ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಹೆಂಡತಿಯರನ್ನು ಕುರಿತ ಜೋಕುಗಳು (ಮಹಿಳೆಯರ ಕ್ಷಮೆ ಕೋರುತ್ತಾ!)

January 28, 2006 - 11:40am — olnswamy

ನಾನು ಮತ್ತು ನನ್ನಾಕೆ ಇಪ್ಪತ್ತೈದು ವರ್ಷ ಸುಖವಾಗಿದ್ದೆವು. ಆಮೇಲೆ, ಪರಸ್ಪರ ನೋಡಿ ಮದುವೆಯಾಗಿಬಿಟ್ಟೆವು.
**
ಒಳ್ಳೆಯ ಹೆಂಡತಿ ತಾನು ತಪ್ಪು ಮಾಡಿದ್ದಾಗ ಗಂಡನ ತಪ್ಪುಗಳನ್ನೆಲ್ಲ ಉದಾರವಾಗಿ ಕ್ಷಮಿಸುತ್ತಾಳೆ.
** **
ನನ್ನ ಹೆಂಡತಿಗೆ ಒಂದು ಕಾರು ಕೊಡಿಸಿದೆ. ಆಕೆಯಿಂದ ಫೋನು ಬಂತು.
"ಕಾರಿನ ಎಂಜಿನ್ನಿಳೊಗೆ ನೀರು ಸೇರಿದೆ."
"ಕಾರು ಎಲ್ಲಿದೆ?"
"ಕೆರೆಯೊಳಗೆ ಮುಳುಗಿದೆ."
**
ಸುಖೀ ಮದುವೆಯ ರಹಸ್ಯ ಎಂದೆಂದಿಗೂ ರಹಸ್ಯವಾಗಿಯೇ ಉಳಿದಿರುತ್ತದೆ.
** **
ಜಗಳ ಆಗ ತಾನೇ ಮುಗಿದಿತ್ತು.
"ನಿಮ್ಮನ್ನು ಮದುವೆಯಾದಾಗ ನನ್ನ ಬುದ್ಧಿ ಕತ್ತೆ ಕಾಯುವುದಕ್ಕೆ ಹೋಗಿತ್ತು. ನಾನು ಪೆದ್ದಿ ಆಗಿದ್ದೆ."
"ಹೌದು ಕಣೆ. ಆದರೆ ನಾನು ಆಗ ನಿನ್ನನ್ನು ಪ್ರೀತಿಸುತ್ತಿದ್ದೆ, ನನಗೆ ಗೊತ್ತೇ ಆಗಲಿಲ್ಲ."
**
ನಾನು ಒಂದೂವರೆ ವರ್ಷದಿಂದ ನನ್ನ ಹೆಂಡತಿಯೊಡನೆ ಮಾತನಾಡೇ ಇಲ್ಲ. ಅವಳ ಮಾತಿಗೆ ಅಡ್ಡ ಬರುವುದಕ್ಕೆ ನನಗೆ ಇಷ್ಟವಿಲ್ಲ.
** **
ಗಂಡನ ಕ್ರೆಡಿಟ್ ಕಾರ್ಡು ಕಳೆದುಹೋಗಿತ್ತು. ಆದರೂ ಅವನು ದೂರು ಕೊಡಲಿಲ್ಲ. ಅದನ್ನು ಬಳಸಿ ಅವನ ಹೆಂಡತಿ ಮಾಡುತ್ತಿದ್ದದ್ದಕ್ಕಿಂತ ಕಡಮೆ ಖರ್ಚು ಮಾಡುತ್ತಿದ್ದ ಕಳ್ಳ.
**
ಮದುವೆಯಾಗುವವರೆಗೆ ಗಂಡಸು ಅಪೂರ್ಣ. ಮದುವೆಯಾದಮೇಲೆ ಅವನ ಕತೆ "ಸಂಪೂರ್ಣ."
** **
ಪುಟ್ಟ ಹುಡುಗ ಅಪ್ಪನನ್ನು ಕೇಳಿದ. "ಅಪ್ಪಾ, ಮದುವೆಯಾಗುವುದಕ್ಕೆ ಎಷ್ಟು ಖರ್ಚು ಬರುತ್ತೆ?"
"ಗೊತ್ತಿಲ್ಲ ಮಗೂ. ಮದುವೆ ಆದಂದಿನಿಂದ ತಿಂಗಳು ತಿಂಗಳೂ ದುಡ್ಡು ಕೊಡುತ್ತಲೇ ಇದ್ದೇನೆ, ಇನ್ನೂ ಎಷ್ಟು ಕೊಡಬೇಕೋ ಏನೋ!"
**
ಮಗ: "ಅಪ್ಪಾ, ಆಫ್ರಿಕಾದಲ್ಲಿ ಕೆಲವು ಕಡೆ ಮದುವೆ ಆಗುವವರೆಗೆ ಹೆಂಡತಿ ಯಾರು, ಎಂಥವಳು ಎಂದು ಗೊತ್ತೇ ಇರುವುದಿಲ್ಲವಂತೆ, ಹೌದೆ?"
ಅಪ್ಪ: "ಎಲ್ಲಾ ದೇಶದಲ್ಲೂ ಅದು ಹಾಗೇನೇ ಮಗೂ."
** **
ಗಂಡನೊಬ್ಬ ಹೇಳಿದ್ದು: "ಮದುವೆಯಾಗುವವರೆಗೆ ನಿಜವಾದ ಸಂತೋಷವೆಂದರೆ ಏನೆಂದು ನನಗೆ ಗೊತ್ತೇ ಇರಲಿಲ್ಲ. ಆದರೆ ಅಷ್ಟು ಹೊತ್ತಿಗೆ
ತೀರ ತಡವಾಗಿತ್ತು."
**
ಒಬ್ಬಾತ "ಹೆಂಡತಿ ಬೇಕಾಗಿದ್ದಾಳೆ" ಎಂದು ಪೇಪರಿನಲ್ಲಿ ಜಾಹಿರಾತು ಕೊಟ್ಟ.
ಮಾರನೆಯ ದಿನ ಇನ್ನೂರೈವತ್ತು ಕಾಗದ ಬಂದಿದ್ದವು. ಎಲ್ಲದರಲ್ಲೂ ಒಂದೇ ಸಮಾಚಾರ.
"ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗಬಹುದು."
** **
ಹೆಂಗಸೊಬ್ಬಳು ಗೆಳತಿಗೆ ಹೇಳುತ್ತಿದ್ದಳು: "ನನ್ನ ಮದುವೆಯಾದಮೇಲೆ ಗಂಡ ಲಕ್ಷಾಧೀಶ್ವರನಾದ."
ಗೆಳತಿ: "ಹೌದೆ, ಮೊದಲು ಏನಾಗಿದ್ದ?"
ಹೆಂಗಸು: "ಕೋಟ್ಯಧೀಶನಾಗಿದ್ದ."
**
ಮದುವೆ ಎಂಬುದು ಕಲ್ಪನೆಯು ವಿವೇಕದ ಮೇಲೆ ನಡೆಸುವ ದಿಗ್ವಿಜಯ.
ಎರಡನೆಯ ಮದುವೆ ಎಂಬುದು ಆಶಾವಾದವು ಅನುಭವದ ಮೇಲೆ ಸಾಧಿಸುವ ದುರಂತದ ಗೆಲುವು.
** **
ಮದುವೆಯಾದ ಗಂಡಸರು ಮದುವೆಯಾಗದವರಿಗಿಂತ ದೀರ್ಘಕಾಲ ಬದುಕುತ್ತಾರೆ ಅನ್ನುವುದು ಸುಳ್ಳು.
ಮದುವೆಯ ನಂತರದ ಬದುಕು ಕೊನೆಯಿಲ್ಲದ್ದು, ಬಲು ದೀರ್ಘ ಅನ್ನಿಸುತ್ತದೆ ಅಷ್ಟೆ.
**
ಯಶಸ್ವೀ ಗಂಡನೆಂದರೆ ಹೆಂಡತಿ ಖರ್ಚುಮಾಡುವುದಕ್ಕಿಂತ ಹೆಚ್ಚು ಸಂಪಾದಿಸುವವನು.
ಯಶಸ್ವೀ ಹೆಂಡತಿಯೆಂದರೆ ಅಂಥ ಗಂಡನನ್ನು ಹುಡುಕಿ ಪಡೆಯುವವಳು.
** **
ಬಾಟಲಿಯೊಳಗಿದ್ದ ಭೂತ ಗಂಡನೆದುರು ಪ್ರತ್ಯಕ್ಷವಾಗಿತ್ತು. ನೀನು ಕೇಳಿದ್ದೆಲ್ಲ ಕೊಡುವೆ ಎಂದಿತು. ಆದರೆ ಒಂದೇ ಕಂಡೀಷನ್ನು. ನಿನಗೆ ಸಿಕ್ಕಿದ್ದರ ಎರಡರಷ್ಟು
ನಿನ್ನ ಅತ್ತೆಗೆ ದೊರೆಯುತ್ತದೆ ಅಂದಿತು. ಗಂಡ ಬಹಳ ಯೋಚನೆ ಮಾಡಿ ಹೇಳಿದ. ನನಗೆ ಕೋಟಿ ರೂಪಾಯಿ ಕೊಡು, ಆಮೇಲೆ ಅರೆಜೀವವಾಗುವಂತೆ ಚೆನ್ನಾಗಿ ಹೊಡಿ.
**
ಕಿವಿ ಚುಚ್ಚಿಸಿಕೊಂಡ ಗಂಡಸರು ಮದುವೆಗೆ ತಕ್ಕ ರೀತಿಯಲ್ಲಿ ಪ್ರಿಪೇರ್ ಆಗಿರುತ್ತಾರೆ. ಅವರಿಗೆ ನೋವೂ ಗೊತ್ತು, ಕಿವಿಗೆ ಒಡವೆ ಪರ್ಚೇಸ್ ಮಾಡಿಯೂ ಗೊತ್ತು.
** **
ಕೊಂಚ ಯೋಚಿಸಿ ನೋಡಿ. ಮದುವೆ ಎಂಬುದಿರದಿದ್ದರೆ ಗಂಡಸರೆಲ್ಲ ತಾವು ಪರಿಪೂರ್ಣರು ಎಂಬ ಭ್ರಮೆಯಲ್ಲಿರುತ್ತಿದ್ದರು, ಅಲ್ಲವೆ?

  • ಲಲಿತ ಪ್ರಬಂಧ, ಹಾಸ್ಯ
~.~
  • Login or register to post comments
  • 1120 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 28, 2006 - 1:29pm — tvsrinivas41

ಭ್ರಮೆಯಿಂದ ಮುಕ್ತಿ

tvsrinivas41's picture

ತುಂಬಾ ಚೆನ್ನಾಗಿ ಹಾಸ್ಯದ ರಸದೌತಣ ಮಾಡಿಸಿದ್ದೀರಿ ಸಾರ್. ನಿಮ್ಮ ಕಡೆಯ ಮಾತುಗಳು ೧೦೦% ಸತ್ಯ. ಮದುವೆ ಎಂಬುದಿರದಿದ್ದರೆ ಜೀವನ ಅಪೂರ್ಣ.ಆದರೆ ಇದು ತಿಳಿಯುವುದು ಮದುವೆ ಆಗಿ ಮನೆಗೆಲಸಗಾರ ಆದಮೇಲೆಯೇ (ಹಾ ಹಾ ಹಾ).

ನಿಮ್ಮ ಹಾಸ್ಯದಿಂದ ನನ್ನ ಮನಮುದಗೊಂಡಿತು. ಧನ್ಯವಾದಗಳು

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 18, 2007 - 2:48pm — kaviganesh

ಉ: ಹೆಂಡತಿಯರನ್ನು ಕುರಿತ ಜೋಕುಗಳು (ಮಹಿಳೆಯರ ಕ್ಷಮೆ ಕೋರುತ್ತಾ!)

kaviganesh's picture

ಮಹಿಳೆಯರ ಕ್ಷಮೆ ಕೋರಿ ಅಂತಾ ಬರೆಯೋದರ ಬದಲು "ಹೆಂಡತಿಯರ ಕ್ಷಮೆ ಕೋರಿ" ಅಂತಾ ಇದ್ದಿದ್ದರೆ ಚೆನ್ನಾಗಿರ್ತಿತ್ತು....!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 18, 2007 - 3:48pm — ಶ್ರೀನಿವಾಸ ವೀ. ಬ೦ಗೋಡಿ

ಉ: ಹೆಂಡತಿಯರನ್ನು ಕುರಿತ ಜೋಕುಗಳು (ಮಹಿಳೆಯರ ಕ್ಷಮೆ ಕೋರುತ್ತಾ!)

ಶ್ರೀನಿವಾಸ ವೀ. ಬ೦ಗೋಡಿ's picture

"ಹೆಂಡತಿಯ ಕ್ಷಮೆ ಕೋರಿ" ಅಂತ೦ದ್ರ ಸಾಕಲ್ರಿ! Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 18, 2007 - 3:53pm — Sunil Jayaprakash

ಉ: ಹೆಂಡತಿಯರನ್ನು ಕುರಿತ ಜೋಕುಗಳು (ಮಹಿಳೆಯರ ಕ್ಷಮೆ ಕೋರುತ್ತಾ!)

Sunil Jayaprakash's picture

(ಹೆಂಡತಿಯರ ಕ್ಷಮೆ)......ಸೂಪರ್ ರೀ ಶ್ರೀನಿವಾಸ .... Smiling ನಕ್ಕೂ ನಕ್ಕೂ ಸುಸ್ತಾಯ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 18, 2007 - 6:54pm — kishorpatwardhan

ಉ: ಹೆಂಡತಿಯರನ್ನು ಕುರಿತ ಜೋಕುಗಳು (ಮಹಿಳೆಯರ ಕ್ಷಮೆ ಕೋರುತ್ತಾ!)

kishorpatwardhan's picture

ಡುಂಡಿರಾಜ್ ಬರೆದ ಹನಿಗವನವೊಂದು ನೆನಪಾಯ್ತು:

ಹೀಗೇ ಏನೋ ಇದೆ ಅದು:

’ನಾರಿ ಮುನಿದರೆ ಮಾರಿ” ಅನ್ನುತ್ತಾರಲ್ಲ..
ನಾನೇನೋ ಮಾರಲು ತಯಾರಿದ್ದೇನೆ
ಆದರೆ ಕೊಳ್ಳುವವರು ಯಾರು ರೀ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗಂಡನ ಕಾರಣದಿಂದ ಹೆಂಡತಿ How ದಪ್ಪ?
  • ಅಪ್ಪಾ..ಅಪ್ಪಾ..ನನಗೆ ಹದಿನೆಂಟಾಯ್ತಪ್ಪಾ..
  • ಝೆನ್ ಕತೆ: ೧೯: ಭೂತವನ್ನು ಓಡಿಸಿದ್ದು
  • ಹೆಂಡತಿ-ಎಂದರೆ ಜೋಕು ಯಾಕೆ ?
  • ಮರು ಮದುವೆ?
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
  • ಕೊಲಂಬಿಯ ಪಟ್ಟಣದ ಸಂತೆ !
  • ವಾರಾಂತ್ಯ ಹೇಗಿತ್ತು?
  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
  • ishwar.shastri
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:00pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:54pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:52pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:51pm
  • csomsekraiah
    ಉ: ಕೊಲಂಬಿಯ ಪಟ್ಟಣದ ಸಂತೆ !
    September 8, 2008 - 7:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 7:22pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 138 ಅತಿಥಿಗಳು ಆನ್ಲೈನ್ ಇರುವರು.


ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ

— ದೇವರ ದಾಸಿಮಯ್ಯ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator