26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಬ್ರಹ್ಮ ಕಮಲಕ್ಕೆ ಜೊತೆ ನೀಡುತ್ತಿರುವ ಇನ್ನೊಂದು ಸುಂದರ ಪುಷ್ಪ - ಸೌಗಂಧಿಕಾ

August 2, 2008 - 8:38pm
agilenag
ಸೌಗಂಧಿಕಾ ಪುಷ್ಪವೂ ಆಷಾಡ - ಶ್ರಾವಣ ಮಾಸಗಳಲ್ಲಿ ಅರಳಿ ಮನಸ್ಸನ್ನು ಸೆಳೆಯುವುದು. ಭೀಮನು ದ್ರೌಪಧಿಯ ಆಸೆಯನ್ನು ತೀರಿಸಲು ದ್ವಾರಕೆಯಿಂದ ತಂದನೆಂಬ ಪುರಾಣ ಕಥೆಯನ್ನು ಹೊಂದಿರುವ ಈ ಪುಷ್ಪವು ಸೌಂದರ್ಯದಿಂದ ಮಾತ್ರವಲ್ಲದೆ, ತನ್ನ ಮಂದ ಸುಗಂಧದಿಂದಲೂ ಮನಸೆಳೆಯುತ್ತದೆ. ಒಂದು ವ್ಯತ್ಯಾಸವೆಂದರೆ ಬ್ರಹ್ಮ ಕಮಲವು ಎಲೆಗೊಂದರಂತೆ ಅರಳಿದರೆ, ಇದು ಗೊಂಚಲಿಗೆ ಎಂಟು ಹತ್ತರಂತೆ ಅರಳಿ, ಜಾಲವನ್ನೇ ಹೆಣೆದು ಜಾದೂ ಮಾಡುತ್ತದೆ. ಅಲ್ಲದೆ ಹಗಲೂ ಅರಳಿದ್ದು ಎಲ್ಲರ ಕಣ್ಣಿಗೂ ಮುದ ನೀಡುತ್ತದೆ. ಶ್ರಾವಣದಲ್ಲಿ ಅರಳುವ ಈ ಪುಷ್ಪ ಮಾಸದ ಎಲ್ಲಾ ಹಬ್ಬಗಳಿಗೂ ಲಭ್ಯ.
ಲೇಖನ ವರ್ಗ (Category): 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by palachandra on
ನಮಸ್ಕಾರ, ಇದೇ ಹೂವಿಗೆ "ಸೌಗಂಧಿಕಾ" ಎಂದು ಕರೀತಾರೆ ಅಂತ ಗೊತ್ತಿರಲಿಲ್ಲ, ನಮ್ಮ ಕಡೆ ಇದನ್ನು "ಸುರುಳಿ ಹೂವು" ಅಂತ ಕರೀತಾರೆ... ಮಾಹಿತಿಗೆ ತುಂಬಾ ಧನ್ಯವಾದ -- PaLa

Submitted by gireesha_ks on

ಈ ಹೂವು ಎಲ್ಲಿ ಸಿಗುತ್ತೆ ಅಂತಾ ದಯವಿಟ್ಟು ತಿಳಿಸ್ತೀರಾ ಸಾರ್. ಔಷಧಿಗೆ ಇದರ ಅವಶ್ಯಕತೆ ಇದೆ.

ವಂದನೆಗಳೊಂದಿಗೆ,

ಗಿರೀಶ ಕೆ ಎಸ್

Submitted by gireesha_ks on

ಈ ಹೂವು ಎಲ್ಲಿ ಸಿಗುತ್ತೆ ಅಂತಾ ದಯವಿಟ್ಟು ತಿಳಿಸ್ತೀರಾ ಸಾರ್. ಔಷಧಿಗೆ ಇದರ ಅವಶ್ಯಕತೆ ಇದೆ.

ವಂದನೆಗಳೊಂದಿಗೆ,

ಗಿರೀಶ ಕೆ ಎಸ್