ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

— ವಿನೋಬಾ ಭಾವೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಜ್ಞಾನವಾಹಿನಿ

ಚೆಲುವು ಇರುವುದೆಲ್ಲಿ?

ಎಲ್ಲಿಹುದು ಸಾಜದಲಿ
ಚೆಲುವಾದ್ದು ಅಲ್ಲದುದು?
ಒಲುಮೆ ಎಲ್ಲಿಹುದದುವೆ
ಚೆಲುವೆಂದು ತೋರುವುದು!

ಮೂಲ ಸಂಸ್ಕೃತ ಶ್ಲೋಕ (ಹಿತೋಪದೇಶದ ಸುಹೃದ್ಭೇದದಿಂದ):

ಕಿಮಪ್ಯಸ್ತಿ ಸ್ವಭಾವೇನ ಕಿಂ ಸುಂದರಮಸುಂದರಮ್
ಯದೇವ ರೋಚತೇ ಯಸ್ಮೈ ತದ್ಭವೇತ್ತಸ್ಯ ಸುಂದರಮ್

-ಹಂಸಾನಂದಿ

 

ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨

ಮೊದಲನೇ ಭಾಗದಿಂದ ಮುಂದುವರೆದಿದೆ .....

ಮೂರು ದಿನದಿಂದ ಅಣ್ಣ ಹೇಳಿದ ವಿಚಾರ ಪುಟಾಣೀಗೆ ಕೊರೀತಾನೇ ಇತ್ತು. ಅಣ್ಣ ಬರೆದ ಹಾಗೇ ತಾನೂ ಚಿತ್ರಗಳನ್ನ ಬರೆದು ಬರೆದು ನೋಡ್ತು. ಆದ್ರೆ ಯಾಕೋ ಬಗೆ ಹರೀಲೇ ಇಲ್ಲ. ಉತ್ತರಕ್ಕೆ ಹೋಗ್ತಾ ಹೋಗ್ತಾ ಉತ್ತರ ಧ್ರುವ ಸಿಕ್ಕತ್ತೆ. ಅಲ್ಲಿ ನಮ್ಮ ದಾಯಾದಿಗಳಿದಾರಂತೆ. ಅಲ್ಲಿ ತುಂಬ ಚಳಿಯಂತೆ ಅನ್ನೋ ವಿಷಯ ಮಾತ್ರ ಮನದಟ್ಟಾಗಿತ್ತು.

ಇವತ್ತು ಕೇಳಿ ಹೇಗಾದ್ರೂ ತಿಳ್ಕೊಳ್ಲೇ ಬೇಕು ಅಂತ ಅಣ್ಣ ಅಣ್ಣನ್ನ ಇವತ್ತು ಮತ್ತೆ ಕೇಳ್ತು.

ಸರಿ. ಅಪ್ಪ ಕರಡಿ ಒಂದು ಚಿತ್ರ ಹಾಕಿ ತೋರಿಸ್ತು ಮೊದ್ಲಿಗೆ.

 

"ನೋಡು ಪುಟ್ಟಾ, ನಾವು ಕೂತ್ಕೊಂಡಾಗ, ನಮಗೆ ಆಕಾಶ ಒಂದು ಕವಿಚಿದ ಬಾಂಡಲೆ ಹಾಗೆ ಕಾಣತ್ತೆ. ಮತ್ತೆ ಅವತ್ತು ಬೆಟ್ಟದ ಮೇಲಿಂದ ನೋಡಿದಾಗ ಆಕಾಶ ಭೂಮಿ ಸೇರೋ ಜಾಗ ನೋಡಿದ್ದು ನೆನಪಿದೆಯಾ? ಈಗ ನೋಡು, ಸೀಗೇ ಗುಡ್ದಲ್ಲಿ, ಅಥವಾ ಮಾಲೇಕಲ್ಲಿನಲ್ಲಿ ಕಾಣೋ ದಿಕ್ಕುಗಳನ್ನು ಹೀಗೆ ತೋರ್ಸಿದೀನಿ ಚಿತ್ರದಲ್ಲಿ. ಗೊತ್ತಾಯ್ತಾ?" ಅಂತು ಅಪ್ಪ.

"ಓಹೋ, ಧ್ರುವ ನಕ್ಷತ್ರದ ಕಡೆಗೆ ಹೋದರೆ ಉತ್ತರ. ಅದಕ್ಕೆ ಎದುರುಗಡೆ ಹೋದರೆ ದಕ್ಷಿಣ. ಹಾಗೇ ದಕ್ಷಿಣದ ಕಡೆಗೆ ನಾನು ನೋಡ್ತಾ ಕೂತಿರೋ ಹಾಗೆ ಬರ್ದಿದೀರಾ ಅಲ್ವ ಅಣ್ಣ ಚಿತ್ರನಾ? ಆಗ ನನ್ ಬಲ್ಗೈ ಪಶ್ಚಿಮ, ಎಡಗೈ ಪೂರ್ವ" ಅಂತು ಪುಟಾಣಿ.  ಮುಂದೆ ಓದಿ »

ಕಣ್ಣಿದ್ದೂ ಕುರುಡನಾಗುವುದು ಹೇಗೆ?

ಇರುವುದೊಂದನೆ ಕಣ್ಣು ಸಾಜದಾ ತಿಳಿವೆಂದು!
ಅರಿತವರ ಒಡನಾಟವೆರಡನೆಯದು!!
ಎರಡು ಇವು ಇರದಾತ ಹುಟ್ಟುಗುರುಡನು ತಾನೆ?
ದಾರಿ ತಪ್ಪಿದರೆ ತಪ್ಪವನದೇನು?

ಸಂಸ್ಕೃತ ಮೂಲ:  ಮುಂದೆ ಓದಿ »

ಹಾಳೂರಿಗುಳಿದವನೇ ...

ಅರಿತವರೇ ಇರದೂರಿನಲಿ
ಗೌರವ ದೊರೆತೀತು ಮಡೆಯನಿಗೂ!
ಮರಗಳೇ ಕಾಣದ ದೇಶದಲಿ
ಹರಳು ಗಿಡವನೇ ಮರವೆಂದಾರು!!

ಸಂಸ್ಕೃತ ಮೂಲ:

ಯತ್ರ ವಿದ್ವದ್ಜನೋ ನಾಸ್ತಿ ಶ್ಲಾಘ್ಯಸ್ತತ್ರಾಲ್ಪಧೀರಪಿ |
ನಿರಸ್ತ ಪಾದಪೇ ದೇಶೇ ಏರಂಡೋಪಿ ದ್ರುಮಾಯತೇ||

-ಹಂಸಾನಂದಿ

 

ಅಳಿಯ, ಅನಿಷ್ಟ ಮತ್ತು ಗ್ರಹಚಾರ!

ಸಂಜೆಯ ಆಗಸ - ೨೦೦೮ರ ಆಗಸ್ಟ್ ಹದಿನೈದರಂದು

"ಜಾಮಾತೋ ದಶಮಗ್ರಹಃ" ಅನ್ನೋ ಮಾತಿದೆ. ಅಂದ್ರೆ, ಅಳಿಯ ಅನ್ನೋನು ಹತ್ತನೇ ಗ್ರಹ ಅಂತ. ಪಾಪ ಯಾರೋ ಅಳಿಯನ ಕಾಟದಿಂದ ಬೆಂದೋರ ಮಾತಿರ್ಬೇಕು ಇದಂತೂ. ಆದ್ರೆ, ಏನು ಕೆಟ್ಟದಾದ್ರೂ, ಅದನ್ನ ’ಗ್ರಹಚಾರ’ - ಅಂದ್ರೆ, ಗ್ರಹಗಳ ಪ್ರಭಾವದಿಂದ ಅಂದುಬಿಡೋದೊಂದು ಕೆಟ್ಟ ರೂಢಿ ನಮ್ಮಲ್ಲಿ. :(  ಮುಂದೆ ಓದಿ »

ಮರದಂತಹ ಮನಸ್ಸು

 

ನೆರೆನಂಬಿದವರಿಗೆ ನೆರಳನ್ನೀಯುತ
ಬಿಸಿಲಲಿ ತಾವೇ ನವೆಯುತಲಿ
ತನಿವಣ್ಣುಗಳನೆಲ್ಲ ಇತರರಿಗೀಯುವ
ಮರಗಳಂತಲ್ಲವೆ ಅಗ್ಗಳರು?

ಸಂಸ್ಕೃತ ಮೂಲ:

ಛಾಯಾಮನ್ಯಸ್ಯ ಕುರ್ವಂತೇ ತಿಷ್ಠಂತಿ ಸ್ವಯಮಾತಪೇ|
ಫಲಾನ್ಯಾಪಿ ಪರಾರ್ಥಾಯ ವೃಕ್ಷಾಃ ಸತ್ಪುರುಷಾಃ ಇವ||

-ಹಂಸಾನಂದಿ

 

 

ಪೂರ್ಣ ಸೂರ್ಯಗ್ರಹಣ- ಚೈನಾದಿಂದ ನೇರ ಪ್ರಸಾರ(ದ ಮುದ್ರಿಕೆ)

ಇವತ್ತಿನ ಗ್ರಹಣದ ನೇರ ಪ್ರಸಾರದ ರೆಕಾರ್ಡಿಂಗ್ ಗಾಗಿ ಕೆಳಗಿನ ಕೊಂಡಿಯನ್ನು ಚಿಟಕಿಸಿ:

http://www.exploratorium.edu/eclipse/2008/index.html

 ಕೃಪೆ: ನಾಸಾ ಗ್ರಹಣ ಪುಟ ಮತ್ತು ಎಕ್ಸ್‍ಪ್ಲೊರೇಟೇರಿಯಮ್

http://sunearthday.gsfc.nasa.gov/2008eclipse/

 

-ಹಂಸಾನಂದಿ

ಅರಿತವರ ತೆರ

ಕಲಿತವರ ದುಡಿಮೆಯನು
ಕಲಿತವರೇ ಬಲ್ಲರು.
ಹೆರದವಳು ಅರಿಯುವಳೆ
ಹೆರಿಗೆ ನೋವನ್ನು?

(ಸಂಸ್ಕೃತದಿಂದ ಅನುವಾದ)

ಮೂಲ ಹೀಗಿದೆ:

ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ
ನ ಹಿ ವಂಧ್ಯಾ ವಿಜಾನಾತಿ ಗುರ್ವೀಂ ಪ್ರಸವವೇದನಾಂ

-ಹಂಸಾನಂದಿ

 

 

Syndicate content