ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಐತಿಹಾಸಿಕ ಬೀಜಿಂಗ್ ಮಹಾಕ್ರೀಡಾಕೂಟ, ನಡೆಸಿಕೊಟ್ಟ, ’ ಬೀಜಿಂಗ್ ಒಲಂಪಿಕ್ಸ್”, ವಿಧ್ಯುಕ್ತವಾಗಿ ಚಾಲನೆಯಾಯಿತು !

August 8, 2008 - 8:53pm — venkatesh

ಐತಿಹಾಸಿಕ ೨೯ ನೇ ಸಮ್ಮರ್ ಒಲಿಂಪಿಕ್ ಮಹಾಕ್ರೀಡಾಕೂಟಕ್ಕೆ ಚೀನಾ ಪ್ರಧಾನಿ ಜಿಂಟಾವೋ ವಿಧ್ಯುಕ್ತ ಚಾಲನೆ ನೀಡಿದರು. ಇಂದು ರಾತ್ರಿ ೮ ಗಂಟೆಗೆ(ಚೀನಾ ಕಾಲಮಾನ ಪ್ರಕಾರ) (ಭಾರತದ ಕಾಲಮಾನದ ಪ್ರಕಾರ, ಸಾ. ೫-೪೫ ಕ್ಕೆ)ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ದೊರೆಯಿತು. ಶ್ರೀಮಂತ ನಾಗರಿಕತೆಯನ್ನು ಹೊಂದಿರುವ ಹಾಗೂ ಜಗತ್ತಿನ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿರುವ ಜೀನಾದ ರಾಜಧಾನಿ ಬೀಜಿಂಗ್ ನಲ್ಲಿ ಏರ್ಪಡಿಸಲಾಗಿರುವ ವರ್ಣರಂಜಿತ ಅದ್ಧೂರಿಯ ಉದ್ಘಾಟನೆ ಸಮಾರಂಭದಲ್ಲಿ ದೇಶ ವಿದೇಶದ ಅನೇಕ ಪ್ರಮುಖರು ಭಾಗವಹಿಸಿದ್ದರು. ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್, ಬ್ರಿಟನ್ ಪ್ರಧಾನಿ ಬ್ರೌನ್, ರಷ್ಯ ಅಧ್ಯಕ್ಷ ವ್ಲಾದಿಮಿರ್ ಪುಟೀನ್, ಭಾರತದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂತಾದ ಗಣ್ಯರು ವರ್ಣರಂಜಿತ ಕಾರ್ಯಕ್ರಮವನ್ನು ವೀಕ್ಷಿಸಿದರು. ೨೦೦೮ ರ ಆಗಸ್ಟ್, ೮ ರಂದು, ರಾತ್ರಿ, ಚೈನದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 'ಒಂದೇ ಜಗತ್ತು, ಒಂದೇ , ಕನಸು' ಅಧಿಕೃತ ಧ್ಯೇಯವಾಕ್ಯವನ್ನು ಸಾರಲಾಯಿತು. ಚೀನಾದ ಖ್ಯಾತ ಗಾಯಕ, ’ಲ್ಯೂ” ಹಾನ್ ಮತ್ತು ಬ್ರಿಟನ್ ನ ಖ್ಯಾತ , ಗಾಯಕಿ ’ಸರಹಾ ಬ್ರೈಟ್ ಮ್ಯಾನ್, ’ ಒಲಿಂಪಿಕ್ಸ್ ಧ್ಯೇಯ ಗೀತೆಗಳನ್ನು ಹಾಡಿದರು. ಬೀಜಿಂಗ್ ಒಲಂಪಿಕ್ಸ್ ಅಧಿಕೃತ ಚಾಲನೆಗೂ ಮೊದಲು ಸಂಜೆ ೫-೪೫ ರಿಂದ ೭ಘಂಟೆಯವರೆಗೂ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು. ೭.೫೬ ರಿಂದ ಕ್ಷಣಗಣನೆ ಆರಂಭವಾಗಿ, ಸರಿಯಾಗಿ ೮ ಗಂಟೆಗೆ ಕ್ರೀಡಾಕೂಟ ಉದ್ಘಾಟನೆಗೊಂಡಿತು, ರಾತ್ರಿ ೧೧-೩೦ ರ ವರೆಗೆ ಸಾಂಸ್ಕೃತಿಕ ನಡೆಯಲಿದೆ. ಸ್ವಾಗತ ಸಮಾರಂಭ, ಒಲಿಂಪಿಕ್ ರಿಂಗ್ ಪ್ರದರ್ಶನ, ರಾಷ್ಟ್ರೀಯ ಧ್ವಜಾರೋಹಣ, ರಾಷ್ಟ್ರಗೀತೆ ಹಾಡುವುದು ಈ ಕಾರ್ಯಕ್ರಮಗಳು ಕೇವಲ ಕೆಲವೇ ನಿಮಿಷಗಳಲ್ಲಿ ಮುಗಿದವು. ನಂತರ ಒಂದು ಗಂಟೆ ನಡೆದ ಕಾರ್ಯಕ್ರಮದಲ್ಲಿ ’ಆಧುನಿಕ ಹಾಗೂ ಪ್ರಾಚೀನ ಚೀನಾದ ಸಾಂಸ್ಕ್ರತಿಕ ಲೋಕ,’ ಚೀನಾ ನಾಗರಿಕತೆಯನ್ನು ಸಾರುವ,’ ತೈಲ ವರ್ಣ ಚಿತ್ರಗಳಪ್ರದರ್ಶನ ’, ಹಾಗೂ ’ಆಧುನಿಕ ಸಾಂಸ್ಕ್ರತಿಕಲೋಕ ’ ಪ್ರೇಕ್ಷಕರನ್ನು ರಂಜಿಸಿದವು. ಸುಮಾರು ೧೫,೦೦೦ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೀಜಿಂಗ್ ನಲ್ಲಿ ನಡೆಯಲಿರುವ ಕ್ರೀಡಾಕೂಟದ ಉದ್ಘಾಟನೆ ಕಾರ್ಯಕ್ರಮಗಳನ್ನು, ಡಿಡಿ ಸ್ಪೋರ್ಟ್ಸ್ ನಲ್ಲಿ ಹಾಗೂ ಡಿಡಿ ನ್ಯಾಷನಲ್ ಚಾನೆಲ್ ಗಳಲ್ಲಿ ಪ್ರಸಾರ ಮಾಡಲಾಯಿತು. ಚೈನದ ಬಳಿಕ ಒಲಿಂಪಿಕ್ ನಲ್ಲಿ ಭಾಗವಹಿಸಲಿರುವ ಹೆಚ್ಚು ಆಟಗಾರರು ಅಮೆರಿಕದವರು. ಈ ಬಾರಿ, ನಮ್ಮ ’ಟ್ರಂಪ್ ಕಾರ್ಡ್,’ ಎಂದು ಹೇಳಿಕೊಂಡು ಹೆಮ್ಮೆಪಡುತ್ತಿದ್ದ, ಹಾಕೀತಂಡ ನ-ಪಾಸಾಗಿ, ಪಂದ್ಯದಿಂದ ಹೊರಗುಳಿದದ್ದು, ನಮ್ಮೆಲ್ಲರಿಗೂ ಕಸಿವಿಸಿ, ಹಾಗೂ ಬೇಸರ ತಂದಿದೆ.

೧. ಗನ್ ಪೌಡರ್ ಆವಿಷ್ಕರ್ತ, ಚೀನಾ ತನ್ನ ಸುಡು-ಮದ್ದು ಪ್ರದರ್ಷನದಲ್ಲಿ, ಸಾಂಕೇತಿಕವಾಗಿ ಗನ್ ಪೌಡರ್ ಬಳಸಿತ್ತು.

೨. ೫೬ ಮಕ್ಕಳು, ತಮ್ಮದೇಶದ ಧ್ವಜವನ್ನು ಬೀಸುತ್ತಾ, ತಮ್ಮರಾಷ್ಟ್ರಗೀತೆಗೆ ದನಿಗೂಡಿಸಿದರು. ೫೬ ಜನಾಂಗಗಳು ಚೈನಾದೇಶದಲ್ಲಿವೆ.

೩. ಚೈನದ ಕನ್ ಫ್ಯೂಷಿಯಸ್ ರವರ ಸಂದೇಶ ಸಾರುವ ಗೀತೆ, " ದೂರದ ಮಿತ್ರರು ಬಂದಿಹರು ; ನಮಗೆಷ್ಟು ಸಂಭ್ರಮ " ಹಾಡಿ ಎಲ್ಲರನ್ನೂ ಸ್ವಾಗತಮಾಡಿದರು.

೪. ಲೇಸರ್ ಬೆಳಕಿನ ಚಿತ್ತಾರದ ಸ್ವಾಗತಗೀತೆ, ಯನ್ನು ಫೌ ಎಂಬ ಅವರ ಪ್ರಾಚೀನ ವಾದ್ಯವೃಂದದ ಜೊತೆ ನುಡಿಸಿದರು. ೨೦೦೮ ರ ಒಲಂಪಿಕ್ ಕ್ರೀಡೆ, ೨೦೦೮ ಜನ ಫೌ ಪಕ್ಕ-ವಾದ್ಯಗಾರರಿಂದ, ೨೦೦೮ ಕ್ರೀಡಾಳುಗಳ ಸಹಾಯದಿಂದ ಪ್ರದರ್ಶನ ಕಂಡಿತು.

-ಕೃಪೆ : ದಟ್ಸ್ ಕನ್ನಡ ವಾರ್ತೆ, ಹಾಗೂ ಸುದ್ದಿಮಾಧ್ಯಮಗಳಿಂದ.

  • ಪ್ರಚಲಿತ
~.~
  • Login or register to post comments
  • 235 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 8, 2008 - 10:10pm — venkatesh

ಉ: ಐತಿಹಾಸಿಕ ಬೀಜಿಂಗ್ ಮಹಾಕ್ರೀಡಾಕೂಟ, ನಡೆಸಿಕೊಟ್ಟ, ’ ಬೀಜಿಂಗ್ ಒಲಂಪಿಕ್ಸ್”, ವಿಧ್ಯುಕ್ತವಾಗಿ ಚಾಲನೆಯಾಯಿತು !

venkatesh's picture

ನಮ್ಮ ಸಂಪದದ ಕನ್ನಡ ವಿದ್ವಾಂಸರುಗಳು, ಈ ಆಟ-ಗೀಟದಬಗ್ಗೆ ತಮ್ಮ ಅಮೂಲ್ಯಸಮಯವನ್ನು ಹಾಳುಮಾಡುವುದಿಲ್ಲ ಅನ್ನೋದನ್ನು ಈಗಾಗಲೇ ಮನಗಂಡಿದ್ದೇನೆ. ಆದರೆ, ನನಗೆ ಮತ್ತೆ ಗಮನಕ್ಕೆ ಬಂದದ್ದು, ಹಾಗೂ ವಿಸ್ಮಯವಾದದ್ದು, ಒಳ್ಳೆಯ ಇನ್ನೊವೇಟಿವ್, ಹಾಗೂ ಅತ್ಯುತ್ತಮವಾದ-ಕೆಲಸ, ಕನ್ನಡಭಾಷೆಯಲ್ಲಿ ಕಣ್ಣಿಗೆ ಕಂಡರೂ, ತಮ್ಮ ಧೋರಣೆಯನ್ನು ಬದಲಾಯಿಸುವುದಿಲ್ಲ. ವಾಹ್, ಮೆಚ್ಚಬೇಕಪ್ಪ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 9, 2008 - 1:09pm — Sunil Jayaprakash

ಉ: ಐತಿಹಾಸಿಕ ಬೀಜಿಂಗ್ ಮಹಾಕ್ರೀಡಾಕೂಟ, ನಡೆಸಿಕೊಟ್ಟ, ’ ಬೀಜಿಂಗ್ ಒಲಂಪಿಕ್ಸ್”, ವಿಧ್ಯುಕ್ತವಾಗಿ ಚಾಲನೆಯಾಯಿತು !

Sunil Jayaprakash's picture

ನನಗೆ ಮೂರು ಅಂಶಗಳು ತುಂಬಾ ಇಷ್ಟ ಆಯ್ತು.

೧. ಲೇಸರ್ ಪರದೆ, ಆ ಪಟು ಆಕಾಶದಿಂದಲೇ ಒಲಿಂಪಿಕ್ ಜ್ಯೋತಿ ಬೆಳಗಿಸಿದ ಪರಿ.
೨. ಹಂಸಗಳಂತೆ ವೇಷ ತೊಟ್ಟು ಗುನುಗಿದ ಒಂದು ಹಾಡು.
೩. ಭಾಷಣಗಳೆಲ್ಲ ಚೀನೀ ನುಡಿಯಲ್ಲಿಯೇ ಇದ್ದದ್ದು Smiling ಇಂಗ್ಲೀಶಿನ ಸೊಲ್ಲು ಕೇಳಿಸಲೇ ಇಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 9, 2008 - 1:43pm — ASHOKKUMAR

ಉ: ಐತಿಹಾಸಿಕ ಬೀಜಿಂಗ್ ಮಹಾಕ್ರೀಡಾಕೂಟ, ನಡೆಸಿಕೊಟ್ಟ, ’ ಬೀಜಿಂಗ್ ಒಲಂಪಿಕ್ಸ್”, ವಿಧ್ಯುಕ್ತವಾಗಿ ಚಾಲನೆಯಾಯಿತು !

ASHOKKUMAR's picture

http://www.ndtv.com/olympics/storypage.aspx?storyid=SPOEN20080060674
ನಮ್ಮ ಕ್ರೀಡಾಪಟುಗಳು ಖುಷಿಯಲ್ಲಿ ಕೈಬೀಸುತ್ತಿದ್ದರು.ಒಬ್ಬಾಕೆ ವಿಡಿಯೋ ಕ್ಯಾಮರಾ ಹೀಡಿದಿದ್ದರು. ಸೋನಿಯ ಗಾಂಧಿ ಪರಿವಾರ ಎದ್ದು ಕಾಣುತ್ತಿತು. ಕ್ರೀಡಾಪಟುಗಳ ಬಗ್ಗೆ ಮಾಧ್ಯಮದವರು ಬೇಸರ ವ್ಯಕ್ತ ಪಡಿಸಿದ್ದಾರೆ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 9, 2008 - 1:43pm — shreedevikalasad

ಉ: ಐತಿಹಾಸಿಕ ಬೀಜಿಂಗ್ ಮಹಾಕ್ರೀಡಾಕೂಟ, ನಡೆಸಿಕೊಟ್ಟ, ’ ಬೀಜಿಂಗ್ ಒಲಂಪಿಕ್ಸ್”, ವಿಧ್ಯುಕ್ತವಾಗಿ ಚಾಲನೆಯಾಯಿತು !

shreedevikalasad's picture

one small correction - ವಿದ್ಯುಕ್ತ. ವಿಧ್ಯುಕ್ತವಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 9, 2008 - 5:58pm — venkatesh

ಉ: ಐತಿಹಾಸಿಕ ಬೀಜಿಂಗ್ ಮಹಾಕ್ರೀಡಾಕೂಟ, ನಡೆಸಿಕೊಟ್ಟ, ’ ಬೀಜಿಂಗ್ ಒಲಂಪಿಕ್ಸ್”, ವಿಧ್ಯುಕ್ತವಾಗಿ ಚಾಲನೆಯಾಯಿತು !

venkatesh's picture

ಪ್ರೊ. ಜಿ. ವೆಂಕಟಸುಬ್ಬಯ್ಯನವರ ಪದಕೋಶದಲ್ಲಿ ಪದ ’ ವಿಧ್ಯುಕ್ತ,’ ದ ವಿವರಣೆಯನ್ನು ಗಮನಿಸಿ.

೬. pronouncement (ನಾ) 1) ಅಧಿಕೃತ ಪ್ರಕಟಣೆ, ವಿಧ್ಯುಕ್ತ ಹೇಳಿಕೆ 2) ತೀರ್ಪು, ತೀರ್ಮಾನ, ಅಧಿಕೃತ ನಿರ್ಣಯ

೭. review (ನಾ) 1) ಪುನರ್ವಿಮರ್ಶೆ, ಪುನರ್ಪರಿಶೀಲನೆ 2) ವಿಮರ್ಶೆ, ಅವಲೋಕನ 3) (ಸೈನ್ಯದಳದ) ವಿಧ್ಯುಕ್ತ ಪರಿಶೀಲನೆ, ಪರಿಶೀಲನೆ ಪ್ರದರ್ಶನ 4) ನಿಯತಕಾಲಿಕ

೮. solemn (ಗು) 1) ಗಂಭೀರವಾದ, ಮಹತ್ವಪೂರ್ಣ, ಭಯಭಕ್ತಿ ಹುಟ್ಟಿಸುವ 2) ಶಾಸ್ತ್ರೋಕ್ತ, ವಿಧಿಬದ್ಧ, ವಿಧ್ಯುಕ್ತ

೯. ವಿಧ್ಯುಕ್ತ (ಸಂ) (ನಾ) ೧ ವೇದಶಾಸ್ತ್ರ ಸಮ್ಮತವಾದುದು, ವಿಧಿಪೂರ್ವಕವಾದುದು ೨ ನಿಯಾಮಾನು ಸಾರವಾದುದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 9, 2008 - 5:30pm — venkatesh

ಉ: ಐತಿಹಾಸಿಕ ಬೀಜಿಂಗ್ ಮಹಾಕ್ರೀಡಾಕೂಟ, ನಡೆಸಿಕೊಟ್ಟ, ’ ಬೀಜಿಂಗ್ ಒಲಂಪಿಕ್ಸ್”, ವಿಧ್ಯುಕ್ತವಾಗಿ ಚಾಲನೆಯಾಯಿತು !

venkatesh's picture

ಅದಕ್ಕೇ ಅಲ್ವೇ ಚೈನೀಯರು ಅನ್ನೋದು ! ಇರ್ಲಿ. ಪ್ರೆ. ಬುಶ್ ಮಾತಾಡಿದ್ ಮೇಲೆ ತಮ್ಮ ವಿರೋಧನ ಎಷ್ಟು ಚೆನ್ನಾಗಿ ಮಂಡಿಸಿದರು ನೋಡಿ ! ’ನಮ್ಮ ಇಂಟರ್ನಲ್ ಮಾಮಲೆಗಳಲ್ಲಿ ನಿಮ್ಮ ಹಸ್ತಕ್ಷೇಪ ಬೇಡ,’ ಅಂತ ಕರಾರುವಾಕ್ಕಾಗಿ ಹೇಳೇಬಿಟ್ರು. ವಿಶ್ವದ ಜನಸಂಖ್ಯೆಯ ೧/೫ ಇರೋ ಅವರು ತಮ್ಮ ಬಲನಾ ಚೆನ್ನಾಗಿ ಪ್ರದರ್ಶಿಸಿದಾರೆ. (೬,೪೩ ಬಿಲಿಯನ್/೧.೩ ಬಿಲಿಯನ್ ಬಿಲಿಯನ್)

ಸುನಿಲ್, ಒಮ್ಮೆ ನೀವು ತಾಳೆಗರಿ ಲೇಖನಗಳಬಗ್ಗೆ ಆದರ ತೋರ್ಸಿದ್ರಿ ಅನ್ನೊ ನೆನಪು. ಆದ್ರೆ ಅದ್ರ ಬಗ್ಗೆ ದೊಡ್ ವಿಚಾರ ಸಂಕಿರಣ, ಕೃತಿಬಿಡುಗಡೆ ಎಲ್ಲಾ ಆಗಿ ವಿದ್ವಾಂಸರೆಲ್ಲಾ ’ಇದೊಂದು ವಿಸ್ಮಯ ಅಂತ ಕರ್ನಾಟಕದಾದ್ಯಂತ ಹೇಳಿದ್ರೂ, ಸುಮ್ನಿದೀರಿ. ಯಾಕೆ ಅನ್ನೊದ್ ತಿಳೀಲಿಲ್ಲ. ’ಹೇಳೋದೊಂದು ಮಾಡೋದೊಂದು, ’ ಅಂತಾರಲ್ಲ, ಹಾಗಿಲ್ಲತಾನೇ ! ಕ್ಷಮಿಸಿ. ಇದೇ ಬೇರೆ ವೇದಿಕೆ, ಅಲ್ವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 10, 2008 - 1:15pm — shreedevikalasad

ಉ: ಐತಿಹಾಸಿಕ ಬೀಜಿಂಗ್ ಮಹಾಕ್ರೀಡಾಕೂಟ, ನಡೆಸಿಕೊಟ್ಟ, ’ ಬೀಜಿಂಗ್ ಒಲಂಪಿಕ್ಸ್”, ವಿಧ್ಯುಕ್ತವಾಗಿ ಚಾಲನೆಯಾಯಿತು !

shreedevikalasad's picture

ವೆಂಕಟೇಶ್ ಅಂಕಲ್‌, ಸಾಮಾನ್ಯವಾಗಿ ಪದ ಬಳಕೆ ಹಾಗಿದೆ. ಅದಕ್ಕೆ ನಾನು ಹಾಗೆ ಹೇಳಬೇಕಾಯಿತು. ನೋಡಿ ಹೀಗೆಲ್ಲಾ ಒಬ್ಬರಿಗೊಬ್ಬರು ಮಾತನಾಡಿದಾಗ, ಪ್ರತಿಕ್ರಿಯಿಸಿದಾಗಲೇ ತೆರೆದುಕೊಳ್ಳುವುದು ಹರಿವು, ಸುಳಿ, ಮಗ್ಗುಲಗಳು. ಇಲ್ಲಾಂದ್ರೆ ನಾವು ಅಂದುಕೊಂಡಿದ್ದೇ ಫೈನಲ್. ಅಲ್ವಾ? ಸವಿವಿವರಣೆ ನೀಡಿದ್ದಕ್ಕೆ ಧನ್ಯವಾದ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 10, 2008 - 9:01pm — Sunil Jayaprakash

ಉ: ಐತಿಹಾಸಿಕ ಬೀಜಿಂಗ್ ಮಹಾಕ್ರೀಡಾಕೂಟ, ನಡೆಸಿಕೊಟ್ಟ, ’ ಬೀಜಿಂಗ್ ಒಲಂಪಿಕ್ಸ್”, ವಿಧ್ಯುಕ್ತವಾಗಿ ಚಾಲನೆಯಾಯಿತು !

Sunil Jayaprakash's picture

ಕರ್ಣಾಟಕ ಭಾಗವತ !!!! ಇದರ ಬಗ್ಗೆ ಪತ್ರಿಕೆಗಳಲ್ಲೆಲ್ಲ ಬಂದ ವಿಚಾರವಿನಿಮಯಗಳನ್ನು ಓದಿರುವೆ. ಆದರೆ ನಾನಿನ್ನೂ ಓದಿಲ್ಲ !!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌
  • ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌
  • ನಾವೆಲ್ಲಾ ಅತಿಕಾತುರದಿಂದ ಕಾಯುತ್ತಿದ್ದ " ಬೀಜಿಂಗ್ ಒಲಂಪಿಕ್ಸ್ " ಇನ್ನೇನು ಶುರುವಾಗುವ ಸಮಯ ಹತ್ತಿರ ಬಂದಿದೆ !
  • ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ
  • ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧

ಇತ್ತೀಚಿನ ಪ್ರತಿಕ್ರಿಯೆಗಳು

  • Shivakumar.Revadi
    ಉ: ಬಾಲ್ಯದ ನೆನಪುಗಳು
    September 8, 2008 - 5:42pm
  • girish.rajanal
    ಉ: ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ನೀಡುವುದರಲ್ಲಿ ವಿಳಂಬ - ಕ.ರ.ವೇ. ಪ್ರತಿಭಟನೆ
    September 8, 2008 - 5:38pm
  • girish.rajanal
    ಉ: ಸರ್ವಜ್ಞನ ಕೆಲವು ವಚನಗಳು
    September 8, 2008 - 5:35pm
  • venkatesh
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 5:15pm
  • srivathsajoshi
    ಉ: ಬಾಲ್ಯದ ನೆನಪುಗಳು
    September 8, 2008 - 5:05pm
  • sandeepkn
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 4:59pm
  • omshivaprakash
    ಉ: ಬಿಗುಮಾನದ ಚಿತ್ರಗಳು
    September 8, 2008 - 4:45pm
  • Shashikanth. Birge
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:41pm
  • pramodc84
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 4:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 124 ಅತಿಥಿಗಳು ಆನ್ಲೈನ್ ಇರುವರು.


ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator