆಣ್ಣು ನೊಂದು ಕೂಗಿದರೆ
ಮಹಾಭಾರತ ಕಥನ ಕೇಳುವುದು  ಮುಂದೆ ಓದಿ »

ಋಷಿ ಪಂಚಮಿ -- ಯಾಕ, ಏನು, ಎಂತ -- ಇವತ್ತೇನಾಗೇದ

ಈ ಋಷಿ ಪಂಚಮಿ ಅನ್ನು ಹಬ್ಬ ಅತವಾ ಪದ್ದತಿ ಎಷ್ಟು ಮಂದಿಗೆ ಗೊತ್ತದ ಅಂತ ಗೊತ್ತಿಲ್ಲ. ಅದಕ್ಕೆ ಸುಮ್ಮ ರಿಸ್ಕ ಬ್ಯಾಡಂತ ಹೇಳಿ ಲೈಟಾಗಿ ಇದರ ಬಗ್ಗೆ ಬರಿಲಿಕತ್ತೀನಿ.  ಮುಂದೆ ಓದಿ »

ಹಿಂದೂ ಸಂಸ್ಕೃತಿಯಲ್ಲಿ ಮಣ್ಣಿಗಿರುವ ಮಹತ್ವ

ನಾ ಗಣೇಶ ಚತುರ್ತಿಗೆ ಊರಿಗೆ ಹೋದಾಗ ಅಮ್ಮಾ ಜೂಡಿ ಮಾತಾಡ್ಕೋತ ಕುತ್ತಾಗ ಅಮ್ಮಾ ಈ ಮಾತು ಹೇಳಿದ್ಲು. ನಮ್ಮ ಹಿಂದೂ ಪದ್ದತಿಗಳ ವಳಗ ಮಣ್ಮಿಗೆ ಭಾಳ ಮಹತ್ವ ಕೊಡತಾರ. ಇದಕ್ಕ ಆಧಾರ ಎನಂದ್ರ -

೧. ಮಣ್ಣೆತ್ತಿನ ಅಮವಾಸಿಗೆ ಮಣ್ಣಿನ ಎತ್ತು ಮಾಡ್ತೀವಿ.
೨. ಗಣಪತಿ ಹಬ್ಬಕ್ಕ ಮಣ್ಣಿನ ಗಣಪತಿ ಮೂರ್ತಿ ಇಡತೀವಿ.  ಮುಂದೆ ಓದಿ »

Syndicate content