ವಿಜ್ಞಾನ

ಆಧ್ಯಾತ್ಮ ಮತ್ತು ವಿಜ್ಞಾನ...

ಇತ್ತೀಚಿಗೆ ಆಧ್ಯಾತ್ಮ ಮತ್ತು ವಿಜ್ಞಾನ (conventional science)ಗಳ ಬಗ್ಗೆ ಸಂಪದದಲ್ಲಿ ಬಹಳ ಚರ್ಚೆ ನಡೆಯುತ್ತಿದೆ... ಇದನ್ನೆಲ್ಲಾ ಓದಿ ನನ್ನ ಮನಸ್ಸಿನಲ್ಲಿ ಜಿಜ್ಞಾಸೆ ನಡೆಯುತ್ತಿತ್ತು... ಹಾಗೆಯೇ ನನಗೆ ಅನಿಸಿದ್ದು ಹೀಗೆ...


  • ವಿಜ್ಞಾನ ಮತ್ತು ಆಧ್ಯಾತ್ಮಗಳೆರಡೂ ಒಂದು ನಾಣ್ಯದ ಎರಡು ಮುಖಗಳು.

  • ಆಧ್ಯಾತ್ಮ ಅಂತರ್ಮುಖಿ, ವಿಜ್ಞಾನ ಬಹಿರ್ಮುಖಿ.

  • ಎರಡರ ಉದ್ದೇಶವೂ ಅನ್ವೇಷಣೆ.

  • ವಿಜ್ಞಾನ ಹೊರಪ್ರಪಂಚದ ಪ್ರಶ್ನೆಗಳಿಗೆ ಉತ್ತರವನ್ನು ಮತ್ತು ಹೊರಪ್ರಪಂಚದ ಸುಖ-ಸೌಲಭ್ಯಗಳನ್ನು ಅನ್ವೇಷಿಸುತ್ತದೆ.

  • ಆಧ್ಯಾತ್ಮ ನಮ್ಮೊಳಗಿನ ಪ್ರಶ್ನೆಗಳಿಗೆ ಉತ್ತರವನ್ನು ಮತ್ತು ನಮ್ಮ ಆಂತರಿಕ ಸುಖ-ಶಾಂತಿಯನ್ನು ಅನ್ವೇಷಿಸುತ್ತದೆ. 

ಏನಂತೀರಿ?


ವಿ.ಸೂ: ಇಲ್ಲಿ ಆಧ್ಯಾತ್ಮವನ್ನು ಧರ್ಮ, ಜಾತಿ, ಮೂಢನಂಬಿಕೆ ಇತ್ಯಾದಿಗಳಿಗೆ ದಯವಿಟ್ಟು ತಳುಕು ಹಾಕಬೇಡಿ.

ಮಿಡತೆ ಸಂತೆ ಕತೆ

locust_USFWSಬೈರಾಗಿಯಾಗಿ
ಅಂಡಲೆಯೋ ಮಿಡತೆ ಕಾಲನ್ನ
ಅಪ್ಪಿತಪ್ಪಿ ಸವರಿಬಿಟ್ಟರಾಯ್ತು
ಅಮಲೇರ್ಸೋ ಸೆರಟೊನನ್ ತಲೇಲಿ ದ್ರವಸಿ
ಜಗ್ಗನೆ ಲೋಕದಾಸೆ ಹೊತ್ತಿ
ಹುಡಕ್ಕೊಂಡು ಹೋಗಿ ಮಿಡತೆ
ಹಿಂಡು ಸೇರ್ಕೊಂಡ್ಕೂಡಲೆ ಕೊಳ್ಳೆಬುದ್ಧಿ ವಿರಾಜಮಾನ.
ಇದರದ್ದದು ಅದರದ್ದಿದು ಕಾಲ್ಕೆರೆದೂ ಕೆರೆದೂ
ಮತ್ಮತ್ತೆ ಸೆರಟೊನನ್ ತಲೇಲಿ ಉಕ್ಕೀ ಉಕ್ಕಿ
ಹುಚ್ಚೆದ್ದು ಲಗ್ಗೆಯಿಟ್ಟಲ್ಲೆಲ್ಲಾ ಹಾವಳಿ;
ಮರಾ ಗಿಡಾ ಬೆಳೆಗಳಿಗೆಲ್ಲಾ
ಕಂಟಕಪ್ರಾಯ
ಈ ಬೈರಾಗಿ ಮಿಡತೆ ರೌಡಿ ಸಂತೆ.

ಕನ್ನಡ ಪ್ರಭದಲ್ಲಿ ನನ್ನ ಹೊಸ ಅಂಕಣ

ಆತ್ಮೀಯರೆ,

ಕನ್ನಡ ಪ್ರಭದ ಪತ್ರಿಕೆಯಲ್ಲಿ ನನ್ನ ಹೊಸ ಅಂಕಣ "ಗಣಕಿಂಡಿ" ಇಂದಿನಿಂದ ಪ್ರಾರಂಭವಾಗಿದೆ. ಅದರಲ್ಲಿ ಒಂದು ಜಾಲತಾಣ, ಉಪಯುಕ್ತ ಡೌನ್‌ಲೋಡ್, ಸ್ವಾರಸ್ಯಕರ ಸುದ್ದಿ, ಸಲಹೆ ಮತ್ತು ಜೋಕುಗಳಿವೆ. ಅದನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಅಂತರಜಾಲದಲ್ಲಿ ಓದುವವರಿಗೆ ಕೊಂಡಿಗಳು-
PDF ಆವೃತ್ತಿ - http://www.kannadaprabha.com/pdf/epaper.asp?pdfdate=5/18/2009  ಮುಂದೆ ಓದಿ »

ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

[ಸಂಪದ ಕಾರ್ಯಕ್ರಮ]

ಮ್ಮದೇ ಸಮುದಾಯದವರನ್ನು ತಲುಪುವುದು ತುಂಬ ಕಷ್ಟ ಎನ್ನುವುದು ನಿಜವಾದ ಸಂಗತಿ. ನಾವೆಲ್ಲ ಬೆಳೆದು ಬಂದ ಜಗತ್ತು ಈಗ ನಮ್ಮನ್ನೆಲ್ಲ ಹತ್ತಿರ ತಂದಿರುವ ಅದೇ ಭಾಷೆಯ ಸುತ್ತ ಪೋಣಿಸಿದ್ದು. ಹೀಗಾಗಿಯೇ ನಾವುಗಳು ಇಲ್ಲಿದ್ದೇವೆ, ನಮ್ಮ ಕೆಲಸಗಳಲ್ಲಿ ಬಳಸುವ ಭಾಷೆ ಬೇರೆಯದ್ದಾದರೇನು, ನಮ್ಮ ಭಾಷೆಯ ನಂಟು ಬಿಟ್ಟಿಲ್ಲ! ಸೂಕ್ಷ್ಮ ರೇಖೆಯಂತಿರುವ ಈ "ಭಾಷೆ" ಎಂಬ ಬಂಧ ಬೇರೆ ಬೇರೆ ಆಸಕ್ತಿ, ಬೇರೆ ಬೇರೆ ಅಭಿಪ್ರಾಯಗಳ ಬುತ್ತಿಯನ್ನು ಕಟ್ಟಿ ತರುವ ನಮ್ಮನ್ನೆಲ್ಲ ಅದು ಹೇಗೆ ಹಿಡಿದಿಟ್ಟಿದೆ ಎಂಬುದು ಒಮ್ಮೊಮ್ಮೆ ಆಶ್ಚರ್ಯ ಹುಟ್ಟಿಸುತ್ತದೆ.
ಕಾರ್ಯಕ್ರಮದ ದಿನದಂದು ಕಂಡುಬಂದ ಮುಖಗಳು ಸಂಖ್ಯೆಯ ಲೆಕ್ಕದಲ್ಲಿ ನಮಗೆ ಕೊಂಚ ಬೇಸರ ಮೂಡಿಸಿದರೂ, ಆ ದಿನ "ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ"ಯ ಸುತ್ತ ಒಂದು ಉತ್ತಮ ಚರ್ಚೆ ನಡೆದದ್ದು ಖುಷಿ ಕೊಟ್ಟಿತು. ಉದ್ದೇಶ ಇದ್ದದ್ದು ಹೀಗೆ ಬರೆಯಲು ಇಂಟರ್ನೆಟ್ ಬಳಸುವುದು ಹೇಗೆ? ಮತ್ತು ತದನಂತರ ಇಂಟರ್ನೆಟ್ಟಿನಿಂದ ಹೊರಗೆ, ಇಂಟರ್ನೆಟ್ ವ್ಯಾಪ್ತಿಯಿಲ್ಲದೆಡೆಗೆ ಅದನ್ನು ವಿಸ್ತರಿಸುವುದು ಹೇಗೆ ಎನ್ನುವುದರ ಸುತ್ತ. ಚರ್ಚೆ ನಡೆದದ್ದು ಭಾನುವಾರ ೨೯, ೨೦೦೯, ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ, ಕನ್ನಿಂಗ್ಹಾಮ್ ರೋಡಿನಲ್ಲಿ.

ಅಂದು ನಾವು ಕನ್ನಿಂಗ್ಹಾಮ್ ರೋಡಿಗೆ ಹೊರಟು ನಿಂತಾಗ ನಮಗದು 'ಮತ್ತೊಂದು ಭಾನುವಾರ'. ಆದರೂ ಎಷ್ಟು ಜನ ಬರುತ್ತಾರೋ, ಯಾರು ಯಾರು ಬರುವರು ಎಂಬ ಕುತೂಹಲ ನಮಗೆ! ನಾವುಗಳು ಎಲ್ಲರಿಗೂ ಆಮಂತ್ರಣ ಕಳುಹಿಸಿದ್ದೇ ಕೊಂಚ ತಡವಾಗಿ! ಕಾರ್ಯಕ್ರಮದ ಬಗ್ಗೆ ತಿಳಿಸಲು ಒಂದು ವಾರ ಕೂಡ ಇರಲಿಲ್ಲ. ಅದಕ್ಕೆ ಸೇರಿಕೊಂಡಂತೆ ಮೂರು ದಿನ ರಜೆ ಬೇರೆ - ಯುಗಾದಿ, ಶನಿವಾರ ಮತ್ತು ಭಾನುವಾರ!

ಆದರೆ ಆ ಭಾನುವಾರ ವಿಶೇಷ ದಿನವೆನಿಸಿದ್ದು ಹೌದು. ನಮ್ಮ ನೆಚ್ಚಿನ ವಿಷಯಗಳು - ತಂತ್ರಜ್ಞಾನ, ಕನ್ನಡ ಇವುಗಳೊಡನೆ - ಅಂತರ್ಜಾಲ ಕೂಡ ಬೆರೆತದ್ದಲ್ಲದೆ ಅವುಗಳ ಕುರಿತು ಉತ್ತಮ ಚರ್ಚೆ ನಡೆದದ್ದು ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಾಗಿ ಉಳಿಯುವ ನಿಮಿಷಗಳು.  ಮುಂದೆ ಓದಿ »

ಆಲದ ಮರ ಹೇಗೆ ಮಾವಿನ ತೋಟವನ್ನು ಹಾಳು ಮಾಡುವುದು - ವಿಜ್ನಾನ

ಇದೂ ಕೂಡ ವಯ್‌ಜ್ನಾನಿಕ ಬರಹವೇ.

ನಮ್ಮ ಕನ್ನಡ ನಾಡು ಮಾವು ಹಣ್ಣಿಗೆ ಬಲು ಹೆಸರುವಾಸಿ. ಮಾವನ್ನು ಸಂಸ್ಕೃತದಲ್ಲಿ ಚೂತ, ಆಮ್ರ ಹೀಗೆ ಮುಂತಾದ ಹೆಸರಿಂದ ಕರೆಯುವರು. ಇಂಗ್ಲಿಶಿನ ಮ್ಯಾಂಗೋ ದ್ರಾವಿಡ ಮೂಲದ ಮಾಮ್ ಇಂದ ಬಂದಿದೆ ಎಂದೇ ನಂಬಿಕೆ. ನಮ್ಮ ಪಂಪನನ್ನೋ, ರನ್ನನನ್ನೋ ಚೂತವನ ಚಯ್‌ತ್ರ ಎಂದು ಕರೆಯುವರಲ್ಲವೇ.  ಮುಂದೆ ಓದಿ »

ಆಲದ ಮರದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ

ಇದು ಒಂದು ವಿಜ್ಞಾನದ ಬರಹ.

ಆಲ ಎಂಬುದು ಅಂಜೂರದ ಜಾತಿಗೆ ಸೇರಿದುದು. ಇದೊಂದು ಎಪೀಪೈಟ್. ಎಪೀಪೈಟ್ ಅಂದರೆ ಬೇರೊಂದು ಜೀವಿಯ ಮೇಲೆ( ಸಾಮಾನ್ಯ ಮರದ ಮೇಲೆ ) ಮೊಳಕೆಯೊಡೆದು ಅದರ ಆಧಾರದಲ್ಲೇ ಬೆಳೆಯುವಂತಹದ್ದು.  ಮುಂದೆ ಓದಿ »

ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...!

ದ್ಯುತಿ ಸಂಶ್ಲೇಷಣೆ ಕ್ರಿಯೆ

ದ್ಯುತಿ ಸಂಶ್ಲೇಷಣೆ ಕ್ರಿಯೆ ಎಂದರೇನು?

"ಸಸ್ಯಗಳು ಮಣ್ಣಿನಿಂದ ಖನಿಜಾಂಶವನ್ನು ಮತ್ತು ನೀರನ್ನು ಹೀರಿಕೊಂಡು...ಸೂರ್ಯನ ಬೆಳಕನ್ನು ಉಪಯೋಗಿಸಿಕೊಂಡು, ಪತ್ರಹರಿತ್ತಿನ ಸಹಾಯದಿಂದ ತಮ್ಮ ಆಹಾರವನ್ನು ತಯಾರಿಸಿಕೊಳ್ಳುವ ಕ್ರಿಯೆಯನ್ನ ದ್ಯುತಿ ಸಂಶ್ಲೇಷಣೆ ಕ್ರಿಯೆಯೆನ್ನುವರು."

ಇದು ಆರೇಳನೇ ತರಗತಿಯಲ್ಲಿ ಕಲಿತ ಉತ್ತರ . :)

ಹೆಚ್ಚಿನ ವಿವರಗಳು: http://en.wikipedia.org/wiki/Photosynthesis

'ದ್ಯುತಿ ಸಂಶ್ಲೇಷಣೆ' ಪದ ಕನ್ನಡದ್ದಲ್ವಂತೆ, ಸಂಸ್ಕೃತದಿಂದ ಎರವಲಾಗಿ ಪಡೆದ ಪದ!  ಮುಂದೆ ಓದಿ »

Syndicate content