ಸಂಪದ
365 ದಿನಗಳು
February 29, 2008 - 3:56am — hamsanandi
ಮುನ್ನೂರರವತ್ತೈದು ದಿನಗಳು
ಒಂದು ವರ್ಷ
(ಒಂದು ದಿನ ಕಡಿಮೆಯಾದರೇನು ಸ್ವಾಮೀ? ಇದು ಅಧಿಕವರ್ಷವಲ್ಲವೇ?!)
ಎಂಬತ್ತು+ ಬ್ಲಾಗ್ ಬರಹಗಳು
ಕೈಬೆರಳೆಣಿಕೆಯ ಲೇಖನಗಳು
ಮರುದನಿಗೂಡಿಸಿದ ನೂರಾರು ಟಿಪ್ಪಣಿಗಳು
ಭಾಗವಹಿಸಿದ ಹತ್ತಾರು ಚರ್ಚೆಗಳು
ತಿಳಿದ ಹೊಸ ವಿಷಯಗಳು ಹಲವಾರು
ಅದರಲ್ಲರಗಿಸಿಕೊಂಡವು ನಾಕಾರು ಮುಂದೆ ಓದಿ »

ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ"
November 5, 2007 - 1:04am — hpn

ಶನಿವಾರ ಬೆಳಿಗ್ಗೆಗೆ ಮೊಬೈಲಿನಲ್ಲಿ (ಎಂದಿನಂತೆ)ಏಳೆಂಟು ಅಲಾರ್ಮ್ ಇಟ್ಟುಕೊಂಡಿದ್ದೆ.ರಾತ್ರಿ ಸುಮಾರು ಮೂರುವರೆ ಗಂಟೆಗೆ ಮಲಗಿದ್ದರೂ ಬೆಳಿಗ್ಗೆ ಮೂರನೇ ಅಲಾರ್ಮಿಗೇ ಅದು ಹೇಗೋ ಎಚ್ಚರವಾಗಿಬಿಟ್ಟಿತ್ತು. ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವಿದ್ದರೂ ಅಷ್ಟು ಬೇಗ ಎಚ್ಚರವಾಗಿದ್ದು ಬಹುಶಃ ಬೆಳಿಗ್ಗೆ ಎಚ್ಚರವಾಗದೆ ಆ ದಿನದ ಈವೆಂಟ್ ಮಿಸ್ ಮಾಡಿಕೊಂಡ್ರೆ ಅವಿವೇಕದ ಕೆಲಸವಾಗತ್ತೆ ಎಂಬ ವಿಷಯ ತಲೆಯಲ್ಲಿದ್ದದ್ದರಿಂದ.
ಸುಮಾರು ಎರಡು ವಾರಗಳ ಹಿಂದೆ ಅನ್ಸತ್ತೆ - ಸುದರ್ಶನ್ ಆಸ್ಟ್ರೇಲಿಯದಿಂದ ಫೋನ್ ಮಾಡಿದ್ದಾಗ "ಬೆಂಗ್ಳೂರಿಗೆ ಬರ್ತಿದ್ದೀರಾ? ಹಾಗಾದ್ರೆ ನಿಮ್ಮ ಸಿನಿಮಾ ಸ್ಕ್ರೀನಿಂಗ್ ಮಾಡ್ಬೋದ್ರೀ... ಚೆನ್ನಾಗಿರತ್ತೆ!" ಅಂದಿದ್ದೆ. ಇವರು ಮಾಡಿರುವ ಸಿನಿಮಾ ಹೇಗಿರಬಹುದು ನೋಡಬೇಕಲ್ಲ ಎಂಬ ಕುತೂಹಲದಿಂದ ಹುರಿದುಂಬಿಸಿದ್ದೆ. ಹೀಗೆ ಸ್ಕ್ರೀನಿಂಗ್ ಮಾಡಿಸಿ ಸುದರ್ಶನರ ಜೋಬಿಗೆ ಸ್ವಲ್ಪ ಕತ್ತರಿ ಹಾಕಿಸಿದರೂ ಮಾಡಿದ್ದು ಬಹಳ ಒಳ್ಳೆಯ ಕೆಲಸ ಎಂದನಿಸಿದ್ದು ನನಗೆ ಸಿನಿಮಾ ನೋಡಿದ ಮೇಲೆ. ಮುಂದೆ ಓದಿ »





RSS: