24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅನಿವಾಸಿ

ಹೀಗೊಂದು ಪತ್ರ

October 22, 2007 - 12:00am
keshav

ಹಿಂಗ್ಯಾಕೆ ನಮ್ಮೂರಲ್ಲೇ ಆಗುತ್ತೆ? ಎಂಬ ಲೇಖನಕ್ಕೆ ನನ್ನ ಪತ್ರ (thatskannada.com)

ಶಾಸ್ತ್ರಿಯವರೇ,

ನಾನೂ ನಿಮ್ಮ ಹಾಗೆ ಪಾಶ್ಚಿಮಾತ್ಯ ದೇಶದಲ್ಲಿರುವವನೇ (ಇಂಗ್ಲಂಡ್). ಆದರೇ ನನ್ನ ಅನುಭವ ನಿಮ್ಮ ಲೇಖನಕ್ಕೆ ತೀರ ತದ್ವಿರುದ್ಧ. ನನಗೇ ಇಲ್ಲಿನ ಖಾಲಿ ರಸ್ತೆಗಳು (ನಮ್ಮ ದೇಶದಲ್ಲಿ ಕರ್ಫೂ ಆದಾಗ ಮಾತ್ರ ಕಾಣುವಂಥಹ), ತುಂಬ ಕೃತಕವಾಗಿ Good Morning, Good evening, BYE, ಮತ್ತು ಮಾತು ಮಾತಿಗೆ Thanks, Sorry, excuse me ಎನ್ನುವುದನ್ನು ಕೇಳಿ ತಲೆ ಚಿಟ್ಟು ಹಿಡಿಯುತ್ತದೆ.

ನಾವು ನಮ್ಮ ದೇಶದ ಏರೋಪ್ಲೇನ್ ಹತ್ತಿದಾಗ ನಮ್ಮ ಸಂಕೋಚಗಳನ್ನೆಲ್ಲ ಬಿಟ್ಟು, ಪಾಶ್ಚಾತ್ಯರ ಢಾಂಬಿಕ (pseudo)ನಯ-ನಾಜೂಕುಗಳನ್ನು ಬಿಟ್ಟು ಹಗುರಾಗುತ್ತೇವೆ, ಅದಕ್ಕೆಂದೇ ಹತ್ತು ಸಾರಿ ಗಗನಸಖಿಯರನ್ನು ಕರೆಯುತ್ತೇವೆ. ಫಾರಿನ ಏರ್-ಲೈನಿನಲ್ಲಿ ಯಾಕೆ ಹೀಗಾಗೋಲ್ಲ ಅಂತ ಕೇಳ್ತೀರಲ್ಲಾ, ಒಂದು ಸಲ ಬಿಟ್ಟು ಎರಡು ಸಲ ಗಗನಸಖಿಯರನ್ನು ಕರೆದು ನೋಡಿ, ಕಂದು ಚರ್ಮದ ನಮ್ಮ ಬಣ್ಣದ ಬಗ್ಗೆ ತಮ್ಮತಮ್ಮಲ್ಲೇ ಮಾತಾಡಿಕೊಳ್ಳುತ್ತಾರೆ, ಅದಕ್ಕೆ ನಾವು ನೀವೆಲ್ಲ ಸುಮ್ಮನಿರುವುದು.

ಇನ್ನು ಕಸದ ಬುಟ್ಟಿಯಲ್ಲಿ ಬೀಸಾಕುವುವುದರ ವಿಚಾರಃ ದಿನಕ್ಕೆ ಸಾವಿರಾರು ಬಾರಿ CCTVಯಲ್ಲಿ ನಮ್ಮನ್ನು ರೆಕಾರ್ಡ್ ಮಾಡುವ ಈ Big Brother ಪಾಶ್ಚಾತ್ಯ ದೇಶಗಳಲ್ಲಿ ಕಸ ಬೀಸಾಕಿದರೆ ಕೌನ್ಸಿಲ್ನಿಂದ ತಪ್ಪಿಸಿಕೊಳ್ಳುವ ಛಾನ್ಸೇ ಇಲ್ಲ, ಮೇಲಾಗಿ ಕಸಕ್ಕೆ ಸಾವಿರಾರು ರೂಪಾಯಿ ದಂಡತೆರಬೇಕಾದ ಪರಿಸ್ಥಿತಿ. ನಮ್ಮ ದೇಶವಿನ್ನೂ Big Brother ಆಗಿಲ್ಲ ಸ್ವಾಮಿ, ಅದಕ್ಕೇ ಹಾಯಾಗಿ ನಾವು ಪಾನ್-ಬೀಡಾ ತಿಂದು ರಸ್ತೆಗಳಲ್ಲಿ ಆರಾಮವಾಗಿ ಉಗಿಯುತ್ತೇವೆ.

ಒಂದು ಭೇಲ್-ಪುರಿಗೆ ಇಲ್ಲಿ ಇಂಗ್ಲಂಡಿನಲ್ಲಿ ನಾನು ಕೊಡುವುದು ಕೇವಲ ೩೦೦ ರೂಪಾಯಿ ಮಾತ್ರ (ನಿಮ್ಮ ಅಮೇರಿಕದಲ್ಲಿ ಎಷ್ಟು ಅಂತ ಗೊತ್ತಿಲ್ಲ). ಭಾರತದಲ್ಲಿ ನೀವು ಅಷ್ಟು ದುಡ್ಡು ಕೊಟ್ಟು ತಿನ್ನುವಿರಾದರೆ, ಅಮೇರಿಕದಲ್ಲಿ ಸಿಗುವುದಕ್ಕಿಂತ ಚೆನ್ನಾಗಿ, ಶುಚಿಯಾಗಿ ಮಾಡಿ ಇನ್ನೂ ಜಾಸ್ತಿ quantity ಕೊಡುತ್ತಾರೆ. ಆದರೆ ನಿಮಗೆ ಭಾರತಕ್ಕೆ ಬರುತ್ತಿದ್ದಂತೆ , ಅಯ್ಯೋ, ಭೇಲ್-ಪುರಿಗೆ ೧೫ ರೂಪಾಯಿಯೇ, ೧೦ ರೂಪಾಯಿಗೆ ಸಿಗುತ್ತಿತ್ತಲ್ಲ ಅಂತ ಚಡಪಡಿಸುತ್ತೀರಿ. ಸುಮ್ಮನಿರಿ ಸಾರ್, ಈ ಥರ ಮಾತಾಡುವ NRIಗಳನ್ನು ದಿನನಿತ್ಯ ಕೇಳಿಸಿಕೊಳ್ಳುತ್ತಲೇ ಇರುತ್ತೇನೆ, ಬ್ಲಾಗುಗಳಲ್ಲಿ ಓದುತ್ತಲೇ ಇರುತ್ತೇನೆ.

ಇನ್ನು STOP ಸಿಗ್ನಲ್-ಗಳ ವಿಚಾರಃ ಪ್ರತಿ ಮೂಲೆಯಲ್ಲಿರುವ CCTVಗಳು, ಜೇಬನ್ನೆಲ್ಲ ಬರಿದು ಮಾಡುವ ಇನ್ಸುರನ್ಸ್ ಪಾಲಿಸಿಗಳು, ಸಣ್ಣ ತಪ್ಪಿಗೂ ಡ್ರೈವಿಂಗ್ ಲೈಸನ್ಸನ್ನೇ ರದ್ದು ಮಾಡುವ ಕಾನೂನುಗಳು - ಏಲ್ಲ ರಸ್ತೆಗಳು ಖಾಲಿ ಇದ್ದಾರೂ ಯಾವನಿಗೆ ಸ್ವಾಮಿ STOP ಸಿಗ್ನಲ್ ದಾಟಿ ಕಾರ್ ಓಡಿಸುವ ಧೈರ್ಯವಾಗುತ್ತೆ? Read more about ಹೀಗೊಂದು ಪತ್ರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ"

November 5, 2007 - 1:04am
hpn

"ಮುಖಾಮುಖಿ"

ನಿವಾರ ಬೆಳಿಗ್ಗೆಗೆ ಮೊಬೈಲಿನಲ್ಲಿ (ಎಂದಿನಂತೆ)ಏಳೆಂಟು ಅಲಾರ್ಮ್ ಇಟ್ಟುಕೊಂಡಿದ್ದೆ.ರಾತ್ರಿ ಸುಮಾರು ಮೂರುವರೆ ಗಂಟೆಗೆ ಮಲಗಿದ್ದರೂ ಬೆಳಿಗ್ಗೆ ಮೂರನೇ ಅಲಾರ್ಮಿಗೇ ಅದು ಹೇಗೋ ಎಚ್ಚರವಾಗಿಬಿಟ್ಟಿತ್ತು. ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವಿದ್ದರೂ ಅಷ್ಟು ಬೇಗ ಎಚ್ಚರವಾಗಿದ್ದು ಬಹುಶಃ ಬೆಳಿಗ್ಗೆ ಎಚ್ಚರವಾಗದೆ ಆ ದಿನದ ಈವೆಂಟ್ ಮಿಸ್ ಮಾಡಿಕೊಂಡ್ರೆ ಅವಿವೇಕದ ಕೆಲಸವಾಗತ್ತೆ ಎಂಬ ವಿಷಯ ತಲೆಯಲ್ಲಿದ್ದದ್ದರಿಂದ.

ಸುಮಾರು ಎರಡು ವಾರಗಳ ಹಿಂದೆ ಅನ್ಸತ್ತೆ - ಸುದರ್ಶನ್ ಆಸ್ಟ್ರೇಲಿಯದಿಂದ ಫೋನ್ ಮಾಡಿದ್ದಾಗ "ಬೆಂಗ್ಳೂರಿಗೆ ಬರ್ತಿದ್ದೀರಾ? ಹಾಗಾದ್ರೆ ನಿಮ್ಮ ಸಿನಿಮಾ ಸ್ಕ್ರೀನಿಂಗ್ ಮಾಡ್ಬೋದ್ರೀ... ಚೆನ್ನಾಗಿರತ್ತೆ!" ಅಂದಿದ್ದೆ. ಇವರು ಮಾಡಿರುವ ಸಿನಿಮಾ ಹೇಗಿರಬಹುದು ನೋಡಬೇಕಲ್ಲ ಎಂಬ ಕುತೂಹಲದಿಂದ ಹುರಿದುಂಬಿಸಿದ್ದೆ. ಹೀಗೆ ಸ್ಕ್ರೀನಿಂಗ್ ಮಾಡಿಸಿ ಸುದರ್ಶನರ ಜೋಬಿಗೆ ಸ್ವಲ್ಪ ಕತ್ತರಿ ಹಾಕಿಸಿದರೂ ಮಾಡಿದ್ದು ಬಹಳ ಒಳ್ಳೆಯ ಕೆಲಸ ಎಂದನಿಸಿದ್ದು ನನಗೆ ಸಿನಿಮಾ ನೋಡಿದ ಮೇಲೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ದೂರದ ಬೆಟ್ಟ

November 4, 2008 - 6:31am
Smi
ನಾನು ೧೩ ವರ್ಷದಿಂದ ಪರ ದೇಶದಲ್ಲಿದ್ದು ಸಾಕಾಗಿದೆ. ವಾಪಸ್ಸು ಹೋಗುವ ಹಾಗಿಲ್ಲ. ಇಲ್ಲಿಗೆ ಬಂದು degree ಗಳ ಪಡೆದು, ಇಲ್ಲಿಯವರ ಜೊತೆ compete ಮಾಡಿ ಕೆಲಸದಲ್ಲಿ ಮುಂದೆ ಬರಲು ಪ್ರಯತ್ನಿಸುತ್ತಾ ತಾಯಿಯೂ ಆಗಿ ನನ್ನ ಮಗುವನ್ನು ನಾನೆ ಬೆಳೆಸಿ... ರಾಮ ರಾಮ .. ಈ ವನವಾಸ ಸಾಕಪ್ಪಾ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಅನಿವಾಸಿ