ಅಮ್ಮ
ಬೀಸಣಿಗೆಯ ನೆಪದಲ್ಲಿ ...
May 9, 2008 - 1:20am — hemashreeಮೊನ್ನೆ ಒಂದು ದಿನ ವಿಪರೀತ ಸೆಖೆ ಇಲ್ಲಿ. ಬೇಸಿಗೆ ಶುರುವಾಗಿದೆ. ಪ್ರತಿ ದಿನ 10 - 12 ಡಿಗ್ರಿ ಇದ್ದ ವಾತಾವರಣ ... ಈಗ ಕೆಲವೊಮ್ಮೆ 20 ಡಿಗ್ರಿ ಆದಾಗಲೂ ಸೆಖೆ ತಡೆಯಲಾಗುವುದಿಲ್ಲ. ಅಮ್ಮ ಕೊಟ್ಟ ಲಾವಂಚದ ಬೀಸಣಿಗೆಯಿಂದ ಗಾಳಿ ಹಾಕುತ್ತಾ ಕುಳಿತವಳಿಗೆ ಜತಿನ್ ದಾಸ್ ರ ನೆನಪಾಯಿತು . ಮುಂದೆ ಓದಿ »

ಅವ್ವನಿಗಾಗಿ
January 28, 2008 - 1:24pm — arunasirigereಅವ್ವನಿಗಾಗಿ
ನಾ ಮೆಚ್ಚಿ ಬರೆವ ಈ ಕವನ
ನನ್ನವ್ವನಿಗೆ ಮುಡಿಪು
ತನ್ನೆದೆಯನುಣಿಸಿ ಎನಗೆ
ಆಕೆ ತುಂಬಿಕೊಟ್ಟ ಭಾವನೆಗಳಲಿ ಮಿಂದೊಮ್ಮೆ
ನಾ ಕವನವಾಗುವಾಸೆ ಅವಳಿಗಾಗಿ
ಅವಳು ನನಗೆ ಕೊಟ್ಟ ಪ್ರೀತಿಗಾಗಿ
ನನ್ನಳುವು ಕಿವಿಗಪ್ಪಳಿಸಲು
ಓಡಿಬಂದು ನನ್ನನೆತ್ತಿ
ತನ್ನೆದೆಗಪ್ಪಿ ಮುತ್ತನಿಟ್ಟವಳು
ಜೋಗುಳವ ಪೊರೆದು
ನನ್ನ ಪವಡಿಸಿದವಳು
ನಾ ಕವನವಾಗುವಾಸೆ ಅವಳಿಗಾಗಿ ಮುಂದೆ ಓದಿ »

ಮ್ಮ
November 6, 2007 - 8:29pm — bvatsaಹೀಗೆ, ಅಮ್ಮನ ಬಗ್ಗೆ ಒಂದು ಕವನ ಬರೀಬೇಕು ಅಂತ ಶುರು ಆಗಿ, ಅದೇಕೋ ಸ್ವಲ್ಪ ಪದಗಳ ಜೊತೆ ಆಟ ಆಡೋ ಮನಸಾಗಿ ಈ ಕವಿತೆ ಬರೆದಿದ್ದೇನೆ.
ಈ ಕವನದ ವಿಶೇಷ ಏನೆಂದರೆ, ಈ ಕವನದ ಶೀರ್ಷಿಕೆಯಲ್ಲಿ ತಪ್ಪಿ ಹೋದ ಒಂದು ಅಕ್ಷರ, ಕವನದ ಪ್ರತಿ ಪದದಲ್ಲೂ ಪದೇ ಪದೇ ಇಣುಕಿ ಹಾಕುತ್ತೆ
.
------------------
ಮ್ಮ.
ಅಪರಿಮಿತ ಅಕ್ಕರೆಯ,
ಅನ್ವರ್ಥವೇ..
ಅಮ್ಮ.
ಅನ್ಯಾಯವ ಅರಿಯದ,
ಅನುರಕ್ತೆ..
ಅಮ್ಮ. ಮುಂದೆ ಓದಿ »

- bvatsa ರವರ ಬ್ಲಾಗ್
- Login or register to post comments
- 296 hits
- Email this blog




RSS: