ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಸ್ಕಲ್ ಮಂತ್ರ ಮತ್ತು ಜುಗಾರಿ ಕ್ರಾಸ್

January 25, 2006 - 2:29pm — shreekant.mishrikoti

ಇತ್ತೀಚೆಗೆ ಎರಡು ಪುಸ್ತಕ ಓದಿದೆ .

ಒಂದು ಇಂಗ್ಲೀಷಿನಿಂದ ಶ್ರೀ ಬೇಳೂರು ಸುದರ್ಶನರವರು ಮಾಡಿರುವ ಅನುವಾದ - ಸ್ಕಲ್ ಮಂತ್ರ ( ನೋಡಿ (ದಟ್ಸ್ ಕನ್ನಡ ಸಂಪರ್ಕ)) ಆದರೆ ಅದರ ಅನುವಾದ ಬಹಳ ಚೆನ್ನಾಗಿದೆ. ( ಒಂದೇ ಒಂದು ತಪ್ಪು ಗಮನಿಸಿದೆ. ಅದೂ ಯಾಕೆ ಎಂದರೆ , ಸರಾಗ ಓದಿಗೆ ಅಡ್ಡಿಯಾದದ್ದಕ್ಕೆ - ಮುದ್ರಣ ದೋಷಗಳನ್ನು ಸಹಜವಾಗಿ ನಾವು ಗಮನಿಸುವದಿಲ್ಲ - ಆದರೆ ತಪ್ಪು ಪದಕ್ಕೆ ಒಂದು ಬೇರೆ ಅರ್ಥವಿದ್ದಾಗ ನಮ್ಮ ಓದು ಎಡವುತ್ತದೆ ) 'ರಸ್ತೆಯನ್ನು ಅಗಲಿಸಿದ್ದಾರೆ' ಎಂಬುದು ಆ ವಾಕ್ಯ. ಅಗಲಿಸು ಎನ್ನುವದು ಅಗಲು ಶಬ್ದದ ರೂಪ. ಅಗಲ ಎಂಬುದರದ್ದಲ್ಲ . ವಾಕ್ಯದ ಉದ್ದೇಶ ಅಗಲ ಮಾಡಿದ್ದಾರೆ ಎಂಬುವದು.

ಅನುವಾದ ಸುಲಲಿತವಾಗಿ ಚೆನ್ನಾಗಿದೆ. ಆದರೆ ಕಥೆ ಸರಳವಾಗಿ ಇಲ್ಲ. ಘಟನೆಗಳು, ಪಾತ್ರಗಳನ್ನು ಅನುಸರಿಸಲು ಆಗುವದಿಲ್ಲ. ಟಿಬೆಟ್ಟಿನ ಬೌದ್ಧ ಧರ್ಮ, ಸಿದ್ಧಾಂತ, ಜೀವನ ರೀತಿಗಳ ಪರಿಚಯ ಆಗುತ್ತದೆ. ಒಂದಿಷ್ಟು ವಿಚಾರಯೋಗ್ಯ/ಉದ್ಧರಣಯೋಗ್ಯ ವಾಕ್ಯ ಸಮೂಹಗಳು ಸಿಗುತ್ತವೆ. ಕೊನೆಯಲ್ಲಿ . ಇಂಗ್ಲೀಷ್ ಭಾಷೆ ತಿಳಿಯದವನು ಇಂಗ್ಲೀಷ್ ಸಿನಿಮ ನೋಡಿದ ಹಾಗೆ ಆಗುತ್ತದೆ. ಸರಿಯಾಗಿ ತಿಳಿದುಕೊಳ್ಳಲು ಮತ್ತೆ ಪುಟ ತಿರುಗಿಸುವ ಆಕರ್ಷಣೆ ಏನೂ ಇಲ್ಲ .

ನಂತರ ಶ್ರೀ ಕೆ.ಪಿ.ಪೂರ್‍ಣಚಂದ್ರತೇಜಸ್ವಿಯವರ ಜುಗಾರಿ ಕ್ರಾಸ್ ಓದಿದೆ. ನಾಲ್ಕು ರಸ್ತೆ ಕೂಡುವಲ್ಲಿ ೨೪ ಗಂಟೆಗಳಲ್ಲಿ ನಡೆವ ಘಟನೆಗಳ ಬಗ್ಗೆ ಇದೆ. ಸಾಹಿತ್ಯಕ ಮೌಲ್ಯಗಳೇನೋ ಇರಬಹುದು ( ನಾನು ಅದನ್ನು ಅರಿಯೆ) . ಆದರೆ ಒಂದು ಥ್ರಿಲ್ಲರ್ ಆಗಿ ಶ್ರೇಷ್ಠವಾಗಿದೆ. ಒಂದು ಹಳ್ಳಿಯ ಸಾಂಸ್ಕೃತಿಕ ಆರ್ಥಿಕ ಅವಸಾನ , ಊರಿಗೆ ಫೋನು ಬರುವದರಿಂದ ಊರಿನಲ್ಲಿ ಆಗುವ ಬದಲಾವಣೆಗಳು , ಏನೇನೋ ಚಟುವಟಿಕೆಗಳು , ಅದನ್ನು ಯಾರೋ ಎಲ್ಲಿಂದಲೋ ನಿಯಂತ್ರಿಸುವವರು ( 'ದೂರದಿಂದಲೇ ಜೀವ ಹಿಂಡುತಿದೆ ಕಾಣದೊಂದು ಹಸ್ತ') ಹೀಗೇ ಅನೇಕ ಆಯಾಮಗಳನ್ನೊಳಗೊಂಡಿದೆ. ನಿಗೂಢಮಯ ಸುಂದರ ನಿಸರ್ಗ, ಅನಿರೀಕ್ಷಿತ ಘಟನೆಗಳು , ಹಳೆಯ ಕಾವ್ಯದಲ್ಲಿ ರಹಸ್ಯ ಹೀಗೆ ಇನ್ನೂ ಏನೇನೋ, ಕಾದಂಬರಿ ಚಿಕ್ಕದಾಗಿದ್ದರೂ ಅದ್ಭುತವಾಗಿದೆ. ಎಲ್ಲರೂ ಓದತಕ್ಕುದಾಗಿದೆ.

ಸ್ಕಲ್ ಮಂತ್ರಕ್ಕೆ ಹೋಲಿಸಿದರೆ ತಲೆಮೇಲೆ ಇಟ್ಟುಕೊಂಡು ಕುಣಿಯುವ ಹಾಗೆ ಇದೆ. ಕನ್ನಡದಲ್ಲೇ ಎಂಥೆಂಥ ಕೃತಿಗಳು ಇರುವಾಗ ನಾವು ಅವನ್ನು ಗಮನಿಸದೆ ಇಂಗ್ಲೀಷಿಗೆ ಮೊರೆ ಹೋಗುತ್ತೇವೆ. .

ಅಂದ ಹಾಗೆ ಜುಗಾರಿ ಕ್ರಾಸ್ ಇಂಗ್ಲೀಷಿಗೆ ಅನುವಾದ ಆಗಿದೆಯೆ ? ಅಂದರೆ ಹೆಚ್ಚು ಜನ ಓದಿ ಸಂತೋಷಪಡಬಹುದು.

  • ಪುಸ್ತಕ ವಿಮರ್ಶೆ
~.~
  • Login or register to post comments
  • 652 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ಸಂಪದ'ದಲ್ಲಿ ಕನ್ನಡ ಗಣಕತಂತ್ರಾಂಶಕ್ಕಾಗಿ ಅನುವಾದ
  • ಪುಸ್ತಕ ನಿಧಿ(೪): ಅಷ್ಟಾವಧಾನಿಯಂತೆ ಪುಸ್ತಕಗಳ ಓದು.!
  • ತಪ್ಪುಗಳು ಹೀಗೂ ಸಂಭವಿಸಬಹುದು
  • ಮುಕ್ತ ತಂತ್ರಾಂಶ ಅನುವಾದ ಕುರಿತು.....ಬನ್ನಿ ಕೈ ಜೋಡಿಸಿ
  • ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ವಿಧ್ಯಾಭ್ಯಾಸ ಮತ್ತು ಕಾಲೇಜು
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ
  • ಬ್ರಹ್ಮ ಕಮಲ.
  • ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ
  • ಕಾಶ್ಮೀರದ ಹುಡುಗಿಯ ಕತೆ
  • ಪ್ರತಿಭಟನೆಗಳು, ಮೆರವಣಿಗೆ, ಬಂದ್..ಸಹ ವೃತ್ತಿಯೇ?
  • ಜಿಪುಣ

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಕಾಶ್ಮೀರದ ಹುಡುಗಿಯ ಕತೆ
    July 4, 2008 - 7:20pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:51pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:50pm
  • ವೈಭವ
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:33pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:31pm
  • cmariejoseph
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 4, 2008 - 6:20pm
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 6:07pm
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 5:59pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 33 ಅತಿಥಿಗಳು ಆನ್ಲೈನ್ ಇರುವರು.


ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator