ಆಡುಭಾಷೆ
ನಕ್ಕೋತ , ಹಾಡಿಕೋತ , ಕುಣಕೋತ .......(ಧಾರವಾಡ ಕನ್ನಡ - ೫)
November 16, 2007 - 2:11pm — shreekant.mishrikotiನಕ್ಕೋತ , ಹಾಡಿ(ಡ)ಕೋತ , ಕುಣಕೋತ ....... ಅಂದರೆ ನಗುತ್ತ , ಹಾಡುತ್ತ , ಕುಣಿಯುತ್ತ
ಅದೇ ರೀತಿ ಹೋಡಕೋತ , ಅನಕೋತ ( ಅಂದುಕೊಳ್ಳುತ್ತ ) , ಅಂಜಿಕೋತ , ಬೈಕೋತ , ಎಳಕೋತ , ಬಿಡಿಸಿಕೋತ , ಝಾಡಿಸಿಕೋತ , ಮಾಡಿ(ಡ)ಕೋತ ಇತ್ಯಾದಿ !

’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು - ಇನ್ನೊಂದು ಬಗೆ ಮತ್ತು ಧಾರವಾಡದಾಗ , (ಧಾರವಾಡ ಕನ್ನಡ- ೪)
November 8, 2007 - 12:40pm — shreekant.mishrikotiನಿನ್ನೆ ಶಾಲೆ - ಸಾಲಿ, ಮನೆ - ಮನಿ, ಆನೆ - ಆನಿ , ರಾಟೆ - ರಾಟಿ ಇತ್ಯಾದಿ ಆಗುವ ಬಗ್ಗೆ ಹೇಳಿದೆ . ನಾಮಪದ(ಹೆಸರುಪದ)ಗಳ ವಿಷಯದಲ್ಲಿ ಹೀಗೆ ಆಗುವದೇನೋ ? ಮುಂದೆ ಓದಿ »

ಧಾರವಾಡ ಕನ್ನಡ- ಭಾಗ ೩
November 7, 2007 - 3:20pm — shreekant.mishrikotiಪ್ರಮಾಣ ಕನ್ನಡದ ’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು ’ಇ’ ದಿಂದ ಕೊನೆ ಆಗುತ್ತವೆ
ಉದಾ: ಶಾಲೆ - ಸಾಲಿ
ಮನೆ - ಮನಿ
ಆನೆ - ಆನಿ
ರಾಟೆ - ರಾಟಿ
ಇತ್ಯಾದಿ
ಎಲ್ಲ ಶಬ್ದಗಳೂ ಈ ತರ ಆಗ್ತಾವ ಅಂತ ಅಲ್ಲ ;
ಕಡೆಯ .... ಕಡೀ ಆದರೂ
ಕಡೆ ... ಕಡೆ ಎಂದೇ ಇರುವದು ..
ನಿಂ ಕಡೆ .. (ನಿಮ್ಮ ಹತ್ರ .. ನಿಮ್ಮ ಭಾಗದಲ್ಲಿ ) ಮುಂದೆ ಓದಿ »

ಅಂವ , ಇಂವ , ಅಕಿ , ಇಕಿ ........ (ಧಾರವಾಡ ಕನ್ನಡ- ೩)
October 11, 2007 - 3:13pm — shreekant.mishrikotiಅವನು, ಇವನು , ಅವಳು, ಇವಳು ಇಂಥ ಶಬ್ದಗಳ ರೂಪಗಳನ್ನು ಇವತ್ತು ನೋಡೋಣ
ಅಂವ /ಅಂವಾ ( ಇಲ್ಲಿ ಒಂದು ಅನುನಾಸಿಕ(?) ದ ಉಚ್ಚಾರ ಆಗುತ್ತದೆ ... ಹಾವು ಅನ್ನು ಉಚ್ಚಾರ ಮಾಡುವ ಹಾಗೆ ) - ಅವನು
ಅವಂದು - ಅವನದು
ಅವನ್‍ಹತ್ರ / ಅವನ ಕಡೆ - ಅವನ ಬಳಿ
ಅಂವಗ - ಅವನಿಗೆ
ಹೀಂಗS ಇಂವಾ , ಇವಂದು , ಇವನ್ ಹತ್ರ / ಇಂವಗ ಇತ್ಯಾದಿ
ಇದೇ ರೀತಿ
ಅಕಿ / ಆಕಿ - ಅವಳು ( --- ಆಕೆ ನೆನಪಿಸಿಕೊಳ್ಳಿ ) ಮುಂದೆ ಓದಿ »

’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)
October 8, 2007 - 1:31pm — shreekant.mishrikotiಆ ಎಂದು ಬಾಯಿ ತೆರೆಯದೆ ’ಅ’ ಅನ್ನೇ ದೀರ್ಘಕಾಲ ಉಚ್ಚರಿಸುವ ಪದ್ದತಿ ನಮ್ಮಲ್ಲಿದೆ .
(ಇದನ್ನು ಹಿಂದೆ ’S' ಸಂಕೇತದಿಂದ ಸೂಚಿಸುತ್ತಿದ್ದರು . ಈಗ ಅದನ್ನು ನೀವು ನೋಡಲಿಕ್ಕಿಲ್ಲ . ಈ ಚಿಹ್ನೆ ಇಲ್ಲದಿರುವಾಗ ಮಾತಿನಲ್ಲಿ ಕೊಡುವ ಒತ್ತು ಬರಹದಲ್ಲಿ ಇಲ್ಲವಾಗುತ್ತದೆ .)
ಉದಾಹರಣೆ ಗೆ
ನಾನೇ (ಪ್ರ) - ನಾನS(ಧಾ)
ಅವನೇ (ಪ್ರ) - ಅವನS(ಧಾ)
ಹಾಗೆಯೇ(ಪ್ರ),ಹಾಗೇ - ಹಾಂಗS(ಧಾ) ಮುಂದೆ ಓದಿ »





RSS: