ನಮ್ಮ ಕನ್ನಡಿಗರಿಗೆ ಬುದ್ಧಿ ಇದೆ. ಶಿಕ್ಷಣವಿದೆ. ಜೊತೆಗೆ ಕಷ್ಟಪಡುವ ಮನೋಧರ್ಮವೂ ಇದೆ. ಆದರೂ ಎಲ್ಲ ಕನ್ನಡಿಗರೂ ವ್ಯಾಪಾರ ಕ್ಷೇತ್ರದಲ್ಲಿ ಯಶಸ್ವಿಯಾಗಲು ಯಾಕೆ ಸಾಧ್ಯವಾಗುವುದಿಲ್ಲ? ನನ್ನಂತಹ ಸಾಮಾನ್ಯ ಹುಡುಗ ಬೇಕಾದ್ದನ್ನು ಸಾಧಿಸಿ ತೋರಿಸಬಹುದಾದಲ್ಲಿ, ಇತರರು ಯಶಸ್ವಿಯಾಗುವುದರಲ್ಲಿ ಯಾವ ಅಡೆತಡೆಗಳಿವೆ? ಎಂದು ಎಂದಾದರೂ ಕುಳಿತು ಈ ನಿಟ್ಟಿನಲ್ಲಿ ಯೋಚಿಸಿದ್ದೀರಾ?

— ವಿಠ್ಠಲ ವೆಂಕಟೇಶ ಕಾಮತ್ (ಕಾಮತ್ ಹೊಟೆಲ್ಸ್ ಇಂಡಿಯಾ ಲಿಮಿಟೆಡ್ ಅಧ್ಯಕ್ಷರು)
("ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ" ಪುಸ್ತಕದಲ್ಲಿ)

ಶಾಪಿಂಗ್ ಮಾಲ್ ಜಾಹೀರಾತು ಮತ್ತು ಕನ್ನಡ

ಉಸಿರುಗಟ್ಟಿಸುವಂತೆ ಯುವ ಪೀಳಿಗೆಯ ದಂಡನ್ನೇ ತನ್ನೆಡೆಗೆ ಸೆಳೆಯುತ್ತಿರುವ "ಶಾಪಿಂಗ್ ಮಾಲ್"ಗಳಲ್ಲಿ ಕನ್ನಡ ಜಾಹೀರಾತು ನೋಡೋದು ಅಂದ್ರೆ ಕನಸೇ ಅಲ್ವಾ? ಎಷ್ಟೋ ಸಂಘಟನೆಗಳು ಕನ್ನಡವನ್ನ ಮಾಲ್ಗಳಲ್ಲಿರುವ ಅಂಗಡಿಯ ಮಾಲೀಕರು ಕಡ್ಡಾಯವಾಗಿ ಬಳಸಬೇಕೆಂದು ಒತ್ತಾಯಿಸಿದ್ದೂ ಆಯಿತು. ಇತ್ತೀಚೆಗೆ ಶಾಫಿಂಗ್ ಮಾಲ್ಗಳಲ್ಲಿ ಕನ್ನಡ ಹಾಡುಗಳು ಕೇಳಿಬರುತ್ತಿರೋದನ್ನ ಸುನೀಲ ಬರೆದಿದ್ದ. ನನಗೂ ಅದರ ಅನುಭವ ಆಗಿದೆ. ಅದೇ ರೀತಿ ಕೆಲ ತಿಂಗಳುಗಳ ಹಿಂದೆ ಸಿನಿಮಾಕ್ಕೆ ಹೋಗಿದ್ದಾಗ ಕನ್ನಿಂಗ್ ಹ್ಯಾಮ್ ರೋಡ್ ನಲ್ಲಿನ ಸಿಗ್ಮಾ ಮಾಲ್ ನಲ್ಲಿರೋ ಮಲ್ಟಿಪ್ಲೆಕ್ಸ್ "ಫನ್ ಸಿನೇಮಾ" ದ ಒಂದು ಜಾಹೀರಾತ ಫಲಕ ಕನ್ನಡದ ಜನಪ್ರಿಯ ದಿನಪತ್ರಿಕೆ ಪ್ರಜಾವಾಣಿಯ ಪ್ರಚಾರ ಮಾಡ್ತಿತ್ತು. ನನ್ನ ಮೊಬೈಲ್ ನಲ್ಲಿ ಅಡಗಿದ್ದ ಈ ಚಿತ್ರಕ್ಕೆ ಇಂದು ಬಿಡುಗಡೆ ಸಿಕ್ಕಿದೆ.

 

 

 ಬೇರೆಯವರನ್ನ ಒತ್ತಾಯಿಸಿ, ಕನ್ನಡವನ್ನ ಪರದೆಯ ಮುಂದೆ ತರುವುದರ ಬದಲು, ಕನ್ನಡವನ್ನ ನಾವೇ ಎಲ್ಲರ ಮುಂದಿಡಬೇಕು. ನಾವೂ ಜಗತ್ತಿನ ಎಲ್ಲರಂತೆ ಹೊಸ ಆವಿಷ್ಕಾರಗಳನ್ನ, ಟೆಕ್ನಾಲಜಿಯನ್ನ ಬಳಸೋದನ್ನ ಕಲೀಬೇಕು. ಇದರ ಬಗ್ಗೆ ದಿನಗಟ್ಟಲೇ ಮಾತಾಡಬಹುದು. ಆದರೆ ಮಾಡ್ಬೇಕಾದ ಕೆಲಸ ಬೇಕಾದಷ್ಟಿದೆ ಅದನ್ನ ಮೊದಲು ಮಾಡುವ. ಪ್ರಜಾವಾಣಿಯಂತೆ ಇತರರೂ ಪಾಶ್ಚ್ಯಾತ್ಯ ಸಂಸ್ಕೃತಿಗೆ ಒತ್ತು ಕೊಡುತ್ತಿರುವ ಇಂತಹ ಸ್ಥಳಗಳಲ್ಲಿ ಕನ್ನಡ ಜಾಹಿರಾತುಗಳನ್ನ, ಸೇವೆಗಳನ್ನ ಜನರ ಮುಂದಿಡಲು ಹಿಂಜರಿಯದಿರಲಿ. 

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಶಾಪಿಂಗ್ ಮಾಲ್ ಜಾಹೀರಾತು ಮತ್ತು ಕನ್ನಡ

kishoreyc's picture

ನಾನೊ೦ದು ಮೋರ್ ಶಾಪಿ೦ಗ್ ಮಾಲ್ ನಲ್ಲಿ ವಾರಪತ್ರಿಕೆಗಳ ಗು೦ಪಿನಲ್ಲಿ ಕನ್ನಡದ ಪತ್ರಿಕೆಯನ್ನು ಹುಡುಕುತ್ತಿದ್ದೆ. ಅಲ್ಲಿ ಬರೇ ಹಿ೦ದಿ ಮತ್ತು ಇ೦ಗ್ಲೀಶ್ ಭಾಷೆಯವು ಇದ್ದವು. ಮ್ಯಾನೇಜರನ್ನು ಕರೆದು ವಿಚಾರಿಸಿದೆ. ಅದಕ್ಕೆ ಅವರು ಕನ್ನಡ ಪುಸ್ತಕ ತರಿಸುವುದಿಲ್ಲ, ತರಿಸಿದರೆ ಯಾರೊ ಕೊಳ್ಳುವುದಿಲ್ಲ ಎ೦ದು ಬಿಟ್ಟರು. ಇಲ್ಲಿ ಅದ್ಯಾರು ಹಿ೦ದಿ ಓದುತ್ತಾರೆ ಅ೦ತ ವಿಚಾರಿಸಿದರೆ, ಅವನು ಇಲ್ಲೆಲ್ಲಾ ಹಿ೦ದಿಯನ್ನೇ ಕೊ೦ಡು ಓದುತ್ತಾರೆ ಸಾರ್, ಕನ್ನಡ ಓಡಲ್ಲ ಅ೦ದ.

ನಮ್ಮ ಅಳಿವಿಗೆ ನಾವೇ ಕಾರಣ ಎ೦ದು ಆ ವಿಷಯ ಅಲ್ಲೇ ಬಿಟ್ಟೆ.

ಉ: ಶಾಪಿಂಗ್ ಮಾಲ್ ಜಾಹೀರಾತು ಮತ್ತು ಕನ್ನಡ

Chamaraj's picture

ಚೆನ್ನಾಗಿ ಗಮನಿಸಿದ್ದೀರಿ ಓಂಶಿವಪ್ರಕಾಶ್‌. ಇಂಥವನ್ನು ಹೆಕ್ಕಿ ಬರೆಯಿರಿ.

- ಚಾಮರಾಜ ಸವಡಿ

ಉ: ಶಾಪಿಂಗ್ ಮಾಲ್ ಜಾಹೀರಾತು ಮತ್ತು ಕನ್ನಡ

Deeparavishankar's picture

ಪ್ರಾರ೦ಭ ಪ್ರಾರ೦ಭವಾಗಿದೆ ಅನ್ನಿಸುತ್ತೆ ನನಗೆ..ನಿಮ್ಮ ಲೇಖನ ಓದಿ ಸ್ವಲ್ಪ ಸಮಾಧಾನವಾಯಿತು.

Syndicate content