ಅರಿವನರಿಯದ ಗುರುವು | ಪರಿವನರಿಯದ ಶಿಷ್ಯ |
ಸಂದೆರಡು ವರ್ಗವರಿಯದಿರ್ದುಪದೇಶ |
ಕೊಂದುಕೊಂಡಂತೆ ಸರ್ವಜ್ಞ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಗೂಗಲ್

ಗೂಗಲ್ ಎಂಬ ಗಗನದಲ್ಲ್ಲಿ ಕನ್ನಡಕ್ಕೇಕೆ ಸ್ಥಾನವಿಲ್ಲ?

ಕಳೆದ ವಾರ ಏನ್ ಗುರು ಬ್ಲಾಗಿನಲ್ಲಿ ಗೂಗಲ್ ನ್ಯೂಸ್ ಸಂಬಂಧಪಟ್ಟಂತೆ ಒಂದು ಒಳ್ಳೆ ಲೇಖನ ಮೂಡಿ ಬಂದಿತ್ತು. ಲೇಖನವನ್ನು ಓದಿ, “ಹಿಂದಿ, ತಮಿಳು, ತೆಲುಗು, ಮಲಯಾಳಮ್ ಭಾಷೆಗಳಲ್ಲಿ ಗೂಗಲ್ ನ್ಯೂಸ್ ಈಗಾಗಲೇ ಬಂದಿರುವಾಗ, ದೇಶಕ್ಕೇ ಐ.ಟಿ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಿರುವ ಕನ್ನಡಿಗರ ಭಾಷೆ ಮಾತ್ರ ಗೂಗಲ್ ನ್ಯೂಸ್-ನಲ್ಲಿ ಯಾಕಿಲ್ಲ?” ಎಂದು ಮನಸ್ಸು ಯೋಚಿಸತೊಡಗಿತ್ತು.

ಇದೇ ಪ್ರಶ್ನೆಗೆ ಉತ್ತರ ಹುಡುಕಿ ಹೊರಟಾಗ, ಇಂಟರ್ನೆಟ್-ನಲ್ಲಿ ಸಿಕ್ಕ ಮಾಹಿತಿ:

.          ಏನ್-ಗುರು ಬ್ಲಾಗಿನಲ್ಲಿ ಹೇಳಿದಂತೆ, ಕನ್ನಡ ಲಿಪಿಯನ್ನೇ ಬಳಸಿ ಗೂಗಲ್-ನಲ್ಲಿ ನಡೆಯುವ ಸರ್ಚ್-ಗಳು ದಿನಕ್ಕೆ ಅಬ್ಬಬ್ಬಾ ಅಂದರೆ ೧೦೦೦ ದಷ್ಟಿರಬಹುದಂತೆ. ತಮಿಳು, ತೆಲುಗು, ಹಿಂದಿ ಭಾಷೆಗಳ ಲಿಪಿಯಲ್ಲಿ ನಡೆಯುವ ಸರ್ಚ್-ಗಳು ಕನ್ನಡಕ್ಕೆ ಹೋಲಿಸಿದರೆ ಬಹಳ ಜಾಸ್ತಿ ಇವೆಯಂತೆ.  ಮುಂದೆ ಓದಿ »

ಗೂಗಲ್ ಗಾಗಲ್ಸ್

ಗೂಗಲ್ ಲ್ಯಾಬ್ಸ್ ಎಂದಿನಂತೆ ತನ್ನ ಹೊಸತುಗಳ ಸುರಿಮಳೆಯಲ್ಲಿ ಹೊಸತೊಂದು ಕ್ರಾಂತಿ ಹುಟ್ಟಿಸುವ ತಂತ್ರಜ್ಞಾನ ಹೊರತಂದಿದೆ. ಅದರ ಹೆಸರು 'ಗೂಗಲ್ ಗಾಗಲ್ಸ್'. ಇದನ್ನು ಬಳಸಿ ಇನ್ನು ಮುಂದೆ ನೀವು ಫೋಟೋ ಹೊಡೆದು ಸರ್ಚ್ ಮಾಡಬಹುದು. ಅಥವ ಜಿ ಪಿ ಎಸ್ ಬಳಸಿ ನೀವಿರುವ ಜಾಗದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಸದ್ಯಕ್ಕೆ ಈ ತಂತ್ರಾಂಶ ಗೂಗಲ್ Android ಮೊಬೈಲ್ ಬಳಸುತ್ತಿರುವವರಿಗೆ ಮಾತ್ರ ಲಭ್ಯ. ಅದೂ Android 1.6+ (Donut ಅಥವ Eclair) ಬಳಸುತ್ತಿರುವವರಿಗೆ.

ಗೂಗಲ್ ವಾಯ್ಸ್ ಸರ್ಚ್ ವಿಶ್ವ ಸುತ್ತಿ ನೋಕಿಯಾ ಹುಡುಕಿ, ಚೈನೀಸ್ ಕಲಿತ ಕಥೆ

google-mobile-app-movie-times

ಗೂಗಲ್ ಸರ್ಚ್ ನ ವಾಯ್ಸ್ ಆವೃತ್ತಿ ಇಂಗ್ಲಿಷ್ ಮಾತನಾಡುವವರ ಪ್ರಪಂಚವನ್ನೆಲ್ಲಾ ಸುತ್ತಿ ಎಲ್ಲರ ಮಾತನಾಡುವ ಪರಿಯನ್ನು ಅರಿತು, ಬೆಳೆದು ನಿಂತಿದೆ. ಅಮೇರಿಕಾ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, ಭಾರತ ಹೀಗೆ ಹಲವು ದೇಶಗಳಲ್ಲಿ ಮಾತನಾಡುವ ಇಂಗ್ಲೀಷ್ ಅಸ್ಸೆಂಟ್ ಅನ್ನು ಇದು ಅರ್ಥ ಮಾಡಿಕೊಳ್ಳಬಲ್ಲದು. ಈಗ ಹೊಸ ಸುದ್ದಿ ಹೊರ ಬಿದ್ದಿದೆ. ನೋಕಿಯಾ ಎಸ್ ೬೦ ಮೊಬೈಲ್ ಗೂಗಲ್ ವಾಯ್ಸ್ ಸರ್ಚ್ ಹೊಂದಿದ್ದು, ಮ್ಯಾಂಡ್ರಿನ್ ಚೈನೀಸ್ ಅರ್ಥ ಮಾಡಿಕೊಳ್ಳುತ್ತದಂತೆ. ಗೂಗಲ್ ಬ್ಲಾಗ್ ಈ ವಿಷಯವನ್ನು ಹೊರಹಾಕಿದೆ.

ನೋಕಿಯಾದ ಎಸ್ ೬೦ ಫೋನ್ಗಳು ವಿಶ್ವದಾದ್ಯಂತ ಅತ್ಯಂತ ಪ್ರಸಿದ್ದಿ ಪಡೆದಿವೆ.  ನೀವೇನಾದರೂ ನೋಕಿಯಾ ಎನ್-ಸೀರೀಸ್ ಅಥವಾ ಇ-ಸೀರೀಸ್ ಫೋನ್ ಬಳಸುತ್ತಿದ್ದರೆ, ನೀವೂ ಕೂಡ ಎಸ್-೬೦ ಬಳಸುತ್ತೀರಿ ಎಂದರ್ಥ. ೧೨ ಗುಂಡಿಗಳ ಕೀ-ಪ್ಯಾಡ್ ಹೊಂದಿರುವ ಈ ಫೋನ್ ಗಳು ಕಾಲ್ ಮಾಡ್ಲಿಕ್ಕೆ ಸಮರ್ಥ ಆದ್ರೆ ಟೈಪ್ ಮಾಡ್ಲಿಕ್ಕೆ ಸ್ವಲ್ಪ ಕಷ್ಟ ಅಂತ್ಲೇ ಹೇಳಬಹುದು. ಅದರಿಂದಲೇ ಗ್ರಾಹಕರ ಆಗ್ರಹದ ಮೇರೆಗೆ ಗೂಗಲ್ ಸರ್ಚ್ ಅನ್ನು ವಾಯ್ಸ್ ಅಂದ್ರೆ ಧ್ವನಿಯ ಮೂಲಕ ಕೆಲಸ ಮಾಡುವಂತೆ ಮಾಡ್ಲಿಕ್ಕೆ ಆ ಒಂದು ಹೊಸ ತಂತ್ರಾಂಶವನ್ನು ತನ್ನ ಫೋನ್ ನಲ್ಲಿ ಅಳವಡಿಸಲು ನೋಕಿಯಾ ಶ್ರಮಪಡುತ್ತಿದೆ.  ಮುಂದೆ ಓದಿ »

ಗೂಗಲ್ ಇಲ್ಲದ ಸಮಯ

ಗೂಗಲ್ ಒಮ್ಮೆ ಒಂದು ವೆಬ್ಸೈಟಿನಲ್ಲಿ ಕಾಣುವ text box ಅಷ್ಟೇ ಆಗಿತ್ತು ನಮಗೆ. ಅದರಲ್ಲಿ ಟೈಪಿಸಿ ಕ್ಲಿಕ್ ಮಾಡಿದರೆ ಒಂದಷ್ಟು ಮಾಹಿತಿ ಹುಡುಕಿಕೊಡುತ್ತದೆ ಎಂಬುದು ಮನಸ್ಸಿನಲ್ಲಿರುತ್ತಿತ್ತು. ಆದರೆ ದಿನಕಳೆದಂತೆ ಗೂಗಲ್ ನಮ್ಮೆಲ್ಲರ ನಿತ್ಯ ಕಂಪ್ಯೂಟರ್ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಗೂಗಲ್ ಇಲ್ಲದೆ ಅಂತರ್ಜಾಲದ ಸ್ಥಿತಿ ಊಹಿಸಲೂ ಸಾಧ್ಯವಿರಲಾರದು.  ಮುಂದೆ ಓದಿ »

ಗೂಗಲ್ ನಲ್ಲಿ ತಪ್ಪು ತಪ್ಪಾದ ಕನ್ನಡ

ಸಮುದಾಯ ಅನುವಾದ ವ್ಯವಸ್ಥೆಯನ್ನು ಬಳಸುತ್ತಿರುವ ಗೂಗಲ್ ಕನ್ನಡ ಅನುವಾದದಲ್ಲಿ ಹಲವು ತಪ್ಪುಗಳು ಗಮನಕ್ಕೆ ಬರುವುದು (ಕೆಳಗಿನ ಚಿತ್ರ ನೋಡಿ). ಗೂಗಲ್ ಬಹುಶಃ ಅನುವಾದಗಳನ್ನು ಜನರ ಬಳಕೆಗೆ ತೆರವುಗೊಳಿಸುವ ಮೊದಲು ಅದನ್ನು ಪರಿಷ್ಕರಿಸರಿಸುವತ್ತ ಗಮನ ಹರಿಸಿದರೆ ಈ ತಪ್ಪುಗಳು ಆಗಲಿಕ್ಕಿಲ್ಲ. ಬ್ಲಾಗ್ ಇತ್ಯಾದಿಗಳನ್ನು ಬರೆದು ತಮ್ಮ ಭಾಷೆಯನ್ನು ಬಳಸಿ ಗೂಗಲ್ ಜೊತೆಗಿನ "ಸಂಭಂದ"ವನ್ನು ಹೆಚ್ಚಿಸಿಕೊಳ್ಳುತ್ತಿರುವ ಕನ್ನಡಿಗರು ನಾವುಗಳು ಗೂಗಲ್ ಕಂಪೆನಿಗೆ ಒಂದು ಸಂದೇಶ ಕಳುಹಿಸೋಣವೆ ಈ ಬಗ್ಗೆ? 

 ಮುಂದೆ ಓದಿ »

"ಗೂಗಲ್ ಅನಲ್ಯಾಟಿಕ್ಸ್" ಒಂದು ವಿಶೇಷ ಅನುಭವ

ಸಾಮಾನ್ಯವಾಗಿ ಕೆಲವರು ತಮ್ಮ ಜಾಲತಾಣಕ್ಕೆ ಎಷ್ಟು ಜನ ಬರುತ್ತಾರೆ ಎಂಬ ಮಾಹಿತಿಯನ್ನು ಪಡೆಯಲು ಹಿಟ್ ಕೌಂಟರ್ (Hit Counter) ಅನ್ನು ಅಳವಡಿಸುತ್ತಾರೆ.  ಮುಂದೆ ಓದಿ »

Site blocked? Try google Cache

ಎಷ್ಟೊಂದು ಸಲ, ಆಫೀಸ್‌ನಲ್ಲಿರುವಾಗ ಯಾವುದೋ ಒಂದು ವೆಬ್ ಸೈಟ್‌ಗೆ ಹೋಗಬೇಕೆಂದನಿಸಿದಾಗ, ಅದನ್ನು block ಮಾಡಿರುತ್ತಾರೆ. ಆಗ ಈ workaround ಪ್ರಯತ್ನಿಸಿ ನೋಡಿ  ಮುಂದೆ ಓದಿ »

ಆದಾಯ ತೆರಿಗೆ ತಾಣದಲ್ಲಿ ಟ್ರೋಜನ್

ನನ್ನ ಬಳಿ ಫೈರ್ಫಾಕ್ಸ್ 3 ಇದೆ. ಈಗ ತಾನೆ ಗೂಗಲ್ ತಾಣಕ್ಕೆ ಭೇಟಿ ನೀಡಿ 'income tax department government of india' ಎಂದು ಹುಡುಕಿದೆ. ಬಂದ ಫಲಿತಾಂಶ ನೋಡಿ ತಲೆ ಧಿಮ್ ಎಂತು. ನಮ್ಮ ಆದಾಯ ತೆರಿಗೆ ತಾಣದಲ್ಲಿ ಸಂಶಯಾಸ್ಪದ ಚಟುವಟಿಕೆಗಳು ಕಂಡು ಬಂದಿವೆಯಂತೆ. ಅದು ಅನೇಕ ಟ್ರೋಜನ್ ಗಳನ್ನು ಭೇಟಿ ನೀಡಿದ ಕಂಪ್ಯೂಟರಗಳಿಗೆ ಕಳಿಸಿದೆಯಂತೆ. ಇದು ನಿಜವಾಗಿಯೂ ಆತಂಕಕಾರಿ ವಿಷಯವೇ?  ಮುಂದೆ ಓದಿ »

ಇಷ್ಟೊಂದು ಕನ್ನಡ ಬ್ಲಾಗುಗಳನ್ನು ದಿನಾಲೂ ಓದುವುದು ಹೇಗೆ? (ಗೂಗಲ್ ರೀಡರ್)

ನಾನೊಬ್ಬ ಡಾಕ್ಟರ್, ಐಟಿ ಅಲ್ಲ. ನನ್ನ ಗೆಳೆಯನೊಬ್ಬ ಕೇಳುತ್ತಿದ್ದ ಈ ಮೇಲಿನ ಪ್ರಶ್ನೆಗೆ ನಾನು ಬ್ಲಾಗಿಸಿದರೆ ಬೇರೆಯವರಿಗೂ ಉಪಯೋಗವಾದೀತು ಎಂದು ಬ್ಲಾಗಿಸುತ್ತಿದ್ದೇನೆ. ನನಗೆ ಗೊತ್ತು, ಬ್ಲಾಗಿಸುವವರಲ್ಲಿ ತುಂಬಾ ಜನ ಐಟಿಯವರೇ. ಅವರಿಗೇನೂ ಈ ವಿಷಯ ಹೊಸದಲ್ಲ.  ಮುಂದೆ ಓದಿ »

Syndicate content