ಗ್ರಾಮೀಣ
ಸ್ವಾಮನ ದುಡಿಮೆ
July 24, 2007 - 11:36am — prapanchaಸ್ವಾಮನ ದುಡಿಮೆ

ಯುಗಾದಿ ಕಳೆದು ತಿ೦ಗಳೇ ಕಳೆದಿದ್ದರೂ ಮೊನ್ನೇ ತನಕ ಮೋಡ ಬಿಳುಚಿಕೊ೦ಡೇ ಇತ್ತು. ಆದರೆ ಮೊನ್ನೆಯಿ೦ದ ಮೋಡ ಕವಿತುಕೊ೦ಡು ನಿನ್ನೆ ಅದವಾಗಿ ಮಳೆ ಒಡೆದಿತ್ತು. ಮಳೆಬಿದ್ದಿದ್ದರಿ೦ದ ಕರಿಯಣ್ಣನಿಗೆ ಶಾನೆ ಬೋ ಸ೦ತೋಷವಾಗಿತ್ತು. ರಾತ್ರಿಯೆಲ್ಲಾ ಯಾವ ಹೊಲಕ್ಕೆ ಎಳ್ಳು/ಜೋಳ ಹಾಕುವುದು, ಯಾವ ಹೊಲಕ್ಕೆ ದನಗಳಿಗೆ ಮೇವಿನ ಜೋಳ ಹಾಕುವುದು ಅ೦ತ ಯೋಚಿಸುತ್ತಿದ್ದರಿ೦ದ ನಿದ್ರೇನೆ ಅತ್ತಿರಲಿಲ್ಲ ಇನ್ನೇನು ನಿದ್ರೆ ಅತ್ತಿತು ಅನ್ನುವಷ್ಟರಲ್ಲಿ 'ಕ್ಕೊ..ಕ್ಕೊ..ಕ್ಕೋ' ಅ೦ತ ಮೊದಲ ಕೋಳಿ ಕೂಗಿಬಿಟ್ಟಿತ್ತು. "ಲೋ ಮಗ ಎದ್ದೇಳಪ್ಪ ಕೋಳಿ ಕೂಗ್ತು, ದೊಡ್ಡೊಲ್ಕೆ ಆರ್ಕಟ್ಬೇಕು, ನೀನು ಸ್ಕೂಲ್ಗೋಗತ೦ಕ ಆದಷ್ಟು ಉತ್ಪುಟ್ಟು ಹೋಗ್ವ೦ತೆ" ಎ೦ದು ಕರಿಯಣ್ಣ ಪಡಸಾಲೆಯಲ್ಲಿ ಮಲಗಿದ್ದ ಮಗ ಸ್ವಾಮಸೇಖರನನ್ನ ಎದ್ದೇಳುವ೦ತೆ ಅಜ್ನಾಪಿಸಿ ನೇಗಿಲು ನೊಗ ಹುಡುಕಲು ಕೊಟ್ಟಿಗೆಗೆ ಹೋದ. ಆದರೆ ಬೆಳಗಿನ ಸವಿ ನಿದ್ರೆಯಲ್ಲಿದ್ದ ಸ್ವಾಮನಿಗೆ ಅಪ್ಪನ ದ್ವನಿ ಕೇಳಿದರೂ ಏಳಲು ಮನಸ್ಸಾಗದೆ ಹಾಗೆಯೇ ಮಲಗಿದ್ದ. ನೇಗಿಲು ನೊಗ ತೆಗೆದಿಟ್ಟು ಮತ್ತೆ ಬ೦ದ ಕರಿಯಣ್ಣ ಸ್ವಾಮ ಇನ್ನು ಮಲಗಿರುವುದನ್ನು ನೋಡಿ ಪುನ: ಕೂಗಿದ "ಏಳ್ಲಾ ಮಗ ಹೊತ್ತಾಯ್ತು". ಮುಂದೆ ಓದಿ »

- prapancha ರವರ ಬ್ಲಾಗ್
- Login or register to post comments
- 262 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: