ಮನೆಪಾಠ
ಪುಟ್ಟನು ಬಂದ ಮನೆಯೊಳಗೆ
ಸಕ್ಕರೆ ಕಂಡ ಡಬ್ಬದೊಳಗೆ
ಅಮ್ಮನು ಎಲ್ಲೂ ಕಾಣದಿರಲು
ಮೆಲ್ಲನೆ ಕೈ ಡಬ್ಬದಲಿ ಇಳಿದಿರಲು
ಸಕ್ಕರೆಯ ಸವಿಗಾಗಿ ಪುಟ್ಟ ಕಾದಿರಲು
ಬಾಗಿಲ ಬಳಿ ಏನೋ ಸದ್ದಾಗಲು
ಅತ್ತಿತ್ತ ನೋಡದೇ ಮುಷ್ಟಿಗೆ ಸಕ್ಕರೆ ಬಂದಿರಲು
ಗಬಕ್ಕ್ ಎಂದು ಅದು ಬಾಯ ಸೇರಿರಲು
ಇವನಂತೆಯೇ ಸವಿಗಾಗಿ ಬಂದಿಹ ಇರುವೆ
ಇವನಿಗಿಲ್ಲ ಅದಿರುವ ಪರಿವೆ
ಎಳಸು ಬೆರಳು ಸಿಕ್ಕಿ ಇರುವೆ ಕಚ್ಚಿರಲು
ನೋವಿನಿಂದ ಹಾ ಎಂದು ಪುಟ್ಟ ಕೂಗಿರಲು
ಬಾಗಿಲ ಹಿಂದಿನಿಂದ ಅಮ್ಮ ಬಂದಳು
ಕಳ್ಳ ಅಮ್ಮನ ಕೈಗೆ ಸಿಕ್ಕಿ ಬಿದ್ದನು
ಅಮ್ಮನ ಹಿಡಿತಕೆ ಸಿಕ್ಕು ಹೆದರಿ ಅತ್ತಿದ್ದ
ತಲೆ ಸವರಲು ನೋವನೆಲ್ಲ ಮರೆತಿದ್ದ

- Login or register to post comments
- 716 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು
ಆಹಾಹಾ, ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಗಾದೆಯನ್ನ ನೆನಪಿಗೆ ತರತ್ತಿದೆ ಈ ಕವನ. ಏಕೆಂದರೆ, ಇಲ್ಲಿ ಪುಟ್ಟ ಯಾರು ತಿಳಿಯಲಿಲ್ಲ. ನಿಜವಾಗಿಯೂ ಆ ಪುಟ್ಟ ಶಿಶುವೋ ಅಥವಾ ...
ಮುಂದೆ ಹೋಗು ಇಲ್ಲವೆ ಪಕ್ಕಕ್ಕಾದ್ರು ಬಾ. ಹಿಂದಕ್ಕಂತು ಬೇಡವೋ ಮಗು.
ಮಗು ಮಗು, ನಗು ನಗು, ನಗುವೇ ಜೀವನ.