ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: ಓಶೋ ಕಂಡಂತೆ ಗಾಂಧಿ!

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ

ಕನ್ನಡದಲ್ಲಿ ಕಾನೂನು - ಸಿ ಎನ್ ಮಂಜಪ್ಪನವರ ಕಾಣಿಕೆಗಳು

August 6, 2008 - 10:05am — Dattatri H M

"ಆಡಳಿತದಲ್ಲಿ ಕನ್ನಡ" "ಎಲ್ಲೆಲ್ಲೂ ಕನ್ನಡ" ಈ ಕೂಗು ಬಹಳ ಕಾಲದಿಂದಲೂ ಇದೆ. ಆದರೆ ಅದಕ್ಕೆ ಬೇಕಾದ ತಯಾರಿಯ ಬಗ್ಗೆ ಮಾತ್ರ ನಮ್ಮ ಧೋರಣೆ ಬೇರೆ. ಪ್ರಾಥಮಿಕ ಹಂತದಿಂದ ಇಂಗ್ಲಿಷ್ ಬೇಕೇ ಬೇಕು ಅಂತಲೂ ಅನ್ನುವವರು ನಾವೆ. ಇಂಗ್ಲಿಷಿನ ಬುನಾದಿಯ ಮೇಲೆ ಕನ್ನಡದರಮನೆ ಕಟ್ಟಲು ಸಾಧ್ಯವೇ? ಕನ್ನಡ ಕಲಿಕೆ ಇಲ್ಲದೆ ಕನ್ನಡದಾಡಳಿತ ಎಂತು?

ಪ್ರಾಥಮಿಕ ಹಂತವೊಂದೇ ಅಲ್ಲ. ಉನ್ನತ ಶಿಕ್ಷಣಕ್ಕೂ ಕನ್ನಡವನ್ನೇ ಬಳಸಬೇಕು. ಆಗ ರಾಜ್ಯಾಡಳಿತದಲ್ಲಿ ಕನ್ನಡಬಂದೀತು. ಆದರೆ ಕನ್ನಡದಲ್ಲಿ ಪಠ್ಯಪುಸ್ತಕಗಳೆಲ್ಲಿವೆ? ವೈದ್ಯಕೀಯ, ತಾಂತ್ರಿಕ ಶಿಕ್ಷಣ ಹಾಗಿರಲಿ, ಕಾನೂನು ಶಿಕ್ಷಣಕ್ಕೂ ಸಹ ಉತ್ತಮ ಪಠ್ಯಪುಸ್ತಗಳು ಬಹು ಕಡಿಮೆ. ಈ ಹಿನ್ನೆಲೆಯಲ್ಲಿ ಮಾನ್ಯ ಮಂಜಪ್ಪನವರ ಕಾನೂನು ಕುರಿತಾದ ಕನ್ನಡಪುಸ್ತಕಗಳು ಶ್ಲಾಘನೀಯವೆನ್ನಿಸಿಕೊಳ್ಳುತ್ತವೆ.

ಸಿ.ಎನ್. ಮಂಜಪ್ಪನವರು ತಮ್ಮ ಎಲ್.ಎಲ್.ಎಂ. ಪದವಿಯ ನಂತರ ೧೫ ವರ್ಷಗಳಿಂದ ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾನೂನು ಕ್ಷೇತ್ರದಲ್ಲಿ ಆಳವಾದ ಅಧ್ಯಯನ ಚಿಂತನೆಗಳನ್ನು ಮೈಗೂಡಿಸಿಕೊಂಡು ಸದಾ ಚಟುವಟಿಕೆಯಲ್ಲಿರುವ ಇವರು ಕಾನೂನು ಶಿಕ್ಷಣ ಹೇಗಿರಬೇಕು, ಜನಸಾಮಾನ್ಯರಿಗೆ ಕಾನೂನು ತಿಳುವಳಿಕೆ ಉಂಟಾಗಲು ಏನೇನು ಮಾಡಬಹುದು ಎಂಬುದರ ಬಗ್ಗೆ ಪ್ರಯೋಗಾತ್ಮಕ ಯೋಜನೆ ರೂಪಿಸಿದ್ದಾರೆ.

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ವಿವಿಧ ಪಂಚಾಯತಿಗಳು, ಕರ್ನಾಟಕ ಪಂಚಾಯತ್ ಕಾಯ್ದೆ ೧೯೯೩ ರ ಅಡಿಯಲ್ಲಿ ಹೇಗೆ ಕಾರ್ಯನಿರ್ವಹಿಸಬೇಕೆಂದು ಸುಲಭ ಶೈಲಿಯಲ್ಲಿ ಪುಸ್ತಕ ರಚಿಸಿದ್ದಾರೆ. ಈ ಪುಸ್ತಕವನ್ನು ಕಾನೂನು ಸೇವಾ ಪ್ರಾಧಿಕಾರ ಮತ್ತು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಂಟಿಯಾಗಿ ಪ್ರಕಟಿಸಿವೆ.

ಇವರ ಇತರ ಪುಸ್ತಕಗಳ ಪರಿಚಯ:

ಮಾಹಿತಿ ಹಕ್ಕು ಅಧಿನಿಯಮ ೨೦೦೫ - ಟೀಕೆ, ಟಿಪ್ಪಣಿ
(Right to Information Act 2005: Comments- along with all related circulars)
ಪ್ರಕಾಶಕರು: ಸಿರಿ ಸವಿ ಕಾನೂನು ಪುಸ್ತಕ ಪ್ರಕಾಶನ (ದೂರವಾಣಿ: ೯೮೪೫೧೮೯೨೧೨)
ಪುಟ: ೩೨೦ ಬೆಲೆ: ರೂ. ೨೨೫

ಪಂಚಾಯತ್ ರಾಜ್ ಕೈಪಿಡಿ (ಕಾನೂನು, ನಿಯಮ, ಟಿಪ್ಪಣಿ, ಪ್ರಶ್ನೋತ್ತರ)
(Panchaayat Raaj - Act, Rules, Comments and FAQs)
ಪ್ರಕಾಶಕರು: ಕರ್ನಾಟಕ ಪಂಚಾಯತ್ ಪರಿಷತ್, ಶೇಷಾದ್ರಿಪುರಂ, ಬೆಂಗಳೂರು
ಪುಟ: ೧೯೨ ಬೆಲೆ: ರೂ. ೧೦೦

ಕಂಪನಿ ಕಾನೂನು
(Companies Act 1956)
ಸಹ ಲೇಖನ: ಶ್ರೀ ಎಂ ಎನ್ ಭೀಮೇಶ್, ಉಪನ್ಯಾಸಕರು, ಜೆ ಎಸ್ ಎಸ್ ಕಾನೂನು ಕಾಲೇಜು, ಮೈಸೂರು
ಪ್ರಕಾಶಕರು: ಪ್ರಭೋಧ ಪಬ್ಲಿಕೇಶನ್ಸ್, ಮೈಸೂರು (ದೂರವಾಣಿ:೦೮೨೧-೨೫೨೪೩೫೪)
ಪುಟ:೫೦೧ ಬೆಲೆ: ರೂ. ೨೭೦

ಬರಲಿರುವ ಪುಸ್ತಕಗಳು: ಕೌಟುಂಬಿಕ ಕಾನೂನುಗಳು
ಅಪರಾಧ ಕಾನೂನು ಪ್ರಕ್ರಿಯೆ

ಸಿ. ಎನ್. ಮಂಜಪ್ಪನವರಿಂದ ಇನ್ನಷ್ಟು ಪುಸ್ತಕಗಳಂತೂ ಖಂಡಿತ ಹೊರಬರಲೆಂದು ನಮ್ಮ ಹಾರೈಕೆ. ಜೊತೆಗೆ ಕನ್ನಡದಲ್ಲಿ ಕಾನೂನು ಓದುಗರು ಹಾಗೂ ಬಳಸುವವರು ಹೆಚ್ಚಾದಲ್ಲಿ ಮಾತ್ರ ನಮ್ಮೆಲ್ಲರ ಬಯಕೆಯಾದ "ಎಲ್ಲೆಲ್ಲೂ ಕನ್ನಡ" ಸಾಕಾರವಾದೀತು.

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • Login or register to post comments
  • 179 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಿ ಎನ್ ಮಂಜಪ್ಪ
  • ಕಾನೂನು ಉಲ್ಲಂಘಿಸಲು ಕಾನೂನು ಪದವಿ
  • ಭಯೋತ್ಪಾದಕರಿಗೆ ವಿಶ್ವವಿದ್ಯಾಲಯದ ಕಾನೂನು ನೆರವು ಅಗತ್ಯವೇ?
  • ಸಾಯಿಬಾಬಾ ಕಣ್ಣು ತೆರೆದಿದ್ದು..ನಮ್ಮ ಮಾಧ್ಯಮಗಳು ಕಣ್ಣುಮುಚ್ಚಿದ್ದು!
  • "ವಿವಾಹಕ್ಕೆ ಮೊದಲು "ಎಚ್.ಐ.ವಿ ಪರೀಕ್ಷಣಾ ಪತ್ರ" ಲಗತ್ತಿಸ ಬೇಕೆಂಬ ಕಾನೂನು ಮಾಡುವುದು ಒಳ್ಳೆಯದು."
Syndicate content

ಲೇಖಕರು

Dattatri H M's picture

ಪೂರ್ಣ ಹೆಸರು
Dattatri

ಪರಿಚಯ

ಮಲೆನಾಡು ಮೂಲ. ಮೈಸೂರಲ್ಲಿ ಮನೆ. ಬೆಂಗಳೂರಲ್ಲಿ ಕೆಲಸ - ಕಂಪನಿ ಸೆಕ್ರೆಟರಿ ಮತ್ತು ಕಾನೂನು ವ್ಯವಹಾರ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"
  • ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
  • ಡಿಸ್ನಿ ಲ್ಯಾಂಡ್,' ಗೆ ನೀವೇನಾದರೂ ಭೇಟಿ ಕೊಟ್ಟರೆ, ಜಲಾಂತರ್ಗಾಮಿ-ನೌಕಾಯಾನಗಳ (Submarines) ವಿಭಾಗವನ್ನು ನೋಡಲು, ಖಂಡಿತ ಮರೆಯದಿರಿ !
  • ಡಿಸ್ನಿ ಲ್ಯಾಂಡ್,' ಗೆ ನೀವೇನಾದರೂ ಭೇಟಿ ಕೊಟ್ಟರೆ, ಜಲಾಂತರ್ಗಾಮಿ-ನೌಕಾಯಾನಗಳ (Submarines) ವಿಭಾಗವನ್ನು ನೋಡಲು, ಖಂಡಿತ ಮರೆಯದಿರಿ !
  • "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?":- ಭಾಗ ೨
  • ಓಶೋ ಕಂಡಂತೆ ಗಾಂಧಿ!
  • ಅರಮನೆ ಮೈದಾನದಲ್ಲಿ ಪುಸ್ತಕ ಸ೦ತೆ

ಇತ್ತೀಚಿನ ಪ್ರತಿಕ್ರಿಯೆಗಳು

  • ajitmb
    ಉ: "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?":- ಭಾಗ ೨
    November 22, 2008 - 12:13am
  • srikanth
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 12:06am
  • ajitmb
    ಉ: ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
    November 22, 2008 - 12:03am
  • uniquesupri
    ಉ: ಓಶೋ ಕಂಡಂತೆ ಗಾಂಧಿ!
    November 21, 2008 - 11:00pm
  • JAYADEV
    ಉ: ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
    November 21, 2008 - 10:47pm
  • muralihr
    ಉ: ಮೈಕಲ್ ಜಾಕ್ಸನ್‌ನ ಧರ್ಮಾಂತರ - ಮೈಕಲ್ ಜಾಕ್ಸನ್ ಈಗ ಮುಸ್ಲಿಂ
    November 21, 2008 - 10:41pm
  • ASHOKKUMAR
    ಉ: ಓಶೋ ಕಂಡಂತೆ ಗಾಂಧಿ!
    November 21, 2008 - 10:40pm
  • uniquesupri
    ಉ: ಓಶೋ ಕಂಡಂತೆ ಗಾಂಧಿ!
    November 21, 2008 - 10:33pm
  • gurubaliga
    ಉ: ನೈನ್-ನೈಂಟಿ(990) ನರ್ವಸ್!
    November 21, 2008 - 10:23pm
  • gurubaliga
    ಉ: ಓಶೋ ಕಂಡಂತೆ ಗಾಂಧಿ!
    November 21, 2008 - 10:12pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 87 ಅತಿಥಿಗಳು ಆನ್ಲೈನ್ ಇರುವರು.


ಪ್ರಶ್ನೆಮಾಡುವುದನ್ನು ನಿಲ್ಲಿಸದಿರುವುದು ಅತ್ಯಂತ ಮುಖ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator