ಪತ್ರ
ನಾನು ತಾಳಿ ಕಟ್ಟಿಸಿಕೊಳ್ಳೊವರೆಗಾದರ್ರೂ ಎಲ್ಲಾದರೂ ಹಾಳಾಗಿ ಹೋಗೋ
June 24, 2008 - 8:58pm — roopablraoಮತ್ತೆ ಬಂತು ಆ ದಿನ ನೋಡು ಮತ್ತೆ ನೀನು ಹಾಜರ್. ನೀನೇನು ಸುಮ್ನೆ ಬರ್ತೀಯೋ ಇಲ್ಲ ಹೃದಯಾನ ಮಿಡಿಯೋಕೆ ಬರ್ತೀಯೊ ಅಂತ ಗೊತ್ತಾಗ್ತಿಲ್ಲ . ಮುಂದೆ ಓದಿ »

ಹೀಗೊಂದು ಪತ್ರ
October 22, 2007 - 12:00am — keshavಹಿಂಗ್ಯಾಕೆ ನಮ್ಮೂರಲ್ಲೇ ಆಗುತ್ತೆ? ಎಂಬ ಲೇಖನಕ್ಕೆ ನನ್ನ ಪತ್ರ (thatskannada.com)
ಶಾಸ್ತ್ರಿಯವರೇ,
ನಾನೂ ನಿಮ್ಮ ಹಾಗೆ ಪಾಶ್ಚಿಮಾತ್ಯ ದೇಶದಲ್ಲಿರುವವನೇ (ಇಂಗ್ಲಂಡ್). ಆದರೇ ನನ್ನ ಅನುಭವ ನಿಮ್ಮ ಲೇಖನಕ್ಕೆ ತೀರ ತದ್ವಿರುದ್ಧ. ನನಗೇ ಇಲ್ಲಿನ ಖಾಲಿ ರಸ್ತೆಗಳು (ನಮ್ಮ ದೇಶದಲ್ಲಿ ಕರ್ಫೂ ಆದಾಗ ಮಾತ್ರ ಕಾಣುವಂಥಹ), ತುಂಬ ಕೃತಕವಾಗಿ Good Morning, Good evening, BYE, ಮತ್ತು ಮಾತು ಮಾತಿಗೆ Thanks, Sorry, excuse me ಎನ್ನುವುದನ್ನು ಕೇಳಿ ತಲೆ ಚಿಟ್ಟು ಹಿಡಿಯುತ್ತದೆ.
ಇನ್ನು ಕಸದ ಬುಟ್ಟಿಯಲ್ಲಿ ಬೀಸಾಕುವುವುದರ ವಿಚಾರಃ ದಿನಕ್ಕೆ ಸಾವಿರಾರು ಬಾರಿ CCTVಯಲ್ಲಿ ನಮ್ಮನ್ನು ರೆಕಾರ್ಡ್ ಮಾಡುವ ಈ Big Brother ಪಾಶ್ಚಾತ್ಯ ದೇಶಗಳಲ್ಲಿ ಕಸ ಬೀಸಾಕಿದರೆ ಕೌನ್ಸಿಲ್ನಿಂದ ತಪ್ಪಿಸಿಕೊಳ್ಳುವ ಛಾನ್ಸೇ ಇಲ್ಲ, ಮೇಲಾಗಿ ಕಸಕ್ಕೆ ಸಾವಿರಾರು ರೂಪಾಯಿ ದಂಡತೆರಬೇಕಾದ ಪರಿಸ್ಥಿತಿ. ನಮ್ಮ ದೇಶವಿನ್ನೂ Big Brother ಆಗಿಲ್ಲ ಸ್ವಾಮಿ, ಅದಕ್ಕೇ ಹಾಯಾಗಿ ನಾವು ಪಾನ್-ಬೀಡಾ ತಿಂದು ರಸ್ತೆಗಳಲ್ಲಿ ಆರಾಮವಾಗಿ ಉಗಿಯುತ್ತೇವೆ.
ಒಂದು ಭೇಲ್-ಪುರಿಗೆ ಇಲ್ಲಿ ಇಂಗ್ಲಂಡಿನಲ್ಲಿ ನಾನು ಕೊಡುವುದು ಕೇವಲ ೩೦೦ ರೂಪಾಯಿ ಮಾತ್ರ (ನಿಮ್ಮ ಅಮೇರಿಕದಲ್ಲಿ ಎಷ್ಟು ಅಂತ ಗೊತ್ತಿಲ್ಲ). ಭಾರತದಲ್ಲಿ ನೀವು ಅಷ್ಟು ದುಡ್ಡು ಕೊಟ್ಟು ತಿನ್ನುವಿರಾದರೆ, ಅಮೇರಿಕದಲ್ಲಿ ಸಿಗುವುದಕ್ಕಿಂತ ಚೆನ್ನಾಗಿ, ಶುಚಿಯಾಗಿ ಮಾಡಿ ಇನ್ನೂ ಜಾಸ್ತಿ quantity ಕೊಡುತ್ತಾರೆ. ಆದರೆ ನಿಮಗೆ ಭಾರತಕ್ಕೆ ಬರುತ್ತಿದ್ದಂತೆ , ಅಯ್ಯೋ, ಭೇಲ್-ಪುರಿಗೆ ೧೫ ರೂಪಾಯಿಯೇ, ೧೦ ರೂಪಾಯಿಗೆ ಸಿಗುತ್ತಿತ್ತಲ್ಲ ಅಂತ ಚಡಪಡಿಸುತ್ತೀರಿ. ಸುಮ್ಮನಿರಿ ಸಾರ್, ಈ ಥರ ಮಾತಾಡುವ NRIಗಳನ್ನು ದಿನನಿತ್ಯ ಕೇಳಿಸಿಕೊಳ್ಳುತ್ತಲೇ ಇರುತ್ತೇನೆ, ಬ್ಲಾಗುಗಳಲ್ಲಿ ಓದುತ್ತಲೇ ಇರುತ್ತೇನೆ.
ಇನ್ನು STOP ಸಿಗ್ನಲ್-ಗಳ ವಿಚಾರಃ ಪ್ರತಿ ಮೂಲೆಯಲ್ಲಿರುವ CCTVಗಳು, ಜೇಬನ್ನೆಲ್ಲ ಬರಿದು ಮಾಡುವ ಇನ್ಸುರನ್ಸ್ ಪಾಲಿಸಿಗಳು, ಸಣ್ಣ ತಪ್ಪಿಗೂ ಡ್ರೈವಿಂಗ್ ಲೈಸನ್ಸನ್ನೇ ರದ್ದು ಮಾಡುವ ಕಾನೂನುಗಳು - ಏಲ್ಲ ರಸ್ತೆಗಳು ಖಾಲಿ ಇದ್ದಾರೂ ಯಾವನಿಗೆ ಸ್ವಾಮಿ STOP ಸಿಗ್ನಲ್ ದಾಟಿ ಕಾರ್ ಓಡಿಸುವ ಧೈರ್ಯವಾಗುತ್ತೆ? ಮುಂದೆ ಓದಿ »





RSS: