ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಎಸ್.ಜಾನಕಿ

ಕೋಗಿಲೆ ಹಾಡಿದೆ ಕೇಳಿದೆಯಾ?

ಇತ್ತೀಚೆಗೆ ಎಸ್.ಜಾನಕಿಯವರು ಚಿತ್ರ ರಂಗದಲ್ಲಿ ಹಿನ್ನಲೆಗಾಯಕಿಯಾಗಿ ಐವತ್ತು ವರ್ಷಗಳನ್ನು ಪೂರೈಸಿರುವ ಬಗ್ಗೆ ಹಲವೆಡೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಯಾವುದೇ ಕಾರ್ಯಕ್ಷೇತ್ರದಲ್ಲಿ ಆದರೂ ಇದು ಮಹತ್ಸಾಧನೆಯೇ. ಸುಮಾರು ಇಪ್ಪತ್ತೈದು ವರ್ಷ ಇವರು ಕನ್ನಡ ಚಿತ್ರರಂಗದಲ್ಲಿ ಮೊದಲ ಸ್ಥಾನದಲ್ಲಿ ಮಿಂಚಿದ್ದನ್ನು ಯಾವ ಚಿತ್ರ ಪ್ರೇಮಿಗಳೂ ಮರೆಯಲಾರರು.

ಯಾವುದೇ ಹಾಡುಗಾರನಿಗೆ, ಇನ್ನೊಬ್ಬ ಹಾಡುಗಾರ/ಹಾಡುಗಾರ್ತಿಯ ಮೆಚ್ಚುಗೆಯಿಂದ ಸಿಗುವಷ್ಟು ಸಂತೋಷ ಇನ್ನು ಯಾವುದರಿಂದಲೂ ಸಿಗಲಾರದು ಎನ್ನುವುದು ನನ್ನ ಅನಿಸಿಕೆ. ಕೆಲವು ದಿನಗಳ ಹಿಂದೆ, ಪಿ.ಬಿ.ಶ್ರೀನಿವಾಸ್ ಅವರು ನಮ್ಮಲ್ಲಿ ಕಾರ್ಯಕ್ರಮವೊಂದನ್ನು ಕೊಟ್ಟಾಗ, ಅವರು ನುಡಿದ ಮಾತುಗಳನ್ನು ನೆನಸಿಕೊಂಡರೆ, ಎಸ್.ಜಾನಕಿ ಅವರು ಬಹಳ ಸಂತೋಷ ಪಡಲೇ ಬೇಕು. ತಮ್ಮ ಜೊತೆಯಲ್ಲಿ ಹಾಡಿದ ಎಲ್ಲ ಗಾಯಕಿಯರೂ ಉತ್ಕೃಷ್ಟ ಮಟ್ಟದವರು, ಅವರಲ್ಲಿ ಒಬ್ಬರಿಗೊಬ್ಬರನ್ನು ಹೋಲಿಸಲು ಸಾಧ್ಯವಾಗದು ಎಂದು ಅವರು ಹೇಳಿದರೂ, ಜಾನಕಿಯವರ ಜೊತೆ ಅವರು ಹಾಡಿದ ಹಾಡುಗಳನ್ನು, ಅವರ ಜೊತೆ ನಡೆಸಿದ ರಿಹರ್ಸಲ್ ಗಳನ್ನೂ, ಹೇಗೆ ಅವರು ಒಂದು ಹಾಡು ಪೂರ್ತಿ ಮನಸ್ಸಿಗೆ ಬೇಕಾಗುವಂತೆ ಬರುವವರೆಗೂ ಬಿಡದೆ ಹಾಡಿ, ನಂತರವೇ ರೆಕಾರ್ಡ್ ಮಾಡಲು ಮುಂದಾಗುತ್ತಿದ್ದುದ್ದನ್ನೂ ಪಿಬಿ ಅವರು ಹೆಚ್ಚಾಗಿ ನೆನೆದರು.  ಮುಂದೆ ಓದಿ »

Syndicate content