ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ನನ್ನನ್ನು ಯಾರಾದ್ರು ದತ್ತು ತಗೊಳ್ತಾರ್ಯೆ ?

July 19, 2008 - 5:53am — yuvapremi

ಒಂದೂರ್ನಲ್ಲಿ ಒಬ್ಬ ಚಿಕ್ಕ ಹುಡುಗ ಇದ್ದ. ಇವನಿಗೆ ತಾನಿದ್ದ ಪ್ರಪಂಚ ಯಾಕೊ ತನಗೆ ನೆಮ್ಮದಿ ನೀಡುತ್ತಿಲ್ಲ, ತನ್ನ ಕನಸುಗಳಿಗೆ ಯಾರೂ ಸ್ಪಂದಿಸುತ್ತಿಲ್ಲ, ಈ ಪ್ರಪಂಚ ತಾನು ಅಂದುಕೊಂಡಂತೆ ಕಾಣುತ್ತಲಿಲ್ಲ ಅನ್ನುವುದನ್ನೆ ಮನಸಿನಲ್ಲಿ ಚರ್ಚಿಸುತ್ತಿದ್ದ. ಇಂತಹ ಪ್ರಪಂಚದಲ್ಲಿ ನನ್ನನ್ನು ಪ್ರೀತಿಸಿ ನನ್ನ ಕನಸುಗಳ ಕೈಹಿಡಿದು ನಡೆಸುವವರು ಯಾರೂ ಇಲ್ಲವೇ ಎನ್ನುತ್ತ ಮೂಖ ದ್ವನಿಯಲ್ಲಿ ಯಾರದ್ರು ನನ್ನ ಕಡೆ ಗಮನ ಕೊಡಿ ಎಂದು ಕೂಗುತ್ತಿದ್ದ.

ಬನ್ನಿ, ಈ ಚಿಕ್ಕ ಹುಡುಗನ ತೊಳಲಾಟ ಹಾಗು ಅವನ ಮನಸಿನ ಅಳಲನ್ನು ಅವನ ಮಾತಿನಲಿಯೇ ಕೇಳೋಣ.

ನಾನು ಚಿಕ್ಕವನು, ಈ ಪ್ರಪಂಚ ನನಗಿಂತ ಬಹಳಾನೇ ದೊಡ್ಡದು,ಆದರೆ ನನಗಿಂತಲೂ ಚಿಕ್ಕದಾಗಿರುವ ನನ್ನ ಕನಸುಗಳನ್ನು ಕೇಳುವ ಕಿವಿಗಳು ಈ ದೊಡ್ಡ ಪ್ರಪಂಚದಲ್ಲಿ ಇಲ್ಲದಂತೆ ಕಾಣುತ್ತಲಿದೆಯಲ್ಲ ಏಕೆ ? ಬಹುಶಃ ನನ್ನಂತಹ ಚಿಕ್ಕವರು ಕನಸು ಕಾಣುವುದೇ ಅಪರಾದವೇ ? ಇದು ಅಪರಾಧವಾದರೆ ನನ್ನನ್ನು ಈ ಪೋಲಿಸ್ನವರು ಹಿಡಿದುಕೊಂಡು ಹೋಗ್ತಾರ್ಯೆ ? ಇದ್ದರೂ ಇರಬಹುದು, ಸದ್ಯ ನಾನು ನನ್ನ ಕನಸುಗಳನ್ನು ಯಾರಲ್ಲೂ ಹೇಳಿಲ್ಲ. ಹೇಳಿಲ್ಲ ಅನ್ನುವುದಕಿಂತ ಯಾರೂ ನನ್ನ ಕನಸಿನ ಬಗೆಗೆ ಗಮನ ಕೊಟ್ಟಿಲ್ಲ. ಬದುಕಿದೆ ಬಡ ಜೀವ.

ಈ ದೊಡ್ಡವರು ತಾವು ದೊಡ್ಡವರು ಎನ್ನುತ್ತ ನಮ್ಮಂತಹ ಚಿಕ್ಕವರ ಕಡೆಗೆ ಗಮನವೇ ಇಲ್ಲದಂತೆ ಇದ್ದಾರೆ ಏಕೆ ? ಬಹುಶಃ ಇವರು ನನ್ನತ್ತ ನೋಡಯೂ ನೋಡದಂತೆ ನಟಿಸುತ್ತಿದ್ದಾರ್ಯೆ ?

ಇವರು ನಟಿಸಿದರೂ ಪರವಿಲ್ಲ, ಆದರೆ ಒಮೊಮ್ಮೆ ನನ್ನ ಕನಸುಗಳನ್ನ ಕೇಳಿ ಹಲ್ಲು ಕಿರಿದು ನಗೋದು ಏಕೆ ? ನನ್ನ ಕಲ್ಪನೆಯ ಕನಸುಗಳಲ್ಲಿ ಕಾಸು ಹುಟ್ಟುವುದಿಲ್ಲ ಎಂದೇ ? ಆದರೆ ಈ ದೊಡ್ಡವರಿಗೆ ಕಾಸು ಬಿಟ್ಟರೆ ಬೇರೇನು ಬೇಡವೆ ? ನಾನು ಇವರಂತೆ ದೊಡ್ಡವರಾದಾಗ ಬೇಕಿದ್ರೆ ಇವರಿಗೆ ಬಹಳಾ ಕಾಸು ಕೊಡ್ತೀನಿ ಅಂತ ಹೇಳಿದ್ರೆ ಆಗ ಇವರು ನನ್ನ ಕನಸಿಗೆ ಬೆಲೆಕೊಡುವರೆ ? ಇವರು ನನ್ನ ಕನಸುಗಳಿಗೆ ಬೆಲೆ ಕೊಡದಿದ್ದರೂ ಪರವಿಲ್ಲ, ಅವರು ನನ್ನ ಕನಸುಗಳ ಕಡೆ ಕೈತೋರಿ ನಗ್ತಾರೆ ಏಕೆ ? ನನ್ನ ಕನಸುಗಳು ಅಷ್ಟು ಕಪ್ಪಿದ್ಯೇ ? ಆದ್ರೆ ನನ್ನ ಕನಸು ಕಾಮನಬಿಲ್ಲಿನಂತೆ ಎಲ್ಲಾ ಬಣ್ಣಗಳನ್ನು ಹೊಂದಿದ್ಯೆಲ್ಲ, ಆದ್ರು ಇವರು ನಗೋದು ಏಕೆ ?

ನನ್ನ ಕನಸುಗಳು ಮಾಡಿದ ತಪ್ಪಾದರೂ ಏನು ? ಗೋಡೆಯ ಮೇಲೆ ನನ್ನ ಕೈನಲ್ಲಿ ಇರುವ ಇದ್ದಲಿನಿಂದ ಚಿತ್ರ ಬಿಡಿಸಿ ಆ ಚಿತ್ರದ ಜೊತೆಗೆ ಮಾತನಾಡುವುದೂ ತಪ್ಪೆ ? ಮೊನ್ನೆ ಹೀಗೆ ನಾನು ನಮ್ಮ ಮನೆಯ ಮುಂದಿನ ಗೋಡೆಯ ಮೇಲೆ ಒಂದು ಚಿಟ್ಟೆಯ ಚಿತ್ರ ಬರೆದಿದ್ದೆ, ಆಗೆ ನಮ್ಮವ್ವ ಬಂದು ನನಗೆ ಗೋಡೆ ಅಂದ ಕೆಡಿಸಿದೆ ಅಂತ ನನ್ನ ಕೈ ಮೇಲೆ ಬರೆ ಹಾಕಿದ್ಳು. ನನ್ನ ಒಂದು ಚಿಕ್ಕ ಕನಸನ್ನು ಬರೆದು ಅದರ ಜೊತೆಗೆ ನಲಿಯಲು ಈ ದೊಡ್ಡವರು ನನಗೊಂದು ಗೋಡೆಯನ್ನು ಬಿಡಲಾಗುವುದಿಲ್ಲವೇ ?

ಈ ಗೋಡೆಯ ವಿಷಯ ಹಾಗೆ ಇರಲಿ. ಹಿಂದೆ ಒಂದು ದಿನ ನಾನು ಮಣ್ಣಿನಲ್ಲಿ ಒಂದು ಸುಂದರ ದೇವರ ಮೂರ್ತಿಯನ್ನು ಮಾಡಿದ್ದೆ, ಆ ಮೂರ್ತಿ ಎಷ್ಟು ಚನ್ನಾಗಿತ್ತು. ಸಾಕ್ಷಾತ್ ದೇವರೆ ಮಗುವಾಗಿ ನನ್ನ ಕೈನಲ್ಲಿ ಆಟವಾಡುವಂತಿತ್ತು. ಆದ್ರೆ ಎಲ್ಲಿದ್ಳೊ ನಮ್ಮವ್ವ, ದೆವ್ವದ ತರ ಬಂದು "ಬಟ್ಟೆಯಲ್ಲ ಮಣ್ಣು ಮಾಡ್ಕೊಂಡ್ಯೇನೊ ಮೂದೇವಿ" ಅಂತ ನನ್ನ ಕೈನಲ್ಲಿ ಇದ್ದ ಮೂರ್ತಿಯನ್ನ ಮುರಿದು ಮೋರಿಗೆ ಹಾಕ್ಬಿಟ್ಳು. ಈ ದೊಡ್ಡವರಿಗೆ ನನ್ನ ಅಂಗೈ ಅಗಲದ ಚಡ್ಡಿ ಮಣ್ಣಾದರೆ ಅರಗಿಸಿಕೊಳ್ಳಲಾಗದ ಅಣಕ ಏಕೆ ? ನಾನು ಮಾಡಿದ ಮೂರ್ತಿ ಇವರ ಕೈಗೆ ಶಾಪ ಕೊಟ್ಟು ಹುಳು ಬೀಳೀಸ್ಲಿ. ಬೇಕಿದ್ರೆ ಇವರು ಕೊಟ್ಟಿರುವ ಚಡ್ಡಿಯೇ ನನಗೆ ಬೇಡ. ನಾನು ಬೇಕಿದ್ರೆ ಹಾಗೆ ಬೆತ್ತಲೆ ನಿಂತಿರ್ತಿನಿ.

ಇದೆಲ್ಲ ಹಾಗೆ ಇರ್ಲಿ, ಇವರು ನನ್ನ ಕನಸುಗಳನ್ನು ಏನು ಕೈ ಹಿಡಿಯುವುದು ಬೇಡ. ನನ್ನ ಕನಸನ್ನು ನಾನೇ ಕಾಪಾಡಿಕೊಳ್ಳುವೆ.ಇವರು ನನಗೆ ಜನ್ಮ ಕೊಟ್ಟದ್ದಕ್ಕಾದರು ನನಗೆ ದಿನದ ಒಂದು ಹೊತ್ತಿನಷ್ಟು ಪ್ರೀತಿ ತೋರಿಸಿದ್ರೆ ಸಾಕಿತ್ತು.ಅದನ್ನೂ ಮಾಡುವುದಿಲ್ಲ ಏಕೆ ? ಸದಾ ಕಾಸು ಎಣಿಸ್ತಾಯಿರ್ತಾರೆ, ಈ ಕಾಸೊ ಅನ್ನೋದು ಯಾರು ಮಾಡಿದ್ದು, ಆ ದೇವರು ಈ ಕಾಸುಗಳನ್ನು ನಮ್ಮಂತೆ ಶೃಷ್ಟಿಸಿದನೆ ? ಆ ಒಂದೊಂದು ಕಾಸಿಗೂ ಅಪ್ಪ ಅಮ್ಮ ಇದ್ದಾರ್ಯೆ ? ಈ ದೊಡ್ಡವರು ಈ ಕಾಸನ್ನು ಹೀಗೆ ಬಾರಿ ಬಾರಿ ಎಣಿಸ್ತಾಯಿರೋದಾದ್ರು ಏಕೆ ? ಒಳ್ಳೆ ಅದರ ಕೊರಳನ್ನು ಮಿಸುಕುವ ಹಾಗೆ ಇದೆ. ಆ ದೇವರು ನನ್ನನ್ನು ಭೋಮಿಯ ಮೇಲೆ ಕಳಿಸಿಕೊಟ್ಟಾಗ ನನ್ನ ಚಿಕ್ಕ ಜೇಬಿನಲ್ಲಿ ಒಂದು ನಾಲ್ಕು ಕಾಸು ಕೊಟ್ಟು ಕಳುಹಿಸಿದ್ದರೆ ಬಹುಶಃ ಆಗ ಈ ದೊಡ್ಡವರು ನನ್ನನ್ನು ಪ್ರೀತಿಸ್ತಾ ಇದ್ರೇನೊ.ಆದ್ರೆ ನನ್ನ್ ಅಂಗಿಗೆ ಜೇಬೇ ಇಲ್ಲವಲ್ಲ. ಒಳ್ಳೆ ಕರ್ಮ ನನ್ನದು.

ಎಂತಾ ವಿಪರ್ಯಾಸದ ಬದುಕು ನನ್ನದು. ಕಾಸಿಲ್ಲದೆ ನನ್ನ ಕನಸುಗಳನ್ನು ಈ ದೊಡ್ಡವರು ಕೇಳುವುದಿಲ್ಲ, ನನ್ನ ಕನಸಿಗೆ ಆಸರೆ ಸಿಗದಿದ್ದರೆ ನಾನು ಬದುಕುವುದಿಲ್ಲ. ನಾನು ಸತ್ತೊಗ್ಬಿಡ್ಳೆ ? ಆದ್ರೆ ನಾನು ಸತ್ತಾಗ ನನ್ನ ಜೊತೆ ನನ್ನ ಕನಸುಗಳು ಸತ್ತೋದ್ರೆ ಎನು ಗತಿ ? ಇಲ್ಲಾ ಇಲ್ಲಾ, ನಾನು ಆಗಲೇ ಸತ್ತಿರುವುದರಿಂದ ನನ್ನ ಕನಸುಗಳು ನನ್ನಲ್ಲೆ ಜೀವಂತವಾಗಿರುತ್ವೆ.ಆದ್ರೆ ನಾನು ಸಾಯೋದಾದ್ರು ಹೇಗೆ ? ಯಾರೊ ಹೇಳಿದ್ರು,ನೀರಿಗೆ ಬಿದ್ರೆ ಸತ್ತೊಗ್ತಾರೆ ಅಂತ.ಹಾಗಿದ್ರೆ ನಾನು ನಮ್ಮ ಮನೆಯಲ್ಲಿರುವ ನೀರಿನ ಕೊಳಗದಲ್ಲಿ ಬಿದ್ಬಿಡ್ಲೆ ? ಆದ್ರೆ ನನಗೆ ನೀರು ಅಂದ್ರೆ ತುಂಬಾ ಭಯನಪ್ಪ. ಹಾಗಿದ್ರೆ ನಾನು ಸಾಯದೆ ನನ್ನ ಕನಸುಗಳನ್ನು ಬದುಕಿಸಿಕೊಳ್ಳುವುದಕ್ಕೆ ಆಗುವುದಿಲ್ಲವೇ ?

ಮೊನ್ನೆ ನಾನು ಟೀವಿ ನಲ್ಲಿ ಒಂದು ಚಿತ್ರ ನೋಡಿದೆ,ಅದ್ರಲ್ಲಿ ಒಬ್ಬ ಹುಡುಗನನ್ನು ಯಾರೊ ದೊಡ್ಡವರು ದತ್ತು ತಗೊಂಡಿದ್ರು. ಆ ಹುಡುಗ ಅವರ ಮೆನಯಲ್ಲಿ ಹೋಗಿ ಬಹಳಾ ಸುಖವಾಗಿದ್ದ.ಬಣ್ಣ ಬಣ್ಣದ ಬಟ್ಟೆ, ಚಿತ್ರ ಬಿಡಿಸೋದಕ್ಕೆ ಮನೆಯಲ್ಲಿ ಇರುವ ಗೋಡೆಯಲ್ಲ ಅವನಿಗೇ ಕೊಟ್ಟಿದ್ರು.ಅವನು ಮಣ್ಣಿನಲ್ಲಿ ಆಟವಾಡ್ತಿದ್ರು ಅವನನ್ನ ನೋಡಿದ ಆ ದೊಡ್ಡವರು "ನೀನು ಎಷ್ಟು ಚನ್ನಾಗಿ ಆಟವಾಡ್ತೀಯ, ನಮ್ಮ ಮುದ್ದು ಮಗು ನೀನು" ಅಂತ ಬಾಚಿ ಅಂಪ್ಪಿಕೊಂಡ್ರು. ಹ್ಮೀ...! ಆ ಬಾಚಿ ತಬ್ಬುವ ಕೈಗಳನ್ನು ನಾನು ನಿಜವಾಗಿ ನೋಡಿದ್ದೇ ಇಲ್ಲ. ಬಹುಶಃ ಯಾರದ್ರು ನನ್ನನ್ನು ದತ್ತು ತೆಗೆದುಕೊಂಡ್ರೆ ಅವರು ನನ್ನನ್ನೂ ಬಾಚಿ ತಬ್ಕೊಂಡು ಪ್ರೀತಿ ಮಾಡ್ತಾರ್ಯೆ ಅಲ್ವೆ ?

ಹೌದು ಹೊದು, ಇದ್ದರೂ ಇರಬಹುದು...!! ನಾನು ಈಗಲೇ ದೇವರಲ್ಲಿ ಬೇಡ್ಕೊತೀನಿ, ನನ್ನನ್ನು ಯಾರದ್ರು ದತ್ತು ತೆಗೆದುಕೊಳ್ಳಲಿ ಅಂತ. ನನ್ನನ್ನು ದತ್ತು ತೆಗೆದುಕೊಳ್ಳುವವರು ಏನು ಶ್ರೀಮಂತರಾಗಬೇಕು ಅನ್ನುವುದನ್ನು ನಾನು ಕೇಳುವುದಿಲ್ಲ. ನಮ್ಮ ಹಾಗೆ ಬಡವರಾದರೂ ನನಗೆ ಬೇಸರಾನೇ ಇಲ್ಲ.ನನ್ನ ಹೊಟ್ಟೆ ಬಹಳ ಚಿಕ್ಕದಾದ್ದರಿಂದ ಅವರಲ್ಲಿ ಹೆಚ್ಚು ಊಟ ಕೇಳೊದಿಲ್ಲ. ಒಂದು ಚಿಕ್ಕ ಬಟ್ಟಲಿಗೆ ಒಂದು ಹಿಡಿ ಅನ್ನ ಮತ್ತೆ ಒಂದು ಅರ್ಧ ಲೋಟ ಹಾಲು ಹಾಕಿ ಕೊಟ್ರೆ ಸಾಕು, ನಾನು ಯಾರಿಗೂ ತೊಂದರೆ ಮಾಡದೆ ಮನೆಯ ಮೂಲೆಯಲ್ಲಿ ಕೂತು ಊಟ ಮಾಡ್ತೇನೆ.ನಾನೇ ಬೇಕಿದ್ರೆ ಆ ಬಟ್ಟಲನ್ನ ತೊಳೆದು ಅದು ಎಲ್ಲಿಡ್ಬೇಕೊ ಅಲ್ಲೇ ಇಡ್ತೀನಿ.ಹಾಗೆ ನಾನು ಮಲಗಲು ಅವರ ಮಂಚ ಕೇಳೊದಿಲ್ಲಪ್ಪ.ಅವರು ಮಲಗೊ ಮಂಚದ ಕೆಳಗೆ ನನಗೆ ಒಂದು ಕೈ ಹಿಡಿಯುವ ಬಟ್ಟೆ ಹಾಸಿ ಕೊಟ್ಟರೆ ಸಾಕು. ಅಲ್ಲೇ ನಾನು ನಿದ್ರೆ ಮಾಡ್ತೇನೆ.ನಾನು ನಿದ್ರೆ ಮಾಡುವಾಗಲೂ ಅವರಿಗೆ ತೊಂದರೆ ಮಾಡುವುದಿಲ್ಲಪ್ಪ. ನಾನು ಚಿಕ್ಕವನಿರಬಹುದು,ಆದರೆ ಆ ಚಿಕ್ಕವರಲ್ಲಿ ನಾನು ಬಹಳಾ ದೊಡ್ಡವನು, ಆದ್ದರಿಂದ ನಾನು ಮಲಗಿದ್ದಾಗ ಆಸಿಗೆಯನ್ನು ವದ್ದೆ ಮಾಡೊದಿಲ್ಲ.ನಾನು ಮಣ್ಣಿನಲ್ಲಿ ಆಟವಾಡುವಾಗ ನನ್ನ ಚೆಡ್ಡಿಯನ್ನು ಮಣ್ಣು ಮಾಡಿಕೊಳ್ಳೊದಿಲ್ಲ, ಬದಲಿಗೆ ನಾನು ಆಟವಾಡುವ ಮೊದಲು ಚೆಡ್ಡಿ ಬಿಚ್ಚಿಟ್ಟು ಆಟವಾಡಿದ ನಂತರ ಕೈತೊಳೆದುಕೊಂಡು ಚೆಡ್ಡಿ ಹಾಕಿಕೊಳ್ತೇನೆ.

ಹೋ...!! ನಾನು ಇಷ್ಟು ಹೊತ್ತು ಕನಸು ಕಾಣ್ತಾಯಿದ್ನೆ ? ಇದು ನನಸಾಗಿದ್ರೆ ಎಷ್ಟು ಚನ್ನಾಗಿರ್ತಿತ್ತು. ಆದರೆ ನಾನು ಪಾಪಿ, ನನ್ನನ್ನು ಯಾರು ದತ್ತು ತಗೆದುಕೊಳ್ತಾರೆ ? ಈಗಿನ ಕಾಲದಲ್ಲಿ ದತ್ತು ತೆಗೆದುಕೊಳ್ಳುವುದೆಲ್ಲ ನಾಟಕಗಳಲಷ್ಟೆ. ನನ್ನ ದತ್ತು ಆಗದಿರೋದ್ರಿಂದ ನಾನು ಯೊಚಿಸಿದ ಹಾಗೆ ಬೇಗ ಸಾಯೋದೇ ವಾಸೆ. ಹೌದು, ನಾನು ಇಂದೇ ಸಾಯಬೇಕು. ನಾನು ನಾಳೆ ಸಾಯುವ ಅಂತ ಕೂತ್ರೆ ಅಷ್ಟರಲ್ಲಿ ನಾನು ಇನ್ನೊಂದು ಕನಸು ಕಟ್ಬಿಡ್ತೇನೆ.ಮೊದಲೇ ನಾನು ಚಿಕ್ಕವನು, ನಾನು ಸಾಯುವಾಗ ನನ್ನ ಚಿಕ್ಕ ಕೈನಲ್ಲಿ ಹೆಚ್ಚು ಕನಸುಗಳನ್ನು ಹಿಡಿಯೋದಕ್ಕೆ ಆಗುವುದಿಲ್ಲ.


ಆದ್ರೆ ಈಗಲೇ ಸಾಯಬೇಕು ಅಂದ್ರೆ ಹೇಗೆ ಸಾಯೋದು, ನಮ್ಮ ಮನೆಯ ಹತ್ರ ಗುಡ್ಡೆ ಬಿಟ್ಟಗಳಿಲ್ಲವಲ್ಲ. ಬೇಡಾಪ್ಪ. ಬೆಟ್ಟದ ಮೇಲಿಂದ ಬಿದ್ದು ಸತ್ರೆ ನನ್ನ ಮೈ ಕೈ ಗಾಯ ಆಗುತ್ತೆ. ಮೊದಲೇ ನಮ್ಮವ್ವ ಹಾಕಿದ ಬರೆ ನನ್ನ ಕೈನಲ್ಲಿ ಹಾಗೆ ಊದಿದೆ.ನಾನು ಬೆಟ್ಟದ ಮೇಲಿಂದ ಬಿದ್ದು ಸತ್ರೆ,ಆ ಬರೆ ದೊಡ್ಡ ಗಾಯವಾಗುತ್ತೆ. ಆ ನೋವನ್ನ ನಾನು ತಡೆದುಕೊಳ್ಳುವುದಕ್ಕೆ ಆಗುವುದಿಲ್ಲಪ್ಪ. ಅದಕ್ಕೆ ಹೆಚ್ಚು ನೋವಾಗದ ಹಾಗೆ ಸಾಯುವುದೇ ಒಳ್ಳೆಯದು,ಈಗ ಗೊತ್ತಾಯ್ತು, ನಮ್ಮ ಮನೆಯ ಕೋಣೆಯಲ್ಲಿ ಇಲಿಯ ಪಾಶಾಣ ಇದೆ. ಅದ್ರಿಂದ ನಮ್ಮವ್ವ ದಿವ್ಸ ಎರಡು ಇಲಿಗಳನ್ನ ಸಾಯಿಸ್ತಾ ಇರ್ತಾಳೆ.ಆ ಇಲಿಗಳು ಸಾಯುವಾಗ ನೋವಿಲ್ಲದೆ ಮಲಗಿದ ಹಾಗೇ ಸತ್ತೋಗ್ತಾವೆ. ನಾನು ಹಾಗೇ ಸಾಯಬೇಕು.ಹಾಗಿದ್ರೆ ತಡಾ ಏಕೆ, ಆ ಪಾಶಾಣವನ್ನು ಮೊದಲು ತೆಗೆದುಕೊಳ್ಳೋಣ, ಅದನ್ನ ನೀರಿನ ಲೋಟಕ್ಕೆ ಹಾಕಿ ಕಣ್ಣು ಮುಚ್ಚಿ ಕುಡಿಯೋಣ.ಈಗ ಮನೆಯಲ್ಲಿ ಯಾರೂ ಇಲ್ಲ. ಇದನ್ನ ಬೇಗ ಬೇಗ ಮಾಡಿದ್ರೆ ಬಹಳಾ ಒಳ್ಳೆದು, ಇಲ್ಲ ಅಂದ್ರೆ ನಮ್ಮ ಅಕ್ಕ ಬಂದ್ಬಿಡ್ತಾಳೆ. ಅವಳು ನೋಡಿದ್ರೆ ನಾನು ಈ ಪಾಶಾಣ ಕುಡಿಯೋದನ್ನ ನಿಲ್ಲಿಸ್ಬಿಡ್ತಾಳೆ. ಈಗ ಹೆಚ್ಚು ಮಾತನಾಡೊದಕ್ಕೆ ಸಮಯವಿಲ್ಲ, ಬೇಗ ಬೇಗ ಸತ್ತೋಗೋಣ.

ನಾನು ನನ್ನ ಕರ್ಮಕ್ಕೆ ಅಪ್ಪಿ ತಪ್ಪಿ ಬದುಕ್ಬಿಟ್ರೆ ಮತ್ತೆ ನಿಮ್ಮ ಜೊತೆ ಮಾತಾಡ್ತೀನಿ. ನಾನು ಈಗ ಹೊರಟೆ ಸಾಯಲು.

  • ಕಥಾ ಮಾಲಿಕೆ
~.~
  • Login or register to post comments
  • 206 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೆಳೆಯನ ಫ್ರೆಂಡ್ಸ್
  • ಮಗುವನ್ನು ಅಡಾಪ್ಟ್ ಮಾಡಿಕೊಂಡರೆ ಸೋಮಾರಿತನವೇ ?
  • "ನಾನು-ನೀನು
  • ಕನಸಿನ ಹಗಲು ಕಾಟ
  • ಲಾಟರಿಯ ಗುಟ್ಟು ಜಾಲಾಡಿದಾಗ-ರಘೋತ್ತಮ್ ಕೊಪ್ಪರ
Syndicate content

ಲೇಖಕರು

yuvapremi's picture

ಪೂರ್ಣ ಹೆಸರು
ಯುವಪ್ರೇಮಿ

ಪರಿಚಯ

ನನಗೆ ಕನ್ನಡ ಅಂದ್ರೆ ಅಚ್ಚು ಮೆಚ್ಚು.ಆದ್ರೆ ನಮ್ಮ ಮಕ್ಕಳೆಲ್ಲ ಇಂಗ್ಲಿಷ್ ನಲ್ಲಿ ವಿದ್ಯಾಭ್ಯಾಸ ಮಾಡ್ತಾಯಿರೋದ್ರಿಂದ ಅವರು ಮುಂದೆ ನನ್ನ ಲೇಖನಗಳನ್ನು ನೋಡಿ ಕನ್ನಡ ಓದೋದಕ್ಕೆ ಬರದೆ ಕಣ್ಣು ಕಣ್ಣು ಬಿಡುವುದನ್ನು ನಾನು ನೋಡೋದಕ್ಕೆ ಆಗುವುದಿಲ್ಲ. ಆದ ಕಾರಣ ಇನ್ನುಮುಂದೆ ನಾನು ಕನ್ನಡಕಿಂತ ಹೆಚ್ಚು ಇಂಗ್ಲಿಷನಲ್ಲಿ ಲೇಖನಗಳನ್ನು ಬರೆಯೋದಕ್ಕೆ ಇಷ್ಟ ಪಡ್ತೇನೆ. ಅದೂ ಅಲ್ಲದೆ ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ಮಾನ ಸಿಗುವ ಎಲ್ಲ ಯೋಗ್ಯತೆ ಇದ್ದರು ಅದನ್ನು ಪಡೆದು ಕುತ್ತಿಗೆಗೆ ಹಾಕೊಳ್ಳೊದಕ್ಕೆ ನಮ್ಮ ಕನ್ನಡ ಬಹಳ ಕಷ್ಟ ಪಡ್ತಾಯಿದೆ.ಸುಮ್ನೆ ಕನ್ನಡ ಕನ್ನಡ ಅಂತ ಕರುಳು ನೋವು ಬರುವವರೆಗು ಕುಣಿಯೋದು ಬಹಳಾನೇ ವ್ಯರ್ಥ...!!

Thanking you all very much...!! Eye-wink

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
  • ಪರಂಪರೆ-ಪ್ರವಾಹ-ಪ್ರತಿರೋಧ
  • ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?
  • ’ರಾಕ್ ಬ್ರಿಡ್ಜ್ ಮೆಮೋರಿಯಲ್ ಸ್ಟೇಟ್ ಪಾರ್ಕ್”
  • ಗುರುದತ್ ಎಂಬ ದುರಂತ ನಾಯಕ
  • ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
  • ಕುಮಾರ ಪರ್ವತದಲ್ಲಿ ಚಾರಣ

ಇತ್ತೀಚಿನ ಪ್ರತಿಕ್ರಿಯೆಗಳು

  • vinayak.mdesai
    ಉ: ಸ್ವಲ್ಪನಗಿ
    October 13, 2008 - 12:42pm
  • veena
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:40pm
  • mahesha
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:40pm
  • Chetan.Jeeral
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:34pm
  • mahesha
    ಉ: ಬಸವನ ಹುಳು...
    October 13, 2008 - 12:31pm
  • mahesha
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:30pm
  • mahesha
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 12:23pm
  • gurubaliga
    ಉ: Attitude
    October 13, 2008 - 12:21pm
  • kannadakanda
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 12:17pm
  • srinivasps
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:14pm
ಇನ್ನಷ್ಟು
ಈಗಿನಂತೆ 16 ಸದಸ್ಯರು ಮತ್ತು 70 ಅತಿಥಿಗಳು ಆನ್ಲೈನ್ ಇರುವರು.


ಯಾವುದು ಕಾಲದ ಕಠಿಣ ಪರೀಕ್ಷೆಯಲ್ಲೂ ಅಚಲವಾಗಿರುತ್ತದೆಯೋ ಅದೇ ಸತ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator