FAQ (ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು)
Table of Contents:
- I do not see any kannada here. How do I enable it?
- How do I type here in Kannada?
- ಲೇಖನಗಳನ್ನು ಸೇರಿಸುವುದು ಹೇಗೆ?
- ನನ್ನ ಬ್ಲಾಗ್ ಅಪ್ಡೇಟ್ ಮಾಡುವುದು ಹೇಗೆ?
- ನನ್ನ ಬ್ಲಾಗ್ URL ಜ್ಞಾಪಕವಿರಿಸುವುದು ಕಷ್ಟವಾಗಿದೆಯಲ್ಲ... ಶಾರ್ಟ್ ಕಟ್ ಏನಾದರೂ ಲಭ್ಯವೇ?
- ಇಲ್ಲಿ ಕನ್ನಡದಲ್ಲಿ ಬರೆಯುವುದು, ಕನ್ನಡವನ್ನು ಟೈಪ್ ಮಾಡುವುದು ಹೇಗೆ?
- ನಾನು ಸೇರಿಸಿದ ಲೇಖನವೇಕೆ ಇತ್ತೀಚಿನ ಲೇಖನಗಳ ಪಟ್ಟಿಯಲ್ಲಿ ಕಾಣುತ್ತಿಲ್ಲ?
- ವಿಕಿಪೀಡಿಯಕ್ಕೆ ಲೇಖನಗಳಲ್ಲಿ, ಮಾತುಕತೆ ವಿಭಾಗದಲ್ಲಿ ಲಿಂಕ್ ಸೇರಿಸುವುದು ಹೇಗೆ?
- ನಿರ್ವಾಹಕನಾಗುವುದು ಹೇಗೆ? ನಿರ್ವಾಹಕರಿಗೆ ದೊರೆಯುವ ಹಕ್ಕುಗಳು ಏನೇನು?
- ನೀವು ಪ್ರಜಾವಾಣಿಯಿಂದ ಆಗಾಗ್ಗೆ ಲೇಖನಗಳನ್ನು ಸಂಪದದಲ್ಲಿ ಲಿಂಕ್ ಮಾಡುವುದನ್ನು ಗಮನಿಸಿದ್ದೇನೆ. ಇದಕ್ಕೆ ಅವರ ಅನುಮತಿಯೇನಾದರೂ ಬೇಕಾಗುತ್ತದೆಯೇ? ಇತರೆ ಪುಸ್ತಕ, ಪತ್ರಿಕೆಗಳಿಂದ ಬರಹಗಳನ್ನು ಇಲ್ಲಿ ಹಾಕಬಹುದೇ?
- How to add an image to Sampada? ಸಂಪದದಲ್ಲಿ ಚಿತ್ರವೊಂದನ್ನು ಸೇರಿಸುವುದು ಹೇಗೆ?
I see garbled text (or garbled Kannada) here.
If you donot see any kannada here, and instead, getting some set of '?' marks, boxes or garbled Kannada without OttakSharas, you need to enable Unicode support on your system. Read how you can do that.
How do I type here in Kannada?
ಲೇಖನಗಳನ್ನು ಸೇರಿಸುವುದು ಹೇಗೆ?
ಲೇಖನಗಳನ್ನು ಸೇರಿಸಲು ನೀವು ಮೊದಲು ಲಾಗಿನ್ ಆಗಬೇಕು ಅಥವಾ ನಿಮ್ಮನ್ನು ನೊಂದಾಯಿಸಿಕೊಳ್ಳಬೇಕು. ಸದಸ್ಯರು ಲಾಗಿನ್ ಆದ ಬಳಿಕ ಬಲಭಾಗದ ಪರಿವಿಡಿಯಲ್ಲಿರುವ "Add content to Sampada" -> "Article" ಕ್ಲಿಕ್ ಮಾಡಿ ಲೇಖನ ಸೇರಿಸಬಹುದು. "LekhanagaLu" ಡ್ರಾಪ್ ಡೌನ್ ಮೆನು ಉಪಯೋಗಿಸಿ ನಿಮ್ಮ ಲೇಖನವನ್ನು ಅನುಗುಣವಾದ ವರ್ಗಕ್ಕೆ ಸೇರಿಸಿ.
ನನ್ನ ಬ್ಲಾಗ್ ಅಪ್ಡೇಟ್ ಮಾಡುವುದು ಹೇಗೆ?
ಬ್ಲಾಗಿನಲ್ಲಿ ಬರಹವೊಂದನ್ನು ಸೇರಿಸಲು ನೀವು ಮೊದಲು ಲಾಗಿನ್ ಆಗಬೇಕು ಅಥವಾ ನಿಮ್ಮನ್ನು ನೊಂದಾಯಿಸಿಕೊಳ್ಳಬೇಕು. ಸದಸ್ಯರು ಲಾಗಿನ್ ಆದ ಬಳಿಕ ಬಲಭಾಗದ ಪರಿವಿಡಿಯಲ್ಲಿರುವ "Add content to Sampada" -> "" ಕ್ಲಿಕ್ ಮಾಡಿ personal blog entry ಅಡಿ ಬರೆದದ್ದನ್ನು ಸೇರಿಸಬಹುದು.
ನನ್ನ ಬ್ಲಾಗ್ URL ಜ್ಞಾಪಕವಿರಿಸುವುದು ಕಷ್ಟವಾಗಿದೆಯಲ್ಲ... ಶಾರ್ಟ್ ಕಟ್ ಏನಾದರೂ ಲಭ್ಯವೇ?
ಸಂಪದದಲ್ಲಿ ನಿಮಗೆ ಲಭ್ಯವಿರುವ ಬ್ಲಾಗ್ ಉಪಯೋಗಿಸತೊಡಗಿದ ಪಕ್ಷದಲ್ಲಿ ನೀವು ಅದಕ್ಕೊಂದು ಶಾರ್ಟ್ ಕಟ್ ಯು ಅರ್ ಎಲ್ (URL) ಪಡೆದುಕೊಳ್ಳಬಹುದು. ಉದಾ: http://sampada.net/yourname ಹೆಚ್ಚಿನ ವಿವರಕ್ಕೆ ಈ ಪುಟ ನೋಡಿ.
ಇಲ್ಲಿ ಕನ್ನಡದಲ್ಲಿ ಬರೆಯುವುದು, ಕನ್ನಡವನ್ನು ಟೈಪ್ ಮಾಡುವುದು ಹೇಗೆ?
ನಾನು ಸೇರಿಸಿದ ಲೇಖನವೇಕೆ ಇತ್ತೀಚಿನ ಲೇಖನಗಳ ಪಟ್ಟಿಯಲ್ಲಿ ಕಾಣುತ್ತಿಲ್ಲ?
ಬ್ಲಾಗ್, ಡಿಸ್ಕಶನ್ ಫಾರಮ್ ಹೊರತುಪಡಿಸಿ ಉಳಿದೆಡೆ ಸೇರಿಸಿದ ಲೇಖನಗಳು 'ಕ್ಯೂ' ಗೆ ಸೇರುತ್ತವೆ. ಸಮುದಾಯದ ಎಲ್ಲರೂ (ಎಲ್ಲ ಸದಸ್ಯರೂ) ಅದಕ್ಕೆ 'ಮತ' ಹಾಕಬಲ್ಲರು. ಹೆಚ್ಚು ಮತಗಳನ್ನು ಪಡೆದ ಲೇಖನಗಳು ಆರ್ಕೈವ್ ಸೇರುವ ಗೌರವ ಪಡೆಯುತ್ತವೆ. ಮುಖ ಪುಟಕ್ಕೆ ಸೇರುವ ಲೇಖನಗಳೂ ಹೀಗೆಯೇ.
ವಿಕಿಪೀಡಿಯಕ್ಕೆ ಲೇಖನಗಳಲ್ಲಿ, ಮಾತುಕಥೆ ವಿಭಾಗದಲ್ಲಿ ಲಿಂಕ್ ಸೇರಿಸುವುದು ಹೇಗೆ?
ಸದಸ್ಯರು ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳಿಗೆ ಸಂಪದದಿಂದ ನೇರವಾಗಿ ಲಿಂಕ್ ಕೊಡಬಹುದು. ಲಿಂಕ್ ಕೊಡಲು, ನೀವು ಲೇಖನ ಸೇರಿಸುವಾಗ ಆಯಾ ಪದಕ್ಕೆ
ಎಂಬಂತೆ ಸೇರಿಸಿಬೇಕು. ಉದಾ: ಜೋನ ಆಫ್ ಆರ್ಕ್ ಕ್ಯಾಥೊಲಿಕ್ ಚರ್ಚಿನ ಸಂತರಲ್ಲೊಬ್ಬಳು. ತಮ್ಮ ಲೇಖನಗಳಲ್ಲಿ, ಕಾಮೆಂಟ್ ಗಳಲ್ಲಿ ಹೆಚ್ಚಾಗಿ ವಿಕಿಪೀಡಿಯಕ್ಕೆ ಸಂಪರ್ಕಗಳನ್ನು, ರೆಫರೆನ್ಸ್ ಗಳನ್ನು ನೀಡಿ ವಿಕಿಪೀಡಿಯಕ್ಕೆ ಹೆಚ್ಚು ಓದುಗರನ್ನು ಕಲ್ಪಿಸುವಲ್ಲಿ ಸಹಾಯ ಮಾಡಬೇಕೆಂದು ಎಲ್ಲರಲ್ಲಿ ಆತ್ಮೀಯ ಕೋರಿಕೆ.
ನಿರ್ವಾಹಕನಾಗುವುದು ಹೇಗೆ? ನಿರ್ವಾಹಕರಿಗೆ ದೊರೆಯುವ ಹಕ್ಕುಗಳು ಏನೇನು?
ನಿರ್ವಾಹಕರಾಗಲು ಸಮುದಾಯದಲ್ಲಿ ನಂಬಿಕಸ್ಥರಾಗಿರಬೇಕು. ಸಮುದಾಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವವರಾಗಿರಬೇಕು. ನೀವು ನಿರ್ವಾಹಕರಾಗಲು ಬಯಸಿದಲ್ಲಿ ಪಿನ್ ಬೋರ್ಡಿನಲ್ಲಿ ನಿಮ್ಮನ್ನು ನೀವೇ ಹೆಸರಿಸಿಕೊಳ್ಳಬಹುದು, ಅಥವಾ ಬೇರೊಬ್ಬರಿಂದ ಸೂಚಿಸಿಕೊಳ್ಳಬಹುದು. ಸದಸ್ಯರೆಲ್ಲರ ಮತಗಳಿಂದ ನಿರ್ವಾಹಕರನ್ನು ಆಯ್ಕೆಮಾಡಲಾಗುತ್ತದೆ. ಆದರೆ ಕೊನೆಯ ತೀರ್ಪು ಇತರ ನಿರ್ವಾಹಕರು, ಸಂಸ್ಥಾಪಕರದ್ದು. ನಿರ್ವಾಹಕರಿಗೆ ದೊರೆಯುವ ಸವಲತ್ತುಗಳು:
- ಲೇಖನಗಳನ್ನು ಸಬ್ಮಿಶನ್ ಕ್ಯೂ ನಿಂದ ಭಡ್ತಿ ನೀಡುವ ಅಧಿಕಾರ.
- ಲೇಖನಗಳನ್ನು ಸಬ್ಮಿಶನ್ ಕ್ಯೂಗೆ ಒಳಪಡಿಸದೆಯೇ ಸೇರಿಸುವ ಅಧಿಕಾರ.
- ಚಿತ್ರಗಳನ್ನು ಸೇರಿಸುವ ಸವಲತ್ತು.
- ಇಡೀ ತಾಣದ ನಿರ್ವಹಣೆಯ (ಸೇರಿಸುವಿಕೆ, ತೆಗೆದುಹಾಕುವಿಕೆ) ಅಧಿಕಾರ.
ಮತ್ತು ಇನ್ನೂ ಹಲವು ಅಧಿಕಾರಗಳು.
ನೀವು ಪ್ರಜಾವಾಣಿಯಿಂದ ಆಗಾಗ್ಗೆ ಲೇಖನಗಳನ್ನು ಸಂಪದದಲ್ಲಿ ಲಿಂಕ್ ಮಾಡುವುದನ್ನು ಗಮನಿಸಿದ್ದೇನೆ. ಇದಕ್ಕೆ ಅವರ ಅನುಮತಿಯೇನಾದರೂ ಬೇಕಾಗುತ್ತದೆಯೇ? ಇತರೆ ಪುಸ್ತಕ, ಪತ್ರಿಕೆಗಳಿಂದ ಬರಹಗಳನ್ನು ಇಲ್ಲಿ ಹಾಕಬಹುದೇ?
ಬರಿಯ ಲಿಂಕ್ ಕೊಡೋದ್ರಿಂದ ತೊಂದರೆಯೇನೂ ಇಲ್ಲ. ಅವರ ಅನುಮತಿಯೇನೂ ಬೇಡ. ನಾವೇನೂ ಅವರ ಕಂಟೆಂಟ್ ಕಾಪಿ ಮಾಡುತ್ತಿಲ್ಲವಲ್ಲ.
ಅವರ ತಾಣಕ್ಕೆ ಜನರನ್ನು ಕರೆದೊಯ್ಯುತ್ತಿದ್ದೇವೆ ಅಷ್ಟೆ. ಲೇಖನದಿಂದ ಅಲ್ಪ ಸ್ವಲ್ಪ quote ಮಾಡಿದರೂ ತೊಂದರೆ ಇಲ್ಲ. ಚಿತ್ರಗಳನ್ನು ಉಪಯೋಗಿಸುವಾಗ 'ಫೇರ್ ಯೂಸ್' ಅಪ್ಪ್ಲೈ ಆಗುತ್ತದೆ. ಫೇರ್ ಯೂಸ್ ಪ್ರಕಾರ ದಿನಪತ್ರಿಕೆಗಳ ಫೋಟೋಗಳನ್ನು ಅವರಿಗೆ ಸರಿಯಾದ ಕ್ರೆಡಿಟ್ಟೊ, ಲಿಂಕೊ ಕೊಟ್ಟು ಉಪಯೋಗಿಸಿದಲ್ಲಿ ತೊಂದರೆಯಿಲ್ಲ. ಇನ್ನು ಸಂಪೂರ್ಣ ಬರಹಗಳನ್ನು ಸೇರಿಸುವಾಗ ಅವು ನಿಮ್ಮದೇ ಆಗಿರಬೇಕು (ವಿಮರ್ಶಾತ್ಮಕವಾದಲ್ಲಿ ಲೇಖನದ, ಪುಸ್ತಕದ ಚುಟುಕುಗಳನ್ನು ಸೇರಿಸುವಾಗ ತೊಂದರೆ ಇಲ್ಲ). ನಿಮ್ಮದಲ್ಲದಿದ್ದಲ್ಲಿ ಕರ್ತೃವಿನ ಅನುಮತಿ ತೆಗೆದುಕೊಂಡಿರಬೇಕು.

- Login or register to post comments
- 10779 hits
- Email this page




RSS:
ಪ್ರತಿಕ್ರಿಯೆಗಳು
How can I enjoy Sampada in public cyber center?
Dear sir,Is it possible to install Unicode in a public cyber cafe center?
ಯಾಕಾಗಬಾರದು?
ಯಾಕಾಗಬಾರದು? ನೀವು ಪ್ರಯತ್ನಿಸಬೇಕಷ್ಟೆ!
ನೀವು ಭೇಟಿ ಕೊಡುವ ಸೈಬರ್ ಸೆಂಟರಿಗೆ ಕನ್ನಡ ಹಾಕಲು ಕೇಳಿಕೊಳ್ಳಿ! ಎಲ್ಲರೂ ಧನಿ ಎತ್ತಿದಾಗಲೇ ಅದು ಸಾಧ್ಯವಾಗೋದು!
ಬೆಂಗಳೂರು, ಚಿಕ್ಕಮಗಳೂರುಗಳಲ್ಲೇ ಸೈಬರ್ ಕೆಫೆಗಳಲ್ಲಿ ಕನ್ನಡ ಸೌಲತ್ತು ಕೊಡದಿದ್ದರೆ ಹೇಗೆ?
ಇಲ್ಲಿ ಯುನಿಕೋಡ್ ಸಹಾಯ ಪುಟದಲ್ಲಿ ಕೊಟ್ಟಿರುವ ಮಾಹಿತಿಯನ್ನು ನಿಮ್ಮ ಸೈಬರ್ ಕೆಫೆಯವರಿಗೆ ಒದಗಿಸಿ. ಸೈಬರ್ ಕೆಫೆ ನಡೆಸುವವರು ಕನ್ನಡದವರಾಗಿದ್ದರಂತೂ ಖಂಡಿತ ಗಂಭೀರವಾಗಿ ತಲೆಗೆ ಹಚ್ಚಿಕೊಂಡು ಮಾಡಿಕೊಡುವರು.
--
"ಹೊಸ ಚಿಗುರು, ಹಳೆ ಬೇರು"
er!
ನಾಡಿಗರೇ,
ನಿಮ್ಮ ಉತ್ತರ ಓದಲೂ ಅವರಿಗೆ unicode ಬೇಕಲ್ಲಾ!!
ಯುನಿಕೋಡ್ ಪಜೀತಿ
ಇವರು ಯುನಿಕೋಡಿನಲ್ಲಿರುವ ಲೇಖನವೊಂದಕ್ಕೆ ಕಾಮೆಂಟ್ ಬರೆದಿದ್ರಪ್ಪ... (ಅಲ್ಲಿಗೆ ಓದ್ಲಿಕ್ಕಾಗ್ತಿದೆ ಎಂದರ್ಥ) ಅದಕ್ಕೆ ಯುನಿಕೋಡಿನಲ್ಲಿ ಟೈಪಿಸಿದೆ!
--
"ಹೊಸ ಚಿಗುರು, ಹಳೆ ಬೇರು"
ಉ: ಯುನಿಕೋಡ್ ಪಜೀತಿ
ನಾಡಿಗರೇ,
ಉದಾ: ಜೋನ ಆಫ್ ಆರ್ಕ್ ಕ್ಯಾಥೊಲಿಕ್ ಚರ್ಚಿನ ಸಂತರಲ್ಲೊಬ್ಬಳು.
ಇಲ್ಲಿ 'ಜೋನ ಆಫ್ ಆರ್ಕ್' ಎಂಬುದಕ್ಕೆ ಲಿಂಕ್ ಕೊಟ್ಟದ್ದು ಹೇಗೆಂದು ಈ ಉದಾಹರಣೆಯೊಂದಿಗೆ ತಿಳಿಸಬಲ್ಲಿರಾ?
ಕೃಷ್ಣ ಪ್ರಕಾಶ ಬೊಳುಂಬು
ಉ: ಯುನಿಕೋಡ್ ಪಜೀತಿ
ಅಲ್ಲೇ ಮೇಲೆ ಇದೆ ನೋಡಿ. ಅಲ್ಲಿರುವ ಚಿತ್ರದಲ್ಲಿ ಟೈಪ್ ಮಾಡಿದ್ದು syntax ಇದೆ.
ಉ: ಯುನಿಕೋಡ್ ಪಜೀತಿ
ಜೋನ_ಆಫ್_ಆರ್ಕ್
ಉ: ಯುನಿಕೋಡ್ ಪಜೀತಿ
ಯುರೇಕಾ!
ಉ: FAQ (ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು)
points sikkkidare eenu ? adara prayoojana eenu?
vasista
9945694337