ಸ್ವಾತಂತ್ರ್ಯ ದಿನ
ಸ್ವಾತಂತ್ರ್ಯ ದಿನ, ಸ್ನೇಹಿತನ ನಿಶ್ಚಿತಾರ್ಥ ಹಾಗೂ ಅಸ್ಸೆಂಬಲ್ಡ್ ಕಂಪ್ಯೂಟರ್...
August 18, 2007 - 3:54am — hpnಪುಣ್ಯದಿನದಂದು ಒಂದು ಪುಣ್ಯ ಕಾರ್ಯ (Good deed) ಮಾಡಬೇಕಂತೆ. ಸ್ವಾತಂತ್ರ್ಯ ಏನಿರಬಹುದು, ಅದಕ್ಕೊಂದು ಅರ್ಥವಿದೆಯಾ? ಸ್ವಾತಂತ್ರ್ಯವನ್ನು ಯಾವ ಸ್ವಾತಂತ್ರ್ಯವೆಂದು ನೋಡಬೇಕು, ಸ್ವಾತಂತ್ರ್ಯ ಸಿಕ್ಕು ೬೦ ವರ್ಷಗಳಾದುವೆಂದು ಎಲ್ಲರೂ ಹೇಳುತ್ತಿರುವ ಈಗ ನಾವು ಸ್ವತಂತ್ರರು ಹೌದೆ? ಎಂದೆಲ್ಲ ತಲೆ ಬಿಸಿ ಮಾಡಿಕೊಂಡು ಬೆಳಬೆಳಗ್ಗಿನ ಚಳಿಯನೆದುರಿಸಿ ಸ್ನೇಹಿತನ ನಿಶ್ಚಿತಾರ್ಥ ಅಟೆಂಡ್ ಮಾಡೋದಕ್ಕೆಂದು ಗಾಡಿ ಸ್ಟಾರ್ಟ್ ಮಾಡಿ ಹೊರಟಾಗ ಅವತ್ತು ನನ್ನಿಂದ "ಮಾಡಿಸಲ್ಪಡಲಾಗುವ" ಗುಡ್ ಡೀಡ್ ಬಗ್ಗೆ ನನಗೆ ಖಂಡಿತ ಅರಿವಿರಲಿಲ್ಲ. ದಿನದ ಕೊನೆಗೆ ಮಾತ್ರ ಮತ್ತೊಬ್ಬ ಸ್ನೇಹಿತರ ಸ್ನೇಹಿತರೊಬ್ಬರಿಗೆ ಕಂಪ್ಯೂಟರ್ ಒಂದನ್ನು ಅಸ್ಸೆಂಬಲ್ ಮಾಡಿಸಿಕೊಡುವ ಘನಕಾರ್ಯಕ್ಕೆ ಕೈಹಾಕುವ ಸಾಹಸ ಮಾಡಿದ್ದೆ, ಹಲವು ವರ್ಷಗಳ ನಂತರ ಮತ್ತೊಮ್ಮೆ.
*******
ಬೆಳಗ್ಗಿನ ಜಾವ ರಾತ್ರಿಯಾದ್ದರಿಂದ ನನಗೆ ಬೆಳಗು ಬೆಳಗಿನ ಜಾವದಂತನಿಸಿದ್ದರಲ್ಲಿ ಅಚ್ಚರಿಯಿಲ್ಲ. ಆಕಳಿಸುತ್ತಾ ಗೇರ್ ಹಾಕಿ ನಿಧಾನಗತಿಯಲ್ಲಿ ಸ್ನೇಹಿತ ಮತ್ತವನ ಭಾವೀ ಪತ್ನಿಗೆ ನೀಡಲೆಂದು ಬೊಕೆ ಹುಡುಕಿ ಹೊರಟ ವೇಗ ಯಾವ ಜಟಕಾಗಾಡಿಯನ್ನೂ ನಾಚಿಸುವಂತಿತ್ತು. ಅಲ್ಲಿಲ್ಲಿ ಪಟಾಕಿ ಹೊಡೆದು ಸ್ವತಂತ್ರ ಭಾರತದ ಸಮೃದ್ಧವಾದ ಗುಂಡಿ ಗಟರುಗಳ ಟಾರ್ ರೋಡನ್ನು ಮತ್ತಷ್ಟು ಸ್ವಚ್ಛಗೊಳಿಸುತ್ತಿದ್ದರು, ಬೆಳಬೆಳಿಗ್ಗೆ ಅಲ್ಲಿಲ್ಲಿ ಫ್ರೆಶ್ಶಾದ ಸೆಗಣಿಯನ್ನು ಕಂಡ ರೋಡು ಆಗಲೇ ಸ್ವಚ್ಛವಿಲ್ಲವೇನೋ ಎಂಬಂತೆ. ಅಲ್ಲಲ್ಲಿ ಬೈಕಿನ ತುದಿಗೆ, ಕಾರಿನ ಮುಡಿಗೆ, ಆಟೋ ಬದಿಗೆ ಭಾರತ ಮಾತೆಯ (ಪರಿ)ಸ್ಥಿತಿಯನ್ನು ಸಾರಿ ಹೇಳುವ ಪ್ಲಾಸ್ಟಿಕ್ ಧ್ವಜಗಳು ಕಂಗೊಳಿಸುತ್ತಿದ್ದವು. ಅವರವರ ಟೆರಿಟರಿ ಮಾರ್ಕ್ ಮಾಡುತ್ತಿರುವರೆಂಬಂತೆ ಅಲ್ಯಾವುದೋ ದಾರಿಯಲ್ಲಿರುವ ಸ್ಕೂಲಿಗೆ ಪುಢಾರಿಯೊಬ್ಬನ ಆಗಮನದ ಸಿದ್ಧತೆ ನಡೆದಿತ್ತು. ಅತ್ತಿತ್ತ ಅಂಬಾಸಡರ್ರು ಕಾರುಗಳಲ್ಲಿ ಮಾತ್ರ ತ್ರಿವರ್ಣ ಖಾದಿಯ ಧ್ವಜ ಕಣ್ಸೆಳೆದಿತ್ತು.
ಬೆಂಗಳೂರಲ್ಲಿ ಸ್ವಾತಂತ್ರ್ಯ ನೆತ್ತಿಗೇರಿತ್ತು; ಬೊಕೆ ಮಾತ್ರ ಸಿಗಲಿಲ್ಲ. ಮುಂದೆ ಓದಿ »

- hpn ರವರ ಬ್ಲಾಗ್
- Login or register to post comments
- 390 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: