ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೧)

(ಈ ಲೇಖನ ಡಿ.ಎಸ್‌. ನಾಗಭೂಷಣ ಅವರ ’ಕಾಶ್ಮೀರ ಬೆಂಕಿ: ಎಚ್ಚರವಿರಲಿ’ ಎಂಬ ಲೇಖನಕ್ಕೆ ಪ್ರತಿಕ್ರಿಯೆ. ಮೂಲ ಲೇಖನವನ್ನು http://sampada.net/a... ದಲ್ಲಿ ನೋಡಬಹುದು)

ಸನ್ಮಾನ್ಯ ಡಿ.ಎಸ್‌. ನಾಗಭೂಷಣ ಅವರ ’ಕಾಶ್ಮೀರ ಬೆಂಕಿ: ಎಚ್ಚರವಿರಲಿ’ ಲೇಖನ ಜಾತ್ಯತೀತ ಹೆಸರಲ್ಲಿ ಹುಷಾರಾಗಿ ಹೆಣೆದ ಲೇಖನ ಎಂದು ಹೇಳಲು ಬಯಸುತ್ತೇನೆ. ಇಡೀ ವಿವಾದದಲ್ಲಿ ಮುಸ್ಲಿಮರನ್ನು ನೇರವಾಗಿ ಖಂಡಿಸದೇ, ಅವರ ಧೋರಣೆಯ ಹಿಂದಿರುವ ಧರ್ಮಾಂಧತೆಯನ್ನು ಬಯಲಿಗೆ ತಾರದೇ, ಇಡೀ ವಿವಾದದ ಹಿಂದೆ ಹಿಂದು ಧರ್ಮ ಪರ ಸಂಘಟನೆಗಳ ಹುನ್ನಾರ ಇದೆ ಎಂಬಂತೆ ಬಿಂಬಿಸಲು ಲೇಖಕರು ಯತ್ನಿಸಿದ್ದಾರೆ.

ಇದಕ್ಕೆ ಬೆಂಬಲವಾಗಿ ಸತ್ಯವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ ನಾಗಭೂಷಣ ಅವರು.

ಅವರ ಲೇಖನದ ಈ ಸಾಲುಗಳನ್ನೇ ನೋಡಿ:

’’ಆಗಸ್ಟ್ 14ರವರೆಗೂ ತನ್ನ ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧರಿಸಿರುವ ಜಮ್ಮು ಸಂಘರ್ಷ ಸಮಿತಿ 62ನೇ ಸ್ವಾತಂತ್ರ್ಯೋತ್ಸವಕ್ಕೆ ತನ್ನ ವಿಶಿಷ್ಟ ಕೊಡುಗೆಯನ್ನು ಸಲ್ಲಿಸಿದೆ ಎಂದೇ ಹೇಳಬೇಕು. ರಾಜ್ಯದ ಈವರೆಗಿನ ರಾಜಕಾರಣ; ಕಾಶ್ಮೀರ ಕಣಿವೆ ಮುಸ್ಲಿಮರದ್ದೂ, ಜಮ್ಮು ತಪ್ಪಲು ಹಿಂದೂಗಳದ್ದು ಎಂಬ ವಿಭಾಗೀಕರಣಕ್ಕೆ ಕಾರಣವಾಗಿರುವುದರಿಂದ ಸದ್ಯದ ಈ ಸಮಸ್ಯೆಗೆ ದಟ್ಟ ಕೋಮು ಬಣ್ಣ ಕೂಡಾ ಬಂದಿದೆ.”

ಇದು ಇವತ್ತಿನ ಬಣ್ಣವಲ್ಲ ನಾಗಭೂಷಣ ಅವರೇ. ಜಮ್ಮು ಕಾಶ್ಮೀರ ರಾಜ್ಯ ರಚನೆಯಾದಾಗಿನಿಂದ ಇರುವಂಥದ್ದು. ಇತಿಹಾಸದ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರುವುದರಿಂದ, ಮತ್ತು ತಕ್ಕಮಟ್ಟಿಗೆ ಬಹಳಷ್ಟು ಜನರೂ ಅದನ್ನು ಅರಿತುಕೊಂಡಿರುವುದರಿಂದ, ಕೋಮುಬಣ್ಣ ಇವತ್ತಿನದಲ್ಲ ಎಂಬುದನ್ನು ಮತ್ತೆ ವಿವರಿಸಬೇಕಾಗಿಲ್ಲ ಅನಿಸುತ್ತದೆ.

ನಿಮ್ಮ ಮುಂದಿನ ಸಾಲುಗಳು ಕೂಡಾ ಮುಸ್ಲಿಂ ಪರ ಸಂಘಟನೆಗಳು ಹಾಗೂ ಉಗ್ರವಾದಿಗಳ ಮೇಲಿನ ಅನುಕಂಪವನ್ನೇ ವ್ಯಕ್ತಪಡಿಸುತ್ತವೆ ”ಇದರಿಂದ ನಿರಂತರವಾಗಿ ಲಾಭ ಪಡೆಯುತ್ತಿರುವವರೆಂದರೆ, ಕಾಶ್ಮೀರದ ಪ್ರತ್ಯೇಕತಾವಾದಿ ಗುಂಪುಗಳು ಮತ್ತು ಉಗ್ರವಾದಿ ಸಂಸ್ಥೆಗಳು. ಮೊನ್ನೆ ಜಮ್ಮು ಬಂದ್ ವಿರುದ್ಧ ಶ್ರೀನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಅನೇಕ ಉಗ್ರವಾದಿ ಗುಂಪುಗಳು ಬಹಿರಂಗವಾಗಿ ಕಾಣಿಸಿಕೊಂಡು ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗತೊಡಗಿದ್ದು ಮತ್ತು ಇದನ್ನು ನಮ್ಮ ಭದ್ರತಾ ಪಡೆಗಳು ಮೂಕ ಪ್ರೇಕ್ಷಕರಾಗಿ ನೋಡುತ್ತಾ ನಿಲ್ಲುವಂತಾದದ್ದು ಇದಕ್ಕೊಂದು ಉದಾಹರಣೆ.” ಎಂದು ಹೇಳುತ್ತೀರಿ. ಅದರ ನಂತರದ ಘಟನೆಗಳನ್ನೇಕೆ ಉದಾಹರಿಸಿಲ್ಲ? ಶ್ರೀನಗರದ ಲಾಲ್‌ಚೌಕದಲ್ಲಿ ಆಗಸ್ಟ್‌ ೧೫ರಂದು ಹಾರಿಸಲಾಗಿದ್ದ ರಾಷ್ಟ್ರಧ್ವಜವನ್ನು ಮಧ್ಯಾಹ್ನ ೩.೪೫ರ ಹೊತ್ತಿಗೆ ಇಳಿಸಿದ ಮುಸ್ಲಿಂ ಸಂಘಟನೆಗಳು ಹಾಗೂ ಉಗ್ರವಾದಿಗಳು, ಅಲ್ಲಿ ತಮ್ಮ ಸಂಘಟನೆಗಳ ಧ್ವಜಗಳನ್ನು ಹಾರಿಸಿದರು. ಸಂಘಟನೆಗೆ ಸೇರಿದ ಮಹಿಳಾ ಸದಸ್ಯರು ರಾಷ್ಟ್ರಧ್ವಜ ಸುಟ್ಟರು. ನೀವು ಹೇಳಿದಂತೆ ನಮ್ಮ ಭದ್ರತಾ ಪಡೆಗಳು ಅದನ್ನು ಮೂಕಪ್ರೇಕ್ಷರಾಗಿ ನೋಡುತ್ತಾ ನಿಂತಿದ್ದರು. ಏಕೆ ಗೊತ್ತೆ? ಆಗ ಅವರು ರಂಗಕ್ಕೆ ಇಳಿದಿದ್ದರೆ ಮತ್ತೊಂದು ರಕ್ತಪಾತವಾಗುತ್ತಿತ್ತು. ಅದೂ ಸ್ವಾತಂತ್ರ ದಿನದಂದು. ಅದಕ್ಕೇ ಸುಮ್ಮನಿದ್ದರು. (ಟೈಮ್ಸ್‌ ಆಫ್‌ ಇಂಡಿಯಾ ೧೬-೮-೨೦೦೮)

ಮುಂದೆ ನೀವು ಕಾಶ್ಮೀರ ಸಮಸ್ಯೆ ಉಲ್ಬಣವಾಗಿದ್ದು ಹೇಗೆ ಎಂಬುದನ್ನು ಹೇಳುತ್ತ, ಕೇವಲ ಕೇಂದ್ರ ಸರ್ಕಾರ ಮತ್ತು ಅದು ಸ್ಥಾಪಿಸಿದ್ದ ಕೈಗೊಂಬೆ ರಾಜ್ಯ ಸರ್ಕಾರಗಳು ಇವತ್ತಿನ ಪರಿಸ್ಥಿತಿಗೆ ಕಾರಣ ಎನ್ನುತ್ತೀರಿ. ಇದಕ್ಕೆ ಸಮರ್ಥನೆಯಾಗಿ ”ಬಾಬ್ರಿ ಮಸೀದಿ ನಾಶ ಹಾಗೂ ಆಫ್ಘನಿಸ್ಥಾನ ಮತ್ತು ಇರಾಕ್‌ಗಳ ಮೇಲಿನ ಅಮೆರಿಕಾದ ಆಕ್ರಮಣಗಳ ನಂತರವಂತೂ ಈ ಸಮಸ್ಯೆಗೆ ಜಾಗತಿಕ ಆಯಾಮ ದೊರೆತು, ಪ್ರತ್ಯೇಕತಾವಾದ ಕೋಮುವಾದವಾಗಿ ಪರಿವರ್ತಿತವಾಗಿ, ಸಮಸ್ಯೆಯನ್ನು ಉಲ್ಬಣಗೊಳಿಸಿದೆ” ಎಂದು ಬರೆಯುತ್ತೀರಿ. ಅಂದರೆ, ಬಾಬ್ರಿ ಮಸೀದಿ ನಾಶ ಹಾಗೂ ಆಫ್ಘನಿಸ್ತಾನ ಮತ್ತು ಇರಾಕ್‌ ಮೇಲಿನ ಅಮೆರಿಕ ಆಕ್ರಮಣದಿಂದ ಕಾಶ್ಮೀರ ಸಮಸ್ಯೆಗೆ ಜಾಗತಿಕ ಆಯಾಮ ದೊರೆತು, ಪ್ರತ್ಯೇಕತಾವಾದ ಕೋಮುವಾದವಾಗಿ ಪರಿವರ್ತನೆಯಾಯಿತು ಎಂಬುದು ನಿಮ್ಮ ಬರಹದ ಅರ್ಥ. ಅಂದರೆ, ಮೇಲಿನ ಬೆಳವಣಿಗೆಗಳ ಮುಂಚೆ ಜಮ್ಮು ಕಾಶ್ಮೀರದಲ್ಲಿ ಕೋಮುವಾದ ಇರಲಿಲ್ಲವೆ? ಜಗತ್ತಿನ ಇಂತಹ ಸಮಸ್ಯೆಗಳ ಹಿನ್ನೆಲೆ ಅವಲೋಕಿಸಿದರೆ, ಕೋಮುವಾದವೇ ಪ್ರತ್ಯೇಕತಾವಾದವಾಗಿ ಬದಲಾಗಿದ್ದು ಸರಳವಾಗಿ ಗೋಚರಿಸುತ್ತದೆ. ನಮ್ಮ ದೇಶ ವಿಭಜನೆಯಾಗಿದ್ದೇ ಕೋಮುವಾದದಿಂದ ಎಂಬುದನ್ನು ಏಕೆ ಮರೆಯುತ್ತೀರಿ?

ನಿಮ್ಮ ಲೇಖನದ ಮುಂದಿನ ಪ್ಯಾರಾವಂತೂ ಜಾತ್ಯತೀತ ಹೆಸರಿನ ಬಹುತೇಕ ಕೋಮುವಾದಿಗಳ ದೃಷ್ಟಿಕೋನವನ್ನೇ ಪ್ರತಿಫಲಿಸುತ್ತದೆ.

”ಆದರೆ ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣ ರಾಷ್ಟ್ರೀಯ ಏಕತೆಯ ಹೆಸರಿನಲ್ಲಿ, ಸಂವಿಧಾನ ಪ್ರತಿಪಾದಿಸಿದ್ದ ಒಕ್ಕೂಟ ರಾಷ್ಟ್ರದ ಭಾವನೆಯ ವಿರುದ್ಧ ಆಚರಿಸಿಕೊಂಡು ಬರುತ್ತಿರುವ ಕೇಂದ್ರೀಕೃತ ಆಡಳಿತ ನೀತಿಯ ಫಲವಾಗಿ ವಿವಿಧ ರಾಜ್ಯಗಳ ಭಾಷೆ-ಸಂಸ್ಕೃತಿ ಸಂಪ್ರದಾಯಗಳು ಘಾಸಿಗೊಂಡಿರುವಂತೆ, ಇಲ್ಲೂ ಆ ಬಹು ಸಂಸ್ಕೃತಿಯ ಸಂಪ್ರದಾಯ ಘಾಸಿಗೊಂಡಿದೆ. ಸ್ಥಳೀಯ ಸಂಸ್ಕೃತಿಯ ಪರಿಮಳ ನಾಶವಾಗಿ ಈ ಮುಸ್ಲಿಂ ಬಹುಸಂಖ್ಯಾತರ ರಾಜ್ಯ, ರಾಷ್ಟ್ರೀಯತೆಯ ಅತಿಗಳಿಗೆ ಸಿಕ್ಕಿ ಕೋಮುವಾದಕ್ಕೆ ಬಲಿಯಾಗಿದೆ. ಇದರಿಂದಾಗಿ, ಭಾರತದ ಬಹು ಸಂಪ್ರದಾಯಗಳ ಸಂಸ್ಕೃತಿಗೆ ಹತ್ತಿರವಿದ್ದ ಕಾರಣದಿಂದಾಗಿ ಭಾರತದಲ್ಲಿ ಸಹಜವಾಗಿ ಒಂದಾಗಬೇಕಿದ್ದ ಈ ರಾಜ್ಯ, ಈಗ ತನ್ನ ಮುಕ್ತಿಗಾಗಿ ಪಾಕಿಸ್ತಾನದ ಕಡೆ ನೋಡುವಂತಾಗಿದೆ.” ಈ ವಾಕ್ಯಗಳನ್ನು ಬರೆಯುವುದಕ್ಕೆ ಜಾತ್ಯತೀತರೆನ್ನಿಸಿಕೊಳ್ಳುವ ಹಂಬಲ ಬಿಟ್ಟು ಬೇರೆ ಏನೂ ನನಗೆ ಕಾಣುತ್ತಿಲ್ಲ. ನಿಮ್ಮ ಪ್ರಕಾರ, ಕಾಶ್ಮೀರದ ಇವತ್ತಿನ ಸಮಸ್ಯೆಗೆ ಕೇಂದ್ರ ಸರ್ಕಾರದ ನೀತಿಯೇ ಕಾರಣವೇ ಹೊರತು, ಸ್ಥಳೀಯ ಬಹುಸಂಖ್ಯಾತ ಮುಸ್ಲಿಂ ಕಾಶ್ಮೀರಿಗಳ ಕೊಡುಗೆ ಏನೇನೂ ಇಲ್ಲ. ಇದನ್ನು ಒಪ್ಪಲು ಸಾಧ್ಯವೆ? ದೇಶ ಸ್ವಾತಂತ್ರವಾದಾಗಿನಿಂದ ಇಂದಿನವರೆಗೆ, ದೇಶದ ಮುಖ್ಯವಾಹಿನಿಯ ಚಟುವಟಿಕೆಗಳಲ್ಲಿ ಈ ಮುಸ್ಲಿಂ ಬಹುಸಂಖ್ಯಾತ ಕಾಶ್ಮೀರಿಗಳು ಎಷ್ಟರ ಮಟ್ಟಿಗೆ ಪಾಲ್ಗೊಂಡಿದ್ದಾರೆ? ಈ ದೇಶವನ್ನು ತಮ್ಮದು ಎಂಬ ಭಾವನೆಯಲ್ಲಿ ಯಾವತ್ತು ನೋಡಿದ್ದಾರೆ? ನೀವೇ ಹೇಳುವಂತೆ ಜಮ್ಮು ಕಾಶ್ಮೀರದಲ್ಲಿ ಹಿಂದು, ಮುಸ್ಲಿಂ ಮತ್ತು ಬೌದ್ಧ ಧರ್ಮೀಯರು ಬಹುಸಂಖ್ಯಾತರು. ಆದರೆ, ಇವತ್ತು ಮುಸ್ಲಿಂರ ಪ್ರಾಬಲ್ಯ ಬಿಟ್ಟರೆ ಎಷ್ಟರ ಮಟ್ಟಿಗೆ ಇತರ ಧರ್ಮೀಯರು ನೀತಿ ನಿರ್ಣಯದ ಶಕ್ತಿ ಹೊಂದಿದ್ದಾರೆ?

ಇಷ್ಟೇ ಅಲ್ಲ, ಶ್ರೀನಗರ ಹೆದ್ದಾರಿ ಬಂದ್‌ನಿಂದಾಗಿ ವ್ಯಾಪಾರ ಕಳೆದುಕೊಂಡಿರುವ ಕಾಶ್ಮೀರಿಗಳು ಅನಿವಾರ್ಯವಾಗಿ ತಮ್ಮ ಸರಕನ್ನು ಮಾರಲು ಪಾಕ್‌ ಆಕ್ರಮಿತ ಕಾಶ್ಮೀರದ ಕಡೆ ಹೊರಳಿದ್ದಾರೆ ಎಂದು ಸಹಾನುಭೂತಿ ವ್ಯಕ್ತಪಡಿಸಿದ್ದೀರಿ (ಹಾಗಾಗಿಯೇ, ಈಗ ಜಮ್ಮು ಕಡೆ ವಾಹನ ಸಂಚಾರ ಸ್ತಬ್ಧಗೊಂಡಿರುವ ಹಿನ್ನೆಲೆಯಲ್ಲಿ ಕಾಶ್ಮೀರಿ ವ್ಯಾಪಾರಿಗಳು ತಮ್ಮ ಸರಕಿನ ಉಳಿವಿಗಾಗಿ ಅದನ್ನು ಈ 'ಆಝಾದ್ ಕಾಶ್ಮೀರ'ದೆಡೆಗೆ ತಿರುಗಿಸದೆ ವಿಧಿಯಿಲ್ಲವೆಂದು ಹೇಳುತ್ತಿದ್ದಾರೆ. ಆದರೆ ಇದನ್ನು ರಾಷ್ಟ್ರ ವಿರೋಧಿ ಕ್ರಮ ಎಂದು ಕರೆದಿರುವ ಜಮ್ಮು ಸಂಘರ್ಷ ಸಮಿತಿಗೆ, ತಾನು ನಿರಂತರ ಬಂದ್ ಹೆಸರಿನಲ್ಲಿ ರಸ್ತೆ ತಡೆ ನಡೆಸುತ್ತಾ ಕಾಶ್ಮೀರಕ್ಕೆ ಆರ್ಥಿಕ ದಿಗ್ಬಂಧನ ಹೇರಿರುವುದು ಕೂಡಾ ರಾಷ್ಟ್ರ ವಿರೋಧಿ ಕ್ರಮ....) ಇದು ಯಾವ ಜಾತ್ಯತೀತ ನಿಲುವು ಸ್ವಾಮಿ?

ಲೇಖನ ಉದ್ದವಾದೀತೆಂಬ ಅಳುಕಿನಿಂದ, ಅಮರನಾಥ ಕುರಿತ ಸಂಗತಿಗಳನ್ನು ಈ ಲೇಖನದ ಎರಡನೇ ಭಾಗದಲ್ಲಿ ಬರೆಯುತ್ತೇನೆ. ಮುಸ್ಲಿಂರನ್ನು ಓಲೈಸುವುದೇ ಜಾತ್ಯತೀತ ಧೋರಣೆ ಎಂದು ನಿಮ್ಮಂಥವರು ನಂಬಿಕೊಂಡಿದ್ದೀರಿ. ಅದಕ್ಕೆ ಪುರಾವೆ ಒದಗಿಸಲು, ಸತ್ಯ ಸಂಗತಿಗಳನ್ನು ಆಯ್ದು ತಿರುಚಿ ಪ್ರಕಟಿಸುತ್ತೀರಿ. ಪ್ರತ್ಯೇಕತಾವಾದ ಹುಟ್ಟಿದ್ದೇ ಕೇಂದ್ರ ಸರ್ಕಾರದ ನೀತಿಯಿಂದ ಎನ್ನುತ್ತೀರಿ. ಆದರೆ, ಕೇಂದ್ರದ ನೀತಿ ಎಲ್ಲ ರಾಜ್ಯಗಳ ಮಟ್ಟಿಗೂ ಒಂದೇ ಇದೆ ಎಂಬುದನ್ನೇಕೆ ಮರೆಯುತ್ತೀರಿ? ರಾಷ್ಟ್ರದ ಮುಖ್ಯವಾಹಿನಿಯನ್ನು ಮೊದಲಿನಿಂದಲೂ ದ್ವೇಷಿಸುತ್ತ ಬಂದಿರುವ ಮುಸ್ಲಿಂ ಧರ್ಮಾಂಧರ ಪರ ನಿಲ್ಲುವುದು ನಿಮ್ಮಂಥ ಕೆಲ ಕೋಮುವಾದಿ ’ಜಾತ್ಯತೀತ’ರ ನಿಲುವಾಗಿದೆ. ಸರಿಯಾಗಿ ಹೇಳಬೇಕೆಂದರೆ, ಚಟವಾಗಿದೆ. ಹಾಗೆ ಮಾಡಿದರೆ ಮಾತ್ರ ನಿಮ್ಮಂಥವರಿಗೆ ಪ್ರತ್ಯೇಕ ಮನ್ನಣೆ ಸಿಗುತ್ತದೆ.

ಇದನ್ನೆಲ್ಲ ಏಕೆ ಹೇಳಿದೆನೆಂದರೆ, ಈ ಲೇಖನ ಬರೆಯುವ ಸಮಯದಲ್ಲಿ ಅಹ್ಮದಾಬಾದ್‌ನ ಇತ್ತೀಚಿನ ಬಾಂಬ್‌ ಸ್ಫೋಟಗಳ ಹಿಂದೆ ಸಿಮಿ ಕೈವಾಡ ಇದೆ ಎಂಬುದು ಪ್ರಾಥಮಿಕ ತನಿಖೆಯಿಂದ ಸಾಬೀತಾಗಿದೆ. ಅದಕ್ಕೆ ಪುರಾವೆಯಾಗಿ ಕೆಲವು ವ್ಯಕ್ತಿಗಳನ್ನು ಗುಜರಾತ್‌ ಪೊಲೀಸರು ಬಂಧಿಸಿದ್ದೂ ಆಗಿದೆ. ಇದಕ್ಕೂ ಸಾಕಷ್ಟು ಮುಂಚೆಯೇ ಸಿಮಿ ಕೈವಾಡ ಈ ಸ್ಫೋಟಗಳ ಹಿಂದಿತ್ತು ಎಂಬುದನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಹಿರಂಗವಾಗಿ ಹೇಳಿದ್ದವು. ಹೀಗಿದ್ದರೂ ಕೋಮು ವಿರೋಧಿ ವೇದಿಕೆಯವರು, ನಿಮ್ಮಂಥ ಪ್ರಜ್ಞಾವಂತರು ಸ್ಫೊಟದ ಹಿಂದಿನ ಧರ್ಮಾಂಧರನ್ನು, ಅವರ ಉದ್ದೇಶಗಳನ್ನು, ಅವರು ಹಿಡಿದ ನೀಚ ಮಾರ್ಗವನ್ನು ಖಂಡಿಸಲಿಲ್ಲ. ಬಾಬಾ ಬುಡನ್‌ಗಿರಿ ವಿಷಯಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆಗಳು, ನಡೆದ ಮಾರ್ಗ ಹಾಗೂ ನಾಟಕೀಯತೆ ತೋರುವ ಚಟುವಟಿಕೆಗಳು ಇಂತಹ ವಿಷಯಗಳಲ್ಲಿ ಯಾವತ್ತೂ ವ್ಯಕ್ತವಾಗಿಲ್ಲ.

ಹೀಗಾಗಿ, ನಿಮ್ಮಂಥವರು ಕೋಮುವಾದ, ಧರ್ಮಾಂಧತೆ ಎಂದು ಬರೆದಾಗೆಲ್ಲ, ನೀವು ಕೂಡಾ ಕಣ್ಣಿಗೆ ಧರ್ಮಾಂಧತೆಯ ಕನ್ನಡಕ ಹಾಕಿಕೊಂಡೇ ಬರೆಯುತ್ತೀರಿ ಎಂದು ಬಲವಾಗಿ ಅನ್ನಿಸತೊಡಗುತ್ತದೆ. ಇಲ್ಲದಿದ್ದರೆ, ಕೆಟ್ಟದ್ದನ್ನು ಯಾರು ಮಾಡಿದರೇನು ಎಂದು ನೇರವಾಗಿ ಅವರ ದೋಷಗಳನ್ನೂ ಟೀಕಿಸುತ್ತಿದ್ದಿರಿ. ಖಂಡಿಸುತ್ತಿದ್ದಿರಿ. ಅಂಥದ್ದು ಆಗಿಲ್ಲ ಎಂಬ ಕಾರಣಕ್ಕೆ ನಿಮ್ಮ ಈ ಲೇಖನ, ನಿಮ್ಮಂಥವರು ನೀಡುವ ಹೇಳಿಕೆ, ಬರೆದ ಲೇಖನಗಳು, ಮಾಡಿದ ಚಳವಳಿಗಳು ಹಾಸ್ಯಾಸ್ಪದವಾಗಿ ಕಾಣುತ್ತವೆ. ಎಲ್ಲೋ ವಿದೇಶದಲ್ಲಿ ವ್ಯಂಗ್ಯಚಿತ್ರವೊಂದು ಪ್ರವಾದಿಯನ್ನು ಕುರಿತಾಗಿತ್ತು ಎಂಬ ವಿಷಯಕ್ಕೆ ಭಾಷೆ, ವಿಷಯ, ಚಿತ್ರ ಗೊತ್ತಿರದ ಮುಸ್ಲಿಮರು ಪ್ರತಿಭಟನೆ ನಡೆಸುವುದನ್ನು ನೋಡಿದರೆ ಯಾವ ಭಾವನೆ ಉಂಟಾಗುತ್ತದೋ, ಅಂಥದೇ ಭಾವನೆ ನಿಮ್ಮಂಥವರು ಅದನ್ನು ಬೆಂಬಲಿಸಿ ಬರೆದಾಗ, ಹೇಳಿಕೆ ನೀಡಿದಾಗ, ಹಾಗೂ ಹಿಂದು ದೇವತೆಗಳ ಅವಹೇಳನ ಬಹಿರಂಗವಾದಾಗಲೂ ನೋಡಿಕೊಂಡು ಸುಮ್ಮನಿದ್ದಾಗ ಆಗುತ್ತದೆ.

ತಪ್ಪು ಯಾರೇ ಮಾಡಿರಲಿ, ಅವರ ಜಾತಿ, ಹಿನ್ನೆಲೆ ನೋಡದೇ ಅದನ್ನು ತಪ್ಪು ಎಂದು ಸರಳವಾಗಿ ಹೇಳಲು ನಿಮ್ಮಂಥವರಿಗೆ ಏಕೆ ಸಾಧ್ಯವಾಗುವುದಿಲ್ಲ? ಏಕೆ ಈ ದ್ವಂದ್ವ?

- ಚಾಮರಾಜ ಸವಡಿ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
prameela's picture

ಸರ್, ಬಹಳ ಸೊಗಸಾಗಿದೆ ನಿಮ್ಮ ಬರಹ.ನಿಮ್ಮ ಎಲ್ಲಾ ಲೇಖನಗಳನ್ನು ಓದುತ್ತಿದ್ದೆ;ಅಭಿಪ್ರಾಯ ವ್ಯಕ್ತಪಡಿಸುವಸ್ಟು ತಿಳಿದವಳಲ್ಲ ಅಂತ ಸುಮ್ಮನಿದ್ದೆ.
ಅಲ್ಪ ಸಂಖ್ಯಾತರನ್ನು ಯಾಕೆ ತಲೆ ಮೇಲೆ ಕೂಳಿಸಿಕೊಳ್ಳುತ್ತಾರೋ?ಒಮ್ಮೊಮ್ಮೆ ಸಣ್ಣ ವಿಶಯವೆಂದು ಬಿಟ್ಟೀದ್ದೇ ದೊಡ್ಡ ಪ್ರಮಾದವಾಗಿಬಿಡುತ್ತದೆ.ಅವರ ವಿರುದ್ಧ ಮಾತಾಡಿದವರು ಕೋಮುವಾದಿಗಳಾಗಿ ಕಾಣಿಸುತ್ತಾರೆ.ಮಾತುಕತೆಯ ಮೂಲಕ ಸಮಸ್ಯ್ಯೆ ಬಗೆಹರಿಯುವುದು ಯಾರಿಗೂ,ವಿಶೇಶವಾಗಿ,ರಾಜಕಾರಣಿಗಳಿಗೆ ಬೇಕಾಗಿಲ್ಲ.ಹೀಗಾಗಿಯೇ ಅಲ್ಲವೇ ಕಾಶ್ಮೀರ ಇಂದಿಗೂ ಉರಿಯುತ್ತಿರುವುದು?ಸಿಮಿ ದೇಶದ್ರೋಹಿ ಸಂಘಟನೆ ಎಂದು ಗೊತ್ತಿದ್ದರೂ ಅದನ್ನು ನಿಶೇಧಿಸುವ ತಾಕತ್ತಿಲ್ಲ.ಕರಾವಳಿಯಲ್ಲಿ ಆತಂಕಕಾರಿ ಚಟುವಟಿಕೆ ನಡೆಯುತ್ತಿದೆ ಎಂದರೂ ಸರ್ಕಾರ ಕಣ್ಣೂ ಮುಚ್ಹಿ ಕೂರುತ್ತದೆ.ಕಳೆದ ವಾರ ಉಡುಪಿ ಬಳಿ ಖಾಸಗಿ ಬಸ್ ಚಾಲಕ ಕಾರನ್ನು ಓವರ್ಟೇಕ್ ಮಾಡಿದನೆಂಬ ಸಣ್ಣ ಕಾರಣಕ್ಕೆ ಅಲ್ಪಸಂಖ್ಯಾತರೆಲ್ಲಾ ಗುಂಪುಗಟ್ಟಿ ಬಂದು ಚಾಲಕನನ್ನೂ,ನಿರ್ವಾಹಕನ್ನೂ ಅಮಾನುಶವಾಗಿ ಥಳಿಸಿದರು.ಓವರ್ಟೇಕ್ ಮಾಡುವುದು ರಾ.ಹೆ.ಯಲ್ಲಿಮಾಮೂಲು;ಆದರೆ ಅದಕ್ಕೆ ಈ ಬಾರಿ ತೆತ್ತ ಬೆಲೆ ಮಾತ್ರ ದೊಡ್ಡದು.೨೦ ರ ಹರೆಯದ ಆ ನಿರ್ವಾಹಕ ಬದುಕಿದ್ದೇ ಹೆಚ್ಹು.೨ ದಿನ ಜಿಲ್ಲೆಯಿಡೀ ಬಸ್ ಸಂಚಾರ ಸ್ಥಗಿತ;ಇಲ್ಲಿಯವರೆಗೂ ಎಲ್ಲಾ ಆರೋಪಿಗಳ ಬಂಧನವಾಗಿಲ್ಲ!ಚಿತ್ತರಂಜನ್ ಕೊಲೆ ಪ್ರಕರಣದ ತನಿಖೆ ಏನಾಯ್ತೋ?ಮುಸ್ಲಿಮ್ ವೋಟ್ಗಾಗಿ ಬಾಯ್ಬಿಡುವ ರಾಜಕಾರಣಿಗಳು,ಹಣಬಲದಿಂದ ಮೆರೆಯುವ ಮತಾಂಧರು.ದಿನೇ ದಿನೇ ಅವರ ಜನಸಂಖ್ಯೆಯೂ ಹೆಚ್ಹುತ್ತಿದೆ.ಇದು ಎಲ್ಲಿ ಃಒಗಿ ಮುಟ್ಟುವುದೋ?

ಭಾಗ ೨ ರ ನಿರೀಕ್ಶೆಯಲ್ಲಿದ್ದೇನೆ.ನಾನು ಬರೆದದ್ದು ತಪ್ಪಾಗಿದ್ದಲ್ಲಿ ಹೊಟ್ಟೆಗೆ ಹಾಕ್ಕೊಳ್ಳಿ ಸರ್!ಅಳುಕಿನಿಂದಲೇ ಪೋಸ್ಟ್ ಮಾಡ್ತಿದ್ದೇನೆ.

Chamaraj's picture

ಅಭಿಪ್ರಾಯ ಹೇಳಲು ಸಣ್ಣವರು ದೊಡ್ಡವರು ಎಂಬ ಭೇದವೇನಿಲ್ಲ ಪ್ರಮೀಳಾ ಅವರೇ. ವಿಷಯವನ್ನು ತಿರುಚಿ ದೊಡ್ಡವರೆನ್ನಿಸಿಕೊಳ್ಳುವ, ಪ್ರಚಾರ ಪಡೆಯುವ ಸಣ್ಣತನ ನಡೆದಾಗ ಅಭಿಪ್ರಾಯ ಹೇಳಲೇಬೇಕಾಗುತ್ತದೆ. ಸತ್ಯವನ್ನು ಸುಳ್ಳೆಂಬಂತೆ, ಮುಖದ ಮೇಲೆ ಹೊಡೆದಂತೆ, ಹೇಳುತ್ತಿರುವವರು ತಮ್ಮನ್ನೇ ತಾವು ಜಾತ್ಯತೀತರು ಎಂದು, ಬುದ್ಧಿಜೀವಿಗಳೆಂದು ಭಾವಿಸಿಕೊಂಡಿದ್ದಾರೆ. ಅವರ ಮೂರ್ಖತನವನ್ನು, ಮೂಲ ಉದ್ದೇಶವನ್ನು ತಿಳಿದ ಮಟ್ಟಿಗೆ ಬಹಿರಂಗಪಡಿಸುವುದೇ ಇಂದಿನ ಅವಶ್ಯಕತೆ.

ಅದನ್ನು ಮಾಡಲು ಯತ್ನಿಸಿದ್ದೇನೆ.

ಉಡುಪಿಯಲ್ಲಿ ನಿರ್ವಾಹಕನಿಗೆ ಆದಂಥ ಗತಿ ಬಹುತೇಕ ಎಲ್ಲ ಕಡೆ ಆಗಾಗ ನಡೆಯುತ್ತಲೇ ಇರುತ್ತದೆ. ಬೆಂಗಳೂರಿನ ಜೆ.ಸಿ. ರಸ್ತೆಯ ಮಸೀದಿ ಗಲಾಟೆಯಲ್ಲಿ ರಸ್ತೆ ಮೇಲೆಯೇ ನಮಾಜು ಸಲ್ಲಿಸುವ ಮೂಲಕ ಪ್ರತಿಭಟನೆ ನಡೆಯಿತು. ಅದಕ್ಕೆ ಪೊಲೀಸರೂ ಸಹಕರಿಸಿದರು. ಗಲಾಟೆ ಮಾಡುವುದು, ತಮಗೆ ತಿಳಿದಂತೆ ಅದನ್ನು ಪ್ರತಿಭಟಿಸುವುದು ನಿಜಕ್ಕೂ ಅನಾಗರಿಕತೆ. ಅದನ್ನು ಸಹಿಸಿಕೊಂಡು ಸುಮ್ಮನಿರುವುದು ಹೇಡಿತನ. ಅದನ್ನು ತಿರುಚಿ, ಇನ್ನೊಬ್ಬರ ಮೇಲೆ ಗೂಬೆ ಕೂರಿಸುವಂಥ ಜಾತ್ಯತೀತ ಸೋಗಿನವರ ಪ್ರಯತ್ನಗಳು ಅತ್ಯಂತ ಅಪಾಯಕಾರಿ. ಕನಿಷ್ಠ ಬರೆದಾದರೂ ಅದನ್ನು ಅನಾವರಣ ಮಾಡದಿದ್ದರೆ ಹೇಗೆ?

- ಚಾಮರಾಜ ಸವಡಿ

Aravind M.S's picture

ಪ್ರಮೀಳಾರವರೇ,

ನೀವು ಕೊಟ್ಟ ಈ ನಿದರ್ಶನಕ್ಕೆ ನಮ್ಮ ಬುದ್ಧಿ ಜೀವಿಗಳು ಕೊಡುವ ಸಮರ್ಥನೆ ಏನೆಂದರೆ "ಅಲ್ಪ ಸಂಖ್ಯಾತರು ಮಾಡಿದರೆ ಅದು ವ್ಯಭಿಚಾರ, ಇತರರು (ಬಹುಸಂಖ್ಯಾತರು) ಮಾಡಿದರೆ ಅದು ರಸಿಕತೆ - ಇದು ಕೋಮುವಾದಿಗಳ ಧೋರಣೆ. ಈ ಧೋರಣೆಯಿಂದಲೇ ನೀವೂ ಮಾತಾಡುತ್ತಿದೀರಿ" ಎಂದು. ನಿಮ್ಮ ನಮ್ಮಂತಹ ಕೋಮುವಾದಿಗಳು ಮಾಡುವ ವ್ಯಭಿಚಾರಕ್ಕೆ (ರಸಿಕತೆಗೆ!) ಇವರ ಮಾಮೂಲಿ ಪ್ರತಿ ನಿದರ್ಶನ ಗೋಧ್ರಾ, ಬಾಬ್ರಿ ಮಸೀದಿ ಧ್ವಂಸ.

ಆದರೆ ನಾವು ಅಪರೂಪಕ್ಕೆ ಮಾಡಿದ ಈ ವ್ಯಭಿಚಾರಗಳು ಹೀಗೆ ಇವರ 'ಇಷ್ಟ ಪುತ್ರರು' ವರ್ಷಂಪ್ರತಿ ಮಾಡುವ ಹಲವಾರು (ವಿಧ್ಯುಕ್ತ, ಶಾಸ್ತ್ರೋಕ್ತ) ಮಾರಣ ಹೋಮಕ್ಕೆ ಸಮರ್ಥನೆ ಎಂಬುದು "ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ" ಎನ್ನುವಷ್ಟು ಹಾಸ್ಯಾಸ್ಪದ.

- ಅರವಿಂದ್

prameela's picture

ಹೌದು.ನೀವು ಹೇಳಿದ್ದು ಸರಿ.ಆದರೆ ಇದಕ್ಕೆ ತಡೆ ಹಾಕುವುದು ಹೇಗೆ?ಅಲ್ಪಸಂಖ್ಯಾತರು ಇತರರನ್ನು ಡಾಮಿನೇಟ್ ಮಾಡ್ತಿದ್ದಾರೆ.'ಮನೆಯೊಳಗಣ ಬೆಂಕಿ ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು ಕೂಡಲ ಸಂಗಮ ದೇವ'ಎಂಬ ಮಾತು ಇಂದು ಹೆಚ್ಹು ಪ್ರಸ್ತುತ ಅನ್ನಿಸುತ್ತಿದೆ.ವಿನಾಕಾರಣ ಒಬ್ಬರನ್ನು ತೆಗಳುವುದು/ಹೊಗಳುವುದು ಕೆಲವರ ಶೋಕಿ.ವಿದ್ಯಾವಂತ ಯುವಜನತೆ ಉಗ್ರರಿಂದ ಬ್ರೈನ್ವಾಶ್ಗೆ ಒಳಗಾಗಿ ತಪ್ಪು ದಾರಿ ತುಳಿದರೆ ಪರಿಹಾರವೆಲ್ಲಿದೆ?

roshan_netla's picture

ನಾಗಭೂಷಣರು ಇಂತಹ ಕೆಲವು ಅಮೊಘ ಲೇಖನಗಳನ್ನು ಇದಕ್ಕೆ ಮುಂಚ್ಚೆ ಸಂಪದದಲ್ಲಿ ಹಾಕಿದ್ದಾರೆ. ಆದರೆ ಅದಕ್ಕೆ ನೀವು ಪ್ರತಿಕ್ರೀಯಿಸಿದರೆ ಅವರು ಉತ್ತರ ಬರೆಯೊದಿಲ್ಲ... ಇಂತವರು ನಮ್ಮ ಸುತ್ತುಮುತ್ತು ಬಹಳ ಇದ್ದಾರೆ..ಪುಕ್ಸಟೆ ಬುದ್ದಿ ಜೀವಿಗಳ ತರ.. ಪ್ರಚಾರಕ್ಕೋಸ್ಕರ ಬೀದಿಗೆ ಬರೊ ಬುದ್ದಿಜೀವಿಗಳು. ಅದಕ್ಕೆ ನಮ್ಮ ಕೆಲವು ಅತಿಬುದ್ದಿವಂತ, ಶುದ್ದರೆನಿಸಿಕೊಳ್ಳಲು ಹವಣಿಸುವವರ ಸಾಥ್ ಕೂಡ..
ನಿಮ್ಮ ಲೇಖನ ಚೆನ್ನಾಗಿದೆ..ಹೀಗೆ ಬರೀತಿರಿ.

hamsanandi's picture

ಅಲ್ರೀ, ನಾಗಭೂಷಣ ಅವರು ಇಲ್ಲಿ ಬರೋ ಕಾಮೆಂಟ್ಸ್ ಎಲ್ಲ ನಾನು ಓದೋದಿಲ್ಲ ಅಂತ ಘಂಟಾಘೋಷವಾಗಿ ಒಂದು ಬರಹದಲ್ಲಿ ತಾವೇ ಹೇಳಿಕೊಂಡಿದ್ರಲ್ಲ .. ಹಾಗಾಗಿ ಅವರ ಗಮನ ಸೆಳೆಯುವ ಮಾತೇನೋ ದೂರವೇ ಬಿಡಿ :(

ಚಾಮರಾಜರೆ, 'ತಿರುಚುವ' ಕೆಲಸ ಎಷ್ಟು ಚೆನ್ನಾಗಿ ನಡೆಯುತ್ತೆ ಎಂದು ತಿಳಿಸಿದ್ದೀರ. ಒಳ್ಳೆಯದು.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

prameela's picture

ಅಪರೂಪಕ್ಕೆ ಪ್ರಕಟವಾಗುವ 'ತೂಕದ' ಲೇಖನ ನೋಡಿ ಇವರ್ಯಾರೋ ಒಂದು ಬಗೆಯ ವರ್ಗಕ್ಕೆ ಸೇರಿದವರು ಅನ್ಸಿತ್ತು;ಇವತ್ತು ಖಚಿತವಾಯ್ತು.ಹೊರಗಿನ ಶತ್ರುಗಳನ್ನು ಓಡಿಸಬಹುದು.ಇಂಥಹ ಢೋಂಗಿ ಜಾತ್ಯತೀತ್ವಾದಿಗಳು,ಬುದ್ಧಿ ಗೆದ್ದಲು ಹಿಡಿದಿರುವ ಜೀವಿಗಳ ವಿರುದ್ಧ ಹೇಗೆ ಹೋರಾಡುವುದು?

roshan_netla's picture

ಅದೇ ಸಾರ್ ನಾನು ಹೇಳೊದು ಅವರು ಪ್ರತಿಕ್ರಿಯೆ ಓದೊಲ್ಲ ,ಚರ್ಚೆ ಮಾಡೊದಿಲ್ಲ, ಆದರೆ ಅವರ ಕುದುರೆಗೆ ಮೂರೇ ಕಾಲು ಅಂತಾರೆ...ಬರಹ ಬರ್ದು ಬಿಸಾಕಿ ಓಡಿಹೊಗೊದು. ಬುದ್ದಿವಾದ ಬೇಕಾ? ಪುಕ್ಸಟ್ಟೆ ಸಿಗುತ್ತೆ...

girish.rajanal's picture

’ಬುದ್ಧಿ ಜೀವಿಗಳು’ ಕಾಲಿಗೆ ಬುದ್ಧಿ ಹೇಳಿರಬೇಕು:D :D :D

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

Chamaraj's picture

ಥ್ಯಾಂಕ್ಸ್‌.

- ಚಾಮರಾಜ ಸವಡಿ

Chamaraj's picture

ಅವರ ಉತ್ತರ ಯಾರಿಗೆ ಬೇಕಿದೆ ರೋಶನ್‌. ಅವರು ಲೇಖನ ಬರೆದರು, ನಾನು ಪ್ರತ್ಯುತ್ತರ ಬರೆದೆ, ನೀವು ಪ್ರತಿಕ್ರಿಯೆ ನೀಡಿದಿರಿ. ಇಷ್ಟೇ ವಿಷಯ. ಅವರವರ ವಿಚಾರಗಳನ್ನು ಒಪ್ಪುವ ಹಾಗೂ ಖಂಡಿಸುವ ಹಕ್ಕುಗಳು ಎಲ್ಲರಿಗೂ ಇವೆ. ಕೆಲವರಿಗಾದರೂ ಇಂತಹ ಮಹಾನುಭಾವರ ನಿಜ ಉದ್ದೇಶ ಅರ್ಥವಾದರೆ ಸಾಕು.

- ಚಾಮರಾಜ ಸವಡಿ

mahesha's picture

ರೋಶನ್

ಒಂದು ಗಮನಿಸಿರಿ...

ಇವರ ಎಲ್ಲಾ ಬರಹಗಳು ’ವಿಶೇಷ’ ಎಂದು ಹೊರಬರ್ತದೆ..

ಏನು ವಿಶೇಷ ಅಂದ್ರೆ ಉದ್ದುದ್ದು ಇರೋದು! :)

mahesha's picture

ನಾನು ಹೇಳಿದ್ದು ಚಾಮರಾಜರ ಬರಹದ ಬಗ್ಗೆ ಅಲ್ಲ! :)

srinivasps's picture

'ವಿಶೇಷ ಲೇಖನ' ಅಂತ ಹೇಗೆ ಬರೆಯೋದು ? ನಾನೂ ಬರೀತೀನಿ ;)

mahesha's picture

ರೀ

ಸಂಪದದಲ್ಲಿ ವಿಶೇಶ ಲೇಕನ ಅನ್ನೋ ಸೆಕ್ಶನ್ನಿದೆ ಅಲ್ಲಿ

srinivasps's picture

ಬೊಂಬಾಟ್!

"ಜಾತ್ಯತೀತರೆಂಬ ಕೋಮುವಾದಿಗಳು"

ಲೇಖನದ ಹೆಸರೂ ಬೊಂಬಾಟ್!

"ತಪ್ಪು ಯಾರೇ ಮಾಡಿರಲಿ, ಅವರ ಜಾತಿ, ಹಿನ್ನೆಲೆ ನೋಡದೇ ಅದನ್ನು ತಪ್ಪು ಎಂದು ಸರಳವಾಗಿ ಹೇಳಲು ನಿಮ್ಮಂಥವರಿಗೆ ಏಕೆ ಸಾಧ್ಯವಾಗುವುದಿಲ್ಲ? ಏಕೆ ಈ ದ್ವಂದ್ವ?"

:) ಲೇಖನದ ಹೆಸರಲ್ಲೇ ಇದೆ ಯಾಕೆ ಸಾಧ್ಯವಾಗಲ್ಲ ಅಂಥ!!! :D

ಈ ರೀತಿ ಲೇಖನ ನೋಡಿ ಬಹಳ ಖುಷಿಯಾಯಿತು...

ಹೀಗೆ ಬರೀತಿರಿ :)

--ಶ್ರೀ

Chamaraj's picture

ಥ್ಯಾಂಕ್ಸ್‌ ಶ್ರೀನಿವಾಸ್‌.

- ಚಾಮರಾಜ ಸವಡಿ

Narayana's picture

"...ಸ್ಥಳೀಯ ಸಂಸ್ಕೃತಿಯ ಪರಿಮಳ ನಾಶವಾಗಿ ಈ ಮುಸ್ಲಿಂ ಬಹುಸಂಖ್ಯಾತರ ರಾಜ್ಯ, ರಾಷ್ಟ್ರೀಯತೆಯ ಅತಿಗಳಿಗೆ ಸಿಕ್ಕಿ ಕೋಮುವಾದಕ್ಕೆ ಬಲಿಯಾಗಿದೆ. ಇದರಿಂದಾಗಿ, ಭಾರತದ ಬಹು ಸಂಪ್ರದಾಯಗಳ ಸಂಸ್ಕೃತಿಗೆ ಹತ್ತಿರವಿದ್ದ ಕಾರಣದಿಂದಾಗಿ ಭಾರತದಲ್ಲಿ ಸಹಜವಾಗಿ ಒಂದಾಗಬೇಕಿದ್ದ ಈ ರಾಜ್ಯ, ಈಗ ತನ್ನ ಮುಕ್ತಿಗಾಗಿ ಪಾಕಿಸ್ತಾನದ ಕಡೆ ನೋಡುವಂತಾಗಿದೆ...” ಎಂದು ನಾಗಭೂಷಣರು ಅಪ್ಪಣೆ ಕೊಡಿಸಿದ್ದಾರೆ.

"ರಾಷ್ಟ್ರೀಯತೆಯ ಅತಿಗಳಿಗೆ ಸಿಕ್ಕಿ" ಅಂದರೇನು ? ಅದಕ್ಕಿಂತ ಮೊದಲು ಕಾಶ್ಮೀರದಲ್ಲಿ ಕೋಮುವಾದ ಇರಲಿಲ್ಲವೇ?

"ಭಾರತದ ಬಹು ಸಂಪ್ರದಾಯಗಳ ಸಂಸ್ಕೃತಿಗೆ ಹತ್ತಿರವಿದ್ದ ಕಾರಣದಿಂದಾಗಿ ಭಾರತದಲ್ಲಿ ಸಹಜವಾಗಿ ಒಂದಾಗಬೇಕಿದ್ದ ಈ ರಾಜ್ಯ, ಈಗ ತನ್ನ ಮುಕ್ತಿಗಾಗಿ ಪಾಕಿಸ್ತಾನದ ಕಡೆ ನೋಡುವಂತಾಗಿದೆ..." ಹೌದೇ? ಕಾಶ್ಮೀರದ ಬಹುಸಂಪ್ರದಾಯಗಳ ಅವಿಭಾಜ್ಯ ಅಂಗವಾಗಿದ್ದ ಕಾಶ್ಮೀರೀ ಪಂಡಿತರುಗಳನ್ನು ಅಲ್ಲಿಂದ ಓಡಿಸಿದ್ದು ಯಾರು ? ಭಾರತ ಸರ್ಕಾರವೇ? ಅಥವಾ ಪಾಕಿಸ್ತಾನದ ಕುಮ್ಮಕ್ಕಿನ ಕಾಶ್ಮೀರೀ ಮುಸ್ಲಿಮರೆ? .

".....ಹಾಗೇನಾದರೂ ಕಾಶ್ಮೀರ ನಮ್ಮ ಕೈಬಿಟ್ಟರೆ ನಮ್ಮ ರಾಷ್ಟ್ರವನ್ನು ಬಂಧಿಸಿರುವ ಸೆಕ್ಯುಲರಿಸಂ-ರಾಷ್ಟ್ರೀಯತೆಗೆ ಭಂಗ ಬರದಂತೆ ಎಲ್ಲ ಧರ್ಮಗಳೂ ಒಟ್ಟಿಗೆ ಇರಬಲ್ಲವೆಂಬ ನಂಬಿಕೆ-ತನ್ನೆಲ್ಲ ವಿಶ್ವಾಸಾರ್ಹತೆಯನ್ನು ಅಂತಿಮವಾಗಿ ಕಳೆದುಕೊಂಡಂತೆಯೇ. ಅಲ್ಲಿಂದಾಚೆಗೆ ನಮ್ಮನ್ನಾಳುವವರು ವಿಚ್ಛಿದ್ರಕಾರಕ ಧರ್ಮ ರಾಕ್ಷಸರೇ. ಎಚ್ಚರವಿರಲಿ!..."

ಅಂದರೇನು ಭಾರತ ಸೆಕ್ಯುಲರ್‍ ಅನ್ನಿಸಿಕೊಳ್ಳಬೇಕಾದರೆ ಕಾಶ್ಮೀರ ಭಾರತದಲ್ಲಿರಬೇಕು. ಕಾಶ್ಮೀರ ಭಾರತದಿಂದ ಕೈಬಿಟ್ಟರೆ ಭಾರತ ಸೆಕ್ಯುಲರ್‍ ಎಂಬ ಬಿರುದನ್ನು ಕಳೆದುಕೊಂಡುಬಿಡುತ್ತದೆ ಅಲ್ಲವೇ. ಬಾಕಿ ಉಳಿದ ಭಾಗಗಳಲ್ಲಿ ನಾವೆಲ್ಲಾ ಸಾಬರು, ಕ್ರಿಶ್ಚಿಯನ್ನರು ಎಲ್ಲಾ ಒಟ್ಟಿಗೆ ದೈನಂದಿನ ಜೀವನ ಮಾಡಿಕೊಂಡು ಹೋಗುತ್ತಿರುವುದು ಸೆಕ್ಲುಲರ್‍ ಅಲ್ಲ!!

ಎಲ್ಲಾ ಒಣ ಶಬ್ದವೈಭವವಷ್ಟೇ....

ನಾನೇನು ಬಿಜೆಪಿ ಸಮರ್ಥಕನಲ್ಲ. ಆದರೆ ನಾಗಭೂಷಣರು ಈ ಲೇಖನದಲ್ಲಿ ಅಸಮರ್ಥನೀಯವಾದದ್ದನ್ನು ಸಮರ್ಥಿಸಲು ತಿಪ್ಪರಲಾಗ ಹಾಕುವುದನ್ನು ನೋಡಿ ಇದನ್ನು ಬರೆದಿದ್ದೇನೆ.

ಚಾಮರಾಜರೇ... ನೀವು ಬರೆದ ಮಾರುತ್ತರ ಸರಿಯಾಗಿದೆ. ಆಧರೆ ಒಂದು ಪ್ರಶ್ನೆ : ಪ್ರತಿಕ್ರಿಯೆ ಓದುವುದಿಲ್ಲ ಎಂದೋ / ಪ್ರತಿಕ್ರಿಯೆಗೆ ಪ್ರತಿಕ್ರಿಯಿಸುವುದಿಲ್ಲ ಎಂದೋ ಬರೆದುಕೊಂಡಿರುವ ಈ ಮಹಾನುಭಾವರ ಲೇಖನವನ್ನು ತಾವು ಓದುವ ಶ್ರಮವನ್ನೇಕೆ ತೆಗೆದುಕೊಂಡಿರಿ ? ಈ ಥರದ one-sided ಹಸಿಹಸಿ ಲೇಖನ ಓದದೇ ಇರುವುದರಿಂದ ನನಗಂತೂ ಯಾವುದೇ ನಷ್ಟವಿಲ್ಲ. ನಾವು ನಮ್ಮ ತಿಳುವಳಿಕೆಯನ್ನ ಇಂಥಾ ಆರಾಮಖುರ್ಚಿಯ ಬುದ್ಧಿಜೀವಿಗಳ ಲೇಖನಗಳಿಂದ ಹೆಚ್ಚಿಸಿಕೊಳ್ಳಬೇಕಾದ ಕಾಲ ಎಂದೋ ಹೊರಟು ಹೋಗಿದೆ.

ವಂದನೆಗಳೊಂದಿಗೆ
ನಾರಾಯಣ

madhava_hs's picture

ಇಲ್ಲಿ ಲೇಖನ ಹಾಕುತ್ತೇನೆ. ಪ್ರತಿಕ್ರಿಯೆ ಏನು ಬಂದಿದೆ ಎಂದು ನೋಡುವುದಿಲ್ಲ ಎಂದರೆ ಸಂಪದ ಒಂದು ಕಸದ ಬುಟ್ಟಿ ಎಂದು ತಿಳಿದಿದ್ದಾರೆಂದಾಯಿತು.

ಚಾಮರಾಜ್, ನಿಮ್ಮ ಲೇಖನ ಚೆನ್ನಾಗಿದೆ.

Chamaraj's picture

ಸಂಪದ ಕಸದ ಬುಟ್ಟಿಯಲ್ಲ. ಆದರೆ, ಆಗೊಂದು ಈಗೊಂದು ಇಂತಹ ಕಸ ಬೀಳುತ್ತಿರುತ್ತದೆ. ಅದನ್ನು ಗುಡಿಸಿ ಆಚೆ ಎಸೆದರೆ ಸಾಕು.

- ಚಾಮರಾಜ ಸವಡಿ

Chamaraj's picture

ನಾರಾಯಣ ಅವರೇ,

ಪ್ರತಿಕ್ರಿಯೆ ಓದದ, ನೀಡದ ವ್ಯಕ್ತಿ ಅಂದುಕೊಂಡು ನಾವು ಪ್ರತಿಕ್ರಿಯೆ ನೀಡದೇ ಸುಮ್ಮನಿರಬಾರದು. ಇಂತಹ ಮನೋಧಾರೆಯ ವ್ಯಕ್ತಿಗಳು ತುಂಬ ಜನ ಇದ್ದಾರೆ. ಪ್ರತಿಯೊಬ್ಬರಲ್ಲೂ ಅಪಾರ ಅವಾಸ್ತವಿಕ ವಿಚಾರಗಳು ಹಾಗೂ ಭ್ರಮೆಗಳಿವೆ. ಅವನ್ನು ಖಂಡಿಸಲಿಕ್ಕಾದರೂ ಓದಬೇಕಾಗುತ್ತದೆ. ಓದಿದ ನಂತರ ಪ್ರತಿಕ್ರಿಯೆ ನೀಡದಿದ್ದರೆ ಹೇಗೆ? ಮುಟ್ಟಬೇಕಾದ ಕಡೆ ಮುಟ್ಟಿಯೇ ಮುಟ್ಟುತ್ತದೆ ಎಂಬುದು ನನ್ನ ಅನುಭವ.

- ಚಾಮರಾಜ ಸವಡಿ

uniquesupri's picture

ಚಾಮರಾಜ್ ಸರ್,
ನಿಮ್ಮ ಪ್ರತಿಕ್ರಿಯೆ ನ್ಯಾಯಯುತವಾದ ಆಗ್ರಹಗಳನ್ನು ಹೊಂದಿದೆ. ವಿಕ್ರಾಂತ ಕರ್ನಾಟಕದಲ್ಲಿನ ನಾಗಭೂಷಣ್‌ರ ಅಂಕಣ ಬರಹವನ್ನು ಅವರ ಗೆಳೆಯರು ಇಲ್ಲಿ ಪ್ರಕಟಿಸುತ್ತಾರಂತೆ (ಅವರಿಗೆ ಬ್ಲಾಗ್ ತಂತ್ರಾಂಶದ ಪರಿಚಯವಿಲ್ಲದ ಕಾರಣ).
ನೀವು ಈ ಅಭಿಪ್ರಾಯವನ್ನು ವಿಕ್ರಾಂತ ಕರ್ನಾಟಕ್ಕೆ ಕಳುಹಿಸಿದರೆ ಬಹುಶಃ ಅಲ್ಲಿ ಸಂವಾದಕ್ಕೆ ಆಸ್ಪದವಾಗಬಹುದು ಅನ್ನಿಸುತ್ತದೆ.
ನಾಗಭೂಷಣ್‌ರ ವಿಚಾರಗಳ ಬಗ್ಗೆ ಮಾತ್ರ ಟೀಕೆ ನಡೆದರೆ, ಚರ್ಚೆ ನಡೆದರೆ ಅದು ಸಹಕಾರಿ ಅನ್ನಿಸುತ್ತದೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...

Chamaraj's picture

ವಿಕ್ರಾಂತ ಕರ್ನಾಟಕದಲ್ಲಿ ಪ್ರಕಟವಾದ ಬರಹವನ್ನು ಸಂಪದದಲ್ಲಿ ಮರುಪ್ರಕಟಿಸುವ ಗೆಳೆಯರೇ ಈ ಲೇಖನ-ಪ್ರತಿಕ್ರಿಯೆಗಳ ವಿಷಯವನ್ನೂ ತಿಳಿಸುತ್ತಾರೆ ಬಿಡಿ. ಒಳಹರಿವಿಗೆ ಅವಕಾಶ ನೀಡದಿದ್ದರೆ ವೈಚಾರಿಕೆ ಮಲಿನತೆ ಉಂಟಾಗುತ್ತದೆ ಎಂಬುದು ನನ್ನ ನಂಬಿಕೆ. ಡಿ.ಎಸ್‌.ಎನ್‌. ಅಂತಹ ಮಲಿನತೆ ಮಾಡಿಕೊಳ್ಳದಿರಲಿ ಎಂಬುದಷ್ಟೇ ಲೇಖನದ ಆಶಯ. ಹಾಗಂತ ತುಂಬ ಭರವಸೆಗಳನ್ನೇನೂ ಇಟ್ಟುಕೊಂಡಿಲ್ಲ ನಾನು.

ನಾಗಭೂಷಣ ಅವರ ವಿಚಾರಗಳ ಟೀಕೆ, ಚರ್ಚೆಯೂ ಬೇಕಿಲ್ಲ ಅನಿಸುತ್ತದೆ. ಅವರ ವಿಚಾರಧಾರೆಯ ದಿಕ್ಕು ಹಾಗೂ ಉದ್ದೇಶದ ಬಗ್ಗೆ ಗೊತ್ತಾದರೆ ಸಾಕು.

- ಚಾಮರಾಜ ಸವಡಿ

uniquesupri's picture

ನನಗ್ಯಾಕೋ ನೀವು ತುಂಬಾ ಸಿಟ್ಟಾಗಿರುವಂತೆ ಅನ್ನಿಸುತ್ತದೆ!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...

Chamaraj's picture

ಹಾಗೇನೂ ಇಲ್ಲ. ಸಿಟ್ಟು ಬರುವುದು ವೈಚಾರಿಕೆತೆಯ ಸೋಗಿನಲ್ಲಿ ಅನಾಚಾರ ಮಾಡಲು ಮುಂದಾದಾಗ.

- ಚಾಮರಾಜ ಸವಡಿ

Aravind M.S's picture

ನಾಗಭೂಷಣರ ಗೋಜಲು ಗೋಜಲಾದ ಲೇಖನವನ್ನು ಅನಾವರಣ ( ಈ ಪದ ಭೈರಪ್ಪನವರ 'ಆವರಣ'ದ ನಂತರ ಬಹಳ ಪಾಪ್ಯುಲರ್ !) ಗೊಳಿಸಿದ ಚಾಮರಾಜ್ ರವರಿಗೆ ಧನ್ಯವಾದಗಳು. ಮನಸ್ಸು ಈಗ ನಿರಾಳವಾಯಿತು :):-)

Chamaraj's picture

ವೈಚಾರಿಕ ಗೋಜಲು ಲೇಖನದಲ್ಲೂ ಬರುವುದು ಸಹಜ ಅಲ್ಲವೆ/

- ಚಾಮರಾಜ ಸವಡಿ

Rajeshwari's picture

ಸರ್,

ಗುಜರಾತ್ ನಲ್ಲಿ ನೆಡೆದ ಬಾಂಬ್ ಸ್ಪೋಟದ ಬಗ್ಗೆ ಮಾಹಿತಿ ಕಲೆ ಹಾಕಿ ಸಿಮಿ ಕಾರ್ಯಕರ್ತರನ್ನು ಬಂಧಿಸಿದರೆ ಪ್ರಧಾನಿ ಹುದ್ದೆ ಆಕಾಂಕ್ಷಿತರಾಗಿರುವ ಲಾಲು ಅವರನ್ನು ಉದ್ದೇಶಿಸಿ ಅವರೆಲ್ಲ ಅಮಾಯಿಕರು ಅಂತ ಹೇಳುತ್ತಾರೆ , ಈ ವೊಟ್ ಪಾಲಿಟಿಕ್ಸ್ ಹೋಗಬೇಕು. ತಪ್ಪು ಮಾಡಿದವರು ಯಾರೇ ಆಗಿರಲಿ ಅವರಿಗೆ ಶಿಕ್ಷೆ ಆಗಬೇಕು. ಈ ಜಾತಿ ರಾಜಕೀಯ ಬಿಡಬೇಕು.

girish.rajanal's picture

ಕಾಶ್ಮೀರದಲ್ಲಿ ಉಗ್ರವಾದಿಗಳು ಪಾಕಿಸ್ತಾನದ ಬಾವುಟ ಹಾರಿಸಿದರೂ ಎನೂ ಮಾಡಲಾಗದ ’ಶಂಡರು’ ಇನ್ನೇನು ಹೇಳಿಯಾರು ರಾಜೇಶ್ವರಿಯವರೆ!!

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

shashikannada's picture

ಪ್ರಿಯ ಚಾಮರಾಜರೇ,

ನಮಸ್ಕಾರ. ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆಯಿರಲಿ. ನಾನು ಈ ಲೇಖನವನ್ನು ಮೊನ್ನೆಯೇ ಓದಿದ್ದೆನಾದರೂ, ನಾನು ಸಾಮಾನ್ಯವಾಗಿ ಹೋಗುವ ಬ್ರೌಸಿಂಗ್ ಸೆಂಟರ್‌ನಲ್ಲಿ ಕನ್ನಡದಲ್ಲಿ ಟೈಪಿಸುವುದಕ್ಕೆ ಸಾಧ್ಯವಾಗದ ಕಾರಣ, ಮನೆಯಲ್ಲಿ ಟೈಪಿಸಿಕೊಂಡು ಬಂದು ಪ್ರತಿಕ್ರಿಯೆ ನೀಡುತ್ತಿದ್ದೇನೆ.

ಡಿಎಸ್‌ಎನ್‌ ಸೂಕ್ಷ್ಮ ವಿಮರ್ಶಕರೂ, ಸಮಾಜವಾದಿ ಚಿಂತಕರು ಎಂದು ಕನ್ನಡ ಸಾಹಿತ್ಯ ಹಾಗೂ ಸಾಮಾಜಿಕ ಪ್ರಪಂಚದಲ್ಲಿ ಹೆಸರುವಾಸಿ. ಆದರೆ, ಅವರ ’ಕಾಶ್ಮೀರ ಬೆಂಕಿ: ಎಚ್ಚರವಿರಲಿ’ ಲೇಖನ ಎಷ್ಟರ ಮಟ್ಟಿಗೆ ಖಂಡನಾರ್ಹ ಎಂಬುದನ್ನು ತಾವು ಮಾನವೀಯ ಕಾಳಜಿಯನ್ನೇ ಮುಖ್ಯವಾಗಿರಿಸಿಕೊಂಡು ನೀಡಿರುವ ವಾಸ್ತವ ಚಿತ್ರಣ ತಮ್ಮ ಪ್ರಖರವಾದ "ಪ್ರತ್ಯುತ್ತರ"ದ ಮೂಲಕ ತೋರಿಸಿಕೊಟ್ಟಿದ್ದೀರಿ. ಅದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ.

ಅಮರನಾಥ್ ವಿವಾದ, ಭಯೋತ್ಪಾದನೆ, ಸೆಕ್ಯುಲರಿಸಂ, ಎಡಪಂಥೀಯ ವಿಚಾರಧಾರೆಯ ಕುರಿತಾಗಿ ನಾನು ಲೇಖನ ಬರೆಯುವುದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವೆನಾದರೂ, ಡಿಎಸ್ಎನ್ ಲೇಖನದ ಬಗ್ಗೆ ನನಗೆ ತಿಳಿದಿರಲಿಲ್ಲ. ತಮ್ಮಿಂದಾಗಿ ಆ ಲೇಖನವನ್ನು ಓದುವಂತಾಯಿತು. ಈ ಹಿಂದೆ ಇದೇ ಸಂಪದಲ್ಲಿ ಅವರ ಸಾಕಷ್ಟು ಲೇಖನಗಳನ್ನು ಓದಿ ಮೆಚ್ಚಿದ್ದೇನೆ. ಅಷ್ಟೇ ಅಲ್ಲದೆ, ಅವರ ಪುಸ್ತಕ, ವಿಮರ್ಶಾ ಲೇಖನಗಳನ್ನು ಕೂಡ ಓದಿ ಮೆಚ್ಚುವುದರ ಮೂಲಕ ಒಂದು ರೀತಿಯ ಅಭಿಮಾನವನ್ನು ಕೂಡ ಬೆಳೆಸಿಕೊಂಡಿದ್ದೇನೆ. ಆದರೆ, ಅವರ ಸೋ ಕಾಲ್ಡ್ ಸೆಕ್ಯುಲರ್‌ವಾದದ ಹಿಂದೆ ಇಂತಹ ಬೌದ್ಧಿಕ ವಂಚನೆಯಿದೆ ಎಂಬುದು ನಿಮ್ಮ ಲೇಖನದ ಮೂಲಕ ನನಗೆ ಅರಿವಾಗುತ್ತಿದೆ. ಈ ಹಿಂದೆ ಅಣುವಿವಾದದ ಕುರಿತು ಅವರು ಎಡಪಕ್ಷಗಳ ಪರವಾಗಿ ಒಂದು ಲೇಖನವನ್ನು ಇದೇ ಸಂಪದದಲ್ಲಿ ಪ್ರಕಟಿಸಿದ್ದರು. ಆಗ ನಾನದಕ್ಕೆ ಪ್ರತಿಕ್ರಿಯಿಸಿ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರವರೇ ಈ ಒಪ್ಪಂದವನ್ನು ಬೆಂಬಲಿಸುತ್ತಿರುವಾಗ ನೀವು ಯಾಕೆ ಅದನ್ನು ವಿರೋಧಿಸಲೇಬೇಕೆಂಬ ಹಠದಿಂದ(ತಾತ್ವಿಕವಾಗಿಯಲ್ಲ) ವಿರೋಧಿಸುತ್ತಿರುವ ಎಡಪಕ್ಷಗಳನ್ನು ಬೆಂಬಲಿಸಿ ಮಾತನಾಡುತ್ತಿದ್ದೀರಿ ಎಂದು ಕೇಳಿದ್ದೆ. ಆಗ ಯಾವುದೇ ಪ್ರತಿಕ್ರಿಯೆಯೂ ಬಂದಿರಲಿಲ್ಲ. ನಮ್ಮ ಬಹುಪಾಲು ಚಿಂತಕರು ಮುಸ್ಲಿಂ ಸಂಘಟನೆಗಳ ಭಯೋತ್ಪಾದನೆಯನ್ನು ಸಮರ್ಥಿಸಿಯಾದರೂ ಸರಿ ತಾವು "ಸೆಕ್ಯುಲರ್" ಎನಿಸಿಕೊಳಬೇಕೆಂಬ ತೆವಲನ್ನು ಹೊಂದಿರುವ "ದೇಶಭ್ರಷ್ಟ"ರಾಗಿ ಕಾಣಿಸುತ್ತಿದ್ದಾರೆ!

ಸಿರಿಗನ್ನಡಂ ಗೆಲ್ಗೆ

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ

Chamaraj's picture

ಪ್ರಿಯ ಶಶಿಕುಮಾರ್‌,

ಯಾವುದೇ ಒಂದು ಪಕ್ಷ ಅಥವಾ ಪಂಥವನ್ನು ಸಾರಾಸಗಟಾಗಿ ಒಪ್ಪಿಕೊಳ್ಳುವುದು ಯಾವಾಗಲೂ ಕಷ್ಟದ ಸಂಗತಿ. ಹೀಗಾಗಿ, ವಿವೇಚನೆ ಆಧಾರದ ಮೇಲೆ ಯೋಚಿಸಬೇಕಾಗುತ್ತದೆ. ಡಿಎಸ್‌ಎನ್‌ ತಮ್ಮ ವಿಚಾರಧಾರೆ ಯಾವಾಗಲೂ ಸರಿ ಎಂದು ತಿಳಿದುಕೊಂಡಿದ್ದರೆ ಅದನ್ನು ತಪ್ಪು ಎಂದೇ ಹೇಳಬೇಕಾಗುತ್ತದೆ.

ಮುಸ್ಲಿಂರನ್ನು ಓಲೈಸುವ ಇಂಥವರು ತಮ್ಮನ್ನು ಜಾತ್ಯತೀತರು ಎಂದು ಕರೆದುಕೊಳ್ಳುತ್ತಾರೆ. ಅವರ ಬಗ್ಗೆ ಅನುಕಂಪ ತೋರಿಸುತ್ತಾರೆ. ಅವರು ಮಾಡುವ ಪ್ರತಿಯೊಂದು ಕೆಲಸವೂ ಬಲಪಂಥೀಯರ ವಿರುದ್ಧ ತೋರಿದ ಪ್ರತಿಭಟನೆ ಎಂಬಂತೆ ಬರೆಯುತ್ತಾರೆ. ಇದನ್ನು ಒಪ್ಪುವುದು ಹೇಗೆ?

ಕಾಶ್ಮೀರವೊಂದೇ ಅಲ್ಲ, ಜಗತ್ತಿನ ಬಹುಪಾಲು ಸಮಸ್ಯೆಗಳ ಹಿಂದೆ ಕೋಮುವಾದ ಇದೆ. ಹಾಗೂ ಅದು ಮುಸ್ಲಿಂ ಜಗತ್ತಿಗೆ ಸಂಬಂಧಿಸಿದ್ದೇ ಆಗಿದೆ. ಮುಸ್ಲಿಂ ಜಗತ್ತು ಎಂಬ ಶಬ್ದ ಬಳಸಿದ್ದು ಏಕೆಂದರೆ, ಭಯೋತ್ಪಾದನೆ ಮೂಲಕ ತಮ್ಮ ಪ್ರತಿಕ್ರಿಯೆ ನೀಡುವುದು ಆ ಜಗತ್ತಿನ ಸಾಮಾನ್ಯ ಕ್ರಿಯೆ. ಅಲ್ಲಿ ಸಿದ್ಧಾಂತಕ್ಕಿಂತ ಧರ್ಮ, ಧರ್ಮಾಂಧತೆ ಮುಖ್ಯವಾಗಿರುತ್ತದೆ. ಇದನ್ನು ಸಮರ್ಥಿಸುವುದು ಸಾಧ್ಯವೇ ಅಲ್ಲ.

ನಾನಿರುವ ಜಾಗದಲ್ಲಿ ಕೇವಲ ನನ್ನ ಧರ್ಮದವರು ಮಾತ್ರ ಇರಬೇಕು ಎಂಬ ಸಿದ್ಧಾಂತ ಎಲ್ಲ ಕಾಲಕ್ಕೂ ಅಪಾಯಕಾರಿಯೇ. ಇಂತಹ ಮನಃಸ್ಥಿತಿಯನ್ನು ಪ್ರಚಾರದ ಹಂಬಲದಲ್ಲಿ ಡಿಎಸ್‌ಎನ್‌ನಂಥವರು ಸಮರ್ಥಿಸಲು ಮುಂದಾದಾಗ ಅದನ್ನು ಖಂಡಿಸಲೇಬೇಕಾಗುತ್ತದೆ. ಅದರರ್ಥ ಬಲಪಂಥೀಯರು ಮಾಡುತ್ತಿರುವುದೆಲ್ಲ ಸರಿ ಎಂದಲ್ಲ. ಆದರೆ, ಬಲಪಂಥ ಹುಟ್ಟಲು ಮುಖ್ಯ ಕಾರಣವೇ ಇಂಥ ವ್ಯಕ್ತಿಗಳು. ಇಪ್ಪತ್ತೈದು ವರ್ಷಗಳ ಹಿಂದೆ ಬಿಜೆಪಿ ಎಲ್ಲಿತ್ತು? ಒಂದು ಅತಿರೇಕ ನಿಯಂತ್ರಣಕ್ಕೆ ಬಾರದೇ ಹೋದಾಗ, ಪರ್ಯಾಯವಾಗಿ ಇನ್ನೊಂದು ಅತಿರೇಕ ಬೆಳೆಯುತ್ತದೆ. ಬಿಜೆಪಿ ಬೆಳೆದಿದ್ದು ಹಾಗೆ.

ಎಲ್ಲ ಪಂಥಗಳ ಉತ್ತಮಾಂಶಗಳನ್ನು ಒಪ್ಪಿಕೊಳ್ಳೋಣ. ಅದೇ ರೀತಿ, ದೋಷಗಳನ್ನು ತಿರಸ್ಕರಿಸೋಣ. ಆಗ ಮಾತ್ ಸಮಚಿತ್ತದ ಬೆಳವಣಿಗೆ ಸಾಧ್ಯ. ಧರ್ಮ, ಜಾತಿ, ಸಂಕುಚಿತತೆಯ ಕನ್ನಡಕ ಹಾಕಿಕೊಂಡು ಬರೆಯುತ್ತ ಹೋದರೆ ಅವನ್ನೆಲ್ಲ ಖಂಡಿಸಲೇಬೇಕಾಗುತ್ತದೆ.

ಆ ಕೆಲಸವನ್ನು ಎಲ್ಲರೂ ಮಾಡಿದರೆ, ಪೀಡೆ ಬಲುಬೇಗ ನಿಯಂತ್ರಣಕ್ಕೆ ಬಂದೀತು ಎಂಬುದು ನನ್ನ ನಂಬಿಕೆ.

- ಚಾಮರಾಜ ಸವಡಿ

keerthi2kiran's picture

ಭಾಗ ೨ ಯಾವಾಗ?
ಕೀರ್ತಿ ಕಿರಣ್ ಎಂ