ಕುಂದದೆಂದಿಗುಮೆನ್ನಿಸುವ ಮನದ ಕಾತರತೆ |
ಯೆಂದೊ ತಾನೇ ಬಳಲಿ ತಣ್ಣಗಾಗುವುದು ||
ಮಂದದಾ ಕಾರ್ಮೋಂಡ ಬಿರಿದು ರವಿ ಬೆಳಗುವನು |
ಅಂದಿನಾ ಸುಖವೆ ಸುಖ -- ಮಂಕುತಿಮ್ಮ ||

— ಡಿ ವಿ ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನಾವೆಲ್ಲಾ ಅತಿಕಾತುರದಿಂದ ಕಾಯುತ್ತಿದ್ದ " ಬೀಜಿಂಗ್ ಒಲಂಪಿಕ್ಸ್ " ಇನ್ನೇನು ಶುರುವಾಗುವ ಸಮಯ ಹತ್ತಿರ ಬಂದಿದೆ !

ಒಲಿಂಪಿಕ್ ಉದ್ಘಾಟನೆಯ ಕ್ಷಣಗಣನೆಯನ್ನು ನಿರೀಕ್ಷಿಸಿ !

ಬೀಜಿಂಗ್ ಒಲಂಪಿಕ್ ಮಹಾನ್ ಕ್ರೀಡಾಕೂಟದ ಉದ್ಘಾಟನೆ ಆಗಸ್ಟ್ ೮, ರಂದು ಶುರುವಾಗುವ ಶುಭಘಳಿಗೆ ಹತ್ತಿರ-ಹತ್ತಿರ ಬರುತ್ತಿದೆ. ಸುಮಾರು ೨.೫ ವಾರ ನಡೆಯುವ ಈ ಸ್ಪರ್ಧಾತ್ಮಕ ಆಟಗಳನ್ನು ಏರ್ಪಡಿಸಲು, ಸುಮಾರು ೭ ವರ್ಷ ಸಮಯ ಹಿಡಿಯಿತು! ಒಲಂಪಿಕ್ ಕ್ರೀಡಾಸಕ್ತರೆಲ್ಲಾ ಆ ಸವಿಘಳಿಗೆಯ ನಿರೀಕ್ಷಣೆ ಮಾಡುತ್ತಿದ್ದಾರೆ. ಚೀನಾದೇಶದ ಜನರು, ಈಗಾಗಲೇ ಪೂರ್ಣ-ಸಿದ್ದತೆಯೊಂದಿಗೆ ಅಣಿಯಾಗಿದ್ದು, ಜಾಗತಿಕವಾಗಿ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲು ಸಂಕಲ್ಪ ಹೊಂದಿದ್ದು, ಆ ಕಾರಣಕ್ಕಾಗಿ ಒಲಿಂಪಿಕ್ ಆಟಕ್ಕೆ ಬಿಲಿಯಗಟ್ಟಲೆ ಹಣವನ್ನು ಖರ್ಚುಮಾಡಿದ್ದಾರೆ. ಕ್ರೀಡೆಯ ಉದ್ಘಾಟನಾ ಸಮಾರಂಭ, ಹಾಗೂ ಮುಕ್ತಾಯಸಮಾರಂಭಗಳಿಗೆ, ಸುಮಾರು ೧೦೦ ಮಿಲಿಯನ್ ಡಾಲರ್ ಹಣ ವ್ಯಯವಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲೇ ಹೆಚ್ಚು-ಕಡಿಮೆ ೧೫,೦೦೦ ಜನ ಭಾಗವಹಿಸುತ್ತಾರೆ. ಸುಮಾರು ೨೯,೦೦೦ ಪಟಾಕಿಗಳನ್ನು ಹೊಡೆಯುವ ಏರ್ಪಾಡಾಗಿದೆ. ಪ್ರದೂಷಣವನ್ನು ಹತೋಟಿಯಲ್ಲಿಡಲು ಮಾಡಿರುವ ಖರ್ಚೇ ಸುಮಾರು ೧೮ ಬಿಲಿಯನ್ ಡಾಲರ್ ಗಳು. ಗಾಳಿಯಲ್ಲಿನಮಾಲೀನ್ಯತೆ, ೧೫೦ ಮಿ. ಗ್ರಾಂ/ಪ್ರತಿಘನ.ಮೀ. ಇರಬೇಕಾದದ್ದು, ಈಗ, ೧೯೧ ಮಿ. ಗ್ರಾಂ/ಪ್ರತಿ ಘ. ಮೀ ಆಗಿದೆ. ಅದರಿಂದಾಗಿ ಕೆಲವು ಬಾರಿ, ಆಟಗಳನ್ನು ನಿಲ್ಲಿಸಿ ಮಾರನೆಯದಿನ ಮತ್ತೆ ಶುರುಮಾಡಲಾಗುವುದು. ಭಯೋತ್ಪಾದರ ದಾಳಿಯ ನಡುವೆಯೂ, ಸಾಯಂಕಾಲ, ಒಲಂಪಿಕ್ ಆಟ ಉದ್ಘಾಟನೆಯಾಗಲಿದೆ. ಭಾರತದಿಂದ ಸುಮಾರು ೫೭ ಮಂದಿ ಕ್ರೀಡಾಗಳುಗಳು, ಬೀಜಿಂಗ್‌ ಗೆ ತೆರಳಿದ್ದಾರೆ. ಇದರಲ್ಲಿ ರಾಜ್ಯವರ್ಧನ್ ರಾಥೋಡ್, ಅಂಜು ಬಾಬಿ ಜಾರ್ಜ್, ಸಾನಿಯಾ ಮಿರ್ಜಾ, ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಸೇರಿದಂತೆ ಸುಪ್ರಸಿದ್ಧ ಕ್ರೀಡಾಳುಗಳು ತಂಡದಲ್ಲಿದ್ದಾರೆ. ಶೂಟಿಂಗ್, ಆರ್ಚರಿ, ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಪದಕಗಳು ಲಭಿಸುವ ನಿರೀಕ್ಷೆ ಇದೆ. ಈ ಮಹಾನ್ ಕ್ರೀಡಕೂಟದಲ್ಲಿ ೨೮ ಕ್ರೀಡೆಗಳು ನಡೆಯಲಿದ್ದು , ಒಟ್ಟು ೧೧,೫೦೦ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಅದರಲ್ಲಿ ೪೫% ಜನ ಹೆಣ್ಣುಕ್ರೀಡಾಳುಗಳು. ಬೀಜಂಗ್‌ ಪೂರ್ಣಪ್ರಮಾಣದಲ್ಲಿ ನವ-ವಧುವಿನಂತೆ ಶೃಂಗಾರಗೊಂಡಿದ್ದು, ಸಿಡಿ-ಮದ್ದುಗಳ ಆಕರ್ಷಕ ಪ್ರದರ್ಶನ, ಸಾವಿರಾರು ಚೀನಿ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಅನಾವರಣಗೊಳ್ಳಲಿದೆ. ಪೋಲೀಸ್ ಬಿಗಿ ಬಂದೋಬಸ್ತ್, ಮಧ್ಯೆ, ಒಲಿಂಪಿಕ್ ಗೇಮ್ಸ್ ಆರಂಭಕ್ಕೂ ಮುಂಚೆ ಭಯೋತ್ಪಾದಕ ಸಂಘಟನೆಗಳು ದಾಳಿ ನಡೆಸುವ ಮುನ್ನೆಚ್ಚರಿಕೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಬೀಜಿಂಗ್‌ನಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಈಗಿರುವ ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
anil.ramesh's picture

ವೆಂಕಟೇಶ್ ಅವರೇ, ಬೀಜಿಂಗ್ ಒಲಂಪಿಕ್ಸ್ ಬಗ್ಗೆಯ ಮಾಹಿತಿಗಾಗಿ ನನ್ನಿ... :-)

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

ASHOKKUMAR's picture

Quote:
ಸುಮಾರು ೨೯,೦೦೦ ಪಟಾಕಿಗಳನ್ನು ಹೊಡೆಯುವ ಏರ್ಪಾಡಾಗಿದೆ. ಪ್ರದೂಷಣವನ್ನು ಹತೋಟಿಯಲ್ಲಿಡಲು ಮಾಡಿರುವ ಖರ್ಚೇ ಸುಮಾರು ೧೮ ಬಿಲಿಯನ್ ಡಾಲರ್ ಗಳು.

ಪಟಾಕಿ ಬಸುಡದೆಯೂ ಗಾಳಿ ಕೆಡುವುದನ್ನು ಕಡಿಮೆ ಮಾಡಬಹುದು!
*ಅಶೋಕ್

venkatesh's picture

ಹೌದು. ಅನಿಲ್/ ಅಶೋಕ್ ರವರೆ,

ಹೇಳೋದೊಂದು. ಮಾಡೋದ್ ಮತ್ತೊಂದು. ಇದನ್ನ ನೋಡಿ, ನೋಡಿ ನಾವೆಲ್ಲಾ ರೋಸಿಹೋಗಿದೀವಿ. ಇಲ್ಲಿ ಅಮೆರಿಕದಲ್ಲೂ ಅಷ್ಟೆ. ಪಲ್ಯೂಷನ್ ಮೇಲೆ ಭಾಷಣ ಬಿಗಿದಿದ್ದೂ ಬಿಗಿದಿದ್ದೆ.
ಒಂದ್ ಡಿಪಾರ್ಟ್ಮೆಂಟಲ್ ಸ್ಟೋರ್ಸ್ ಗೆ ಹೋದ್ರೆ, ಮಿನಿಮಮ್ ೧೦ ಬ್ಯಾಗ್ನಲ್ಲಿ ಪ್ಯಾಕ್ಮಾಡಿ ಕೊಡ್ತಾರೆ. ಮನೆತುಂಬಾ ಪ್ಲಾಸ್ಟಿಕ್ ಬ್ಯಾಗ್ ಗಳೆ ! ಲೈಟ್ ಗಳನ್ನ ಬೆಳಿಗ್ಯೆ ೮ ಗಂಟೆ ಆದ್ರೂ ಆರ್ಸಲ್ಲ. ಇತ್ಯಾದಿ. ಇತ್ಯಾದಿ.

ASHOKKUMAR's picture

ನಮ್ಮೂರಿನ ಬಿಗ್ ಬಜಾರಲ್ಲು ಅಷ್ಟೆ. ಪ್ರತಿಯೊಂದನ್ನೂ ಪ್ಲಾಸ್ಟಿಕ್ ಬ್ಯಾಗಲ್ಲಿ ಹಾಕಿ,ಗಂಟು ಹಾಕಿ ಕೊಡ್ತಾರೆ. ನಾನೊಂದು ದೊಡ್ಡ ಸೂಟ್‌ಕೇಸ್ ತೆಗೊಂಡಾಗ ಅದನ್ನೂ ಪ್ಲಾಸ್ಟಿಕ್ ಲಕೋಟೆಯಲ್ಲಿ ಹಾಕಲು ಪ್ಲಾಸ್ಟಿಕ್ ಲಕೋಟೆ ಹುಡುಕ ತೊಡಗಿದರು-ಅಷ್ಟು ದೊಡ್ಡದು ಸಿಕ್ಕಲಿಲ ಅನ್ನಿ! ಅಲ್ಲಿಗೆ ಹೋಗಿ ಬಂದರೆ ಮನೆ ತುಂಬಾ ಪ್ಲಾಸ್ಟಿಕ್ ಲಕೋಟೆಗಳ ರಾಶಿ.
ಮುಂದಿನ ಸಲ ಅಲ್ಲಿಗೆ ಹೋದಾಗ ಹಳೆ ಲಕೋಟೆ ವಾಪಸ್ ಪಡೆಯುವ ವ್ಯವಸ್ಥೆ ಶುರು ಮಾಡಲು ಅವರು ಯೋಚಿಸಬೇಕು.

*ಅಶೋಕ್

anil.ramesh's picture

ಅಶೋಕ್ ಅವರೇ,
ಬರಿ ನಿಮ್ಮ ಊರಿನಲ್ಲಿ ಅಷ್ಟೆ ಅಲ್ಲ, ಇಡೀ ವಿಶ್ವದಲ್ಲೇ ಪ್ಲಾಸ್ಟಿಕ್ ಹಾವಳಿ ಜಾಸ್ತಿಯಾಗಿದೆ... ಇದನ್ನು ನಿಯಂತ್ರಿಸಲು ಏನು ಕ್ರಮವಿದೆಯೋ ಆ ದೇವರಿಗೂ ತಿಳಿದಿಲ್ಲವೆನಿಸುತ್ತದೆ... :(

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

ASHOKKUMAR's picture

ಅನಿಲ್,
ದೇವರ ಪ್ರಸ್ತಾಪ ಆದದ್ದಕ್ಕೆ ಬರೆಯುತ್ತಿದ್ದೇನೆ.
ನಮ್ಮೂರಿನ ದೇವಸ್ಥಾನದಲ್ಲಿ ದೇವರ ಪ್ರಸಾದ ಪ್ಲಾಸ್ಟಿಕ್ ಕವರಿನಲ್ಲಿ ಕೊಡುತ್ತಿದ್ದರು. ಈಗ ಕಾಗದ ಮತ್ತು ಬಟ್ಟೆಯ ಬ್ಯಾಗ್ ಉಪಯೋಗಿಸುತ್ತಿದ್ದಾರೆ.
*ಅಶೋಕ್

anil.ramesh's picture

ಖುಶಿ ಆಯ್ತು ನಿಮ್ಮ ಪ್ರತಿಕ್ರಿಯೆ ನೋಡಿ... ಎಲ್ಲಾ ದೇವರ ದಯೆ... :)

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

venkatesh's picture

ಅನಿಲ್,
ಹಾಗೆನೋಡಿದರೆ, ಮುಂಬೈನಲ್ಲಿ ಈಗ ಪ್ಲಾಸ್ಟಿಕ್ ಥೈಲಿ ಕೊಡಲ್ಲ. ಬಟ್ಟೆ ಅಥವಾ ಸೆಣಬಿನ ಬ್ಯಾಗ್ ಕೊಡ್ತಾರೆ. ರೂಪಸಂಗಮ್ ಅನ್ನೊ ಶಾಪ್ ಗೆ ಹೋಗಿದ್ವಿ. ಸೆಣಬಿನ ಬ್ಯಾಗ್ ನಲ್ಲಿ ಸೀರೆ ನ ಪ್ಯಾಕ್ ಮಾಡಿ ಕೊಟ್ರು.

ASHOKKUMAR's picture

ಒಲಿಂಪಿಕ್‌ನಲ್ಲಿ ಭಾರತ ಎಷ್ಟು ಪದಕ ಗೆಲ್ಲುತ್ತೆ?

*ಅಶೋಕ್

ಮನಹ್ಪಠಲ's picture

ದೊಡ್ಡ ಕೋಳಿ ಮೊಟ್ಟೆ ;) ಪುಣ್ಯ ಅದರ ಕೆಳಗಡೆ ಏನು ಇಲ್ವಲ್ಲ.
ನಮ್ಮ ದೇಸದಲ್ಲಿ ಕಿರಿಕೇಟು ಬಿಟ್ಟ್ರೆ ಯಾವ ಯಾವ ಅಟೋಟಗಳಿಗೆ ಬೆಲೆ ಕೊಡ್ತಾರ್ಹೇಳಿ:(

nagenagaari's picture

ಇದಕ್ಕೆ ಬೇಕಾದರೆ ದೇವರಿಗೇ ಗೊತ್ತು ಎಂದು ಧೈರ್ಯವಾಗಿ ಹೇಳಬಹುದು!
......................................
ನಗುವು ಸಹಜ ಧರ್ಮ ನಗದಿರುವುದು ನಿಮ್ಮ ಕರ್ಮ!
ನನ್ನ ಬ್ಲಾಗ್: http://nagenagaarido...

anil.ramesh's picture

ಖುಷಿ ಆಯ್ತು ನಿಮ್ಮ ಪ್ರತಿಕ್ರಿಯೆ ನೋಡಿ... ಎಲ್ಲಾ ದೇವರ ದಯೆ... :-)

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.