ಸೋನಿ
'ರಾಮಾಯಣ'ದ ಆಟ ಆಡಿ...
August 23, 2007 - 1:57am — hpn
ಮಿಶ್ರಿಕೋಟಿಯವರು ಬರೆದಿರುವ ಪುಟ್ಟ ಬರಹ ತಮಸಾ ನದೀ ತೀರದಲ್ಲಿ ಓದಿ ನನಗೆ ಹಲವು ದಿನಗಳ ಹಿಂದೆ ಓದಿದ ಒಂದು ಸುದ್ದಿಯ ನೆನಪಾಯಿತು.
ರಾಮಾಯಣ ಈಗ MMO (Massively Multi-player Online game) ಆಗಿ ಹೊರಬರಲಿದೆಯಂತೆ. MMO ಎಂದರೆ ನೇರ ಅಂತರ್ಜಾಲದಲ್ಲಿ ಹಲವು ಆಟಗಾರರೊಂದಿಗೆ ಆಡಬಹುದಾದ ವಿಡಿಯೋ ಗೇಮ್. ಇದನ್ನು ಹೊರತರುತ್ತಿರುವುದು ಸೋನಿ ಕಂಪೆನಿಯಂತೆ.
ಮಿ. ಇಂಡಿಯ, ಬ್ಯಾಂಡಿಟ್ ಕ್ವೀನ್ ಹಾಗೂ ಎಲಿಝಬೆತ್ ಮುಂತಾದ ಪ್ರಮುಖ ಚಿತ್ರಗಳನ್ನು ನಿರ್ದೇಶಿಸಿದ ಶೇಖರ್ ಕಪೂರ್ ಇದರ ಹಿಂದೆ ಇದ್ದಾರಂತೆ. ಇವರು ಅದರ ಸ್ಕ್ರಿಪ್ಟ್ ಬರೆದವರು. ವರ್ಜಿನ್ ಕಾಮಿಕ್ಸ್ ಸ್ಥಾಪಿಸಿದವರಲ್ಲಿ ಇವರೂ ಒಬ್ಬರು. ವರ್ಜಿನ್ ಕಾಮಿಕ್ಸ್ ಹೋದ ವರುಷ ರಾಮಾಯಣವನ್ನು ಕಾಮಿಕ್ಸ್ ಜಗತ್ತಿಗೆ ಪಾಶ್ಚಿಮಾತ್ಯ ಜಗತ್ತಿಗೆ ಹಿಡಿಸುವ ರೀತಿಯಲ್ಲಿ ಹೊರತಂದದ್ದು ನೆನಪಿಸಿಕೊಳ್ಳಬಹುದು. ಪುಸ್ತಕ ಹಾಗೂ ಕಾಮಿಕ್ ಜಗತ್ತಿನಲ್ಲಿ ಪ್ರಖ್ಯಾತ ಹೆಸರುಗಳಾದ ದೀಪಕ್ ಚೋಪ್ರ ಹಾಗೂ ಅವರ ಮಗ ಗೋಥಮ್ (ಗೌತಮ್) ಚೋಪ್ರ ಕೂಡ ಇದರಲ್ಲಿದ್ದಾರಂತೆ (ಇವರುಗಳೂ ವರ್ಜಿನ್ ಕಾಮಿಕ್ಸ್ ಸ್ಥಾಪಕರು). ಮುಂದೆ ಓದಿ »

- hpn ರವರ ಬ್ಲಾಗ್
- Login or register to post comments
- 468 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: