ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !

July 24, 2008 - 6:39am — venkatesh
18shankar2.jpg

(ಆಗಸ್ಟ್, ೨೦, ೧೯೩೫-ಜುಲೈ, ೧೭, ೨೦೦೮)

’ಮೈಸೂರು ಪುಟ್ಟಲಿಂಗಪ್ಪ ಶಂಕರ್,’ ಕನ್ನಡಚಿತ್ರರಂಗದ ದಿಗ್ಗಜರಲ್ಲಿ ಒಬ್ಬರು. ನಟನೆ, ದಿಗ್ದರ್ಶನ, ಚಿತ್ರನಿರ್ಮಾಣ, ವಿತರಣೆ ಹಾಗೂ ಸಂಬಂಧಿಸಿದ ಎಲ್ಲಾಮಜಲುಗಳನ್ನು ಚೆನ್ನಾಗಿ ಅರಿತಿದ್ದರು. ಪುಟ್ಟಲಿಂಗಪ್ಪ, ಗಂಗಮ್ಮ ದಂಪತಿಗಳ ಪ್ರೀತಿಯ ಮೂರನೆಯ ಸಂತಾನವಾಗಿ ಭರಣಿ ನಕ್ಷತ್ರದಲ್ಲಿ ಜನಿಸಿದರು. ೧೬ ಚಿತ್ರಗಳನ್ನು ನಿರ್ಮಿಸಿದ್ದಾರೆ. ಪತ್ನಿ, ಮಂಜುಳಾ, ಪುತ್ರಿ, ಶೋಭಾ, ಇಬ್ಬರು ಪುತ್ರರು, ತಿಲಕ್, ಹಾಗೂ ವಿರೂಪಾಕ್ಷ. ಕೊನೆಯವರು ತೀರಿಕೊಂಡಿದ್ದಾರೆ. ಶ್ರೇಷ್ಟ ಖಳನಾಯಕನೆಂದು ಹೆಸರುಮಾಡಿದ್ದರು. ೧೯೬೨ ರಲ್ಲಿ ಬಿಡುಗಡೆಯಾದ ಸತ್ಯಹರಿಶ್ಚಂದ್ರ ಕಪ್ಪು-ಬಿಳುಪಿನ ಚಲನಚಿತ್ರದಲ್ಲಿ ’ವೀರಬಾಹು’ ವಿನ ಪಾತ್ರದಲ್ಲಿ ಒಳ್ಳೆಯ ಅಭಿನಯನವನ್ನು ತೋರಿಸಿ ಚಿತ್ರರಸಿಕರ ಮನಒಲಿಸಿಕೊಂಡರು. ಅವರ ನಿರ್ದೇಶನದ, ಡಾ. ರಾಜ್ ನಟಿಸಿದ ’ಗಂಧದಗುಡಿ ’ ಚಿತ್ರ ಎಲ್ಲರ ಮನಸೆಳೆಯಿತು. ಇದರ ಎರಡನೆಯ ಆವರ್ತಿಯಲ್ಲಿ ಶಿವರಾಜಕುಮಾರ್ ಅಭಿನಯಿಸಿದ್ದರು. ಕಾಡಿನ ಸಂರಕ್ಷಣೆ ಹಾಗೂ, ಪರಿಸರದ ಬಗ್ಗೆ ಅವರು ಯಾವಾಗಲು ಕಾಳಜಿವಹಿಸುತ್ತಿದ್ದರು. ೧೯೬೮ ರಲ್ಲಿ, ’ಕಾಡಿನ ರಹಸ್ಯ’ ಚಿತ್ರಬಿಡುಗಡೆಯಾಯಿತು.

೭೩ ವರ್ಷದ, ಮೈಸೂರು ಪುಟ್ಟಲಿಂಗಪ್ಪ ಶಂಕರ್ ರವರು, ಮೈಸೂರಿನ, ’ಕಾಳಿದಾಸ ರಸ್ತೆಯಲ್ಲಿರುವ ತಮ್ಮ ಸ್ವಗೃಹ, ಮಂಜುನಾಥನಿಲಯದಲ್ಲಿ, ಇದೇ ಜುಲೈ, ೧೭ ರಂದು ನಿಧನರಾದರು. ಮನೆಯಲ್ಲೇ ಜಾರಿಬಿದ್ದು ಸೊಂಟದ ಮೂಳೆಗೆ ಪೆಟ್ಟಾಗಿತ್ತು. ವಿಕ್ರಮ್ ನರ್ಸಿಂಗ್ ಹೋಂ ನಲ್ಲಿ ಚಿಕಿತ್ಸೆಪಡೆಯುತ್ತಿದ್ದರು. ಸ್ವಲ್ಪಗುಣಹೊಂದಿ ಮನೆಗೆ ವಾಪಸ್ ಬಂದಿದ್ದರು. ಆದರೆ, ಪಿತ್ತಕೋಶದ ಕ್ಯಾನ್ಸರ್ ಅವರನ್ನು ಬಹಳಸಮಯದಿಂದ ಕಾಡಿಸುತ್ತಿತ್ತು. ಅಂತಿಮ ಸಂಸ್ಕಾರವನ್ನು, ವಿದ್ಯಾರಣ್ಯಪುರದ,’ ವೀರಶೈವ ರುದ್ರಭೂಮಿ,’ ಯಲ್ಲಿ ನೆರವೇರಿಸಲಾಯಿತು.
ರತ್ನಮಂಜರಿ, ಚಿತ್ರದಲ್ಲಿ ಪಾದಾರ್ಪಣೆಮಾಡಿದ, ಎಂ.ಪಿ. ಶಂಕಾರ್, ’ಕಲ್ಲರಳಿ ಹೂವಾಗಿ ’ ಚಿತ್ರದ ಮೂಲಕ ತಮ್ಮ ವೃತ್ತಿಜೀವನಕ್ಕೆ ಮಂಗಳ ಹಾಡಿದರು. ಹಾಸ್ಯಪ್ರಧಾನವಾದ ’ನಾರದವಿಜಯ,’ ಹಾಗೂ”ಗಿಡ್ಡೂದಾದ,’ ಚಿತ್ರಗಳಲ್ಲೂ ಪಾತ್ರವಹಿಸಿ ರಸಿಕರಮನಸ್ಸನ್ನು ರಂಜಿಸಿದ್ದರು.

’ಭರಣಿ ಕಲಾತಂಡ’, ಅವರ ನೆಚ್ಚಿನ, ಪ್ರೀತಿಯ ನಾಟಕರಂಗಪ್ರಾಕಾರ :

ಇದರಡಿಯಲ್ಲಿ ’ಗೌತಮ ಬುದ್ಧ’, ಸೊಹ್ರಾಬ್ ರುಸ್ತುಂ, ಗದಾಯುದ್ಧ, ಕನಕದಾಸ ನಾಟಕಗಳನ್ನು ಆಡಿಸಿ, ತಾವೂ ಅಭಿನಯಿಸಿದ್ದರು. ಅವರ ಪೂಜ್ಯ ತಂದೆಯರ ಅಭಿಲಾಷೆಯಂತೆ, ಚಿತ್ರರಂಗಕ್ಕೆ ಪಾದಾರ್ಪಣೆಮಾಡಿದ್ದರು.

ಶಂಕರ್ ಗಳಿಸಿದ ಪ್ರಶಸ್ತಿಗಳು, ಹಾಗೂ ಬಿರುದುಬಾವಲಿಗಳು :

ನಟಶಾರ್ದೂಲ, ಕಲಾಶಾರ್ದೂಲ, ಮೈಸೂರುಹುಲಿ, ಕಲಾಸೇವಾಧುರೀಣ, ಕನ್ನಡಭೂಷಣ, ಸಾಹಸೀಚಿತ್ರರತ್ನ, ಕರುಣಾರತ್ನ, ಸಾಗರ ಪ್ರಶಸ್ತಿಗಳು.
೧೯೫೩-೫೪ ರಲ್ಲಿ ಬನುಮಯ್ಯ ಹೈಸ್ಕೂಲ್ ನಲ್ಲಿ ತಮ್ಮ ಪ್ರೌಢಶಾಲೆಯ ವಾರ್ಷಿಕೋತ್ಸವದಲ್ಲಿ ಕಾಡುಕುರುಬನ ಪಾತ್ರವನ್ನು ಯಶಸ್ವಿಯಾಗಿ ಅನುಭವಿಸಿದ್ದರು. ಮೈಸೂರ್ ವಿದ್ಯುತ್ಶಕ್ತಿ ಆಫೀಸಿನಲ್ಲಿ ದಿನಗೂಲಿ ಕೆಲಸಮಾಡುತ್ತಿದ್ದರು. ೧೯೫೫ ರಲ್ಲಿ, ಮೈಸೂರಿನ ರೈಲ್ವೆಕಾರ್ಖಾನೆಯಲ್ಲಿ ನೌಕರಿಮಾಡಿದ್ದರು. ೧೯೫೬ ರಲ್ಲಿಮೈಸೂರ್ ದಸರಾಹಬ್ಬದಸಮಯದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಆಗಿನ ಮೈಸೂರಿನ ಮುಖ್ಯಮಂತ್ರಿ, ಬಿ. ಡಿ. ಜತ್ತಿಯವರ ಹಸ್ತದಿಂದ ಬಹುಮಾನ ಗಿಟ್ಟಿಸಿದ್ದರು. ತಮ್ಮ ಕೊನೆಯದಿನಗಳಲ್ಲಿ ವಿನಿವಿಂಕ್ ಶಾಸ್ತ್ರಿಗಳ ಜೊತೆವ್ಯವಹಾರ ಸಂಬಂಧಬೆಳೆಸಿ, ೧೫ ಲಕ್ಷರೂಪಾಯಿಗಳಷ್ಟು ಹಣವನ್ನು ನಷ್ಟಮಾಡಿಕೊಂಡಿದ್ದರು. ಇದರಿಂದ ಬಹಳವಾಗಿ ನೊಂದಿದ್ದರು.

ಎಮ್. ಪಿ. ಶಂಕರ್ ರವರ ಚಲನಚಿತ್ರಗಳು :

* ಕಾಡಿನರಾಜ

* ಮೃಗಾಲಯ

* ರಾಮಲಕ್ಷ್ಮಣ

* ನಾನೇರಾಜ

* ಕಾಡಿನರಹಸ್ಯ

* ಬೆಟ್ಟದಹುಲಿ

* ನ್ಯಾಯವೇದೇವರು

* ಬಂಗಾರದಮನುಷ್ಯ

* ನಾಗರಹಾವು

* ದೂರದಬೆಟ್ಟ

* ಗಂಧದಗುಡಿ

* ಭೂತಯ್ಯನ ಮಗ ಅಯ್ಯು

* ಕಲ್ಲರಳಿಹೂವಾಗಿ(ಕೊನೆಯ ಚಿತ್ರ)

-ವಿವಿಧ ಮೂಲಗಳಿಂದ.

  • ಪ್ರಚಲಿತ
~.~
  • Login or register to post comments
  • 148 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶಂಕರ್ಸ್ ವೀಕ್ಲಿಯ ಶ್ರೀ. ಶಂಕರ್ ಕೇಶವ್ ಪಿಳ್ಳೆ !
  • ಅರರೆ, ಹೌದು. ಇವತ್ತು ಲತಕ್ಕಂಗೆ ೮೧ ತುಂಬ್ತಲ್ವಾ !
  • ಮಾಲ್ಗುಡಿ ಡೇಸ್...ಶಂಕರ್ ನಾಗ್ ನೆನಪುಗಳು
  • ಶಂಕರ್ ನಾಗ್: ಒಂದು ನೆನಪು...
  • ಮಿಂಚಿನ ಓಟ (೧೯೮೦)
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
  • ಪರಂಪರೆ-ಪ್ರವಾಹ-ಪ್ರತಿರೋಧ
  • ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?
  • ’ರಾಕ್ ಬ್ರಿಡ್ಜ್ ಮೆಮೋರಿಯಲ್ ಸ್ಟೇಟ್ ಪಾರ್ಕ್”
  • ಗುರುದತ್ ಎಂಬ ದುರಂತ ನಾಯಕ
  • ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
  • ಕುಮಾರ ಪರ್ವತದಲ್ಲಿ ಚಾರಣ

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 12:23pm
  • gurubaliga
    ಉ: Attitude
    October 13, 2008 - 12:21pm
  • kannadakanda
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 12:17pm
  • srinivasps
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:14pm
  • gurubaliga
    ಉ: ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?
    October 13, 2008 - 12:11pm
  • srinivasps
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:10pm
  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 12:02pm
  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 12:00pm
  • mahesha
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 11:59am
  • mahesha
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 11:59am
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 83 ಅತಿಥಿಗಳು ಆನ್ಲೈನ್ ಇರುವರು.


ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator