August 4, 2005 - 10:59am
ಝೆನ್ ೧
ದೊಡ್ಡ ಗಂಟನ್ನು ಹೊತ್ತಿರುವ, ದಪ್ಪ ಹೊಟ್ಟೆಯ, ನಗುಮುಖದ, ಕುಳ್ಳ ದೇಹದ ವ್ಯಕ್ತಿಯೊಬ್ಬನ ಬೊಂಬೆಯನ್ನು ನೀವು ನೋಡಿರಬಹುದು. ಕೆಲವೊಮ್ಮೆ ಎರಡೂ ಕೈ ಎತ್ತಿ ಜೋರಾಗಿ ನಗುತ್ತಿರುವ ಬೊಂಬೆಯ ರೂಪದಲ್ಲೂ ಇದು ಎಲ್ಲ ಕಡೆ ಕಾಣಿಸುತ್ತದೆ. ಚೀನಾದ ವ್ಯಾಪಾರಿಗಳು ಇವನನ್ನು ನಗುವ ಬುದ್ಧ ಅನ್ನುತ್ತಾರೆ. ಈತ ಹೋಟಿ. ಇವನು ಬದುಕಿದ್ದು ತಾಂಗ್ ವಂಶಸ್ಥರ ಆಳ್ವಿಕೆಯ ಕಾಲದಲ್ಲಿ. ಅವನಿಗೆ ತಾನು ಝೆನ್ ಗುರು ಎಂದು ಹೇಳಿಕೊಳ್ಳುವ ಆಸೆ ಇರಲಿಲ್ಲ. ಶಿಷ್ಯರನ್ನು ಗುಂಪುಗೂಡಿಸಿಕೊಳ್ಳುವ ಹಂಬಲವಿರಲಿಲ್ಲ. ಹೆಗಲ ಮೇಲೆ ಸದಾ ಬಟ್ಟೆಯ ಗಂಟೊಂದನ್ನು ಹೊತ್ತು ಬೀದಿಗಳಲ್ಲಿ ನಡೆಯುತ್ತಿದ್ದ. ಅದರಲ್ಲಿ ಮಿಠಾಯಿ, ಹಣ್ಣು, ಇಂಥ ತಿನಿಸು ತುಂಬಿರುತ್ತಿದ್ದವು. ಬೀದಿಮಕ್ಕಳಿಗೆ ಅವನ್ನು ಹಂಚುತ್ತ ಅವರೊಡನೆ ಆಡುತ್ತಾ ಕಾಲ ಕಳೆಯುತ್ತಿದ್ದ. ಬೀದಿ ಬೀದಿಗಳಲ್ಲಿ ಅವನ “ಶಿಶುವಿಹಾರ”ಗಳಿದ್ದವು. ಝೆನ್ ಪಂಥದ ಅನುಯಾಯಿಗಳು ಯಾರಾದರೂ ಕಂಡರೆ ಕೈ ಚಾಚಿ “ಒಂದು ಕಾಸು ಕೊಡಿ” ಎಂದು ಎಗ್ಗಿಲ್ಲದೆ ಕೇಳುತ್ತಿದ್ದ. “ದೇವಸ್ಥಾನಕ್ಕೆ ಬಂದು ಮಕ್ಕಳಿಗೆ ಪಾಠ ಹೇಳು” ಎಂದು ಯಾರಾದರೂ ಅಂದರೆ, ಮತ್ತಿನ್ನೊಮ್ಮೆ ಕೈ ಚಾಚಿ “ಕಾಸು ಕೊಡಿ” ಅನ್ನುತ್ತಿದ್ದ. ಹೀಗೇ ಒಂದು ದಿನ ತನ್ನ ಆಟದ ಕಾಯಕದಲ್ಲಿ ಅವನು ತೊಡಗಿರುವಾಗ ಇನ್ನೊಬ್ಬ ಝೆನ್ ಗುರು ಅಲ್ಲಿಗೆ ಬಂದ. “ಝೆನ್‌ನ ಮಹತ್ವವೇನು?” ಎಂದು ಹೋಟಿಯನ್ನು ಕೇಳಿದ. ಹೋಟಿ ತಟ್ಟನೆ ತನ್ನ ಹೆಗಲಮೇಲಿದ್ದ ಗಂಟನ್ನು ಕೆಳಕ್ಕಿಳಿಸಿ ಮೌನವಾಗಿ ನಿಂತ. ಅದೇ ಅವನ ಉತ್ತರ. “ಝೆನ್ ಸಾಕ್ಷಾತ್ಕಾರವಾಗಿರುವುದರ ಕುರುಹೇನು?” ಎಂದು ಆ ಗುರು ಮತ್ತೆ ಕೇಳಿದ. ಹೋಟಿ ನಗುನಗುತ್ತಲೇ ಗಂಟನ್ನು ಮತ್ತೆ ಭುಜದ ಮೇಲೆ ಏರಿಸಿಕೊಂಡು ಮುಂದೆ ನಡೆದ.ಲೇಖನ ವರ್ಗ (Category):

ಪ್ರತಿಕ್ರಿಯೆಗಳು
ಒಳ್ಳೆಯ
ಒಳ್ಳೆಯ ಕಥಾಮಾಲಿಕೆ. ಈ laughing buddha ಎಂದು ಈತನಿಗೆ ಹೇಳುವುದು ಎಂದು ಇವತ್ತೇ ತಿಳಿದಿದ್ದು.
ಗೊಂಬೆ
ನಮ್ಮ ಮನೆಯಲ್ಲಿ ನವರಾತ್ರಿಯಲ್ಲಿ ಗೊಂಬೆಗಳನ್ನು ಕೂಡಿಸುವಾಗ ಒಂದು ಜೊತೆ ಶೆಟ್ಟಿ ದಂಪತಿಗಳ ಗೊಂಬೆಗಳನ್ನೂ ಕೂಡಿಸುವರು. ಅದರಂತೆಯೇ ಈ ಗೊಂಬೆ ಕೂಡಾ ಅಂತ ತಿಳಿದಿದ್ದೆ. ಈ ವಿಷಯ ಗೊತ್ತಿರಲಿಲ್ಲ. ಒಳ್ಳೆಯ ಕಥಾಮಾಲಿಕೆ ಪ್ರಾರಂಭಿಸಿದ್ದೀರ. ಒಳ್ಳೆಯ ನಿರೂಪಣೆ. ಇಂತಹ ಕೃತಿಗಳಿಂದ ನಮ್ಮ ಸಂಪದ ಬಹಳ ಬೇಗ ವಿಶ್ವ ಪ್ರಸಿದ್ಧ ಆಗುವುದರಲ್ಲಿ ಅನುಮಾನವೇ ಇಲ್ಲ.
ತವಿಶ್ರೀನಿವಾಸ
ಉ: ಝೆನ್ ೧: ನಗುವ ಬುದ್ಧ
ಉ: ಝೆನ್ ೧: ನಗುವ ಬುದ್ಧ
ಝೆನ್ ಕಥೆಗಳು, ನಮ್ಮ ಪ೦ಚತ೦ತ್ರವಿದ್ದ ಹಾಗೇ, ಇಲ್ಲಿ ಸರಳವಾಗಿ ನಿರೂಪಿತವಾಗಿದ್ದರು ಅದರ ತಾತ್ಪರ್ಯ ಬಹು ಅರ್ಥಪೂರ್ಣವಾಗಿರುತ್ತದೆ. ದಯವಿಟ್ಟು ಝೆನ್ ಕತೆಗಳ ಬಗ್ಗೆ ಯಾರಾದರೂ ಇನ್ನೂ ಹೆಚ್ಚಿನ ಮಾಹಿತಿಯೊ೦ದಿಗೆ ತಿಳಿಸಿ.

Zen ಗೂ ಪಂಚತಂತ್ರಕ್ಕೂ ಎಲ್ಲಿಂದೆಲ್ಲಿಯ ಹೋಲಿಕೆರೀ? . ಎತ್ತಣ ಮಾಮರ ಎತ್ತಣ ಕೋಗಿಲೆ?!!... ಎರಡೂ ಕಥೆಗಳು ಅನ್ನೋದಷ್ಟೇ ನನಗೆ ಕಂಡ ಸಾಮ್ಯತೆ!
ದಯವಿಟ್ಟು ಇವೆರಡರ ಸಾಮ್ಯತೆ ಬಗ್ಗೆ ವಿವರಿಸುತ್ತೀರಾ?
ಉ: ಝೆನ್ ೧: ನಗುವ ಬುದ್ಧ
ಇದಕ್ಕೆ ಉತ್ತರ ಬರಿಯೋಕ್ಕೆ ಮುಂಚೆ ಇವು ಗಮನದಲ್ಲಿರಲಿ.
೧. ಪಂಚತಂತ್ರದ ಟಾರ್ಗೆಟ್ ಯಾರು? Zen ಕಥೆಗಳ ಟಾರ್ಗೆಟ್ ಯಾರು.?
೨. ಎರಡರ ಶೈಲಿ ಏನು?
೩. ಎರಡರ ಪಾತ್ರಗಳು ಏನು...
ಮತ್ತು ಅವು ಹೇಗೆ ಒಂದೇ / ಭಿನ್ನ ,
.....ಇತಾದಿಗಳನ್ನು ಗಮನದಲ್ಲಿಟ್ಟುಕೊಂಡು ಉತ್ತರಿಸಿದರೆ ಪ್ರತಿಕ್ರಿಯೆಗೆ ತೂಕ ಇರುತ್ತೆ.
ಉ: ಝೆನ್ ೧: ನಗುವ ಬುದ್ಧ
ಅವುಗಳೆರಡನ್ನೂ ನೀವೇ ಒಮ್ಮೆ ಓದಿ ಅದರ ಸಾಮ್ಯತೆ ಭಿನ್ನತೆಗಳನ್ನು ಅರಿಯಬಹುದಲ್ಲವೆ. ಒಬ್ಬ ಟೀಚರ್ ವಿದ್ಯಾರ್ಥಿಗೆ ಹೋಮ್ ವರ್ಕ್ ಕೊಡೋ ತರಹ ಆದೇಶ ಬೇಡ.
ಉ: ಝೆನ್ ೧: ನಗುವ ಬುದ್ಧ
ಸ್ವಾಮಿ ಭಂಗಿ ಸಾಹೇಬ್ರೆ!
ಮೊದಲು ಪ್ರತಿಕ್ರಿಯೆಗಳನ್ನು ತಾಳ್ಮೆಯಿಂದ ಅರ್ಥ ಮಾಡಿಕೊಳ್ಳಿ. ಸಾಲುಗಳ ಒಳಗೆ ಧ್ವನ್ಯಾರ್ಥ ಇರುತ್ತೆ ಅದನ್ನು ಮನನ ಮಾಡಿಕೊಂಡು ನಂತರ ಪ್ರತಿಕ್ರಿಯಿಸಿ.
೧. ಕೆಂಪು, ಹಳದಿ, ಭಗ್ವಾ ಕನ್ನಡಕದವರಿಗೆ Zen ಅರ್ಥ ಹಾಗಲ್ಲ.
೨. ಶಾಸ್ತ್ರ ಜಡರಿಗೆ Zen ನಂತ ಜ್ಞಾನ ಎಟುಕಲ್ಲ.
೩. ವಿಚಾರಪರತೆ, Zen, ಅಧ್ಯಾತ್ಮದಂತ ವಿಷಯಗಳಿಗೂ .. ಶಾಸ್ತ್ರ ಜಡತ್ವಕ್ಕೂ ಆಗಿಬರಲ್ಲ.
೪. ಸಾಹಿತ್ಯಾಸಕ್ತಿಗೂ ಶಾಸ್ತ್ರ ಜಡತೆಗೂ ಮೈಲು ದೂರ.
ಸಾಮಾನ್ಯವಾಗಿ ಭಂಗಿ ಕುಡ್ದೊರಿಗೆ ಇವೆಲ್ಲ ಅರ್ಥಾ ಆಗಲ್ಲ ಅಂತ ಗೊತ್ತಿದ್ದ್ದ್ರೂ ನಿಮ್ಮ ಪ್ರತಿಕ್ರಿಯೆ ನೋಡಿ ಇದನ್ನು ಇಲ್ಲಿ ಹಾಕಲೇ ಬೇಕಾಯ್ತು!
...............
ಈ ಕೆಳಗಿನ ಪ್ರತಿಕ್ರಿಯೆ ಸಾಹಿತ್ಯಾಸಕ್ತರಿಗೆ.... ಶಾಸ್ತ್ರ ಜಡರು ದೂರ (ನಿಮಗೆ ಅರ್ಥ ಆಗದ ಕಾರಣ ) ಇರಬೇಕೆಂದು ಕೋರಿಕೆ.
ನನ್ನ ಪ್ರತಿಕ್ರಿಯೆ ಶ್ರೇಷ್ಠ ಅವರ Zen ಅನ್ನು ಪಂಚತಂತ್ರ ಕಥೆಗಳಿಗೆ ಹೋಲಿಸಿದ ಬಗ್ಗೆ. ಅವರು ಇವೆರಡೂ ಒಂದೇ ಅಂದ್ರು. ಯಾಕೆ ಒಂದೇ ಅಂತ ಹೇಳಲಿಲ್ಲ. ಅವರ ಸಮರ್ಥನೆ ಕೋರಿ ನನ್ನ ಪರಿಕ್ರಿಯೇಯಾಗಿತ್ತು. ಅವರ ಪರಿಕ್ರಿಯೆಯಿಂದ ಸಂಪದದಲ್ಲಿ ಪಂಚತಂತ್ರ ಮತ್ತು Zen ಕಥೆಗಳ ಹೋಲಿಕೆ ಬಗ್ಗೆ ಒಂದು ಒಳ್ಳೆ ಚರ್ಚೆ ಹುಟ್ಟುತ್ತೇನೋ ಅನ್ನೋ ಆಸೆ ಇತ್ತು.
ನನ್ನ ಓದಿನ ಮಟ್ಟಿಗೆ ಇವೆರಡಕ್ಕೂ ತುಂಬಾ ವ್ಯತ್ಯಾಸವಿದೆ. ಒಂದೇ ಅಂತ ಹೇಳಕ್ಕೆ ಖಡಾಕಂಡಿತ ಹೇಳಲು ಸಾಧ್ಯವಿಲ್ಲ.
ಯಾರಾದರೂ ಸಾಹಿತ್ಯಾಸಕ್ತರು ಪ್ರತಿಕ್ರಿಯಿಸಿದರೆ ನಾನ್ನು ನನ್ನ ಗಮನಿಸುವಿಕೆಗಳನ್ನು ಇಲ್ಲಿ ಬರೆಯಬಲ್ಲೆ.
ಉ: ಝೆನ್ ೧: ನಗುವ ಬುದ್ಧ
ಬಹಳಷ್ಟು ಜ಼ೆನ್ ಕಥೆಗಳು ನಕಲೀ ಆಗಿದ್ದು ತಿಣುಕಾಡಿದರೂ ಅವು ಅರ್ಥವಾಗುವುದಿಲ್ಲ. ಏಕೆ೦ದರೆ ಅದನ್ನು ಬರೆದವನಿಗೂ ಅದು ಅರ್ಥವಾಗಿಲ್ಲ. ಕೆಲವೊಮ್ಮೆ ಹೀಗೂ ಉ೦ಟು. ಒ೦ದು ಅರ್ಥವಾಗದ ಪುಟ್ಟ ಕಥೆ(?)ಯನ್ನು ಬರೆದು ಅದನ್ನು ಜ಼ೆನ್ ಕಥೆ ಎ೦ದು ಶರಾ ಬರೆದು ಬಿಟ್ಟರೆ ಸಾಕು..
ಉ: ಝೆನ್ ೧: ನಗುವ ಬುದ್ಧ
ನಿಜ ಅನಿಲ್, ನೀವು ಅರ್ಥ ಮಾಡಿ ಕೊಂಡಿರುವುದು ಸತ್ಯ. ಕಸ್ತೂರಿಯಲ್ಲಿ ಓದಿದ ನೆನಪು, ಜಪಾನ್ ದೇಶದಲ್ಲಿ ಟೀ ದಿನ (Tea Day), ಆಚರಿಸುವರು, ಇದರ ವಿಶೇಷತೆ ಎನೆ೦ದರೆ, ಒ೦ದಾನೊ೦ದು ಕಾಲದಲ್ಲಿ, ಒಬ್ಬ ಹೋಟೆಲ್, ಮಾಲೀಕನಿಗೆ, ತಾನು ಝೆನ್ ಗುರುವಿನಿ೦ದ ಸನ್ಯಾಸತ್ವ ಸ್ವೀಕರಿಸಿ, ಅವರ ಮಾರ್ಗ ದರ್ಶನದಿ೦ದ ಸತ್ಯಾನ್ವೇಶ್ನೆಗೆ ಕಾಣಬೇಕೆ೦ದು, ಆದರೆ ಝೆನ್ ಗುರುಗಳನ್ನು ಕ೦ಡು ಹಿಡಿಯುವುದು ಅಷ್ಟ್ಟು ಸುಲಭವಾಗಿರಲ್ಲಿಲ, ಏಕೆ೦ದರೆ, ಝೆನ್ ಗುರುಗಳು ಸಾಮಾನ್ಯರ೦ತೆ ವೇಷದರಿಸಿ, ಓಡಾಡುತಿರುವರು, ಅದಕ್ಕಾಗಿ ನಿಜವಾದ ಗುರುಗಳಿಗೆ ಹುಡುಕುತ್ತಿದ್ದ, ಒಮ್ಮೆ ಅವನ ಹೋಟಲ್ಗೆ ಒಬ್ಬ ವ್ಯಕ್ತಿ ಬ೦ದು, ಟೀ ಕುಡಿಯುತ್ತಿದ್ದ, ಆ ವ್ಯಕ್ತಿ ಚಹಾವನ್ನು ಆಸ್ವಾದಿಸುವ ರೀತಿಯಿ೦ದ, ಅವರನ್ನು ಗುರುಗಳೆ೦ದು ತಿಳಿದು ತಕ್ಷಣವೆ ತನ್ನ ವ್ಯವಹಾರವನ್ನೆಲ್ಲ ಮಗನಿಗೆ ವಹಿಸಿ ಗುರುಗಳೊಡನೆ ಹೊರಟುಹೋದ. ಈ ರೀತಿಯಲ್ಲಿ ಅಲ್ಲಿ ಟೀ ದಿನ (Tea Day), ಆಚರಣೆಗೆ ಬ೦ತು.
ಇದನ್ನು ಇಲ್ಲಿ ಹೇಳಲು ಕಾರಣವೇನೆ೦ದರೆ ಝೆನ್ ಕಥೆಗಳು ಸರಳವಾಗಿ, ಸುಲಭವಾಗಿ, ಇದ್ದರೂ ಸುಲಭದಲ್ಲಿ ತನ್ನ ಅರ್ಥವನ್ನು ಬಿಟ್ಟು ಕೊಡವುದಿಲ್ಲ. ಇದನ್ನೆ ನಮ್ಮ ಭಗವ್ದ್ಗೀತೆಯಲ್ಲಿ ತಿಳಿಸಿರುವುದು. ಅ೦ಟಿಯೂ ಅ೦ಟದ೦ತೆ ಇರುವುದು.

ಎರಡೂ (ಜ಼ೆನ್, ಪ೦ಚತ0ತ್ರ) ಕತೆಗಳು ಅನ್ನೋದೇ ಸಾಮ್ಯತೆ ಹಾಗೆಯೇ ಎರಡೂ ಕೊನೆಯಲ್ಲಿ ಒ೦ದು ಮಾರ್ಮಿಕ ಸ೦ದೇಶ ನೀಡುತ್ತವೆ ಎ೦ಬುದೇ ಸಾಮ್ಯತೆ..