ಜೀವನ ಚಕ್ರ
ಸುಖಿಸಿದವರು ಸುಖಿಸದವರು
ಸುಖಿಸಿದವರು ದು:ಖಿಸುವವರು
ದು:ಖಿಸಿದವರು ದು:ಖಿಸದವರು
ದು:ಖಿಸಿದವರು ಸುಖಿಸಿದವರು
ತನ್ನಲಿದ್ದೂ ನಾಳೆಯ ನೆನೆದು ಸುಖಿಸದವನೊಬ್ಬ
ಇಂದು ಸಿಕ್ಕಿದುದ ತಿಂದು
ನಾಳೆಗಿಲ್ಲದೇ ಪರಿತಪಿಸುವನಿನ್ನೊಬ್ಬ
ತನ್ನಲಿರದೇ ನಾಳೆಯ
ನೆನೆದು ದು:ಖಿಸುವನಿನ್ನೊಬ್ಬ
ಇರದೆಯೂ ಇದ್ದುದರಲ್ಲಿಯೇ
ತೃಪ್ತಿಸುವ ಮಗದೊಬ್ಬ
ಇಂದಿಲ್ಲದೇ ವ್ಯಥೆಪಡುವನೊಬ್ಬ
ಇಂದಿಅಲ್ಲದೇ ನಾಳೆ ಸುಖ ಬರಲು
ಸುಖಿಸಿದವ ಶ್ರೇಷ್ಟನೊಬ್ಬ
ಇದ್ದೂ ಸುಖಿಸಿ ನಾಳೆಯ ನೆನೆಯದವ ಇನ್ನೊಬ್ಬ
ಇಂದಿಹುದು, ಅದ ಸವಿಯುವರು
ಜೀರ್ಣಿಸಿಕೊಳ್ಳುವರು
ನಾಳೆಯ ಚಿಂತೆಯಿಲ್ಲದವರು
ನಾಳೆಯಾಗಲು
ಕೈ ಖಾಲಿಯಾಗಿಹರು
ಇದ್ದಾಗ ವ್ಯಯಿಸಿದೆನೆಂದು
ವ್ಯಥೆಪಡುವವರು
ಬರಬಾರದ ಕಾಯಿಲೆಗಳಿಗೆ
ತುತ್ತಾಗುವರು
ನಾಯಿ ನರಿಗಳಿಗೆ ಅನ್ನವಾಗುವರು
ಇಂದಿಹುದು ಸವಿಯಲಾರರು
ಚಿಂತಿಸುವವರು
ನಾಳೆ ಏನಾಗುವುದೋ ನಾಳೆಗೆ ಬೇಕಾಗುವುದೋ
ಒಬ್ಬನಾಗುವ ಭೋಗಿ
ಇನ್ನೊಬ್ಬ ರೋಗಿ
ಮಗದೊಬ್ಬ ಯೋಗಿ
ಇನ್ನೂ ಒಬ್ಬ ವೈರಾಗಿ

- Login or register to post comments
- 368 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: