ಒ೦ದು ನೆನಪು
ನೀರು ಬತ್ತಿದ ಮೇಲೆ ಬಾಯರಿದರೆನು
ಪ್ರೀತಿ ಬತ್ತಿದ ಮೇಲೆ ಅರ್ಥವಾದರೇನು
ಬೆಳಕು ಬ೦ದಿರುವಾಗ ಕತ್ತಲಾದ೦ತ್ತಿದೆ
ನಡೆವ ದಾರಿಯು ಕಾಣದಾಗಿದೆ....
ನೋಟಕ್ಕೆ ಎಲ್ಲವು ಚ೦ದವಾಗಿದೆ
ಆದರೆ ಎಲ್ಲವು ನನ್ನದ್ದಲ್ಲವಲ್ಲ...
ಬೇಕೆ೦ದಾಗ ಮಾತ್ರ ಅದು ನನ್ನದು
ಬೇಡ ವಾದಾಗ ಅದು ಮತ್ಯಾರದ್ದೋ...
ನೆನಪುಗಳು ಕಾಡುತಿವೆ ನನ್ನ
ಮೆತ್ತೆಲ್ಲಿ ಬರುವುದ್ದಯ್ಯ ಆ ಬಾಲ್ಯದಲ್ಲಿ
ಆಡಿದ ಆಟಗಳು ನೋಡಿದ ನೋಟಗಳು
ಮತ್ತೆಲ್ಲಿ ಬರುವುವಯ್ಯ..............
ಗತಿಸಿದ ನೆನಪುಗಳು ಮತ್ತೆ ಮತ್ತೆ ನೆನಪಾಗುತ್ತಿದೆ
ಆದರೆನು ಮಾಡಲು ಸಾದ್ಯ... ಅದು ಮತ್ತೆ ಮತ್ತೆ ನೆನಪೆ
ಅದ್ದಕ್ಕೆ ಹೆಳುವುದು ನೆನಪಿಗೆ ಅಷ್ಟು ಶಕ್ತಿಯಿದೆಯ೦ತ
ಎಷ್ಟು ಹೆಳಿದರಷ್ಟೆ ಕೊನೆಗೆ ಉಳಿಯುವುದು.....
ನೆನಪು ಮಾತ್ರ...................................
- Login or register to post comments
- 377 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS: