ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು ।
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ।।
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ ।
ಸತತ ಕೃಷಿಯೋ ಪ್ರಕೃತಿ -- ಮಂಕುತಿಮ್ಮ ।

— ಡಿ.ವಿ.ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕನ್ನಡಕಂದರ್ ತಪಂಗೆಯ್ದರ್

ಕನ್ನಡದೇವಿಯ ದಯಮೇ-
ಮಿನ್ನುಂ ತಮಗೆ ದೊರೆಯದೆನುತುಂ ತೆಂಕಣದಾ
ಪೊನ್ನಂಪೇಟೆಯ ಕಾಡೊಳ್
ಕನ್ನಡಕಂದರ್ ಮರದಡಿಯೊಳ್‍ ತಪಗೆಯ್ದರ್||

ಇದು ಪೊನ್ನಂಪೇಟೆಯ ಅರಣ್ಯಮಹಾವಿದ್ಯಾಲಯದ ನಂಜಲ್ಮರದಡಿಯ ಕನ್ನಡಕಂದರ ಪೀಠದೆಡೆಯೊಳ್‍ ದೊರಕಿದ ಎಸೞೆೞ್ತು. ಕನ್ನಡಕಂದರ್ ತಮ್ಮೋರಂತಪ್ಪ ಮಹೇಶರ್, ಸುನೀಲ ಜಯಪ್ರಕಾಶರ್, ಹಂಸಾನಂದಿ ಮಹಾಮುನಿಗಳ್, ಸಿ ಮರಿಜೋಸೆಫ್ ಮಾಸಯರ್, ಭರತರ್ ಇನ್ನು ಮುಂತಾದ ಸತ್ವಶಾಲಿಗಳ ಪೇೞ್ಕೇಳ್ಪೆಗಳ್ಗೆ ಗಣಕದಿನುತ್ತರಿಸುತುಂ ಶಬ್ದಮಣಿದರ್ಪಣಮನುಂ ಕಿಟ್ಟೆಲ್ ಕೋಶಮನುಂ ತುದಿಮೊದಲೆನ್ನದೋದುತುಂ ಕನ್ನಡದೇವಿಯ ಸೊಬಗಂ ಮನದೊಳ್ ಧ್ಯಾನಿಸುತುಂ ಕನ್ನಡದೇವಿ ತಮಗಿನೊಲ್ದಿಲ್ಲಮೆನುತುಂ ಮೇಲ್ಕಂಡ ಮಾಸಯರಂ ಬೀೞ್ಕೊಂಡು ಕನ್ನಡದೇವಿಯೊಲ್ಮೆಗಾಗಿ ಪೊನ್ನಂಪೇಟೆಯ ಕಾಡೊಳ್ ತಪಂ ಗೆಯ್ವ ಮುನ್ನ ಬರೆದ ಶಾಸನಂ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
hamsanandi's picture

ಬೀಳ್ಕೊಡೂಗೆ ಏಕೆ ಕನ್ನಡ ಕಂದರೆ! ನೀವು ಇಲ್ಲಿ ಹೇಳಬೇಕಾದ್ದು, ನಮಗೆಲ್ಲ ತಿಳಿಸಬೇಕಾದ್ದು ಬಹಳ ಇದೆ :)

ಪೊನ್ನಂಪೇಟೆಯ ಕಾಡಿನೊಳಗೆ ಹೀಗೆ ಹೊಕ್ಕು,ಹಾಗೆ ಹೊರಬಂದುಬಿಡಿ!

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

kannadakanda's picture

ತಪ್ಪೋಲೆ
ಕನ್ನಡದೇವಿಯ ದಯಮೇ-
ನಿನ್ನುಂ ತಮಗೆ ದೊರೆಯದೆನುತುಂ ತೆಂಕಣದಾ
ಪೊನ್ನಂಪೇಟೆಯ ಕಾಡೊಳ್
ಕನ್ನಡಕಂದರ್ ಮರದಡಿಯೊಳ್‍ ತಪಗೆಯ್ದರ್||

ಈ ಪೊೞಲ ಜಂಗುೞಿಯೊಳೇಕಚಿತ್ತಕ್ಕೆ ಭಂಗಂ ಬರ್ಪುದೆಂದು ಕನ್ನಡದೇವಿಯನೊಂದೇ ಮನದಿಂ ಧ್ಯಾನಿಪೆನೆಂದು ಕನ್ನಡಕಂದರ್ ಕಿಱಿದು ಬೇಗಂ ಬನಕ್ಕೆ ತೆರಳಿದರ್.

kannadakanda's picture

ತಪ್ಪೋಲೆ
ಕನ್ನಡದೇವಿಯ ದಯಮೇ-
ನಿನ್ನುಂ ತಮಗೆ ದೊರೆಯದೆನುತುಂ ತೆಂಕಣದಾ
ಪೊನ್ನಂಪೇಟೆಯ ಕಾಡೊಳ್
ಕನ್ನಡಕಂದರ್ ಮರದಡಿಯೊಳ್‍ ತಪಗೆಯ್ದರ್||

ಈ ಪೊೞಲ ಜಂಗುೞಿಯೊಳೇಕಚಿತ್ತಕ್ಕೆ ಭಂಗಂ ಬರ್ಪುದೆಂದು ಕನ್ನಡದೇವಿಯನೊಂದೇ ಮನದಿಂ ಧ್ಯಾನಿಪೆನೆಂದು ಕನ್ನಡಕಂದರ್ ಕಿಱಿದು ಬೇಗಂ ಬನಕ್ಕೆ ತೆರಳಿದರ್.

kannadakanda's picture

ಇನ್ನೊಂದು ತಪ್ಪೋಲೆ

ಕನ್ನಡದೇವಿಯ ದಯಮೇ-
ನಿನ್ನುಂ ತಮಗೆ ದೊರೆಯದೆನುತುಂ ತೆಂಕಣದಾ
ಪೊನ್ನಂಪೇಟೆಯ ಕಾಡೊಳ್
ಕನ್ನಡಕಂದರ್ ಮರದಡಿಯೊಳ್‍ ತಪಗೆಯ್ದರ್||

ಈ ಪೊೞಲ ಜಂಗುೞಿಯೊಳೇಕಚಿತ್ತಕ್ಕೆ ಭಂಗಂ ಬರ್ಪುದೆಂದು ಕನ್ನಡದೇವಿಯನೊಂದೇ ಮನದಿಂ ಧ್ಯಾನಿಪೆನೆಂದು ಕನ್ನಡಕಂದರ್ ಕಿಱಿದು ಬೇಗಂ ಬನಕ್ಕೆ ತೆರಳ್ದರ್.:)

mahesha's picture

ಅಕಟಕಟಾ!! :)

Sunil Jayaprakash's picture

ಕನ್ನಡಕಂದರ ಕನ್ನಡದೊಲ್ಮೆ ಅಕ್ಕರೆಯಿಂತಿರಲ್ ಆನ್ ಅನುದಿನವೂ ಕನ್ನಡರಸಪಾಕವಂ ಸವಿಯುವ ಸೊಬಗನ್ ಪಡಕೊಂಡೆನ್

mahesha's picture

:)

madhava_hs's picture

ತಪಾನಂತರಂ ಕನ್ನಡಕಂದಂ:

"ಆರಂಕುಸವಿಟ್ಟೊಡೆಂ ನೆನೆವುದೆನ್ನ ಮನಂ ಪೊನ್ನಂಪೇಟೆ ಅರಣ್ಯಮುಂ" :-)

kannadakanda's picture

ಶಬ್ದಮಣಿದರ್ಪಣ ಕೆಲವು ಬೞಕೆಯನ್ನು ನಿಷೇಢಿಸುವುದಱಿಂದ ಪದ್ಯಕ್ಕೆ ಕೆಲವು ಪಾಠಾಂತರ:

ಕನ್ನಡದೇವಿಯ ದಯೆಯೇ-
ಕಿನ್ನುಂ ತಮಗೆ ದೊರೆಯದೆನುತುಂ ತೆಂಗಡೆಯಾ
ಪೊನ್ನಂಪೇಟೆಯ ಕಾಡೊಳ್
ಕನ್ನಡಕಂದರ್ ಮರದಡಿಯೊಳ್‍ ತಪಗೆಯ್ದರ್||