ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ರಾಮಾಯಣ

ಕೈಗೆಟುಕುವ ದೇವರು

ಕೈಯಳತೆಯಲೇ ಇರುವ ತಾಯಿ-ತಂದೆ-ಗುರುಗಳನುಳಿದು
ಕೈಯಲೆಂದೂ ನಿಲುಕದ ದೈವವೆಂಬುದನೆಂತು ನೆಚ್ಚುವುದು?

ಸಂಸ್ಕೃತ ಮೂಲ (ರಾಮಾಯಣ, ಅಯೋಧ್ಯಾಕಾಂಡ ೩೦-೩೩)

ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ |
ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿರಾಧ್ಯತೇ? ||

-ಹಂಸಾನಂದಿ

ಪು ತಿ ನ ಅವರ "ಶ್ರೀರಾಮ ಪಟ್ಟಾಭಿಷೇಕ"

ಪುತಿನ ಅವರು ಕನ್ನಡದಲ್ಲಿ ಹಲವು ಗೀತನಾಟಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಶ್ರೀರಾಮ ಪಟ್ಟಾಭಿಷೇಕ ಒಂದು.  ಮುಂದೆ ಓದಿ »

ರಾವಣನ ಪುನರ್ಜನ್ಮದ ಕಣಸು

ಇತ್ತೀಚೆಗೆ ಅನೇಕ ’ಸುಧಾ’ಗಳನ್ನು ಇನ್ನೊಮ್ಮೆ ನೋಡಿ , ಬೇಕಾದ ಹಾಳೆ ಹರಿದು ಇಟ್ಟುಕೊಂಡು ( ಬೇಡದ ಹಾಳೆಗಳನ್ನೂ ಹರಿಯಬೇಕಾಗುತ್ತದೆ ; ಆ ವಿಷಯ ಇನ್ನೊಮ್ಮೆ ಬರೆವೆ) ವಿಲೇವಾರಿ ಮಾಡಿದೆ.  ಮುಂದೆ ಓದಿ »

ಪುಸ್ತಕನಿಧಿ - ಆದಿಕವಿ ವಾಲ್ಮೀಕಿ - ಮಾಸ್ತಿಯವರ ಪುಸ್ತಕ

ನಿನ್ನೆ ತಮಸಾನದೀ ತೀರದಲ್ಲಿ ಎಂಬ ಪುಟ್ಟ ಬರಹವನ್ನು ಓದಿರಬಹುದು . ಇದನ್ನು
ಮಾಸ್ತಿ ವೆಂಕಟೇಶ ಅಯಂಗಾರರ ಈ ಪುಸ್ತಕದಲ್ಲಿ ಓದಿದ್ದು .
http://dli.iiit.ac.i...  ಮುಂದೆ ಓದಿ »

'ರಾಮಾಯಣ'ದ ಆಟ ಆಡಿ...

ರಾಮಾಯಣ - ವರ್ಜಿನ್ ಕಾಮಿಕ್ಸ್
ಮಿಶ್ರಿಕೋಟಿಯವರು ಬರೆದಿರುವ ಪುಟ್ಟ ಬರಹ ತಮಸಾ ನದೀ ತೀರದಲ್ಲಿ ಓದಿ ನನಗೆ ಹಲವು ದಿನಗಳ ಹಿಂದೆ ಓದಿದ ಒಂದು ಸುದ್ದಿಯ ನೆನಪಾಯಿತು.

ರಾಮಾಯಣ ಈಗ MMO (Massively Multi-player Online game) ಆಗಿ ಹೊರಬರಲಿದೆಯಂತೆ. MMO ಎಂದರೆ ನೇರ ಅಂತರ್ಜಾಲದಲ್ಲಿ ಹಲವು ಆಟಗಾರರೊಂದಿಗೆ ಆಡಬಹುದಾದ ವಿಡಿಯೋ ಗೇಮ್. ಇದನ್ನು ಹೊರತರುತ್ತಿರುವುದು ಸೋನಿ ಕಂಪೆನಿಯಂತೆ.

ಮಿ. ಇಂಡಿಯ, ಬ್ಯಾಂಡಿಟ್ ಕ್ವೀನ್ ಹಾಗೂ ಎಲಿಝಬೆತ್ ಮುಂತಾದ ಪ್ರಮುಖ ಚಿತ್ರಗಳನ್ನು ನಿರ್ದೇಶಿಸಿದ ಶೇಖರ್ ಕಪೂರ್ ಇದರ ಹಿಂದೆ ಇದ್ದಾರಂತೆ. ಇವರು ಅದರ ಸ್ಕ್ರಿಪ್ಟ್ ಬರೆದವರು. ವರ್ಜಿನ್ ಕಾಮಿಕ್ಸ್ ಸ್ಥಾಪಿಸಿದವರಲ್ಲಿ ಇವರೂ ಒಬ್ಬರು. ವರ್ಜಿನ್ ಕಾಮಿಕ್ಸ್ ಹೋದ ವರುಷ ರಾಮಾಯಣವನ್ನು ಕಾಮಿಕ್ಸ್ ಜಗತ್ತಿಗೆ ಪಾಶ್ಚಿಮಾತ್ಯ ಜಗತ್ತಿಗೆ ಹಿಡಿಸುವ ರೀತಿಯಲ್ಲಿ ಹೊರತಂದದ್ದು ನೆನಪಿಸಿಕೊಳ್ಳಬಹುದು. ಪುಸ್ತಕ ಹಾಗೂ ಕಾಮಿಕ್ ಜಗತ್ತಿನಲ್ಲಿ ಪ್ರಖ್ಯಾತ ಹೆಸರುಗಳಾದ ದೀಪಕ್ ಚೋಪ್ರ ಹಾಗೂ ಅವರ ಮಗ ಗೋಥಮ್ (ಗೌತಮ್) ಚೋಪ್ರ ಕೂಡ ಇದರಲ್ಲಿದ್ದಾರಂತೆ (ಇವರುಗಳೂ ವರ್ಜಿನ್ ಕಾಮಿಕ್ಸ್ ಸ್ಥಾಪಕರು).  ಮುಂದೆ ಓದಿ »

ತಮಸಾ ನದೀ ತೀರದಲ್ಲಿ - ವಾಲ್ಮೀಕಿ

ರಾಮಾಯಣಕ್ಕೆ ಕಾರಣವಾದ ಘಟನೆ ನಿಮಗೆಲ್ಲ ಗೊತ್ತೇ ಇದೆ . ಅದೇ , ಹಕ್ಕಿ ಜೋಡಿ , ಬೇಡ ಒಂದನ್ನು ಕೊಲ್ಲುವದು , ಇನ್ನೊಂದರ ವಿರಹವೇದನೆಯಿಂದ ವಿಚಲಿತನಾದ ವಾಲ್ಮೀಕಿ ಮಹರ್ಷಿ ಆ ಬೇಡನನ್ನು ಶಪಿಸುವದು .ಇದೆಲ್ಲ ಸರಿ , ಆದರೆ ಆ ಶಾಪಕ್ಕೂ ರಾಮಾಯಣ ರಚನೆಗೂ ಸಂಬಂಧ ಸ್ಪಷ್ಟವಾಗಿ ನಿಮಗೆ ತಿಳಿದಿರಲಿಕ್ಕಿಲ್ಲ ಅಲ್ಲವೇ ? ನಾನು ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರರ ಪುಸ್ತಕದಲ್ಲಿ ಓದಿದ್ದನ್ನು ಇಲ್ಲಿ ಬರೆಯುತ್ತಿರುವೆ.

ಹಕ್ಕಿಯನ್ನು ಕೊಂದು ಇನ್ನೊಂದರ ನೋವಿಗೆ ಕಾರಣವಾದ ಬೇಡನನ್ನು ನೀನೆಂದೂ ಉದ್ಧಾರ ಆಗೋದು ಬೇಡ ( ಮಾ ನಿಷಾದ ... ) ಎಂದು ಛಂದೋಬದ್ಧವಾಗಿ ಶಪಿಸಿದ ವಾಲ್ಮೀಕಿ ನಂತರ ತಾನು ಶಾಪ ಕೊಟ್ಟಿದ್ದಕ್ಕೆ ನೊಂದುಕೊಳ್ಳುತ್ತಾನೆ. ತಾನು ಮಾಡಿದ್ದು ಸರಿಯೇ ? ಹಕ್ಕಿಯ ಕೊಲ್ಲುವಿಕೆ , ಇನ್ನೊಂದು ಹಕ್ಕಿಗೆ ಅಗಲಿಕೆಯನ್ನುಂಟು ಮಾಡಿದ್ದು ತನ್ನನ್ನು ವಿಚಲಿತಗೊಳಿಸಿದ್ದು ನಿಜ .. ಆದರೆ ತಾನು ಇದೇನು ಮಾಡಿಬಿಟ್ಟೆ ?
ಅವನಿಗೆ ಹಕ್ಕಿ , ಬೇಡ , ತಾನು ಬೇರೆ ಬೇರೆ ಅಲ್ಲ ; ಹಕ್ಕಿಯ ನೋವು ಅವನ ನೋವೂ ಕೂಡ ; ಇಂಥ ಸೂಕ್ಷ್ಮ ಮನಸ್ಸಿನ ಆತನಿಗೆ ನಂತರ ಭೆಟ್ಟಿಯಾದ ಬ್ರಹ್ಮನು ನೀನು ಮಾನವ ಸ್ವಭಾವವನ್ನು , ಸಂಸಾರದ ಆಗುಹೋಗುಗಳನ್ನು ಅರಿತುಕೊಳ್ಳಬಲ್ಲವನಾದ್ದರಿಂದ , ಆದರ್ಶಪುರುಷ ಶ್ರೀ ರಾಮಚಂದ್ರನ ಕುರಿತು ನೀನೇ ಕಾವ್ಯವನ್ನು ರಚಿಸು . ಈ ಶಾಪವು ಕಾವ್ಯವಾಗಲಿ ಹೊರತು ಅನ್ಯಥಾ ಆಗದಿರಲಿ. ನಿನ್ನ ಸ್ವಭಾವದಿಂದಾಗಿ ಈ ರಾಮಾಯಣದ ಕಥೆಯನ್ನು ಅಂಗೈಯಲ್ಲಿನ ನೆಲ್ಲಿಯ ಹಾಗೆ - ಅದರಲ್ಲಿನ ಎಳೆಗಳು ಕಣ್ಣಿಗೆ ಕಾಣುವ ಹಾಗೆ - ಸ್ಪಷ್ಟವಾಗಿ ಊಹಿಸಬಲ್ಲೆ ಎಂದು ಒಪ್ಪಿಸುತ್ತಾನೆ.  ಮುಂದೆ ಓದಿ »

Syndicate content