Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ - ಏನೇನಿದೆ?

March 25, 2008 - 10:44pm — ಶ್ರೀನಿಧಿ

GNU/Linux habba!
ಓಂಶಿವು ಅವರ ಲೇಖನ ನೀವೆಲ್ಲರೂ ನೋಡಿದ್ದೀರ ಎಂದುಕೊಂಡಿದ್ದೇನೆ. ಇಲ್ಲ ಎಂದರೆ ಇಲ್ಲಿ ನೋಡಿ.

ಈ ಲಿನಕ್ಸ್ ಜಾತ್ರೆಯಲ್ಲಿ Smiling ಏನೇನಿರುತ್ತದೆ ? ಈ ಲಿನಕ್ಸ್ ಹಬ್ಬ ಎಂದರೆ ಏನು ? ಏನು ಮಾಡುತ್ತೀರ ಇಲ್ಲಿ ಅಂತ ಬಹಳ ಜನ ಕೇಳ್ತಿದ್ದಾರೆ.
ಈ ಹಬ್ಬದಲ್ಲಿ ನಾವು,

೧. ನಿಮ್ಮ ಲ್ಯಾಪ್ಟಾಪ್/ಡೆಸ್ಕ್ಟಾಪ್ ನಲ್ಲಿ ಲಿನಕ್ಸ್ ಹಾಕಿಕೊಳ್ಳುವುದು ಹೇಗೆ ಅಂತ ತೋರಿಸುತ್ತೇವೆ.
೨. ಲಿನಕ್ಸಿನಲ್ಲಿ ಕನ್ನಡ ಬರೆಯುವುದು ಹೇಗೆ ಮತ್ತು ಕನ್ನಡ ಓದುವುದು ಹೇಗೆ? ತೋರಿಸುತ್ತೇವೆ
೩. ನೀವು ತಂದಿರುವ ಲ್ಯಾಪ್ಟಾಪ್/ ಡೆಸ್ಕ್ಟಾಪ್ ನಲ್ಲಿ ನಿಮ್ಮ ಮುಂದೆಯೇ ಲಿನಕ್ಸ್ ಹಾಕಿಕೊಡುತ್ತೇವೆ.
೪. ನೀವು ಒಂದು ಖಾಲಿ ಸಿ.ಡಿ ತಂದರೆ ನಮ್ಮ ಬಳಿ ಇರುವ ಲಿನಕ್ಸಿನ ಒಂದು ಕಾಪಿ ನಿಮಗೂ ಕೊಡುತ್ತೇವೆ. (ಇದು ಪೈರಸಿ ಆಗೋಲ್ಲ!! ನೀವೂ ಆ ಸಿಡಿಯನ್ನ ಬೇರೆಯವರಿಗೆ ಹಂಚಬಹುದು!)
೫. ನಿಮ್ಮ ಯಾವುದೇ ಲಿನಕ್ಸ್ ಮತ್ತು ಕನ್ನಡ ಫಾಂಟ್ ಪ್ರಶ್ನೆಗೆ ಉತ್ತರ ಹೇಳಲು ನಾವು ತಯಾರಿರುತ್ತೇವೆ.

ನೀವು ಭಾಗವಹಿಸಬೇಕಾದರೆ,
೧. ಕಾರ್ಯಕ್ರಮ ಪುಟದಲ್ಲಿ ನೋಂದಾಯಿಸಿಕೊಳ್ಳಿ.
೨. ಟೆಕ್ಕಿಗಳಾದರೆ - ಭಾಗವಹಿಸುವ ಗೆಳೆಯರ ಸಿಸ್ಟಂಗಳಲ್ಲಿ ಉಬಂಟು ಹಾಕಿಕೊಡುವ ಕೆಲಸದಲ್ಲಿ ನಮ್ಮೊಂದಿಗೆ ಕೈ ಜೋಡಿಸಿವಿವರಗಳಿಗೆ ಓಂಶಿವು ಅವರ ಲೇಖನ ನೋಡಿ.
೩. ನಮಗೆ ಟೆಕ್ನಿಕಲ್ ಅಲ್ಲದ ವಿಷಯಗಳಲ್ಲಿ ಕೈ ಜೋಡಿಸುವ ಗೆಳೆಯರ ಅಗತ್ಯವೂ ಇದೆ. ನಿಮಗೆ ಪಾಲ್ಗೊಳ್ಳುವ ಆಸಕ್ತಿ ಇದ್ದರೆ ಖಂಡಿತ ತಿಳಿಸಿ.
೪. ನಿಮಗೂ ನಿಮ್ಮ ಲ್ಯಾಪ್ಟಾಪ್ / ಡೆಸ್ಕ್ಟಾಪ್ ಗಳಲ್ಲಿ ಲಿನಕ್ಸ್ ಮತ್ತು ಕನ್ನಡ ಬೇಕೆಂದಿದ್ದರೆ, ನಿಮ್ಮ ಲ್ಯಾಪ್ಟಾಪ್ / ಡೆಸ್ಕ್ಟಾಪ್ ತೆಗೆದುಕೊಂಡು ಬನ್ನಿ. ನಿಮಗೆ ಸಹಾಯ ಮಾಡಲು ನಾವಿದ್ದೇವೆ.
೫. ನಿಮಗೆ ಲಿನಕ್ಸ್ ಮತ್ತು/ಅಥವಾ ಕನ್ನಡ ಫಾಂಟ್ನಲ್ಲಿ ಏನಾದರೂ ಪ್ರಶ್ನೆಗಳಿದ್ದರೆ, ಭಾಗವಹಿಸಿ, ನಮ್ಮ ಕೈಲಾದಷ್ಟು ಉತ್ತರ ಕೊಡುತ್ತೇವೆ.

ನಾವು ಇನ್ನೂ ಜಾಗ ಮತ್ತು ಸಮಯ ಹೊಂದಿಸಬೇಕಾಗಿದೆ. ಇನ್ನೆರಡು ದಿನಗಳಲ್ಲಿ ಇದರ ಬಗ್ಗೆ ಖಚಿತವಾಗಿ ತಿಳಿಸುತ್ತೇವೆ.

ಮತ್ತು ಕೊನೆಗೆ ಸಾಮಾನ್ಯವಾಗಿ ಕೇಳೀಬರುವ ಪ್ರಶ್ನೆಗಳು

೧. ಲಿನಕ್ಸ್ ಎಂದರೆ ಬರೀ ಕಮ್ಯಾಂಡ್ ಪ್ರಾಂಪ್ಟ್ (command prompt) ಅಲ್ಲವಾ ? ಅದೇ ಕಪ್ಪು ಸ್ಕ್ರೀನಿನದು ಅಂತಲೂ ಜನ ಕೇಳಿದ್ದಿದೆ!!
ಇಲ್ಲ. ಲಿನಕ್ಸ್ ನಿಮ್ಮ ವಿಂಡೋಸ್ ವಿಸ್ತಾ ಅಥವಾ XP ನಂಥೆಯೇ GUI ಇರುವ ಆಪರೇಟಿಂಗ್ ಸಿಸ್ಟಂ. ವಿಸ್ತಾಗಿಂತ ಮುಚೆಯೇ 3D ಇದ್ದ ಸಿಸ್ಟಂ.

೨. ಲಿನಕ್ಸ್ ಬಿಟ್ಟಿಯಾ? ನಿಮಗಿದರಿಂದ ಏನು ಲಾಭ?
ಗ್ನೂ/ ಲಿನಕ್ಸ್ ಬಿಟ್ಟಿ (free as in free beer) ಅನ್ನುವುದಕ್ಕಿಂತ ಮುಕ್ತ (free as in freedom) ತಂತ್ರಾಂಶಗಳ ಗುಂಪು. ನಿಮಗೆ ಕಾನೂನಿನ ಪ್ರಕಾರ ಇದನ್ನು ನಿಮ್ಮ ಗೆಳೆಯರಿಗೆ ಕೊಡುವ (ಬಿಟ್ಟಿ/ಹಣಕ್ಕೆ) ಸ್ವಾತಂತ್ರ ಇದೆ. ಕೊಟ್ಟರೆ ನೀವು ಈ ತಂತ್ರಾಂಶಗಳ ಮೂಲವನ್ನು (source code) ಕೂಡ ಕೊಡಬೇಕು ಅಷ್ಟೇ. ಅವರಿಗೂ ಕೊಟ್ಟ ಸಾಫ್ಟ್ವೇರನ್ನು ಇಷ್ಟಬಂದಂತೆ ಮಾರ್ಪಾಡು ಮಾಡುವ ಸ್ವಾತಂತ್ರ ಕೊಡಬೇಕು.
ಹಬ್ಬದಲ್ಲಿ ನಾವು ನಿಮಗೆಲ್ಲರಿಗೂ ಲಿನಕ್ಸನ್ನು ಬಿಟ್ಟಿಯಾಗಿ ಕೊಡುತ್ತೇವೆ. ಸಿ.ಡಿ / ಲ್ಯಾಪ್ಟಾಪ್ /ಡೆಸ್ಕ್ಟಾಪ್ ನೀವೇ ತರಬೇಕು. ಇದು ನಮಗೆ ಸಂತಸ ತಂದ ಲಿನಕ್ಸ್ಅನ್ನು ನಿಮ್ಮೊಂದಿಗೂ ಹಂಚಿಕೊಳ್ಳುವ ಆಸೆ ಅಷ್ಟೆ. ನಮಗೆ ಲಾಭ ಮಾಡಿಕೊಳ್ಳುವ ಆಸೆ ಇಲ್ಲ. ನೀವೂ ನಿಮ್ಮ ಗೆಳೆಯರಿಗೆ ಇದೇ ರೀತಿಯ ಸಹಾಯ ಮಾಡಿದರೆ ನಮಗೂ ಸಂತಸ.

೩. ಇವುಗಳ ಬಗೆಗೆ ನಾನು ಇನ್ನೂ ಹೆಚ್ಚು ತಿಳಿಯಬೇಕೆಂದರೆ ಏನು ಮಾಡಬಹುದು?
ಈ ಪುಟಗಳನ್ನು ಓದಿ
ಅ. Free software foundation - http://www.fsf.org/
ಆ. ಲಿನಕ್ಸ್ ಬಗೆಗಿನ ವಿಕಿಪೀಡಿಯಾ ಲೇಖನ - http://en.wikipedia.org/wiki/Linux

ಉಬುಂಟು ಕ್ಯಾನೋನಿಕಲ್ ಟ್ರೇಡ್-ಮಾರ್ಕ್.
ವಿಂಡೋಸ್, ವಿಸ್ತಾ ಮತ್ತು XP ಮೈಕ್ರೋಸಾಫ್ಟಿನ ಟ್ರೇಡ್-ಮಾರ್ಕ್ ಗಳು.

  • ಮಾಹಿತಿ ಫಲಕ
Ornamental seperator
  • Login or register to post comments
  • 895 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 26, 2008 - 10:09am — roopablrao

ಉ: ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ - ಏನೇನಿದೆ?

roopablrao's picture

ಕಾರ್ಯಕ್ರಮ ಪುಟದಲ್ಲಿ ನೋಂದಾಯಿಸಿಕೊಳ್ಳಿ.

ಹೇಗೆ ನೋಂದಾಯಿಸಿಕೊಳ್ಳುವುದು ಅಂತ ತಿಳಿಸಿದರೆ ಒಳ್ಳೆಯದು.
ನೀವು ಕೊಟ್ಟ ಲಿಂಕ್ ಗೆ ಹೋದರೆ month calender ಅಂತ ಬರುತ್ತವೆ.
ದಯವಿಟ್ತು ತಿಳಿಸಿ
ಈ ಹಬ್ಬ ಯಾವಾಗ ಎಲ್ಲಿ ಎಂತ ಮುಂಚಿತವಾಗಿವಾಗಿ ತಿಳಿಸಿದರೆ ನಾವೂ ಬರುವುದಕ್ಕೆ ಅನುಕೂಲವಾಗುತ್ತದೆ.

ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
March 26, 2008 - 10:46am — ಶ್ರೀನಿಧಿ

ಉ: ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ - ಏನೇನಿದೆ?

ಶ್ರೀನಿಧಿ's picture

ಕ್ಷಮಿಸಿ - ಲಿಂಕ್ ಇಲ್ಲಿದೆ

http://sampada.net/event/GNU-Linux-Habba

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • Email this ಪ್ರತಿಕ್ರಿಯೆ
March 26, 2008 - 11:02am — hpn

ಉ: ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ - ಏನೇನಿದೆ?

hpn's picture

ಕಾರ್ಯಕ್ರಮ ಏಪ್ರಿಲ್ ೨೬ರಂದು.

ಕಾರ್ಯಕ್ರಮ ಪುಟದ ಲಿಂಕ್ ಈಗ ಸರಿಪಡಿಸಿರುವೆ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
March 31, 2008 - 7:39pm — ಶಿವ

ಉ: ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ - ಏನೇನಿದೆ?

ಶಿವ's picture

ನಂಗೆ ನನ್ನ ಲ್ಯಾಪ್‍ಟಾಪ್‍ನಲ್ಲಿ 'ಡೆಲ್ ಮಿಡಿಯಾ ಡೈರೆಕ್ಟ್' , ಲೀನಕ್ಸ್ ಮತ್ತು ವಿಂಡೋಸ್ ಎಲ್ಲಾ ಬೇಕು..ಸಧ್ಯಕ್ಕೆ ವಿಂಡೋಸ್ (ಹಾಗೂ 'ಡೆಲ್ ಮಿಡಿಯಾ ಡೈರೆಕ್ಟ್') ಮಾತ್ರ ಇದೆ.ಉಬುಂಟು ಸಿಡಿ ಬೇಕು. 26ಕ್ಕೆ ಮೊದಲು ನಾನು ಇವೆಲ್ಲವನ್ನು ಮಾಡಬೇಕು...

  • Login or register to post comments
  • link
  • Email this ಪ್ರತಿಕ್ರಿಯೆ
March 31, 2008 - 9:47pm — ವೈಭವ

ಉ: ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ - ಏನೇನಿದೆ?

ವೈಭವ's picture

ಮೇಲೆ ತಿಳಿಸುವುದರ ಜೊತೆಗೆ ನನಗೆ ಇವು ಬೇಕು (ನಿಮಗೆ ಸಾದ್ಯವಾದರೆ)
--> ಲಿನಕ್ಸಿನಲ್ಲಿ ಮಲ್ಟಿ ಕೋರ್ ಪ್ರಾಸೆಸರ್ ಗಳಲ್ಲಿರುವ ಸವಲತ್ತುಗಳನ್ನು ಹೇಗೆ ಓರೆಗೆ/ಬಳಕೆಗೆ ಹಚ್ಚಲಾಗುತ್ತದೆ.
--> ಸುಸೆ(ಸೂಸೆ?), ರೆಡ್ ಹ್ಯಾಟ್ ಲಿನಕ್ಸಿಗಳಿಗೆ ಇರುವ ಮುಕ್ಯ ಬೇರೆತನಗಳೇನು?
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
March 31, 2008 - 10:27pm — Aravinda

ಉ: ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ - ಏನೇನಿದೆ?

Aravinda's picture

ಖಂಡಿತ... ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ.

ನಿಮ್ಮವನೇ,
ಅರವಿಂದ
http://www.belaku.net

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೆಂಗಳೂರಿನಲ್ಲಿ ಗ್ನು/ಲಿನಕ್ಸ್ ಹಬ್ಬ!
  • ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!
  • ಗ್ನು/ಲಿನಕ್ಸ್ ಹಬ್ಬ - ಏಪ್ರಿಲ್ ೨೬ ರಂದು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ
  • ನಾಯಿಮರಿ ಲಿನಕ್ಸ್ ಅಥವಾ ಮುದ್ದುಕುನ್ನಿ ಲಿನಕ್ಸ್
  • ಗ್ನು/ಲಿನಕ್ಸ್ ಹಬ್ಬ!
Syndicate content

ಲೇಖಕರು

ಶ್ರೀನಿಧಿ's picture

ಪೂರ್ಣ ಹೆಸರು
ಶ್ರೀನಿಧಿ ನರಸಿಂಹಾಚಾರ್

ಪರಿಚಯ

ಹುಟ್ಟಿದ್ದು ಬೆಂಗಳೂರಾದರೂ ಬಾಲ್ಯದ 13 ವರ್ಷಗಳನ್ನು ಶಿವಮೊಗ್ಗದಲ್ಲಿ ಕಳೆದೆ. ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಮತ್ತೆ ಬೆಂಗಳೂರು, ನಂತರ ಅಲ್ಲೇ ಕೆಲಸ. ಎಂ. ಎಸ್ ಕ್ಲೆಂಸನ್, ಯು.ಎಸ್.ಏ ಯಲ್ಲಿ ಮುಗಿಸಿ ಸದ್ಯಕ್ಕೆ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದೇನೆ.

ಹವ್ಯಾಸ- ಓದು, ಕರ್ನಾಟಕ ಶಾಸ್ತ್ರೀಯ ಸಂಗೀತ, ತತ್ವಶಾಸ್ತ್ರ, ಕ್ರಿಕೆಟ್, ಟಿ.ಟಿ,ಕನ್ನಡ ಚಲನಚಿತ್ರ(ತುಂಬಾ ವೀಕು).
ನೆಚ್ಚಿನ ಲೇಖಕರು/ಕವಿಗಳು - ತಾರಾಸು, ಭೈರಪ್ಪ, ಸತ್ಯಕಾಮ, ಮಾಸ್ತಿ, ಬೇಂದ್ರೆ, ಗೊರೂರು, ರಾಶಿ, ಅ.ರಾ. ಮಿತ್ರ, ನಯಸೇನ, ಇನ್ನೊ ಅನೇಕ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
    May 14, 2008 - 9:16pm
  • hamsanandi
    ಉ: ಕಟಪಯಾದಿ ಸೂತ್ರ
    May 14, 2008 - 9:15pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: Why does Kusuma speak in English?
    May 14, 2008 - 9:00pm
  • omshivaprakash
    ಉ: ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
    May 14, 2008 - 8:39pm
  • smurthygr
    ಉ: ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
    May 14, 2008 - 8:13pm
  • smurthygr
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 14, 2008 - 8:10pm
  • harshab
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 14, 2008 - 8:04pm
  • harshab
    ಉ: ಅಡುಗೆಯ ಸಂಭ್ರಮ
    May 14, 2008 - 7:55pm
  • kannadakanda
    ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
    May 14, 2008 - 6:31pm
  • ASHMYA
    ಉ: ಆದದ, ವೋದದ?
    May 14, 2008 - 6:27pm
ಇನ್ನಷ್ಟು

"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."

— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator