ಸಿಹಿ ಸುದ್ಧಿ - ಫೈರ್ಫಾಕ್ಸಿನಲ್ಲಿ ಪ್ರಜಾವಾಣಿ ಓದಬಹುದು
ಫೈರ್ಫಾಕ್ಸಿನಲ್ಲಿ ಸದ್ಯಕ್ಕೆ ಪ್ರಜಾವಾಣಿಯ http://prajavani.net ಅನ್ನು ಓದಲು ಸಾಧ್ಯವಾಗುತ್ತಿಲ್ಲ. ಇದು ಏಕೆ ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆ ಶ್ರೀರಂಗ್ ಇಲ್ಲಿ ವಿವರಿಸಿದ್ದರು. ಆದರೆ ಸಿಹಿಸುದ್ಧಿ ಏನೆಂದರೆ ಇದಕ್ಕೊಂದು ಸದ್ಯಕ್ಕಾಗು(*) ಇದೆ.
ಫೈರ್ಫಾಕ್ಸಿನಲ್ಲಿ ಪ್ರಜಾವಾಣಿ ಓದುವ ಸದ್ಯಕ್ಕಾಗು(*)
೧. ನಿಮ್ಮ ಫೈರ್ಫಾಕ್ಸಿನಿಂದ ಈ ಕೊಂಡಿಗೆ ತೆರಳಿ, ಅಲ್ಲಿರುವ ಪ್ಲಗಿನ್ನನ್ನು ಅನುಸ್ಥಾಪಿಸಿ. https://addons.mozil.... (**)
೨. ಫೈರ್ಫಾಕ್ಸನ್ನು ರೀಸ್ಟಾರ್ಟ್ ಮಾಡು ಅಂತ ಕೇಳತ್ತೆ. ರೀಸ್ಟಾರ್ಟ್ ಮಾಡಿ.
೩. ಈಗ ಫೈರ್ಫಾಕ್ಸ್ ತೆರೆದು, Tools -> IE tab Options ಚಿಟುಕಿ. (***)
೪. "Sites Filter" ಪ್ಯಾನೆಲ್ ತೆರೆದು, URL = http://prajavani.net ನಮೂದಿಸಿ, Add ಚಿಟುಕಿ.
೫. ಹಾಗೆಯೇ, URL = http://www.prajavani... ನಮೂದಿಸಿ, Add ಚಿಟುಕಿ.
೬. ಈಗ, ಅಡ್ರೆಸ್ ಬಾರಿನಲ್ಲಿ, http://prajavani.net ಟೈಪಿ.
೭. ಫೈರ್ಫಾಕ್ಸಿನಲ್ಲಿಯೇ ಪ್ರಜಾವಾಣಿಯ ಕನ್ನಡ ಕಾಣುವದು.
ಟೆಕ್ನಿಕಲ್ ವಿವರ
ಈ ಪ್ಲಗಿನ್ನು, ಫೈರ್ಫಾಕ್ಸಿನೊಳಗೆ ಒಂದು IE ಟ್ಯಾಪ್ ತೆರೆದು, ಅದನ್ನು ಫೈರ್ಫಾಕ್ಸ್ ಟ್ಯಾಬ್ ಆಗಿಸಿಕೊಳ್ಳುತ್ತದೆ. ಹಾಗಾಗಿ, IE ಗೆ ಇರುವ ಡೈನಾಮಿಕ್ ಫಾಂಟ್ ರೆಂಡರಿಂಗ್ ಶಕ್ತಿಯನ್ನು ಫೈರ್ಫಾಕ್ಸಿಗೆ ಒದಗಿಸಿದಂತಾಗುತ್ತದೆ.
ಕೊಕೊಗಳು
* ಸದ್ಯಕ್ಕಾಗು - ಸದ್ಯಕ್ಕೆ ಆಗು - work around - temporary fix, ಅಂತೀವಲ್ಲ ಅದು. ಈ "ಸದ್ಯಕ್ಕಾಗು" ಬರೀ ವಿಂಡೋಸ್ ಮೆಶೀನಿನಲ್ಲಿ ಮಾತ್ರವೇ ಕೆಲಸ ಮಾಡುವದು.
** - ನೀವು ಕನ್ನಡ ಫೈರ್ಫಾಕ್ಸ್, ಗ್ರಾನ್ ಪ್ಯಾರಾಡಿಸೋ ೩.೦.೨ ಬಳಸುತ್ತಿದ್ದರೆ, ಇದು Tools ಗೆ ಬದಲಾಗಿ "ಉಪಕರಣಗಳು" ಅಡಿಯಲ್ಲಿ ಇದೆ.
*** - ನನ್ನ ಸಹೋದ್ಯೋಗಿಯೊಬ್ಬರು ಈ ದಿನ, ಬೇರೆ ಯಾವುದೋ ಕಾರಣಕ್ಕೆ, ಈ ಪ್ಲಗಿನ್ನಿನ ಪಾಯಿಂಟರ್ ನೀಡಿದರು. ನಾನು ಅದನ್ನು ಪರೀಕ್ಷಿಸಲು http://prajavani.net ತೆರೆದು ನೋಡಿದಾಗ, ತುಂಬಾ ಸಂತೋಷವಾಗಿ ಎಲ್ಲರೊಡನೆ ಹಂಚಿಕೊಳ್ಳಲು ಇದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಈ ಪ್ಲಗಿನ್ನಿನ ಪಾಯಿಂಟರ್ ನೀಡಿದ ಆ ನನ್ನ ಸಹೋದ್ಯೋಗಿಗೆ, ಹೆನ್ನನ್ನಿ (=ಅನಂತ ಧನ್ಯವಾದಗಳು).
- Login or register to post comments
- 968 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ನನ್ನಿ ಸುನೀಲ್. ಪರಿಹಾರ ಕೊಡಲು ಬಹಳ ಕೆಲಸ ಮಾಡಿದ್ದೀರಿ.
ನನ್ನ IEನಲ್ಲಿ ಪ್ರಜಾವಾಣಿ ಸರಿಯಾಗಿ ಮೂಡುತ್ತಿಲ್ಲ. ಹಾಗಾಗಿ ಇಲ್ಲಿಯೂ ಸಮಸ್ಯೆ ಮುಂದುವರಿದಿದೆ. :(
*ಅಶೋಕ್
ಆಂ!!!, ಅಂದ್ರೆ ಫೈರ್ಫಾಕ್ಸ್ ಬಿಟ್ಟುಬಿಟ್ಟು, ಬರೀ IE ಯಿಂದಲೇ http://prajavani.netಗೆ ತಾಕಿದಾಗಲೂ ಓದೋಕ್ಕೆ ಆಗ್ತಾ ಇಲ್ವಾ ?
ನಿಮ್ಮ ಆಪರೇಟಿಂಗ್ ಸಿಸ್ಟಮ್, IE version ಎಲ್ಲ ಹೇಳಿ, ಒಂದು ಕೈ ನೋಡಿಯೇ ಬಿಡೋಣ.
>>ಬರೀ IE ಯಿಂದಲೇ http://prajavani.netಗೆ ತಾಕಿದಾಗಲೂ ಓದೋಕ್ಕೆ ಆಗ್ತಾ ಇಲ್ವಾ ?
ಹೌದು... IE version 7
OS; Win XP
dynamic font ಇದ್ದ ಪುಟವಾದ್ದರಿಂದಲೋ ಏನೋ..ಉದಯವಾಣಿಯ ಪುಟದ ಅಕ್ಷರವೂ ಸರಿಯಾಗಿ ಮೂಡುವುದಿಲ್ಲ. ಅದರ font instal ಮಾಡೀನೂ ನೋಡಿದೆ...
*ಅಶೋಕ್
ಅಶೋಕ್, ನಿಮ್ಮ ಫೋನ್ ನಂಬರ್ ಅನ್ನು ನನ್ನ ಪರ್ಸನಲ್ ಮೇಯ್ಲೈಡಿ ಕಳುಹಿ. ಮಾತನಾಡೋಣ. ಹಾಗೆಯೇ, ಉದಯವಾಣಿಯವರ ಫಾಂಟನ್ನೂ ಒಮ್ಮೆ ನನ್ನ ಪರ್ಸನಲ್ ಐಡಿಗೆ ಕಳುಹಿ.
ಸುನಿಲ,
ಈ ಆಡ್‌ಆನ್ ಲಿನಕ್ಸಿನಲ್ಲಿ ಕೆಲಸ ಮಾಡೋಲ್ಲ!!! :(
ಯೆಸ್ ಸರ್. ಯಾರಾದರೂ ಪ್ರಜಾವಣಿಯಲ್ಲಿ ಕೆಲಸ ಮಾಡುತ್ತಿರುವವರು ಪರಿಚಯವಿದ್ದರೆ ಅವರ ಬಳಿ ಅಲ್ಲಿ ಬಳಸುತ್ತಿರುವ ಫಾಂಟ್ ಕೇಳಿ ಪಡೆದುಕೊಳ್ಳಬೇಕು. ಅದಷ್ಟೇ ಪರಿಹಾರ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಸದ್ಯಕ್ಕೆ, http://www.prajavani... ಬಳಸ್ತಾ ಇರಿ.
thanks Sunil
*ಅಶೋಕ್
ಪ್ರಸಾದ್,
ಇದರ ಸೋರ್ಸ್ ಕೋಡ್ ಲಭ್ಯವಿದೆ, ಹ್ಯಾಕ್ ಮಾಡೋಣ್ವೇ? ;)
http://ietab.mozdev....
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಶಿವು,
ಇದು ಒಳ್ಳೆ ಐಡಿಯಾ!! :)
ಕೆಲಸ ಮಾಡಲಿಕ್ಕಿಲ್ಲ, ನನಗೆ ತಿಳಿದಿರೊ ಹಾಗೆ ಈ addon ಕೆಲಸ ಮಾಡ್ಲಿಕ್ಕೆ IE ಇನ್ಸ್ಟಾಲ್ ಆಗಿರಬೇಕು. ಇದು IE ಲೈಬ್ರರಿಗಳನ್ನು ಉಪಯೋಗಿಸಿ render ಮಾಡುತ್ತೆ ಅಂದ್ಕೊಂಡಿದೀನಿ. ಕೈ ಹಾಕಿ ನೋಡಿ ;)
ಕೆಳಗಿನ ಸ್ವಲ್ಪ ಬದಲಾದ ಕೊಂಡಿಯನ್ನು ಬಳಸಿ ನೋಡಿ:
http://prajavani.net/*
("*" ಚಿನ್ಹೆಯನ್ನು ಬಳಸಿದ್ದೇನೆ)
ಮೇಲಿನ ಕೊಂಡಿಯನ್ನು ಉಪಯೋಗಿಸಿದ್ದರಿಂದ ನನ್ನ 'firefox' ನಲ್ಲಿ ಇದು ಕೆಲಸ ಮಾಡುತ್ತಿದೆ.
ಧನ್ಯವಾದಗಳೊಂದಿಗೆ
ರಾಘವೇಂದ್ರ