ಅಂದಂದು
ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ!
January 4, 2008 - 4:31am — hamsanandiನಾನು ಚಿಕ್ಕವನಾಗಿದ್ದಾಗ ನಮ್ಮೂರಿನ ಜಟ್ಕಾ ಗಾಡಿಗಳಲ್ಲಿ, ಅಥವ ಆಟೋ ರಿಕ್ಷಾಗಳಲ್ಲಿ ಈ ರೀತಿ ಸಿನೆಮಾ ಜಾಹೀರಾತು ಕೇಳಿಬರ್ತಿತ್ತು. ಈಗ್ಲೂ ಈ ಪರಿಪಾಠ ಇದ್ಯೋ ಇಲ್ವೋ ಗೊತ್ತಿಲ್ಲ. ಮುಂದೆ ಓದಿ »

- hamsanandi ರವರ ಬ್ಲಾಗ್
- Login or register to post comments
- 254 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
(ವರ್ಷದ) ಕೊನೆಯ ಕೊಸರು
December 31, 2007 - 10:20pm — hamsanandiಮೊಸರು ಕೊಂಡಾಗ ಕೊನೆಯಲ್ಲಿ ಕೊಸರು ಕೊಡೋ ರೂಢಿ ಇತ್ತು. ನಂದಿನಿ - ಆವಿನ್-ನೀಲ್ಗಿರೀಸ್ ಮೊದಲಾದ ಪ್ಯಾಕೆಟ್ ಹಾಲು ಮೊಸರುಗಳು ಬಂದು, ಕೊಸರು ಅನ್ನೋದು ಏನು ಅನ್ನೊದನ್ನೇ ಮರೆಯೋ ಹಾಗೆ ಮಾಡ್ಬಿಟ್ಟಿವೆ. ಈಚೀಚೆಗೆ, ಈ ಕೊಸರಿಗೆ ಅಡಿಟಿಪ್ಪಣಿ, ಅನ್ನೋ ಹೊಸ ಅರ್ಥ ಬಂದು ಸ್ವಲ್ಪ ಅದು ಕೆಲವೆಡೆಲ ನಲಿದಾಡ್ತಿದೆ ಅನ್ನಿ. ವರ್ಷದ ಕೊನೆಯ ಈ ದಿವಸ ಏನಾದ್ರೂ ಬರೀಬೇಕು ಅಂದ್ರೆ, ಸರಕು-ಸಮಯು ಎರಡೂ ಇರ್ಬೇಕಲ್ವ? ಇಲ್ದೇ ಇದ್ರೆ? ತೊಂದ್ರೆ ಏನಿಲ್ಲ. ಮಿಕ್ಕಿದ್-ಹಕ್ಕಿದ್ದೆಲ್ಲ ಅಕ್ಕಮ್ಮನ ಪಾಲು ಅನ್ನೋ ಗಾದೆ ಹಾಗೆ, ಏನಾದ್ರೂ ಉಳ್ದಿದೆಯಾ ನೋಡ್ಬೇಕು. ಅಷ್ಟೆ.
ಅಕ್ಕಮ್ಮ ಹಾಗಿರ್ಲಿ. ಈ ೨೦೦೭ ನೇ ವರ್ಷ ಮುಗಿಯೋ ಈ ದಿವಸ ಒಂದು ವಿಷಯ ಹೇಳ್ಬಿಡ್ತೀನಿ. ನಮ್ಮಲ್ಲಿ ಹಲವಾರು ಪಂಚಾಂಗಗಳಿವೆ (calendar). ಸೌರಮಾನ -ಚಾಂದ್ರಮಾನ-ಮುಸ್ಲಿಮ್ - ಚೈನೀಸ್ ಅಂತ. ಎಲ್ಲಾ ಪಂಚಾಂಗಗಳೂ ಆಕಾಶದ್ ಜೊತೆ ಒಂದಲ್ಲ ಒಂದ್ರೀತಿ ತಾಳೆ ಹಾಕ್ಬಿಟ್ಟೇ ಹೊಸ ವರ್ಷ ಶುರು ಮಾಡತ್ತ್ವೆ. ಆದ್ರೆ, ಈ ಜನವರಿ ಒಂದಕ್ಕೆ ಶುರುವಾಗೋ ಈ ಗ್ರಿಗೋರಿಯನ್ ಪಂಚಾಂಗ ಮಾತ್ರ, ಆ ತರಹ ಯಾವ ಕಟ್ಟೂ ಇಲ್ದೆ, ಸುಮ್ಮನೆ ಯಾವ್ದೋ ಒಂದು ದಿನದಿಂದ ಶುರುವಾಗಿಬಿಡತ್ತೆ ಹಾಳಾದ್ದು! ಇಲ್ದೇ ಇದ್ರೆ, ಹತ್ತನೆ ತಿಂಗ್ಳು ಅನ್ನೋ ಅರ್ಥ ಡಿಸೆಂಬರ್ ಅನ್ನೋ ಹೆಸರಲ್ಲೇ ಬರೋವಾಗ, ಅದು ಮುಗಿದ್ಮೇಲೆ ಬರೋ ಜನವರಿ ಮೊದಲ್ ತಿಂಗ್ಳಾಗಕ್ಕೆ ಹೇಗಾಗ್ತಿತ್ತು ಹೇಳಿ? ಮುಂದೆ ಓದಿ »

ಒಂದು ಅರ್ಜಿ
July 31, 2007 - 6:43pm — anivaasiಯಾವುದೂ ಪ್ರತೀಕವಾಗಲು ಒಪ್ಪುತ್ತಿಲ್ಲ. ಮುಂದೆ ತೆರೆದುಕೊಳ್ಳುತ್ತಿರುವ ಹಾದಿ. ಹಿಂದೆ ಮುಚ್ಚಿಕೊಳ್ಳುತ್ತಿರುವ ಹೆಜ್ಜೆ ಗುರುತು. ರಸ್ತೆ ಪಕ್ಕದ ಮರದ ಹಳದಿ ಎಲೆಗಳು. ದೂರದ ಬೆಟ್ಟದ ಮೈಯೆಲ್ಲಾ ತುಂಬಿಕೊಂಡಿರುವ ಕುರಚಲು ಗಿಡಗಳು. ಯಾವುದೂ ಪ್ರತೀಕವಾಗಲು ಒಪ್ಪುತ್ತಿಲ್ಲ. ಒಪ್ಪಲೇ ಬೇಕೆಂದು ಒತ್ತಾಯ ಮಾಡಲಾರೆ. ಆದರೂ, ಪ್ರತೀಕವಾದರೆ ಎಲ್ಲಕ್ಕೂ ಹೆಚ್ಚು ಅರ್ಥಬರುತ್ತದೆ ಎಂದು ನನ್ನ ಮನಸ್ಸಿನಾಳದ ಆಸೆ.
ಪಕ್ಕದಲ್ಲೇ ಡೊಂಕು ಬಾಲ ಆಡಿಸುತ್ತಿದ್ದ ನಾಯಿ ನನ್ನ ಆಸೆ ಗೊತ್ತಾಗಿ ಹಂಗಿಸುವಂತೆ ಅಂಡು ತಿರುಗಿಸಿ ಹೊರಟು ಹೋಯಿತು. ಅದು ಎಚ್ಚರಿಕೆಯಿಂದ ತುಳಿಯದೇ ಇಟ್ಟ ಕಾಲ ನಡುವೆ ಹೊರಟ ಇರುವೆ ಸಾಲು. ಅದರ ಅಡಿಯ ಗಾರೆಯ ಮೇಲೆ ಇನ್ನೂ ಹಸಿಯಿದ್ದಾಗ ತುಂಟಾಟದಲ್ಲಿ ಮಾಡಿದ ಯಾರದೋ ಅಂಗೈ ಗುರುತು. ಎಲ್ಲಕ್ಕೂ ನನ್ನ ಆಸೆ ಗೊತ್ತಾಗಿ ಪಕಪಕ ನಗುತ್ತಿರುವುದು ನನಗೆ ಖಾತ್ರಿಯಾಯಿತು.
ಸರಿ, ಹಾಳಾಗಿ ಹೋಗಲಿ ಅಂದು ಕೊಂಡು ನನ್ನ ಕೈಯಲ್ಲಿ ವಕ್ರವಾಗಿ ಬೆಳೆದಿದ್ದ ಉಗುರನ್ನು ನೋಡಿಕೊಂಡೆ. ಅದರ ನೆರಳು ಇದ್ದಕ್ಕಿದ್ದ ಹಾಗೆ ನೆಲದ ಮೇಲೆ ಬಿದ್ದ ಕಡೆ ಹಳ್ಳವಾಯಿತು ಎಂಬ ಅನುಮಾನ ಬಂತು. ಬಗ್ಗಿ ನೋಡಿದೆ. ನೆರಳು ಬಿದ್ದದ್ದು ಎಲ್ಲಿ ಎಂದು ಗೊಂದಲವಾಗಿ ಸಣ್ಣಗೆ ಸಿಟ್ಟೂ ಬಂತು. ಯಾಕೆ ಯಾವುದರ ಮೇಲೆ ಅನ್ನುವುದಕ್ಕಿಂತ, ಎಷ್ಟು ಹೊತ್ತು ಎಷ್ಟು ಜೋರಾಗಿ ಎಂದು ಕೇಳುವುದು ಸೂಕ್ತ ಎಂದು ಹಲ್ಲು ಕಡಿದೆ.
ಹೆಚ್ಚು ಅರ್ಥ ಬರುವುದಿರಲಿ ಈ ಪ್ರತೀಕದ ಗಲಾಟೆಯಲ್ಲಿ ಇರುವ ಅರ್ಥವೂ ಕಳೆದುಕೊಳ್ಳುವ ಅಪಾಯ ನಿಜವಾಗ ತೊಡಗಿತು. ಕಣ್ಣು ಮುಚ್ಚಿದಾಗ ಆಗುವ ಅನುಭವ ಕತ್ತಲೆಯೇ? ಇದಕ್ಕೆ ಉತ್ತರ ಕಂಡು ಕೊಂಡರೆ ಸಾಕು, ಪ್ರತೀಕಗಳ ಗೋಜಿಗೇ ಹೋಗಬಾರದು. ಬೇಕಾದರೆ ಅವೇ ಬರಲಿ ಎಂದು ಮೊಂಡು ಹಿಡಿದು ಕೂತೆ.

- anivaasi ರವರ ಬ್ಲಾಗ್
- Login or register to post comments
- 319 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: