ನಾವು ಸಮಯವನ್ನು ಉಪಕರಣವನ್ನಾಗಿ ಬಳಸಿಕೊಳ್ಳಬೇಕು, ಊರುಗೋಲಾಗಿ ಅಲ್ಲ.

— ಜಾನ್ ಕೆನಡಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮಹಾಭಾರತ

ಜೊತೆಬಾಳ್ವೆ

ಅಡವಿಯ ತೊರೆದ ಹುಲಿಯ ಕೊಲುವರು
ಹುಲಿಯಿರದ ಅಡವಿಯನೆ ಕಡಿವರು
ಹುಲಿಗೆ ಇರಬೇಕು ಅಡವಿಯ ಕಾವಲು
ಅಡವಿಗಾದರೋ ಹುಲಿಯೇ ಕಾವಲು

ಸಂಸ್ಕೃತ ಮೂಲ (ಮಹಾಭಾರತ, ಉದ್ಯೋಗಪರ್ವ ೨೯-೫೫):

ನಿರ್ವನೋ ವಧ್ಯತೇ ವ್ಯಾಘ್ರೋ ನಿರ್ವ್ಯಾಘ್ರಂ ಛಿದ್ಯತೇ ವನಂ|
ತಸ್ಮಾತ್ ವ್ಯಾಘ್ರೋ ವನಂ ರಕ್ಷೇತ್ ವನಂ ವ್ಯಾಘ್ರಂ ಚ ಪಾಲಯೇತ್ ||

-ಹಂಸಾನಂದಿ

ಕಾಲವನ್ನು ತಡೆಯೋರು ಯಾರೂ ಇಲ್ಲ!

ನೀನೊಳ್ಳೆ ಕೆಲ್ಸ ಮಾಡ್ಲಿ ಅಂತ
ರೋಗ ರುಜಿನ ಕಾಯೋದಿಲ್ಲ;
ನಿನ್ನಿಂದಿನ್ನೂ ಒಳ್ಳೇದಾಗ್ಬೇಕ್
ಅಂತ ಯಮನೂ ನಿಲ್ಲೋದಿಲ್ಲ;
ಮನಸ್ನೊಳಗೆ ಒಳ್ಳೇ ಕೆಲ್ಸ
ಮಾಡ್ಬೇಕಂತ ಅನ್ನಿಸ್ತಿದ್ರೆ
ಮಾಡಿಮುಗಿಸ್ಬೇಕ್ ಅವಾವಾಗ್ಲೇ
ಕಾಲವನ್ನ ತಡೆಯೋರಿಲ್ಲ!

ಸಂಸ್ಕೃತ ಮೂಲ ( ಮಹಾಭಾರತ, ಸಭಾಪರ್ವ ೫೬-೧೦ )  ಮುಂದೆ ಓದಿ »

ಅಶ್ವಥಾಮ ಇನ್ನೂ ಬದುಕಿದ್ದಾನೆಯೇ

ಇವತ್ತು ಮದ್ಯಾಹ್ನ ಬೇಗ ಹೋಗಿದ್ದರಿಂದ ಅಮ್ಮನ ಜೊತೆ ಸ್ವಲ್ಪ ಮಾತಾಡಲು ಸಮಯ ಸಿಕ್ಕಿತು\
ಆವಾಗ ಹೆಚ್ಚು ಚರ್ಚಿತವಾಗದ ಮಹಾಭಾರತದ ಕೆಲವು ಬಿಡಿ ಕಥೆಗಳ ಬಗ್ಗೆ ಮಾತು ನಡೆಯಿತು
ಅದರಲ್ಲಿ ಅಶ್ವತ್ತಾಮನ ಕತೆಯೂ ಒಂದು
ಪಾಂಡವ ಪುತ್ರರನ್ನು ಕೊಂದದಕ್ಕಾಗಿ ದ್ರೌಪದಿಯಿಂದ ಶಾಪಗ್ರಸ್ತನಾಗಿ ಅಶ್ವತ್ತಾಮ ಇನ್ನೂ ಅಲೆಯುತ್ತಿದ್ದಾನೆ ಎಂಬುದನ್ನು ಅಮ್ಮ ಹೇಳಿದರು  ಮುಂದೆ ಓದಿ »

ಮುಂದುವರೆದ ಭಾರತತೀರ್ಥ ( ಮಹಾಭಾರತದ ಓದು !) - ೨

( http://sampada.net/b... ) ದಿಂದ ಮುಂದುವರೆದಿದ್ದು .. ಅಲ್ಲಿ ಮುಂದುವರೆದೀತು ಅಂತ ಹೆದರಿಸಿದ್ದೆ ... ಈ ಬೆದರಿಕೆಯನ್ನ ಜಾರಿಗೆ ತಂದಿದ್ದೀನಿ ! )
ಇದು ಲೀನಕ್ಸ್ ನಿಂದ ಕನ್ನಡ ಬರಹದ ಟೆಸ್ಟಿಂಗ್ ಕೂಡ ....  ಮುಂದೆ ಓದಿ »

ರಾಹು-ಕೇತು ಕಾಟ, ಮತ್ತು ನವಗ್ರಹ ಸ್ತೋತ್ರ

ಚಕ್ರವತ್ಪರಿವರ್ತಂತೇ ದು:ಖಾನಿ ಚ ಸುಖಾನಿ ಚ ಅನ್ನೋದು ಸಂಸ್ಕೃತದ ಪ್ರಸಿದ್ಧ ಮಾತು. ಅಂದರೆ, ಸೋವು ನಲಿವುಗಳೆರಡೂ ಚಕ್ರದಂತೆ ಮತ್ತೆ ಮತ್ತೆ ತಿರುಗಿ ತಿರುಗಿ ಮರಳಿ ಮರಳಿ ಬರುತ್ತಿರುತ್ತವೆ ಎಂದರ್ಥ. ಚಕ್ರದಂತೆ ಬರೋದು ಬರೀ ಸುಖದು:ಖಗಳು ಮಾತ್ರ ಅಲ್ಲ ಅನ್ನೋದು ಮಾತ್ರ, ಚಿಕ್ಕ ಮಕ್ಕಳಿಗೂ ಗೊತ್ತಿರೋ ಸಂಗತಿ. ಹಗಲು ರಾತ್ರಿಯ ಚಕ್ರಕ್ಕಿಂತ ಬೇಕೇ ಮರಳಿ ಮರಳಿ ಸುತ್ತುವ ಚಕ್ರ? ಅದೇ ರೀತಿ ಆಕಾಶದಲ್ಲಿ ಇನ್ನೊಂದು ಕಾಲಕಾಲಕ್ಕೆ ಮರಳಿ ಬರೋ ಚಕ್ರ ಇದೆ - ಆದರೆ ಇದು ಸಾಧಾರಣವಾಗಿ ಎಲ್ಲರಿಗೂ ತಿಳಿದಿರಲ್ಲ, ಅಷ್ಟೇ. ಇದೇ ಗ್ರಹಣ ಚಕ್ರ (Saros cycle- ಸೆರಾಸ್ ಚಕ್ರ. ಇದಕ್ಕೆ ನಮ್ಮ ದೇಶದಲ್ಲಿ, ನಮ್ಮ ಭಾಷೇಲಿ ಬೇರೆ ಹೆಸರಿದೆಯೋ ಇಲ್ಲವೋ ತಿಳಿಯದು. ಅದಕ್ಕೆ ಅರ್ಥ ಗೊತ್ತಾಗೋ ಹಾಗೆ ಗ್ರಹಣಚಕ್ರ ಅನ್ನೋ ಭಾವಾನುವಾದವನ್ನು ಮಾಡಿದೀನಿ. ತಪ್ಪಿದ್ದ್ರೆ ತಿದ್ದಿ! ತಿದ್ಕೋತೀನಿ.)

ಕೆಲವು ದಿನದ ಮೊದಲು ರಾಹು-ಕೇತು ಕಾಟ ಅಂತ ಸ್ವಲ್ಪ ಗಳಹಿದ್ದೆ.ಮತ್ತೆ ಇವತ್ತು ಅದನ್ನ ಮುಂದುವರ್ಸೋಣ ಅಂತ ..ಅಲ್ಲದೆ, ಗ್ರಹಣಚಕ್ರ ಅರ್ಥ ಆಗ್ಬೇಕಾರೆ ರಾಹು ಕೇತು ವಿಷ್ಯ ಸ್ಪಷ್ಟ ಆಗ್ಬೇಕು ಮೊದಲು.

ನಮಗೆಲ್ಲ ಸೂರ್ಯನ ಸುತ್ತ ಭೂಮಿ ಸುತ್ತೋದೂ, ಭೂಮಿ ಸುತ್ತ ಚಂದ್ರ ಸುತ್ತೋದೂ ಗೊತ್ತೇ ಇದೆ. ಆ ಮೇಲೆ, ಒಂದು ಕಾಕತಾಳೀಯವಾದ ಒಂದು ವಿಚಾರದಿಂದ ಗ್ರಹಣಗಳನ್ನು ನಾವು ನೋಡ್ತೀವಿ. ಅದೇನಂದ್ರೆ, ನಮಗೆ ಭೂಮಿಯಿಂದ ನೋಡೋವಾಗ ಸೂರ್ಯನ ಗಾತ್ರವೂ, ಚಂದ್ರನ ಗಾತ್ರವೂ ಸರಿಸುಮಾರು ಒಂದೇ. ಚಂದ್ರನಿಗಿಂದ ಸೂರ್ಯ ಸುಮಾರು ನಾನೂರರಷ್ಟು ದೊಡ್ಡವ್ನು. ಹಾಗೇ ಸುಮಾರು ನಾನೂರರಷ್ಟು ಹೆಚ್ಚು ದೂರ್ದಲ್ಲೂ ಇದಾನೆ. ಅದಕ್ಕೆ ನಮ್ಗೆ ಅಪರೂಪಕ್ಕಾದ್ರೂ ಪೂರ್ಣ ಸೂರ್ಯಗ್ರಹಣ ಕಾಣ್ಸುತ್ತೆ. ಹತ್ತು, ಇಪ್ಪತ್ತು ಚಂದ್ರಗಳಿರೋ ಗುರು, ಶನಿಗಳ ಮೇಲೆ ಈ ರೀತಿ ಗ್ರಹಣಗಳು ಕಾಣೋಲ್ಲ. ಗ್ರಹಣ ಸಾಧ್ಯವಾಗೋಕೆ ಬೇಕಾದ ಇನ್ನೊಂದು ವಿಷಯಏನೂಂದ್ರೆ, ಭೂಮಿ ಸೂರ್ಯನ ಸುತ್ತ ಸುತ್ತೋ ಪಾತಳೀನೂ,ಚಂದ್ರ ಭೂಮಿ ಸುತ್ತ ಸುತ್ತೋ ಸಮಪಾತಳೀನೂ ಸುಮಾರಾಗಿ ಒಂದೇ. ಹಾಗಾಗಿ, ಒಂದೊಂದು ಸಲ ಸೂರ್ಯ ಭೂಮಿ ನಡುವೆ ಚಂದ್ರನೂ, ಕೆಲವೊಮ್ಮೆ ಸೂರ್ಯ ಚಂದ್ರ ನಡುವೆ ಭೂಮಿಯೂ ಬರತ್ತೆ. ಆಗ ಒಂದರ ನೆರಳು ಒಂದರ ಮೇಲೆ ಬಿದ್ದು ಗ್ರಹಣ ಆಗತ್ತೆ. ಇದು ಬಿಡಿ, ಚಿಕ್ಚಿಕ್ ಮಕ್ಕಳ್ಗೂ ಗೊತ್ತಿರೋ ವಿಷ್ಯ.  ಮುಂದೆ ಓದಿ »

ಮಹಾಭಾರತದಲ್ಲಿ ಯಯಾತಿ ಕತೆಯ ನೀತಿಗಳು

ಯಯಾತಿಯ ಕತೆಯಲ್ಲಿ ಎರಡು ಮೂರು ನೀತಿಗಳಿವೆ

೧. ಅವನಿಗಾಗಿ ಶರ್ಮಿಷ್ಠೆ ಮತ್ತು ದೇವಯಾನಿಯ ಪೈಪೋಟಿ ನಡೆಯುತ್ತದೆ . ಶರ್ಮಿಷ್ಠೆಯ ತಂದೆ ರಾಜ , ಕುಲದ ಒಳಿತಿಗಾಗಿ ರಾಜ ತನ್ನ ಮಗಳ ಒಳಿತನ್ನು ತ್ಯಾಗ ಮಾಡುತ್ತಾನೆ . ದೇವಯಾನಿಯನ್ನು ರಾಣಿಯನ್ನಾಗಿ ಮಾಡಿ ಮಗಳನ್ನು ಅವಳ ದಾಸಿಯಾಗಿ ಮಾಡುತ್ತಾನೆ .  ಮುಂದೆ ಓದಿ »

ಮಹಾಭಾರತದ ಕತೆ

ರಾಮಾಯಣ ಮಹಾಭಾರತದ ಕತೆ ನಮಗೆಲ್ಲ ಗೊತ್ತಿದ್ದದ್ದೇ - ಅಂತ ತಿಳುಕೊಂಡಿರ್ತೀವಿ . ಆದ್ರೆ ಅಲ್ಲಿನ ಘಟನೆಗಳ ಸೀಕ್ವೆನ್ಸು - ಅನುಕ್ರಮ - ಯಾವ್ದಾದ ಮೇಲೆ ಯಾವ್ದು - ( ಇಂಗ್ಲೀಷು , ಸಂಸ್ಕ್ರುತ - ಕನ್ನಡ ಎಲ್ಲದಕ್ಕೂ ನ್ಯಾಯ ಒದಗಿಸಿದ ಹಾಗಾಯ್ತು :) ) ನಮಗೆ ನೆನಪಿರೋದಿಲ್ಲ . ಇನ್ನೊಮ್ಮೆ ಓದಲುಕೂತಾಗಲೇ ಗೊತ್ತಾಗೋದು .  ಮುಂದೆ ಓದಿ »

ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ

ಮಹಾಭಾರತ ಯುದ್ಧದ ಕೊನೆಗೆ ದುರ್ಯೋಧನನು ಭೀಮನಿಂದ ತೊಡೆಯನ್ನು ಮುರಿಸಿಕೊಂಡು ಸಾಯುತ್ತ ಬಿದ್ದಿದ್ದಾನೆ . ಆಗ ಅಲ್ಲಿಗೆ ಅವನ ಚಿಕ್ಕ ಮಗ ಬರುತ್ತಾನೆ. ಎಳೆಯ ವಯಸ್ಸಿನ ಆ ಮಗು ಅಭ್ಯಾಸದಂತೆ ಅವನ ತೊಡೆಯ ಮೇಲೆ ಕೂತುಕೊಳ್ಳಲು ಹೋಗುವದು . ಆಗ ದುರ್ಯೋಧನನು ಅವನಿಗೆ ’ ಈ ಜಾಗ ಇನ್ನು ಮುಂದೆ ನಿನಗೆ ಇಲ್ಲದಂತಾಗುವದು ’ ಎನ್ನುತ್ತಾನೆ .  ಮುಂದೆ ಓದಿ »

Syndicate content