ಪ್ರೀತಿ ಇಲ್ಲದ ಮೇಲೆ
ಪ್ರೀತಿ ಇಲ್ಲದ ಮೇಲೆ ಸ್ವಾತಿಯ ಹನಿಯು ಭೂಮಿಗೆ ತಾಗಿತು ಹೇಗೆ...
ಪ್ರೀತಿ ಇಲ್ಲದ ಮೇಲೆ ರೈತನ ಬೇವರ ಹನಿಯು ಅನ್ನವಾದಿತು ಹೇಗೆ...
ಪ್ರೀತಿ ಇಲ್ಲದ ಮೇಲೆ ಪಾರಕಾಷ್ಟೇಯ ಪರಿಧಿಗೆ ಕೊನೆಯಿಲ್ಲ ಗೆಳತಿ
ಪ್ರೀತಿ ಇಲ್ಲದ ಮೇಲೆ ಶಿಶುವಿನ ರೊಧನ ಕೆಳುವವರಿಲ್ಲ ಗೆಳತಿ
ಪ್ರೀತಿ ಇಲ್ಲದ ಮೇಲೆ ತಾಯಿಯ ಮೊಲೆಹಾಲಿಗೆ ಬೆಲೆಯಿರುವುದಿಲ್ಲ ಗೆಳತಿ
ಪ್ರೀತಿ ಇಲ್ಲದ ಮೇಲೆ ದೇಶಗಳ ದ್ವೇಶದ ಕದನ ಹೆಚ್ಚಾದಿತು ಗೆಳತಿ
ಪ್ರೀತಿ ಇಲ್ಲದ ಮೇಲೆ ಕಲ್ಲುದೇವರ ಮನಸು ಕಲ್ಲಾದೀತು ಗೆಳತಿ
ಪ್ರೀತಿ ಇಲ್ಲದ ಮೇಲೆ ಮನಸ್ಸಿದ್ದವರ ಮನಸು ಮುಳ್ಳಾದಿತು ಗೆಳತಿ
ಪ್ರೀತಿ ಇಲ್ಲದ ಮೇಲೆ ಹತ್ತು ತಲೆ ರಾವಣರು ಹತ್ತು ಜನ್ಮ ಪಡೆದಾರು ಗೆಳತಿ
ಪ್ರೀತಿ ಇಲ್ಲದ ಮೇಲೆ ಕೃಷ್ಣನ ಬಾಲಲೀಲೆ ಸೆರೆಮನೆಯಲ್ಲೇ ಕಳೆದಿತು ಗೆಳತಿ
ಪ್ರೀತಿ ಇಲ್ಲದ ಮೇಲೆ ಗಂಗೆಯ ಉಡಿಯೊಳು ನೀರು ಬತ್ತಿ ರಕ್ತ ಹರಿದೀತು ಗೆಳತಿ
ಪ್ರೀತಿ ಇಲ್ಲದ ಮೇಲೆ ಕಾಶ್ಮೀರದ ಕಣಿವೆ ಹೆಣಗಳಿಂದ ತುಂಬಿತು ಗೆಳತಿ
ಪ್ರೀತಿ ಇಲ್ಲದ ಮೇಲೆ ನನ್ನ ಪ್ರೀತಿಯ ಪ್ರತಿಬಿಂಬ ನಿನ್ನ ಮನದಲ್ಲಿ ಮೊಡಿತು ಹೇಗೆ...
ಬಾಲ್ಯದ ನೆನಪು
- Login or register to post comments
- 1073 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಪ್ರೀತಿ ಇಲ್ಲದ ಮೇಲೆ ಕನ್ನಡದಲ್ಲಿ ಕವನ ಬರೆದ ಕವನ ಉಕ್ಕಮವಾಗುದು ಹೇಗೆ?
----------------------------------------------------------------------
ಮನಸಿನ ಮಾಯಾಜಾಲದ ಮಾಯೆಯ ಮರ್ಮವನರಿಸಲು ಮೂಡಿದ ಮಾಯಾಕರ!
www.mayajaala.com
ಪ್ರೀತಿ ಇಲ್ಲದೆ ಜಗತ್ತಿನಲ್ಲಿ ಬದುಕಲು ಸಾಧ್ಯವೇ.
ಮಾ.ಕೃ.ಮಂಜು
http://makrumanju.bl...