ಈಗಿನಂತೆ 2 ಸದಸ್ಯರು ಮತ್ತು 78 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಸುಖ ಸಂಸಾರಕ್ಕೆ ಅರಿತು ಬಾಳುವುದೇ ಸೂತ್ರ
komal kumar1231's picture
komal
13
May
2011
ಲೇಖನ

ಅಕ್ಕ ಪಕ್ಕದ ಎರಡು ಮನೆ. ಎರಡೂ ಮನೆಯಲ್ಲೂ ಸಂಸಾರಸ್ಥರೆ ಇದ್ದಾರೆ. ಗುಂಡನ ಮನೆಯವರು ಸಾಕಷ್ಟು ಮಡಿ ಹಾಗೇ ದೇವರಲ್ಲಿ ಅಪಾರ ನಂಬಿಕೆ. ಮತ್ತೊಬ್ಬ ಸುಬ್ಬನ ಮನೆಯವರು ಮಡಿ...

ಪ್ರತಿಕ್ರಿಯೆಗಳು: 0
ಹಿಟ್ಸ್ : 663
ಕಾಡಿಲ್ಲದ ನಾಡಲ್ಲಿ ಹುಲಿ ಬಂದಿತ್ತು
suresh nadig's picture
ಸುರೇಶ್ ನಾಡಿಗ್
05
May
2011
ಲೇಖನ

ದಟ್ಟವಾದ ಕಾಡು ಇದ್ದ ಶಿಕಾರಿಪುರ ಮಾತ್ರವಲ್ಲದೆ ಅರೆ ಮಲೆನಾಡಾದ ಶಿವಮೊಗ್ಗ, ಇದೀಗ ಬಟ್ಟ ಬಯಲಾಗುತ್ತಿದೆ. ಬಯಲುಸೀಮೆಯ ಉಷ್ಣಾಂಶ ಶಿವಮೊಗ್ಗ ಜಿಲ್ಲೆಗೂ ತಲುಪಿದೆ. ಒಂದೆಡೆ...

ಪ್ರತಿಕ್ರಿಯೆಗಳು: 16
ಹಿಟ್ಸ್ : 700
ಉದ್ಯೋಗ ಸೃಷ್ಟಿ - ನಮಗೆ ಕಾಯಕ, ಪರರಿಗೆ ಕೈಲಾಸ!
Vasanth Kaje's picture
ವಸಂತ್ ಕಜೆ (Vasanth Kaje)
26
Jul
2011
ಬ್ಲಾಗ್ ಬರಹ

ಒಂದು ಸುಂದರವಾದ ಶನಿವಾರದ ಚುಮುಚುಮು ಬೆಳ್ಳಂಬೆಳಗು. ಸುತ್ತಲೂ ಹಸುರು ಹುಲ್ಲು ಹಾಸು. ಕಥೆಯ ಹೀರೋ '
ಟಾಮ್' ಕೈಯಲ್ಲಿ ಪೈಂಟು ತುಂಬಿದ ಬಾಲ್ಡಿ ಮತ್ತು...

ಪ್ರತಿಕ್ರಿಯೆಗಳು: 9
ಹಿಟ್ಸ್ : 685
ಕೃಷಿ ಸಂಪದ: ಪ್ರಯೋಗದ ಮೊದಲ ಹೆಜ್ಜೆ; ಹಾಗು ಮುಂದಿನ ದಾರಿ
hpn's picture
ಹರಿ ಪ್ರಸಾದ್ ನಾಡಿಗ್
28
Mar
2010
ಪುಟ

...

ಪ್ರತಿಕ್ರಿಯೆಗಳು: 2
ಹಿಟ್ಸ್ : 1,137
ದೇವರು ಮತ್ತು ನಾನು - ಸ೦ಚಿಕೆ ೩ - ಶಾಲಾಪಲಾಯಣ
mayakar's picture
ಪ್ರವೀಣ್ ಮಾಯಾಕರ್
06
Sep
2010
ಪುಟ

ತಿಮ್ಮ ಎ೦ದಿನ೦ತೆ ತ೦ಗಿಯೊಡನೆ ಶಾಲೆಗೆ ಹೊರಟ. ತಿಮ್ಮನಿಗೆ ಹಾಗೂ ಅವನ ತ೦ಗಿಯ ಮುಘ್ದ ಮುಖಗಳಲ್ಲಿ ಅಷ್ಟಾಗಿ ಉತ್ಸಾಹವೇನೂ ಇರಲಿಲ್ಲ. ಕಾರಣ ಕಳೆದ ತಿ೦ಗಳಷ್ಟೇ ತ೦ಗಿ ಮತ್ತು...

ಪ್ರತಿಕ್ರಿಯೆಗಳು: 5
ಹಿಟ್ಸ್ : 688
ನೂರು ವರ್ಷದ ಏಕಾಂತ - ಗೇಬ್ರಿಯಲ್ ಮಾರ್ಕ್ವೆಜ್ ನ ಕಾದಂಬರಿ
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
11
Sep
2006
ಬ್ಲಾಗ್ ಬರಹ
ಈ ಕಾದಂಬರಿಯನ್ನು ಹಿಂದೊಮ್ಮೆ ಓದಲು ಆರಂಬಿಸಿದ್ದೆ. ವಿಚಿತ್ರವಾಗಿದೆ . ಪ್ರಾರಂಭದ ಪುಟಗಳಲ್ಲಿ ಗಮನ ಸೆಳೆದ ಕೆಲವು ವಾಕ್ಯ ನೋಡಿ . ಹಿಂದೊಂದು ಕಾಲದಲ್ಲಿ "ಪ್ರಪಂಚದ ಹುಟ್ಟು...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,182
ಕೃಷಿ ಸಂಪದ ನಾಲ್ಕನೇ ಸಂಚಿಕೆ, ಜನವರಿ ೨೦೧೦
ನಿರ್ವಹಣೆ's picture
ಸಂಪದ ನಿರ್ವಹಣೆ ತಂಡ
01
Jan
2010
ಪುಟ

ಈ ಸಂಚಿಕೆಯಲ್ಲಿ:

  • ನರೂರಿನ ಹಕ್ಕಿಗಳು
  • ಕಾಯಕದಲ್ಲಿ ಹಣ್ಣಾದವರು: ಹೆಗಡೆ ಸುಬ್ಬಣ್ಣ
  • ಅಕೇಸಿಯಾ ದೂರು, ಕಳವೆ ಅಂಕಣ
  • ವಿಶ್ವ ತುಳು ಸಮ್ಮೇಳನ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,353
ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು
Raghavendra Gudi's picture
Raghavendra Gudi
10
Dec
2011
ಲೇಖನ

"ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು"
ವರಕವಿ ದ ರಾ ಬೇಂದ್ರೆಯವರ ಉದಾತ್ತ ಮನಸ್ಸಿನ ಮುತ್ತಿನ ನುಡಿಗಳಿವು. ಇದರ ಅರ್ಥ ಇಷ್ಟೆ ಅದು ಕವನ ಇರಬಹದು,...

ಪ್ರತಿಕ್ರಿಯೆಗಳು: 7
ಹಿಟ್ಸ್ : 142
ರಷ್ಯ ಪ್ರವಾಸ ಕಥನ ಭಾಗ ೩: 'ಲಿಫ್ಟು ಕರಾದೋ' ಎ೦ಜಲು ಮಾರ್ಕ್ಸನ್ನು
anilkumar's picture
ಎಚ್.ಎ. ಅನಿಲ್ ಕುಮಾರ್
01
Oct
2006
ಪುಟ
ಎ೦ಜಲು ಮಾರ್ಕ್ಸು: ಈ ಹಮ್ಮಿನ ತಾಜಿಗೆ (ಹರ್ಮಿಟಾಜ್ ಮ್ಯೊಸಿಯ೦) ನಾಳೆ ಬರುವ. ಸಧ್ಯಕ್ಕೆ ನಾವಿಳಿದುಕೊ೦ಡಿರುವ ಹೋಟೆಲ್‍ಗೆ--ಕನ್ನಡದ ಸುಲಲಿತ ಪ್ರಬ೦ಧ ಸಾಹಿತ್ಯ ಪ್ರಕಾರಧ ಭಾಷೆಯಲ್ಲಿ...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,483
ಅಂಬೆ ದೃಶ್ಯ ೨ (೫)
csomsekraiah's picture
ಸಿ ಸೋಮಶೇಖರಯ್ಯ
21
Feb
2010
ಪುಟ

 

...
ಪ್ರತಿಕ್ರಿಯೆಗಳು: 0
ಹಿಟ್ಸ್ : 826

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಕಡವ ಶಂಭು ಶರ್ಮ (೮-೮-೧೮೯೫ – ೩-೫-೧೯೬೪)

ಕಡವ ಶಂಭು ಶರ್ಮ (೮-೮-೧೮೯೫ – ೩-೫-೧೯೬೪)

ಈ ತಿಂಗಳು ಪುತ್ತೂರಿನ ಕಾರ್ಯಕ್ರಮವೊಂದಕ್ಕೆ ಹೋದಾಗ ಈ ಹಿರಿಯರ ಬಗ್ಗೆ ತಿಳಿಯುವ, ಅವರ ಕೃತಿಯೊಂದನ್ನು ಪಡೆಯುವ ಅವಕಾಶ ಲಭಿಸಿತು. ಪುತ್ತೂರಿನ ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು ಶ್ರೀಮಂತಗೊಳಿಸಿದ ಹಿರಿಯರು. ಗಾಂಧೀ ಯುಗದ ಆದರ್ಶವಾದಿ. ಕಡವ ಕೃಷ್ಣಭಟ್ ಮತ್ತು ಸತ್ಯವತಿ ಅವರ ನಾಲ್ವರು ಮಕ್ಕಳಲ್ಲಿ ಎರಡನೆಯವರು. ಶಿಕ್ಷಕ, ಕವಿ, ವಿಮರ್ಶಕ, ಅನುವಾದಕ, ಆಯುರ್ವೇದ ವೈದ್ಯ, ಪ್ರಯೋಗಶೀಲ ಕೃಷಿಕ. ಸಂಸ್ಕೃತ ಮತ್ತು ಕನ್ನಡ ಭಾಷೆಗಳ ವಿದ್ವಾಂಸ. ಸುಗಂಧಾರ್ಕ ಮಧು ಎಂಬ ತಂಪು ಪಾನೀಯ, ಕೈಮಗ್ಗದ ಉದ್ಯಮ, ಕೃಷಿ ಪ್ರಯೋಗಗಳು, ಇಟ್ಟಿಗೆ ಕಾರ್ಖಾನೆ, ಕಟ್ಟಿಗೆ ವ್ಯಾಪಾರ ಮತ್ತು ಹೈನುಗಾರಿಕೆ ಅವರ ಬದುಕಿನ ಇನ್ನು ಕೆಲವು ಮುಖಗಳು. ಅವರು ತಮ್ಮ ಬದುಕಿನ ಕೊನೆಗಾಲದಲ್ಲಿ ಅನುವಾದಿಸಿದ “ನಾಥ ಪಂಥದ ಕೃತಿಗಳು” ನನಗೆ ದೊರೆತ ಪುಸ್ತಕ. ಇದರಲ್ಲಿ ನಾಥ ಪಂಥದ ಹದಿಮೂರು ಕೃತಿಗಳು ಸಂಸ್ಕೃತದಿಂದ ಅನುವಾದಗೊಂಡಿವೆ. ಅಮರೌಘ ಶಾಸನ, ಚರ್ಪಟನಾಥ ಶತಕ, ನವನಾಥ ಕಥಾ, ಸ್ವಯಂ ಬೋಧ-ಅಮನಸ್ಕ ಯೋಗ, ಆತ್ಮವಾದ, ಗೋರಕ್ಷ ಸಿದ್ಧಾಂತ ಸಂಗ್ರಹ, ಯೋಗಬೀಜಂ, ಶ್ರೀ ಗೋರಕ್ಷಸಹಸ್ರನಾಮಸ್ತೋತ್ರಂ, ಸಿದ್ಧ ಸಿದ್ಧಾಂತ ಪದ್ಧತಿ, ಅಮರ ಕಥಾ, ಅಮರಾಲೋಕ ಮಹಾಕಾವ್ಯಂ, ಮತ್ತು ಗೋರಕ್ಷ ಪದ್ಧತಿ ಇವು ಹದಿಮೂರು ಕೃತಿಗಳು ೭೭೧ ಪುಟಗಳ ಈ ಸಂಪುಟದಲ್ಲಿ ಸೇರಿವೆ. ಶಿವರಾಮ ಕಾಂತರ “ಆಳ ನಿರಾಳ” ಕಾದಂಬರಿಗೆ ಪ್ರೇರಣೆ ನೀಡಿದ ಘನ ವ್ಯಕ್ತಿತ್ವ ಇವರದ್ದು. ತಾವು ಕಟ್ಟಿಗೆ ಹೊರಿಸಿಕೊಂಡು ಬರುತ್ತಿದ್ದ ಲಾರಿಯ ಕೆಳಕ್ಕೆ ಉರುಳಿಬಿದ್ದು, ಅವರ ಕಾಲಿನ ಮೇಲೆ ಲಾರಿಯ ಚಕ್ರ ಹರಿದು ನಿಂತು, ನಿರುಪಾಯರಾಗಿ ನೋಡುತ್ತ ನಿಂತವರನ್ನು ಕುರಿತು “ನೋಡುತ್ತೀರಿ ಯಾಕೆ? ನನ್ನ ಕಾಲನ್ನು ತುಂಡು ಮಾಡಿ ದೇಹವನ್ನು ಹೊರತೆಗೆಯಿರಿ” ಅಂದ್ದನ್ನು ಕಾರಂತರು ದಾಖಲಿಸಿದ್ದಾರೆ. (ಹುಚ್ಚು ಮನಸಿನ ಹತ್ತು ಮುಖಗಳು, ಅಳಿದುಳಿದ ನೆನಪುಗಳೊಂದಿಗೆ, ಪುಟ ೨೦೦, ೨೦೦೪ರ ಮುದ್ರಣ). ಮುಂದೆ ಕಾರಂತರು ಅಸ್ಪತ್ರೆಗೆ ಅವರನ್ನು ನೋಡಲು ಹೋದಾಗ “ಅವಶ್ಯಮನುಭೋಕ್ತವ್ಯಂ ಎಂದು ಗಂಭೀರರಾಗಿ ನುಡಿದರು. ಅವರು ನಂಬಿ ಬಂದ ತತ್ತ್ವ ಅದು. ಅವರ ವ್ಯಕ್ತಿತ್ವ ನನ್ನ ಆಳ ನಿರಾಳ ಕಾದಂಬರಿಗೆ ಪ್ರೇರಣೆಯಾಯಿತು” ಎಂದಿದ್ದಾರೆ. ನಾಥ ಪಂಥದ ಅನುವಾದಿತ ಕೃತಿಗಳಿಗೆ ಡಾ. ಎಚ್.ಜಿ. ಶ್ರೀಧರ ಅತ್ಯಂತ ಉಪಯುಕ್ತವಾದ ೫೨ ಪುಟ ಗಳ ಮುನ್ನುಡಿ ಬರೆದಿದ್ದಾರೆ. ಶ್ರೀ ಮಸು ಕೃಷ್ಣಮೂರ್ತಿಯವರ “ಸಿದ್ಧ ಸಾಹಿತ್ಯ” ದಂತೆಯೇ ಕರ್ನಾಟಕದ ಸಾಂಸ್ಕೃತಿಕ ಇತಿಹಾಸವನ್ನು ತಿಳಿಯಬಯಸುವವರಿಗೆ ಇದು ಅತ್ಯುತ್ತಮ ಆಕರ ಗ್ರಂಥ. ಶ್ರೀ ಕಪಟರಾಳ ಕೃಷ್ಣರಾಯರು, ಶಂಬಾ ಜೋಷಿ ಇವರಂತೆಯೇ ಶಂಭುಶರ್ಮ ಕನ್ನಡ ಸಂಸ್ಕೃತಿಯ ನಿರ್ಮಾಪಕರಲ್ಲಿ ಒಬ್ಬರು ಅನಿಸುತ್ತಿದೆ. ಆದರೆ ಕನ್ಸೂಮರಿಸಂ ಎಂಬುದೇ ದಿವ್ಯ ಮಂತ್ರವಾದ ಕಾಲದಲ್ಲಿ ಇಂಥ ಹಿರಿಯರ ನೆನಪು, ಯಾವುದನ್ನು ಕನ್ನಡದ ಸಾಂಸ್ಕೃತಿಕ ಚರಿತ್ರೆ ಎಂದುಕೊಂಡಿದ್ದೇವೊ ಅವು ಎಲ್ಲ ಮರೆಯಾಗುವುದು ಅನಿವಾರ್ಯವೋ ಏನೋ.
Average: 5 (2 votes)
1357 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
kpbolumbu's picture
15
Sep
2010
12:00

ತುಳು ಭಾಷೆ ಮತ್ತು ಲಿಪಿಯ ಕುರಿತಾಗಿಯೂ ಅವರು ಸ್ವತಂತ್ರ ಅಭಿಪ್ರಾಯ ಹೊನ್ದಿದ್ದವರು. ತುಳು ಎಂಬ ಭಾಷೆಯೇ ಇಲ್ಲ. ಅದು ಕನ್ನಡದ್ದೇ ಇನ್ನೊನ್ದು ರೂಪವೆನ್ನುತ್ತಿದ್ದರನ್ತೆ. ಈ ಬಗ್ಗೆ ಮಂಗಳೂರು ಜಿಲ್ಲಾಡಳಿತ ಹೊರತನ್ದ 'ಕೆನರ-೨೦೦' ಎಂಬ ಕೃತಿಯಲ್ಲಿ ಓದಲು ಅನುವಾಯಿತು. ಅಮೂಲ್ಯವಾದ ಮಾಹಿತಿಗಾಗಿ ನನ್ದಿ.

gopinatha's picture
15
Sep
2010
7:47

ಉತ್ತಮ ಮಾಹಿತಿ
ಧನ್ಯವಾದಗಳು

sada samartha's picture
25
Dec
2010
6:31

ಕದವ ಶಂಭು ಶರ್ಮರ ಸಮಗ್ರ ಕೃತಿಗಳು ಪ್ರಕಟವಾಗುತ್ತಿವೆ. ದಿ|| ಕದವ ಶಂಭು ಶರ್ಮರ ಹಿರಿಯ ಮಗ ಕೆ.ನಾರಾಯಣ ಶರ್ಮರು ಈಗಾಗಲೇ ೪ ಸಂಪುಟಗಳನ್ನು ಹೊರತಂದಿದ್ದಾರೆ. ಶಂಭು ಶರ್ಮರು ಭಗವದ್ಗೀತೆಯನ್ನು ಅದೇ ಛಂದಸ್ಸಿನಲ್ಲಿ ಕನ್ನಡಕ್ಕೂ, ಹಾಗು ಮಂಕು ತಿಮ್ಮನ ಕಗ್ಗವನ್ನು ಸಂಸ್ಕೃತಕ್ಕೂ ಅನುವಾಧಿಸಿದ್ದಾರೆಂಬುದು ಅನೇಕರು ತಿಳಿಯದ ಸಂಗತಿಯಾಗಿದೆ. ಗಾಂಧೀ ಚರಿತ್ರೆ, ಬುದ್ಧ ಚರಿತ್ರೆಗಳನ್ನು ಕೂಡ ಇವರು ರಚಿಸಿದ್ದಾರೆ. ಲೇಖಕರು ತಿಳಿಸಿದಂತೆ ನಾಥ ಪಂಥದ ಮೇಲೆ ಬಹಳಷ್ಟು ಕೃತಿಗಳನ್ನು ರಚಿಸಿದ್ದಾರೆ. ನಿಜ ಅವರ ಬದುಕೇ ಒಂದು ಬಗೆಯ ರೋಚಕವಾಗಿದೆ.