ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಅಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ ।
ಅಭಿಶಾಪ ನರಕುಲಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕಾವ್ಯ

ಕಾವ್ಯ

 

ನಾಲ್ಕು ನಿರ್ಜೀವ

ಸಾಲೊಳಗೆ

ಕಂಡಂತಾಯಿತು

ಬೆಳಕು

ಕಂಡೇ ಬಿಟ್ಟಿತು  ಮುಂದೆ ಓದಿ »

ಬರೆದು ತಿಳಿಸುತಿಹೆ ನಾನು

ಬರೆಯಲೆತ್ನಿಸುತಿಹೆನೊಂದು ಪತ್ರ

ಒಂದೊಂದೇ ಪದಗಳ ಪೋಣಿಸಿ

ಪದ ಸಾಲುಗಳ ಎಣಿಸಿ

ನೀನದರ ಬೆಲೆ ಮಾತ್ರ ಕಟ್ಟದಿರು...

 

ಎಷ್ಟೋ ವಿಷಯಗಳ ನಾನು

ನುಡಿದು ವಿವರಿಸಲಾರೆ. ಅದಕೆ,

ಪದಪುಂಜಗಳ ಜೊತೆಗಾಟ 

ಮಧ್ಯದಲಿ ವಿಷಯ ಪ್ರಸ್ತಾಪ...

 

 

ಏಳು ಎದ್ದೇಳು ಯಾತ್ರಿಕನೆ

ಬೆಳಗೆದ್ದು ಮುಖತೊಳೆದು
ಸೂರ್ಯನಿಗೆ ಸಮಸ್ಕಾರವೀಯ್ದು
ಸುಪ್ರಭಾತವ ಕೇಳಿ
ಹೊರಡು ನೀ ಮುಂದಕ್ಕೆ
ನಿನ್ನ ಜೀವನ ಯಾತ್ರೆಯಲಿ

ವನಸಿರಿ

ರವಿ. ಅನಿಲನ - ಮರಗಳ ಮಧ್ಯದಿಂದ ಇಣುಕುತ್ತಿರುವ ರವಿ - ಚಿತ್ರದ ಬಗ್ಗೆ ಬರೆದದ್ದು.

ಬಂಡೀಪುರದ ಗೊಂಡಾರಣ್ಯದಲಿ
ರವಿಯ ರಂಗಿನಾಟ!
ಕಪ್ಪುಬಿಳುಪಿನ ತೆರೆಯ ಸರಿಸೆ, ಕಾಣುವುದು
ಚಿತ್ರವಿಚಿತ್ರ ಲೋಕ!  ಮುಂದೆ ಓದಿ »

ಕಾವ್ಯ - 'ಮರೆತ ಸಾಲು'ಗಳಿಂದ ಆಯ್ದ ಸಾಲುಗಳು

ಎಚ್. ಎಸ್. ವೆಂಕಟೇಶಮೂರ್ತಿ ಯವರು ಅನೇಕ ಒಳ್ಳೆಯ ಕವನಗಳನ್ನು ಭಾವಗೀತಗಳನ್ನು ಕೊಟ್ಟಿದ್ದಾರೆ . 'ತೂಗುಮಂಚ' ಸೀಡೀ ಅಥವಾ ಕ್ಯಾಸೆಟ್ ಕೇಳಿದ್ದೀರ ತಾನೇ ? ಇಲ್ವೇ , ನಿಮ್ಮ ಜನ್ಮ ವ್ಯರ್ಥ ಅಂತ ಯಾರೋ ರವಿಬೆಳಗೆರೆಗೆ ಹೇಳಿದ್ರಂತೆ ! ಅವರ ' ಮರೆತ ಸಾಲುಗಳು' ಕವನ ಸಂಕಲನ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಸಿಕ್ತು .  ಮುಂದೆ ಓದಿ »

ನಗುತ್ತಿರಲಿ ಮನಸು

ನಗುತಿರಲಿ ಮನಸು
ಬಾರದಿರಲಿ ಮುನಿಸು
ನಗುತಿರುವುದೇ ಸೊಗಸು
ಕನಸ ಕಾಣಲಿ ಮನಸು
ನನಸಾಗಲಿ ಕನಸು
ಸಿಹಿ ಕನಸು......

ಪ್ರೀತಿಯಿಂದ ನಿಮ್ಮ ಗೆಳತಿ
ಕಾವ್ಯಾ.......... ;)

ಒಲವ ರಂಗವಲ್ಲಿ...

p3.jpg

ಒಲವೆಂಬ ರಂಗವಲ್ಲಿ ಹಾಕಿದೆ ಇಲ್ಲಿ;

ಆಸೆಯ ಕಾಮನಬಿಲ್ಲನು ಚೆಲ್ಲಿ ;

ಹೂ ನಗೆಯ ಕವಿತೆ

ಬರೆದ ನಲ್ಲೆ ;

ಮುದ್ದು ಮಲ್ಲೆ.

ಸೌಂದರ್ಯ ಜಗದ ನಾರಿ ;

ಸವಿ ಮಾತಿನ ಪರಿಮಳ ಬೀರಿ;

ಸಗ್ಗದ ಸಿರಿ ಎಡೆಗೆ ಬರೆದೆ ದಾರಿ;

ಕುಡಿ ನೋಟದಿ ಮಾಡಿ

ಮೋಹ ಮಾಯೆ..!

ನಾರಿ ನೀ ಚೆಲುವಿನ, ನಲಿವಿನ

ನೆನಪಿನ, ನವಿಲು ಗರಿ.

- ಸುರೇಶ್ ಬಾಬು ( ಗೋಸುಬಾ )

ಏನೇ ಆಗಿದ್ರೂ ಬಂದ...

ಪೆಟ್ರೋಲ್ ಬೆಲೆಯೇರಿದ್ರೂ...
ಸಿಕ್ಕಾಪಟ್ಟೆ ಟ್ರಾಫಿಕ್ ಜ್ಯಾಮಿದ್ರೂ...
ಅತಿವೃಷ್ಟಿ-ಅನಾವೃಷ್ಟಿ ಕಾಲಿಗೆ ತೊಡರಿಕೊಂಡಿದ್ರೂ...
ಭಷ್ಟಾಚಾರ-ಭಯೋತ್ಪಾದನೆಯ ಕಾರ್ಮುಗಿಲು
ದಟ್ಟನೆ ಆವರಿಸಿದ್ರೂ...
ಐಟಿ-ಬಿಟಿ ಸೀಟಿ ಹೊಡೆಯುತ್ತಿದ್ರೂ...
ಮನಸ್ಸಿನ ನೆಮ್ಮದಿ ಕಾಣೆಯಾಗಿದ್ರೂ...
ಸ್ಥಿತಿ-ಗತಿಗಳ ಗೊಡವೆಗೆ ಮಣಿಯದೆ
ತಪ್ಪದೆ ಹೊರಬರುವ ಕವನದಂತೆ  ಮುಂದೆ ಓದಿ »

ಪ್ರೀತಿಸಿರೋ...

ಬಿಸಿರಕ್ತವೆಂಬುದನು ಮರೆತು
ಅಹಂಕಾರವೆಂಬ ಕೆಂಪಾಂಬುದಿಯಲಿ
ಮುಳುಗಬೇಡಿರೋ ಯುವಕರೇ...
ಅಂತರಾಳದ ಸದ್ಗುಣವನೇ ತೆರೆಯಿರೋ...ಮೆರೆಯಿರೋ...

ಬಿಸಿರಕ್ತವೆಂಬ ತವಕದಲಿ
ಅನುರಕ್ತತೆಯನು ತೋರದಿರಿ
ನಮ್ಮಯ ಸದ್ಗುಣ ಯುವಕರೇ

ಬಿಸಿರಕ್ತದಲಿ ಹಿಂದೆಸಗಿದ
ಪಾಪವನು ಮತ್ತೆಸಗದಿರಿ
ಮತ್ತೆಸಗಿ ಮರಳಿ ನರಕಕ್ಕೇ ಬೀಳದಿರಿ...
ನಮ್ಮಯ ಸಾಹಸಿ ಯುವಕರೇ...  ಮುಂದೆ ಓದಿ »

ತನುಮನ

ಪ್ರಗತಿ ಪಥದ
ಹೂಸವರುಷ
ತರಲಿ ಹುರುಪು, ಹರುಷ
ಇರಲಿ (ತರಲಿ) ಜೀವನಕೆ
ನವಚೇತನ
ಆಗಿರಲಿ ಪ್ರೀತಿಯ ವೃಂದಾವನ
ನಮ್ಮೆಲ್ಲರ ತನುಮನ

Syndicate content