ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಮಕ್ಕಳಿಗೆ ಅವರ ತಾಯಿ ಸುಂದರ ! ಇದು ನಿಜಕ್ಕೂ ಅತಿ ಸುಂದರವಾದ ಕಲ್ಪನೆ ! ಆದರೆ.....

July 16, 2008 - 7:06pm — venkatesh

ನಾನು ಚಿಕ್ಕವನಾಗಿದ್ದಾಗ, ಓದಿದ ಕಥೆಯ ನೆನಪು. ನೀವೂ ಅದನ್ನು ಓದಿರಲು ಸಾಧ್ಯ ! ಇದು ಒಂದು ರಶ್ಯದೇಶದ ಕಥೆ. ಅಲ್ಲಿನ ಗ್ರಾಮವೊಂದರಲ್ಲಿ ಕೆಲಸಮಾಡುವ ಬೇಸಾಯಗಾರನ ಮಡದಿ, ತನ್ನ ಹೊಲದಲ್ಲಿ ಕೆಲಸಮಾಡುತ್ತಿರುವಾಗ, ಏನೋಕಾರಣದಿಂದ, ತನ್ನ ಪ್ರೀತಿಯ ಪುಟ್ಟಮಗುವನ್ನು ಸ್ವಲ್ಪಕಾಲ ಅಗಲಿರುತ್ತಾಳೆ. ಮಗು, ಗಟ್ಟಿಯಾಗಿ ಅಳುತ್ತಿರುತ್ತದೆ. ಪಕ್ಕದ ಹೆಂಗೆಳೆಯರು, ತಮ್ಮ ಬುದ್ಧಿಯನ್ನೆಲ್ಲಾ ಉಪಯೋಗಿಸಿ ಮಗುವಿನ ರೋದನವನ್ನು ನಿಲ್ಲಿಸಲು ಪ್ರಯತ್ನಿಸುತ್ತಾರೆ. "ಯಾರು ನಿನ್ನತಾಯಿ, ಅವರ ಹೆಸರೇನು, ಹೇಗಿದ್ದಾರೆ ಅವರು "? ಇದಕ್ಕೆ ಉತ್ತರ, " ವಿಶ್ವದಲ್ಲೇ ಅತಿ ಸುಂದರಿ ನಮ್ಮಮ್ಮ, ಅವರು ನನಗೆ ಬೇಕು " ಮಗು ಅಳುತ್ತಲೇ ಇದೆ. ಯಾರಿಗೂ ಮಗುವಿನ ಅಳಲನ್ನು ಅರ್ಥಮಾಡಿಕೊಳ್ಲಲಾಗಲಿಲ್ಲ. ಸರಿ, ಯಾರನ್ನು ತೋರಿಸಿದರೂ ಮಗು ಸುಮ್ಮನಾಗಲೇ ಇಲ್ಲ. ಸುಂದರವಾಗಿದ್ದ ತಾಯಂದಿಯರೆಲ್ಲಾ ತಮ್ಮ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ! ಸ್ವಲ್ಪಸಮಯವಾದಮೇಲೆ, ವಯಸ್ಸಾಗಿದ್ದ, ಜೋಲುಮುಖದ, ನೋಡಲು ಅಷ್ಟೇನೂ ಮುದಕೊಡದ ಹೆಂಗಸು, ಆ ಮಗುವಿನ ತಾಯಿ, ಅಳುತ್ತಾ ಓಡಿಬಂದರು. ಮಗುವನ್ನು ಎತ್ತಿಮುದ್ದಾಡಿ ಸಮಾಧಾನಮಾಡಿದರು. ಖಂಡಿತವಾಗಿ ಆ ಮಗುವಿಗೆ ತನ್ನ ತಾಯಿ, ವಿಶ್ವದಲ್ಲೇ ಅತಿಸುಂದರಿ ! ಮಾತೃವಿನ ಮಮತೆ, ಅತಿಸುಂದರ, ಅಲ್ಲವೇ !

ಆದರೆ ಇಂದಿನಮಕ್ಕಳು, ನನ್ನ ತಾಯಿ ಸುಂದರಿಯಲ್ಲ, ಎಂದು ಕಟುಸತ್ಯವನ್ನು ಬಯಲಿಗೆಳೆಯಬಹುದು ! ಏನಂತೀರ.

  • ಚಿಂತನೆ
~.~
  • Login or register to post comments
  • 270 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 16, 2008 - 11:16pm — Deeparavishankar

ಉ: ಮಕ್ಕಳಿಗೆ ಅವರ ತಾಯಿ ಸುಂದರ ! ಇದು ನಿಜಕ್ಕೂ ಅತಿ ಸುಂದರವಾದ ಕಲ್ಪನೆ ! ಆದರೆ.....

Deeparavishankar's picture

ಪ್ರತಿಯೊಬ್ಬರಿಗೂ ತಮ್ಮ ತಾಯಿ ಸು೦ದರಿ ಎ೦ಬ ಕಲ್ಪನೆ ಸು೦ದರವಾಗಿದೆ. ಆದರೆ ಕೊನೆಯ ಸಾಲು..’ಆದರೆ ಇಂದಿನಮಕ್ಕಳು, ನನ್ನ ತಾಯಿ ಸುಂದರಿಯಲ್ಲ, ಎಂದು ಕಟುಸತ್ಯವನ್ನು ಬಯಲಿಗೆಳೆಯಬಹುದು ! ಏನಂತೀರ’ ಅದೇಕೆ? ಹಿ೦ದಿನದೆಲ್ಲ ಅದ್ಭುತ, ಇ೦ದಿನದೆಲ್ಲ ತಪ್ಪು ಎ೦ಬ ಮೈ೦ಡ್ ಬ್ಲಾಕ್ ಏಕೆ? ನನ್ನ ಮಗಳಿಗೆ ನಾನೇ ಅತಿಲೋಕ ಸು೦ದರಿ ಅವಳ ಮಗುವಿಗೆ ಅವಳೇ ತ್ರಿಪುರ ಸು೦ದರಿ..ತಾಯಿ ಅತ್ಯುತ್ತಮ ಎ೦ಬ ಭಾವ ಕಾಲಾತೀತ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2008 - 11:35pm — venkatesh

ಉ: ಮಕ್ಕಳಿಗೆ ಅವರ ತಾಯಿ ಸುಂದರ ! ಇದು ನಿಜಕ್ಕೂ ಅತಿ ಸುಂದರವಾದ ಕಲ್ಪನೆ ! ಆದರೆ.....

venkatesh's picture

ಹೌದು. ತಾಯಿಯಾಗಿ ನೀವು ಹೇಳುತ್ತಿರುವುದು ಸತ್ಯ. ಪ್ರೀತಿ, ಮಾತೃವಾತ್ಸಲ್ಯಕ್ಕೆ ಸರಿಸಮನಾದದ್ದು ಈ ಜತ್ತಿನಲ್ಲಿ ಬೇರೆ ಇದೆಯೇ ? ಸಾರ್ವಕಾಲಿಕವಾದ ಸತ್ಯವಿದು. ನಾನು ಹೇಳಿದ್ದು, ಇಂದಿನಮಕ್ಕಳಿಗೆ, ಅದೇ ತರಹ ಪ್ರಶ್ನೆ ಹಾಕಿದರೆ, ಅಮ್ಮ ನನಗೆ ಇಷ್ಟ, ಅನ್ನಬಹುದು. ಇದು ಆಬ್ವಿಯಸ್ ಉತ್ತರ. ಆದರೆ ಸೌಂದರ್ಯದ ಪ್ರಶ್ನೆ ಬಂದಾಗ, "ನೀನು ಅಷ್ಟು ಚೆನ್ನಾಗಿಲ್ಲ ಆದ್ರೂ ನೀನು ನನಗೆ ಬೇಕು," ಅನ್ನುವ ಸಾಧ್ಯತೆಯ ಬಗ್ಗೆ, ನಾನು ಹೇಳೀದ್ದು ! ಮೀಡಿಯಗಳಿಗೆ ಮೈಒಡ್ಡಿದಾಗ, ಈ ಸಂದರ್ಯಪ್ರಜ್ಞೆ ಬಂದರೆ ಆಶ್ಚರ್ಯವಿಲ್ಲ !
ಇದನ್ನು ನಾನು ಮಕ್ಕಳಬಾಯಿನಿಂದ ಕೇಳಿದ್ದೇನೆ. ಇದರಬಗ್ಗೆ ಏನೂ ಕೇಳಲು ನಾನು ಇಚ್ಛಿಸುವುದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2008 - 11:45pm — venkatesh

ಉ: ಮಕ್ಕಳಿಗೆ ಅವರ ತಾಯಿ ಸುಂದರ ! ಇದು ನಿಜಕ್ಕೂ ಅತಿ ಸುಂದರವಾದ ಕಲ್ಪನೆ ! ಆದರೆ.....

venkatesh's picture

ಹಿ೦ದಿನದೆಲ್ಲ ಅದ್ಭುತ, ಇ೦ದಿನದೆಲ್ಲ ತಪ್ಪು ಎ೦ಬ ಮೈ೦ಡ್ ಬ್ಲಾಕ್ ಏಕೆ ?

ಇದನ್ನೇ ನಾನೂ ಕೇಳಲು ಇಚ್ಛಿಸುತ್ತೇನೆ. ನಾನು ಹೇಳಿದ್ದು, ಮೀಡಿಯಾಗಳ ಮಹತ್ವ ಚಿಕ್ಕಮಕ್ಕಳನ್ನೂ ಬಿಟ್ಟಿಲ್ಲ., ಅನ್ನೊದನ್ನ. ಒಮ್ಮೆ ಅಮ್ಮ ಸ್ವಲ್ಪ ಹಳೆಸೀರೆಉಟ್ಟುಕೊಂಡಾಗ, ಹೆರಳು ಸ್ವಲ್ಪ ಅಸ್ತವ್ಯಸ್ತವಾಗಿದ್ದಾಗ, ಗಮನಿಸಿದಮಗುವಿಗೆ, " ನಾನು ಚೆನ್ನಾಗಿಲ್ಲವೆ ಪುಟ್ಟ " ಅಂದು ನೋಡಿ. "ಅಮ್ಮ ನೀನು ಚನ್ನಾಗಿಲ್ಲ, ಐಶ್ವರ್ಯ ಆಂಟಿ ಎಷ್ಟು ಚೆನ್ನಾಗಿದಾರಲ್ಲ," ಅಂತ ಮಗುವಿನಬಾಯ್ನಲ್ಲಿ ಉತ್ತರಬಂತೋ, ನಿಮ್ಮ ಮುಖಕಪ್ಪಿಟ್ಟುಹೋಗುತ್ತೆ. ಆದರೆ, ಮಗು ಪ್ರೀತ್ಸುವುದು, ನಿಮ್ಮನ್ನ ; ಐಶ್ವರ್ಯ ಆಂಟಿನ ಖಂಡಿತಾ ಅಲ್ಲ. ಇದನ್ನ ನಾನು ಹೇಳ್ತಾ ಇರೋದು.
ಉತ್ತರ ಕೊಡ್ಬೇಡಿ. ನಾನು ಕೇಳ್ಸ್ಕೊಳಲ್ಲ. ನಮಸ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಕ್ಕಳಿಗೆ ತಮ್ಮ ತಾಯಿ ತುಂಬಾ ಸುಂದರಿ ಎಂಬ ಭಾವನೆಯೇ?
  • "ಈಗ" ಅಪ್ಪ ಎಲ್ಲಿದ್ದಾನೆ?!
  • ಮಾನವೀಯತೆ
  • ತಾಯಿಯ ನಾಕನೇ ಮುಖ
  • ಪರಿಶುದ್ಧ ಚರಿತ್ರ
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ
  • Google Chrome ಮತ್ತು Java Applet
  • ಗೂಗಲ್ ಕ್ರೋಮ್ ಕ್ರಾಶ್ ಆಯ್ತಂತೆ
  • ಗೂಗಲ್ ಕ್ರೋಮ್ ಎಷ್ಟು ಸುರಕ್ಷಿತ?
  • Splendours of Royal Mysore
  • A Bicycle in Bettalli - ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಿಂದ ಆಯ್ದ ಭಾಗದ ಇಂಗ್ಲಿಶ್ ಅನುವಾದ

ಇತ್ತೀಚಿನ ಪ್ರತಿಕ್ರಿಯೆಗಳು

  • anupkumart
    ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
    September 5, 2008 - 9:57am
  • anil.ramesh
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 9:40am
  • anil.ramesh
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 9:37am
  • Sunil Jayaprakash
    ಉ: ಗಣಪನ ಗಂಡಾಂತರಗಳು ಅನೇಕ
    September 5, 2008 - 9:27am
  • Sunil Jayaprakash
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 8:54am
  • Sunil Jayaprakash
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 8:53am
  • savithasr
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 8:00am
  • savithasr
    ಉ: ವಿನಾಯಕನ ಇ-ಮೇಲ್!
    September 5, 2008 - 7:48am
  • skakkilaya
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 7:39am
  • hpn
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 3:11am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 77 ಅತಿಥಿಗಳು ಆನ್ಲೈನ್ ಇರುವರು.


ಕಣ್ಣಿಗೆ ಕಣ್ಣು ತತ್ವವು ಇಡೀ ಜಗತ್ತನ್ನು ಕುರುಡಾಗಿಸುವುದು

— ಮಹಾತ್ಮಾ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator